ಕೆಣಕಿದ ಕೊಹ್ಲಿ.. ಫಿಲಿಪ್ಸ್ ಡೋಂಟ್ಕೇರ್ RCB ಡಫಿಗೆ ಕಿರಿಕಿರಿಯಾದ ವಿರಾಟ್!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಇಂದು 38ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸುಮಾರು ಎರಡು ದಶಕಗಳ ಕ್ರಿಕೆಟ್ ಪಯಣದಲ್ಲಿ ಕೊಹ್ಲಿ 28,601 ಅಂತರಾಷ್ಟ್ರೀಯ ರನ್ ಹಾಗೂ 86 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 55 ಶತಕಗಳೊಂದಿಗೆ ವಿಶ್ವದಾಖಲೆ ಹೊಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 74 ರನ್ ಸಿಡಿಸಿ ತಮ್ಮ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಕಿವೀಸ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಅವರನ್ನು ವಿರಾಟ್ ಕೊಹ್ಲಿ ಕೆಣಕಲು ಯತ್ನಿಸಿರೋ ವಿಡಿಯೋ ವೈರಲ್ ಆಗಿದೆ. NZ VS IND ODI ಪಂದ್ಯದಲ್ಲಿ ಫಿಲಿಪ್ಸ್ ಬ್ಯಾಟಿಂಗ್ಗೆ ಬರುವಾಗ ಸ್ಟೇಡಿಯಂನಲ್ಲಿ WWE ಸ್ಟಾರ್ ಜಾನ್ ಸೀನಾರ ಪ್ರಸಿದ್ಧ ಎಂಟ್ರಿ ಥೀಮ್ ಮ್ಯೂಸಿಕ್ ಹಾಕಿದ್ರು. ಈ ಮ್ಯೂಸಿಕ್ ಬರುತ್ತಿದ್ದಂತೆ ಕೊಹ್ಲಿ ತಮ್ಮ ಕೈಯನ್ನು ಮುಖದ ಮುಂದೆ ಆಡಿಸಿ ಗ್ಲೆನ್ ಫಿಲಿಪ್ಸ್ರನ್ನ ಕೆಣಕಲು ಮುಂದಾದ್ರು. ಆದ್ರೆ ಇದ್ದಕ್ಕೆ ಫಿಲಿಪ್ಸ್ ಯಾವುದೇ ಪ್ರತಿಕ್ರಿಯೇ ನೀಡದೇ ತಮ್ಮ ಪಾಡಿಗೆ ತಾವು ಇದ್ದರು..
ನ್ಯೂಜಿಲ್ಯಾಂಡ್ ವಿರುದ್ಧ ಬ್ಯಾಟಿಂಗ್ ಮಾಡುವಾಗ, ವಿರಾಟ್ ಕೊಹ್ಲಿ ಧರಿಸಿದ್ದ ‘ಹೂಪ್ ವಾಚ್’ ಫಿಟ್ನೆಸ್ ಬ್ಯಾಂಡ್ನ ಸ್ಟ್ರಾಪ್ ಕಟ್ ಆಗಿ, ಅದರ ಸಣ್ಣದೊಂದು ಪಿನ್ ಮೈದಾನದ ಹುಲ್ಲಿನ ಮಧ್ಯೆ ಬಿದ್ದಿತು. ಇದು ಕೆಳಗೆ ಬಿದ್ದ ನಂತ್ರ ವಿರಾಟ್ ಕೊಹ್ಲಿ ಆಟ ನಿಲ್ಲಿಸಿ ಅದ್ದನ್ನ ಹುಡುಕಲು ಶುರು ಮಾಡಿದ್ರು. ಆನ್-ಫೀಲ್ಡ್ ಅಂಪೈರ್ ಜಾಗರೂಕತೆಯಿಂದ ಆ ಸಣ್ಣ ಪಿನ್ ಅನ್ನು ಪತ್ತೆಹಚ್ಚಿ ಕೈಗೆ ನೀಡಿದಾಗ ಕೊಹ್ಲಿ ಖುಷಿಯಾದ್ರು.
ಜೇಕಬ್ ಡಫಿ ವಿರಾಟ್ಗೆ ಬೌಲಿಂಗ್ ಮಾಡುವಾಗ ಕಿರಿಕಿರಿ ಆಗುತಿತ್ತು ಅಂತ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಡಫಿ ಐಪಿಎಲ್ ಅಭ್ಯಾಸ ಪಂದ್ಯದ ವೇಳೆ ನೆಟ್ಸ್ನಲ್ಲಿ ಅವರು ನನಗೆ ಹೇಗೆ ಚಚ್ಚುತ್ತಿದ್ದರೋ, ಪಂದ್ಯದಲ್ಲೂ ಅದನ್ನೇ ಮಾಡಿದರು. ಐಪಿಎಲ್ನ ಯಾವುದೇ ರಹಸ್ಯಗಳೂ ಕೂಡ ವರ್ಕ್ ಆಗಲಿಲ್ಲ. ಅವರ ವಿರುದ್ಧ ಬೌಲಿಂಗ್ ಮಾಡುವುದು ನಿಜಕ್ಕೂ ಕಿರಿಕಿರಿ ಎಂದು ಡಫಿ ನಗುತ್ತಾ ಹೇಳಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡ ಇದೀಗ ಸರಣಿಗೆ ಮರಳಲು ಸಜ್ಜಾಗಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಆದರೆ ತವರಿನಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ತಂಡಕ್ಕೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವ ಒತ್ತಡವಿದೆ. ನವೆಂಬರ್ 7ರಂದು ವೆಲ್ಲಿಂಗ್ಟನ್ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯ ಸರಣಿಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ರಾಹುಲ್ ಗೆ ಮತ್ತೆ SLOT ಗ್ರಹಣ – ನಂ.5 ಫಿಕ್ಸ್ ಇಲ್ಲ ಎಂದಿದ್ದೇಕೆ ಗಿಲ್?
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಪಡೆದ ಬಳಿಕ ಅರ್ಶದೀಪ್ ಸಿಂಗ್ ಮಾಡಿದ ವಿಶೇಷ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ. ಈ ಡ್ಯಾನ್ಸ್ ಬಗ್ಗೆ ಕೇಳಿದಾದ ಇದು ನನ್ನ ಗೆಳತಿಗಾಗಿ. ನಾವು ಹೊರಗೆ ವಾಕಿಂಗ್ಗೆ ಹೋದಾಗ ಅಥವಾ ಒಟ್ಟಿಗೆ ಸಮಯ ಕಳೆಯುವಾಗ ಇಂತಹ ಡ್ಯಾನ್ಸ್ ಸ್ಟೆಪ್ಗಳನ್ನು ಮಾಡುತ್ತೇವೆ. ನಮ್ಮಲ್ಲಿ ಯಾರದ್ದಾದರೂ ಮೂಡ್ ಸ್ವಲ್ಪ ಸರಿಯಿಲ್ಲದಿದ್ದರೆ, ಈ ರೀತಿ ಸಂಭ್ರಮಿಸುವ ಮೂಲಕ ಒಬ್ಬರನ್ನೊಬ್ಬರು ಖುಷಿಪಡಿಸುತ್ತೇವೆ ಎಂದು ಅರ್ಶದೀಪ್ ಹೇಳಿದರು.
ಮಹಿಳಾ ಪ್ರೀಮಿಯರ್ ಲೀಗ್ನ ಐದನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ಟೂರ್ನಿ ನಡೆಯಲಿದೆ. ವಡೋದರಾ ಮತ್ತು ಮುಂಬೈ ಆತಿಥ್ಯ ವಹಿಸಲಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜನವರಿ 14ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಒಟ್ಟು 22 ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 7ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
RCB ಫ್ರಾಂಚೈಸಿ ಇದುವರೆಗೆ ಟ್ರೇಡಿಂಗ್ಗಾಗಿ ಯಾವುದೇ ತಂಡದ ಜೊತೆಗೆ ಮಾತುಕತೆ ನಡೆಸದೆ, ಓನ್ಮ್ಯಾನ್ ಆರ್ಮಿಯಂತೆ ನಿಂತಿದೆ. ಆದ್ರೆ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಕಳೆದ ಸೀಸನ್ನಲ್ಲಿ ವಿಫಲರಾಗಿರುವ ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿ, ತಮ್ಮ ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಆರ್ಸಿಬಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಉಳಿತಾಯವಾಗುವ ಮೊತ್ತವನ್ನು ಬಳಸಿ ಬಲಿಷ್ಠ ಬ್ಯಾಕ್-ಅಪ್ ಆಟಗಾರರನ್ನು ಖರೀದಿಸಲು ಬಳಸಿಕೊಳ್ಳುವ ಯೋಜನೆ ಫ್ರಾಂಚೈಸಿಯದ್ದಾಗಿದೆ.
ಸಿರಾಜ್ಗೆ ಸಿಗುತ್ತಿರುವ ಸೀಮಿತ ಅವಕಾಶಗಳ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿರಾಜ್ ಅವರನ್ನು ಪ್ಲೆಯಿಂಗ್ 11ರಿಂದ ಕೈಬಿಡುತ್ತಿರುವುದಕ್ಕೆ ಪ್ರಶ್ನೆ ಎತ್ತಿದ್ದಾರೆ. ‘ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಏಕೆ ಹೊರಗಿಡುತ್ತಿದ್ದೀರಿ? ಅವರು ಅಂಥದ್ದೇನು ತಪ್ಪು ಮಾಡಿದ್ದಾರೆ?’ ಎಂದು ಮುರಳಿ ಕಾರ್ತಿಕ್ ಪ್ರಶ್ನಿಸಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ಆಂಧ್ರ ಪ್ರದೇಶ ಹಾಗೂ ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿ ಕೇವಲ ಒಂದೊಂದು ಅಂಕ ಪಡೆದಿದ್ದ ಕರ್ನಾಟಕ ತಂಡ, ನಂತರ ಸತತ 2 ಪಂದ್ಯಗಳಲ್ಲಿ ಇನ್ನಿಂಗ್ಸ್ ಗೆಲುವು ಪಡೆದು ಬೋನಸ್ ಅಂಕಗಳೊಂದಿಗೆ 16 ಅಂಕಪಡೆದು ಅಗ್ರಸ್ಥಾನಕ್ಕೇರಿದೆ. ಅಲ್ಲದೆ ನಾಕೌಟ್ ಅವಕಾಶವನ್ನ ಮತ್ತಷ್ಟು ಬಲಪಡಿಸಿಕೊಂಡಿದೆ. ದ್ವಿತೀಯಾರ್ಧದಲ್ಲಿ ಕರ್ನಾಟಕ ತಂಡ ಛತ್ತೀಸ್ಗಢ, ಪಂಜಾಬ್ ಹಾಗೂ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ನೋಡಿರಿ

