ದತ್ತು ಪುತ್ರ Vs ಮನೆ ಮಗ – KL ಮೇಲೆ ಕೊಹ್ಲಿ ರಿವೇಂಜ್?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಹಣೆಬರಹ ಹೆಂಗಾಗಿದೆ ಅಂದ್ರೆ ಇವ್ರು ಹೋದಲ್ಲೆಲ್ಲಾ ಅಲ್ಲಿನ ಅಭಿಮಾನಿಗಳನ್ನ ಸೈಲೆಂಟ್ ಮಾಡಿಸಿ ಗೆದ್ದು ಬರ್ತಿದ್ದಾರೆ. ಆದ್ರೆ ಬೇರೆ ಟೀಮ್ನವ್ರು ಬೆಂಗಳೂರಿಗೇ ಬಂದು ಇವ್ರದ್ದೇ ಹೋಂ ಗ್ರೌಂಡ್ನಲ್ಲೇ ಇವ್ರನ್ನ ಸೈಲೆಂಟ್ ಮಾಡಿಸ್ತಿದ್ದಾರೆ. ಗುರುವಾರ ಮನೆಮಗ ವರ್ಸಸ್ ದತ್ತುಪುತ್ರನ ನಡುವಿನ ಕದನವೂ ಹಾಗೇ ಆಗಿತ್ತು.
ಇದನ್ನೂ ಓದಿ : ಜೈಸ್ವಾಲ್ ದಿಲ್ ಕದ್ದ ವಿದೇಶಿ ಬ್ಯೂಟಿ.. – ಬೆಡ್ ರೂಮ್ ಫೋಟೋ.. ಗುಟ್ಟು ರಟ್ಟು!
ಬೆಂಗಳೂರು ಫ್ರಾಂಚೈಸಿಯನ್ನ ಬಿಟ್ಟು ಹೋಗದೆ 18 ವರ್ಷಗಳಿಂದ ಸತತವಾಗಿ ಕಿಂಗ್ ವಿರಾಟ್ ಕೊಹ್ಲಿ ಆರ್‌ಸಿಬಿ ಟೀಂ ಪರ ಆಡ್ತಿದ್ದಾರೆ. ಫ್ರಾಂಚೈಸಿಗಳ ಮಾಲೀಕರು ಕೋಟಿಗಳ ಓಪನ್ ಆಫರ್ ಕೊಟ್ರೂ ಕಾಲು ತೆಗ್ದು ಹೊರಗೆ ಇಟ್ಟಿಲ್ಲ. ಬೆಂಗಳೂರು ನನ್ನ ಎರಡನೇ ಹೋಂ ಗ್ರೌಂಡ್ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ಇದೇ ಕಾರಣಕ್ಕೆ ಕೋಟಿ ಕೋಟಿ ಕನ್ನಡಿಗರು ಕೊಹ್ಲಿಯನ್ನ ಕರ್ನಾಟಕದ ದತ್ತು ಪುತ್ರ ಅಂತಾನೇ ಒಪ್ಕೊಂಡಿದ್ದಾರೆ. ಮತ್ತೊಂದೆಡೆ ನಮ್ಮ ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದಿರೋ ಕೆಎಲ್ ರಾಹುಲ್ರನ್ನೂ ಕನ್ನಡಿಗರು ಅಷ್ಟೇ ಪ್ರೀತಿಸ್ತಾರೆ. ಕಳೆದ ನವೆಂಬರ್ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ರಾಹುಲ್ರನ್ನ ಖರೀದಿಸಿ ಅಂತಾ ಆರ್‌ಸಿಬಿ ಫ್ರಾಂಚೈಸಿ ಮಾಲೀಕರನ್ನ ಕೇಳಿಕೊಂಡಿದ್ರು. ರಾಹುಲ್ ಕೂಡ ಹೋಂ ಟೀಮ್ನಲ್ಲಿ ಆಡೋದೇ ಬೆಸ್ಟ್ ಅಂದಿದ್ರು. ಆದ್ರೆ ಫ್ರಾಂಚೈಸಿ ಮಾತ್ರ ಅಭಿಮಾನಿಗಳ ಮಾತಿಗೆ ಸೊಪ್ಪೇ ಹಾಕಲಿಲ್ಲ. ವೆಂಕಟೇಶ್ ಅಯ್ಯರ್ ಮೇಲೆ 20 ಕೋಟಿವರೆಗೂ ಬಿಡ್ ಮಾಡಿದ್ದವ್ರು ರಾಹುಲ್ ಮೇಲೆ 10 ಕೋಟಿವರೆಗೂ ಕೂಗಿ ಸುಮ್ಮನಾಗಿದ್ರು. ಯಾಕಂದ್ರೆ ಅವ್ರಿಗೆ ಬಂಗಾರ ಯಾವ್ದು ಕಾಗೆ ಬಂಗಾರ ಯಾವ್ದು ಅನ್ನೋ ಡಿಫ್ರೆನ್ಸ್ ಗೊತ್ತಿಲ್ಲ. ಅದನ್ನ ನಿನ್ನೆ ಮ್ಯಾಚಲ್ಲಿ ರಾಹುಲ್ ಸರಿಯಾಗೇ ಗೊತ್ತು ಮಾಡ್ಸಿದ್ದಾರೆ ಅದು ಬೇರೆ ವಿಚಾರ. ಸೋ ಇಲ್ಲಿ ಕನ್ನಡಿಗರಿಗೆ ಆರ್‌ಸಿಬಿ ಸೋಲ್ತು ಅನ್ನೋದಕ್ಕಿಂತ ರಾಹುಲ್ ಬೆಂಗಳೂರಲ್ಲಿ ಗೆದ್ರಲ್ಲ ಅನ್ನೋ ಖುಷಿಯೇ ಇದೆ. ಹೀಗಾಗಿ ಒಂದಷ್ಟು ಫ್ಯಾನ್ಸ್ ದತ್ತುಪುತ್ರ ಅಂತಾ ಕೊಹ್ಲಿಗೆ ಸಪೋರ್ಟ್ ಮಾಡ್ತಿದ್ರೆ ಇನ್ನೊಂದಷ್ಟು ಜನ ಮನೆ ಮಗನೇ ಮುಖ್ಯ ಅಂತಾ ರಾಹುಲ್ಗೆ ಸಪೋರ್ಟ್ ಮಾಡ್ತಿದ್ದಾರೆ.
ಬೆಂಗಳೂರು ವಿರುದ್ಧದ ಮ್ಯಾಚಲ್ಲಿ 93 ರನ್ ಗಳಿಸಿ ಮ್ಯಾಚ್ ವಿನ್ನರ್ ಆಗಿದ್ದ ಕೆಎಲ್ ರಾಹುಲ್ ಕೊನೆಯಲ್ಲಿ ಬ್ಯಾಟ್ನಿಂದ ಗ್ರೌಂಡ್ನಲ್ಲಿ ವೃತ್ತಾಕಾರವಾಗಿ ಬರೆದು ನೆಲಕ್ಕೆ ಬ್ಯಾಟ್ ಕುಟ್ಟಿ ಎದೆ ಮೇಲೆ ಕೈ ತಟ್ಟಿಕೊಂಡು ಇದು ನನ್ನ ಗ್ರೌಂಡ್ ಎಂದು ಸಹ್ನೆ ಮಾಡಿದ್ರು. ಈ ಅಗ್ರೆಸ್ಸಿವ್ ಸೆಲೆಬ್ರೇಷನ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಚರ್ಚೆ ಆಗ್ತಿದೆ. ಆದ್ರೆ ಒಂದಷ್ಟು ಜನ್ರಿಗೆ ರಾಹುಲ್ ಸೆಲೆಬ್ರೇಷನ್ ನಿಂದ ಇರುವೆ ಬಿಟ್ಟಂತಾಗಿದ್ದು ನಿಮ್ಮನ್ನ ಡೆಲ್ಲಿಯಲ್ಲೇ ನೋಡಿಕೊಳ್ತೇವೆ. ರಿವೇಂಜ್ ತೀರಿಸಿಕೊಳ್ತೇವೆ ಅಂತಾ ಪೊಸ್ಟ್ ಮಾಡ್ತಿದ್ದಾರೆ. ಕಿಂಗ್ ಕೊಹ್ಲಿ ಸಪೋರ್ಟರ್ಸ್ ರಾಹುಲ್ ಸಂಭ್ರಮಾಚರಣೆಯ ವಿರುದ್ಧ ಗರಂ ಆಗಿದ್ದಾರೆ. ಕಿಂಗ್ ಕೊಹ್ಲಿಗೆ ಡೆಲ್ಲಿ ಹೋಮ್ ಗ್ರೌಂಡ್. ಆಟ ಇಲ್ಲಿಗೆ ನಿಂತಿಲ್ಲ. ಈಗ ಶುರುವಾಗಿದೆ, ನೀವು ಶುರು ಮಾಡಿದ್ದೀರಾ, ನಾವು ಮುಗಿಸ್ತೀವಿ ಅಂತ ವಿರಾಟ್ ಕೊಹ್ಲಿ ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ತಂಡ ಏಪ್ರಿಲ್ 27ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿ, ರಾಹುಲ್‌ರಂತೆಯೇ ಸಂಭ್ರಮಾಚರಣೆ ಮಾಡ್ತಾರೆ ಅಂತಾ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಇದೆಲ್ಲದ್ರ ನಡುವೆ ಸ್ಪೋಟಕ ಇನ್ನಿಂಗ್ಸ್ ಆಡ್ತಿದ್ದ ಫಿಲ್ ಸಾಲ್ಟ್ ರನ್ನು ಔಟ್ ಮಾಡಿಸಿದ್ದೇ ಕಿಂಗ್ ವಿರಾಟ್ ಕೊಹ್ಲಿ ಅಂತಾ ಒಂದಷ್ಟು ಪೋಸ್ಟ್ಗಳು ಹರಿದಾಡ್ತಿವೆ. ಹೋಮ್ಗ್ರೌಂಡ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಆರ್ಸಿಬಿಗೆ ಬೊಂಬಾಟ್ ಆರಂಭ ಸಿಕ್ಕಿತ್ತು. ಮೊದಲ ಓವರ್ನಲ್ಲಿ ಎಚ್ಚರಿಕೆಯ ಆಟವಾಡಿದ ಫಿಲ್ ಸಾಲ್ಟ್ – ವಿರಾಟ್ ಕೊಹ್ಲಿ 2ನೇ ಓವರ್ನಿಂದ ಅಬ್ಬರಿಸಿದ್ರು. ಅಕ್ಷರ್ ಪಟೇಲ್ ಎಸೆದ 2ನೇ ಓವರ್ನಲ್ಲಿ 16 ರನ್ ಚಚ್ಚಿದ್ರು. 3ನೇ ಓವರ್ನಲ್ಲಂತೂ ಫಿಲ್ ಸಾಲ್ಟ್ ಥೂಫಾನ್ನಂತೆ ಅಬ್ಬರಿಸಿದ್ರು. ವೇಗಿ ಮಿಚೆಲ್ ಸ್ಟಾರ್ಕ್ಗೆ ನೀರು ಕುಡಿಸಿದ ಸಾಲ್ಟ್ 2 ಸಿಕ್ಸರ್, 2 ಬೌಂಡರಿ ಚಚ್ಚಿದ್ರು. ಒಂದೇ ಓವರ್ನಲ್ಲಿ ಬರೋಬ್ಬರಿ 30 ರನ್ಗಳು ಹರಿದು ಬಂದ್ವು. 3ನೇ ಓವರ್ ಅಂತ್ಯಕ್ಕೆ 53 ರನ್ ಚಚ್ಚಿದ್ದ ಆರ್‌ಸಿಬಿ ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಈ ಓಪನಿಂಗ್ ನೋಡಿದ್ರೆ 250+ ರನ್ ಕಲೆ ಹಾಕೋದ್ರಲ್ಲಿ ಡೌಟೇ ಇಲ್ಲ ಅಂತಾ ಎಲ್ರೂ ಅನ್ಕೊಳ್ತಿದ್ರು. ಆದ್ರೆ 3.5ನೇ ಓವರ್ನಲ್ಲಿ ಆದ ಒಂದು ಎಡವಟ್ಟು ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಸಿಂಗಲ್ ತೆಗೆದುಕೊಳ್ಳೋ ಭರದಲ್ಲಿ ಸಾಲ್ಟ್ ರನ್ಔಟ್ ಆದ್ರು. ಆದ್ರೆ ಈ ರನ್ ಔಟ್ ಮಾಡಿಸಿದ್ದೇ ಕೊಹ್ಲಿ ಎಂಬ ಆರೋಪಗಳು ಕೇಳಿ ಬರ್ತಿವೆ. ಅಕ್ಷರ್ ಪಟೇಲ್ ಅವರ ಚೆಂಡನ್ನು ಡೀಪ್ ಕವರ್ ಕಡೆಗೆ ಹೊಡೆದ ಸಾಲ್ಟ್ ಒಂದು ರನ್ ಗಳಿಸಲು ಓಡುತ್ತಾರೆ. ಕೊಹ್ಲಿ ಕೂಡ ಆರಂಭದಲ್ಲಿ ರನ್ ಓಡುವ ಎಂದು ಸನ್ನೆ ಮಾಡಿದರು, ಆದರೆ ಓಡಿಕೊಂಡು ಬಹುತೇಕ ಪಿಚ್ ಮಧ್ಯದವರೆಗೆ ಬಂದಾಗ ಕೊಹ್ಲಿ ರನ್ ಬೇಡ ಎಂದು ನಿರಾಕರಿಸಿದರು. ಸಾಲ್ಟ್ ಕೂಡ ಹಿಂದೆ ಹೋಗ್ಬೇಕಾಯ್ತು. ಆದರೆ ಹಿಂದೆ ಹೋಗುವಾಗ ಸ್ಲಿಪ್ ಆದ್ರು. ಸರಿಯಾದ ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ, ಪರಿಣಾಮ ರನೌಟ್ ಆದರು. 37ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಇಲ್ಲಿಂದ ಆರ್‌ಸಿಬಿ ಬ್ಯಾಟರ್ಸ್ ಕ್ರೀಸ್ ಕಚ್ಚಿ ನಿಲ್ಲಲೇ ಇಲ್ಲ.