ವಿರಾಟ್ ಕೊಹ್ಲಿನೇ ಸೈಡ್ ಹೊಡೆದ ಗಿಲ್ -2023ರ ವಿಶ್ವಕಪ್ ಬಳಿಕ ಕಿಂಗ್ & ಪ್ರಿನ್ಸ್ ODI ರೇಸ್!

ವಿರಾಟ್ ಕೊಹ್ಲಿನೇ ಸೈಡ್ ಹೊಡೆದ ಗಿಲ್ -2023ರ ವಿಶ್ವಕಪ್ ಬಳಿಕ ಕಿಂಗ್ & ಪ್ರಿನ್ಸ್ ODI ರೇಸ್!

2027ರ ಏಕದಿನ ವಿಶ್ವಕಪ್ ತಂಡದಲ್ಲಿ ಯಾರಿಗೆಲ್ಲಾ ಅವಕಾಶಗಳು ಸಿಗ್ಬೇಕು ಅನ್ನೋ ಬಗ್ಗೆ ಮಾಜಿ ಕ್ರಿಕೆಟರ್​ಗಳು ತಮ್ಮದೇ ದಾಟಿಯಲ್ಲಿ ಟೀಂ ಪ್ರೆಡಿಕ್ಷನ್ ಮಾಡ್ತಿದ್ದಾರೆ. ಪ್ಲೇಯಿಂಗ್ 11 ಕೂಡ ಹೀಗಿದ್ರೆ ಚೆಂದ ಅನ್ನೋ ಬಗ್ಗೆ ಸಜೇಷನ್ ಕೊಡ್ತಿದ್ದಾರೆ. ಫೈನಲಿ ಟೀಂ ಹೇಗೇ ಇದ್ರೂ ಟೂರ್ನಿಯಲ್ಲಿ ಕಿಂಗ್ ಮತ್ತು ಪ್ರಿನ್ಸ್ ಪರ್ಫಾಮೆನ್ಸ್ ಅಮತೂ ಹೈಲೆಟ್ ಆಗೇ ಆಗುತ್ತೆ. ಕ್ರಿಕೆಟ್ ಲೋಕದ ಗೋಟ್ ಅಂತಾನೇ ಕರೆಸಿಕೊಳ್ಳೋ ಕಿಂಗ್ ವಿರಾಟ್ ಕೊಹ್ಲಿ ಮತ್ತು ಪ್ರಿನ್ಸ್ ಅಂತಾನೇ ಟ್ರೇಡ್ ಮಾರ್ಕ್ ಸೆಟ್ ಮಾಡಿರೋ ಕ್ಯಾಪ್ಟನ್ ಶುಭ್​ಮನ್ ಗಿಲ್ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣಂತೂ ಇದ್ದೇ ಇರುತ್ತೆ. ಪ್ರಸ್ತುತ ಏಕದಿನ ಮಾದರಿಯಲ್ಲಿ ಇಬ್ಬರ ಫಾರ್ಮ್ ಕೂಡ ತುಂಬಾನೇ ಚೆನ್ನಾಗಿದೆ. ಇಬ್ಬರ ಬ್ಯಾಟಿಂಗ್ ಬಗ್ಗೆಯೂ ಚರ್ಚೆಯಾಗ್ತಿದೆ.

ಇದನ್ನೂ ಓದಿ : LSG ಮಾಲೀಕರಿಂದ ಪ್ರತಿಬಾರಿಯೂ ಮಾನಸಿಕ ಹಿಂಸೆ – ಕಹಿ ಅನುಭವವನ್ನು ವಿವರಿಸಿದ ಕೆ.ಎಲ್ ರಾಹುಲ್

ವಿರಾಟ್ ಕೊಹ್ಲಿ ಮತ್ತು ಶುಭ್ ಮನ್ ಗಿಲ್ ಭಾರತೀಯ ಕ್ರಿಕೆಟ್‌ನ ಎರಡು ವಿಭಿನ್ನ ತಲೆಮಾರುಗಳ ಅತ್ಯಂತ ಪ್ರಭಾವಶಾಲಿ ಆಟಗಾರರು. ಒಬ್ರು ಕ್ರಿಕೆಟ್ ಲೋಕದ ‘ಕಿಂಗ್’ ಮತ್ತು ಇನ್ನೊಬ್ರು ‘ಪ್ರಿನ್ಸ್’. ಇಬ್ಬರ ನಡುವಿನ ಬಾಂಧವ್ಯ ಕೇವಲ ಆಟಕ್ಕಷ್ಟೇ ಸೀಮಿತವಾಗಿಲ್ಲ. ಕೊಹ್ಲಿ ಮಾರ್ಗದರ್ಶಕನ ಸ್ಥಾನದಲ್ಲಿ ನಿಂತ್ರೆ ಗಿಲ್ ಒಬ್ಬ ಶಿಷ್ಯನ ಸ್ಥಾನದಲ್ಲಿ ನಿಲ್ತಾರೆ. ಸೋ ಈಗ ಏಕದಿನ ಮಾದರಿಯಲ್ಲಿ ಇಬ್ಬರ ಪರ್ಫಾಮೆನ್ಸ್ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.

ಏಕದಿನದಲ್ಲಿ ಬ್ಯಾಟಿಂಗ್ ಬೆನ್ನೆಲುಬಾಗಿರುವ ಕೊಹ್ಲಿ!

ಮಾಡ್ರೆನ್ ಕ್ರಿಕೆಟ್​ನ ಗ್ರೇಟೆಸ್ಟ್ ಬ್ಯಾಟ್ಸ್​ಮನ್ ಆಗಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ರೆ ಶುಭಮನ್ ಗಿಲ್ ಭಾರತದ ಮುಂದಿನ ಪೀಳಿಗೆಯ ಸೂಪರ್‌ಸ್ಟಾರ್ ಆಗಿ ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಸ್ವಲ್ಪ ಡಲ್ ಆಗಿದ್ರು. 2024ರಲ್ಲಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ODI ಸರಣಿಯಲ್ಲಿ ವಿರಾಟ್ ಕೊಹ್ಲಿ 30 ರನ್​ಗಳ ಒಳಗೇ ಔಟ್ ಆಗಿದ್ರು. 2023ರ ವಿಶ್ವಕಪ್ ಬಳಿಕ ಅವ್ರ ಮೊದಲ ಏಕದಿನ ಶತಕ ಬಂದದ್ದು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ. ಪಾಕಿಸ್ತಾನ ವಿರುದ್ಧ ಪಂದ್ಯ ಗೆಲ್ಲುವ ಶತಕವನ್ನು ಗಳಿಸಿದ್ರು. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಮತ್ತು ನ್ಯೂಜಿಲೆಂಡ್ ವಿರುದ್ಧ ಒಂದು ಶತಕ ದಾಖಲಿಸಿದ್ದರು. ಒಟ್ಟಾರೆಯಾಗಿ, ಕೊಹ್ಲಿ 2024 ರ ಆರಂಭದಿಂದ 22 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,093 ರನ್ ಗಳಿಸಿದ್ದಾರೆ. ಈ ವಿಚಾರದಲ್ಲಿ ಗಿಲ್ ಸ್ವಲ್ಪ ಮುಂದಿದ್ದಾರೆ.

ಕ್ಯಾಪ್ಟನ್ಸಿ ಜೊತೆ ಬ್ಯಾಟಿಂಗ್ ನಲ್ಲೂ ಮಿಂಚಿದ ಗಿಲ್!

2023ರ ಏಕದಿನ ವಿಶ್ವಕಪ್ ಬಳಿಕ ಶುಭಮನ್ ಗಿಲ್ ಕೊಹ್ಲಿಗಿಂತ ಒಂದು ಎಕ್ಸ್​ಟ್ರಾ ಏಕದಿನ ಪಂದ್ಯ ಆಡಿದ್ದಾರೆ. 23 ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು 1,108 ರನ್ ಗಳಿಸಿದ್ದಾರೆ. ಕೊಹ್ಲಿಯಂತೆಯೇ, ಗಿಲ್ ಕೂಡ ಶ್ರೀಲಂಕಾ ಸರಣಿಯಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ. ಮೂರು ಪಂದ್ಯಗಳ ಪೈಕಿ 16, 35 ಮತ್ತು 6 ರನ್ಸ್ ಮಾತ್ರ ಬಂದದ್ದು. ವಿಶ್ವಕಪ್ ನಂತರ ಅವರ ಮೊದಲ ODI ಶತಕ ಫೆಬ್ರವರಿ 12, 2025 ರಂದು ಇಂಗ್ಲೆಂಡ್ ವಿರುದ್ಧ ಬಂದಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ, ಗಿಲ್ ಬಾಂಗ್ಲಾದೇಶ ವಿರುದ್ಧ ಅಜೇಯ 101 ರನ್ ಗಳಿಸಿ ಪಾಕಿಸ್ತಾನ ವಿರುದ್ಧ 46 ರನ್ ಗಳಿಸಿದರು. 2024 ರ ಆರಂಭದಿಂದಲೂ, ಗಿಲ್ ಮೂರು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ, ಒಂದು ಕಡಿಮೆ ಶತಕವನ್ನು ಹೊಂದಿದ್ದರೂ ಒಟ್ಟು ರನ್‌ಗಳಲ್ಲಿ ಕೊಹ್ಲಿಗಿಂತ ಸ್ವಲ್ಪ ಮುಂದಿದ್ದಾರೆ.. ಒಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಹೊಸ್ತಿಲಲ್ಲಿದ್ದು 2027ರ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದಲೇ ಹೊರ ಬರಬಹುದು. ಆದ್ರೆ ಶುಭ್​ಮನ್ ಗಿಲ್ ನಾಯಕನಾಗಿ ಅಷ್ಟೇ ಅಲ್ಲ ಇನ್ನೂ ಕೂಡ ದಶಕದವರೆಗೆ ಭಾರತದ ಆಧಾರ ಸ್ತಂಭವಾಗಬಹುದು.

Shantha Kumari

Leave a Reply

Your email address will not be published. Required fields are marked *