ನರಸಿಂಹ ಸ್ವಾಮಿ ಮುಂದೆ ವಿರಾಟ್ ಭಾವುಕ – ಕಪ್ಪಂ ಸ್ತಂಭ ತಬ್ಬಿ ಕೊಹ್ಲಿ ಬೇಡಿದ್ದೇನು?

ನರಸಿಂಹ ಸ್ವಾಮಿ ಮುಂದೆ ವಿರಾಟ್ ಭಾವುಕ –  ಕಪ್ಪಂ ಸ್ತಂಭ ತಬ್ಬಿ ಕೊಹ್ಲಿ ಬೇಡಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕನ್ನಡಿಗ ಕೆ.ಎಲ್‌ ರಾಹುಲ್‌ ನೇತೃತ್ವದ ಟೀಮ್‌ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಜಯಿಸಿದ್ದ ಭಾರತ ಎರಡನೇ ಮ್ಯಾಚ್‌ನಲ್ಲಿ ಸೋಲೋಪ್ಪಿಕೊಂಡಿತ್ತು.  ಇದರ ಬೆನ್ನಲ್ಲೇ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಪ್ರತಿಷ್ಠಿತ ದೇವಾಲಯಕ್ಕೆ ತೆರಳಿ ದರ್ಶನ ಪಡೆದುಕೊಂಡಿದ್ದಾರೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೈದಾನದಲ್ಲಿ ಭಾರತ ಗೆಲುವು ಪಡೆದಿದೆ. ಇದಾದ ಮೇಲೆ ಇಂದು ಬೆಳಗ್ಗೆ ವಿರಾಟ್‌ ಕೊಹ್ಲಿ ಅವರು ವಿಶಾಖಪಟ್ಟಣನ ಸಿಂಹಚಲಾಂನಲ್ಲಿ ಇರುವ ಪ್ರತಿಷ್ಠಿತ ವಿಷ್ಣು ದೇವಾಲಯವಾದ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ದೇವಾಯಲದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ದೇವಾಲಯದ ಸಿಬ್ಬಂದಿ ಕೊಹ್ಲಿ ಅವರ ಕೊರಳಿಗೆ ಹೂವಿನ ಹಾರ, ಕೇಸರಿ ಶಾಲು ಹಾಕಿದ್ದಾರೆ.

ಇದನ್ನೂ ಓದಿ: KSCA ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌  ಆಯ್ಕೆ – ಕೊಟ್ಟ ಮಾತಿನಂತೆ ಚಿನ್ನಸ್ವಾಮಿಯಲ್ಲಿ IPL ನಡೆಯುತ್ತಾ?

ವಿರಾಟ್‌ ಕೊಹ್ಲಿ ಆಗಾಗ ದೇವಾಲಯಗಳಿಗೆ ಹೋಗುತ್ತಿರುತ್ತಾರೆ. ಈ ಹಿಂದೆ ಎಷ್ಟೋ ಬಾರಿ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಪತ್ನಿ ಅನುಷ್ಕಾ ಶರ್ಮಾ ಜೊತೆ ವಿರಾಟ್‌ ಕೊಹ್ಲಿ ತೆರಳಿ ದೇವರ ಆಶೀರ್ವಾದ ಪಡೆದಿದ್ದರು. ಇದೇ ದೇವಾಲಯಕ್ಕೆ ಕ್ರಿಕೆಟ್‌ ಆಟಗಾರರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಸದ್ಯ ಟೀಮ್‌ ಇಂಡಿಯಾದ ಒಡಿಐ ನಾಯಕ ಕೆ.ಎಲ್‌ ರಾಹುಲ್‌ ಕೂಡ ಹಲವು ತಿಂಗಳ ಹಿಂದೆ ಪತ್ನಿಯೊಂದಿಗೆ ಭೇಟಿ ನೀಡಿದ್ದರು.

ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಗಿದ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಈಗಾಗಲೇ ವಿಶಾಖಪಟ್ಟಣಂ ನಗರವನ್ನು ತೊರೆದಿದ್ದಾರೆ. ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಿಂಗ್‌ ಕೊಹ್ಲಿ ತಮ್ಮ ಹೆಚ್ಚಿನ ಸಮಯವನ್ನು ಕುಟುಂಬ ಜೊತೆ ಕಳೆಯುತ್ತಿದ್ದಾರೆ. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅವರು ಬ್ಯಾಕ್‌ ಟು ಬ್ಯಾಕ್‌ ಶತಕ ಸಿಡಿಸಿದ್ದರು. ನಿನ್ನೆಯ ಕೊನೆಯ ಪಂದ್ಯದಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳಿಂದ 65 ರನ್‌ಗಳನ್ನು ಚಚ್ಚಿ ಭಾರತವನ್ನು ಗೆಲ್ಲಿಸಿದರು.

ಕಪ್ಪಂ ಸ್ತಂಭದಲ್ಲಿ ಅಂತಹದ್ದೇನಿದೆ?

ಇಲ್ಲಿನ ಪ್ರವೇಶ ದ್ವಾರದಲ್ಲಿ ನೆಲೆಸಿರುವ ‘ಕಪ್ಪಂ ಸ್ತಂಭ’ (ಪವಿತ್ರ ಕಂಬ)ವು ಭಕ್ತರಿಗೆ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಕೇಂದ್ರವಾಗಿದೆ. ಇದು ಕೇವಲ ಕಂಬವಲ್ಲ, ಸಾಕ್ಷಾತ್ ಭಗವಂತ ನರಸಿಂಹ ಸ್ವಾಮಿಯ ಶಾಂತ ಸ್ವರೂಪದ ಸಂಕೇತವಾಗಿದೆ ಎಂದು ನಂಬಲಾಗಿದೆ. ದೇವಸ್ಥಾನದ ಸ್ಥಳ ಪುರಾಣ ಮತ್ತು ಸ್ಥಳೀಯ ಸಂಪ್ರದಾಯಗಳ ಪ್ರಕಾರ ಈ ಸ್ತಂಭವು ಅತ್ಯಂತ ದೈವಿಕ ಹಿನ್ನೆಲೆಯನ್ನು ಹೊಂದಿದೆ.

Kishor KV