ನಿರಾಶೆಯ ಭಾವ ತುಂಬಿದ ಹೃದಯದೊಂದಿಗೆ ನಾವು ಆಸ್ಟ್ರೇಲಿಯಾವನ್ನು ತೊರೆಯುತ್ತಿದ್ದೇವೆ – ವಿರಾಟ್ ಕೊಹ್ಲಿ
ಸೆಮಿಫೈನಲ್ ಸೋತ ಬಳಿಕ ವಿರಾಟ್ ಭಾವುಕ ಪೋಸ್ಟ್

ನಿರಾಶೆಯ ಭಾವ ತುಂಬಿದ ಹೃದಯದೊಂದಿಗೆ ನಾವು ಆಸ್ಟ್ರೇಲಿಯಾವನ್ನು ತೊರೆಯುತ್ತಿದ್ದೇವೆ – ವಿರಾಟ್ ಕೊಹ್ಲಿಸೆಮಿಫೈನಲ್ ಸೋತ ಬಳಿಕ ವಿರಾಟ್ ಭಾವುಕ ಪೋಸ್ಟ್

ಅಡಿಲೇಡ್: ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿರುವುದು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳಿಗೆ ಎಷ್ಟು ನಿರಾಶೆ ಆಗಿತ್ತೋ ಅದಕ್ಕೂ ಮೀರಿ ಟೀಮ್ ಇಂಡಿಯಾ ಆಟಗಾರರು ಕೂಡಾ ಸೋಲಿನ ಸುಳಿಯಿಂದಾದ ಆಘಾತದಿಂದ ಹೊರಬಂದಿಲ್ಲ. ಫೈನಲ್‌ಗೆ ಎಂಟ್ರಿ ಕೊಡುವ ನಿರೀಕ್ಷೆ ಹುಸಿಯಾದ ಬಳಿಕ ಟೀಮ್ ಇಂಡಿಯಾ ಆಟಗಾರರು ನಿರಾಶೆಯಲ್ಲಿಯೇ ಪೆವಿಲಿಯನ್‌ನಿಂದ ಹೊರಬಂದಿದ್ದರು. ಅದರಲ್ಲೂ ವಿರಾಟ್ ಕೊಹ್ಲಿ ಭಾವುಕಾರಾಗಿಯೇ ತಮಗಾದ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ವಿಕೆಟ್ ಉರುಳದೆ ಟೀಮ್ ಇಂಡಿಯಾ ಸುಸ್ತು, ಇಂಗ್ಲೆಂಡ್ ಗೆದ್ದೇ ಬಿಡ್ತು

ಗೆಲುವಿಗೆ ಇನ್ನೊಂದೇ ಮೆಟ್ಟಿಲು ಇರುವಾಗ ಹೊರಬಂದಿರುವುದು ವಿರಾಟ್ ಕೊಹ್ಲಿ ಅವ್ರಿಗೆ ತುಂಬಾ ನೋವು ತಂದಿದೆ. ‘ಕನಸುಗಳನ್ನ ಸಾಧಿಸಲಾಗದೇ, ನಿರಾಶೆಯ ಭಾವ ತುಂಬಿದ ಹೃದಯದೊಂದಿಗೆ ನಾವು ಆಸ್ಟ್ರೇಲಿಯಾವನ್ನು ತೊರೆಯುತ್ತಿದ್ದೇವೆ. ಆದರೆ ಒಂದು ತಂಡವಾಗಿ ಕೆಲವು ಸ್ಮರಣೀಯ ಕ್ಷಣಗಳನ್ನು, ಭವಿಷ್ಯದಲ್ಲಿ ಮತ್ತಷ್ಟು ಉತ್ತಮಗೊಳ್ಳುವ ಗುರಿಯನ್ನ ಇಲ್ಲಿಂದ ಹೊತ್ತೊಯ್ಯಬಹುದು. ಕ್ರೀಡಾಂಗಣದಲ್ಲಿ ನಮ್ಮನ್ನು ಬೆಂಬಲಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನಮ್ಮ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಈ ಜರ್ಸಿಯನ್ನು ಧರಿಸಲು ಮತ್ತು ನಮ್ಮ ದೇಶವನ್ನು ಪ್ರತಿನಿಧಿಸಲು ನಾನು ಯಾವಾಗಲೂ ಹೆಮ್ಮೆ ಪಡುತ್ತೇನೆ.’ ವಿರಾಟ್ ಕೊಹ್ಲಿ ಹಾಕಿರುವ ಈ ಭಾವುಕ ಪೋಸ್ಟ್‌ಗೆ ಅಭಿಮಾನಿಗಳಿಂದ ಪ್ರತಿಕ್ರಿಯೆ ಹರಿದುಬರುತ್ತಿದೆ. ನೆಚ್ಚಿನ ಆಟಗಾನರನ ಭಾವುಕ ಮಾತಿಗೆ ಅಭಿಮಾನಿಗಳು ಕೂಡಾ ಭಾವುಕರಾಗಿದ್ದಾರೆ.

suddiyaana