ಕಿಂಗ್ ಕೊಹ್ಲಿಯೇ ಕ್ಯಾಪ್ಟನ್? – RCBಯಿಂದ ಯಾರೆಲ್ಲಾ ಔಟ್?
2025ಕ್ಕೆ ಕಪ್ ನಮ್ದೇ!

ಕಿಂಗ್ ಕೊಹ್ಲಿಯೇ ಕ್ಯಾಪ್ಟನ್? – RCBಯಿಂದ ಯಾರೆಲ್ಲಾ ಔಟ್?2025ಕ್ಕೆ ಕಪ್ ನಮ್ದೇ!

ಈ ಸಲ ಕಪ್ ನಮ್ದೇ ಅಂತಾ ಆರ್ಸಿಬಿ ಹೇಳ್ತಾನೆ ಬಂದಿದೆ.. ಆದ್ರೆ 17 ವರ್ಷಗಳಿಂದ ಒಂದೇ ಒಂದು ಕಪ್ ಗೆದ್ದಿಲ್ಲ.. ಸಾಲು ಸಾಲು ಸೋಲುಗಳನ್ನು ನೋಡಿ ಕಂಗೆಟ್ಟು ಹೋಗಿದೆ.. ದಿನೇಶ್ ಕಾರ್ತಿಕ್ ಅಬ್ಬರದ ಆಟ.. ಕಿಂಗ್ ಕೊಹ್ಲಿ ಸಿಕ್ಸ್ ಮೇಲೆ ಸಿಕ್ಸ್ ಬಾರಿಸಿದ್ರೂ ಕೂಡ ಈ ಬಾರಿಯೂ ಕಪ್ ಕೈತಪ್ಪಿ ಹೋಗಿದೆ.. ಈ ಸಲ ಕಪ್ ನಮ್ದೇ ಅಂತಾ ಅಂತಿದ್ದವರೆಲ್ಲಾ ಮುಂದಿನ ಸಲ ಕಪ್ ನಮ್ದೇ ಅನ್ನೋ ತರ ಆಗಿದೆ. ಮುಂದೆಯೂ ಇದೇ ರೀತಿ ಸೋಲು ಕಾಣ್ತಾ ಹೋದ್ರೆ ಪರಿಸ್ಥಿತಿ ಏನು? ಸೋಲನ್ನು ಗೇಲಿ ಮಾಡಿದವರ ಮುಂದೆ ಕಪ್ ಗೆದ್ದು ಬೀಗೋದು ಯಾವಾಗ ಎಂಬ ಕೊರಗು ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಯನ್ನು ಕಾಡ್ತಾ ಇದೆ.. ಇದೀಗ ಐಪಿಎಲ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯೊಂದು ಶುರುವಾಗಿದೆ. 2025 ಐಪಿಎಲ್ನಲ್ಲಿ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಗಲಿದ್ದಾರೆ ಎಂಬ ಮಾತೊಂದು ಕೇಳಿಬಂದಿದೆ.

ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು ಮಂಜೂರು

ಆರ್ಸಿಬಿ ಕಪ್ ಗೆಲ್ಲಬೇಕು ಎಂಬುದು ಕೋಟಿ, ಕೋಟಿ ಕನ್ನಡಿಗರ ಆಸೆ.. ಬೆಂಗಳೂರು ತಂಡಕ್ಕೆ ದೊಡ್ಡ ಮಟ್ಟದಲ್ಲೇ ಫ್ಯಾನ್ಸ್ ಕ್ರೇಜ್ ಇದೆ. ಆದರೆ ಏನ್ ಮಾಡೋದು ಐಪಿಎಲ್ ಶುರುವಾಗಿ 17 ವರ್ಷ ಕಳೆದರೂ ನಮ್ಮ ಆರ್ಸಿಬಿ ಕಪ್ ಗೆದ್ದೇ ಇಲ್ಲ. ಈ ಬಾರಿಯಂತೂ ಹೊಸ ಅಧ್ಯಾಯದೊಂದಿಗೆ ಆರ್ಸಿಬಿ ತೊಡೆತಟ್ಟಿ ಅಖಾಡಕ್ಕೆ ಬಂದಿತ್ತು. ಆದರೆ, ಹೊಸ ಅಧ್ಯಾಯ ಮುಕ್ತಾಯವಾಗಿದ್ದು ಸೋಲಿನೊಂದಿಗೆ. ಸತತ ಆರು ಗೆಲುವುಗಳನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ರೋಚಕವಾಗಿ ಎಂಟ್ರಿ ಕೊಟ್ಟಿದ್ರೂ ಕೂಡಾ ಕಪ್ ಕೈಗೆ ಬರಲೇ ಇಲ್ಲ. ಆದ್ರೆ, ಐಪಿಎಲ್ ಇತಿಹಾಸದಲ್ಲೇ ನೆನಪಿಟ್ಟುಕೊಳ್ಳುವಂತ ಶಾಕಿಂಗ್ ಕಮ್ ಬ್ಯಾಕ್ ಮಾಡಿದ್ದು ಆರ್‌ಸಿಬಿ ಸಾಧನೆಯಂತೂ ಹೌದು. ಹೀಗಾಗಿ ಈ ಬಾರಿ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೇ ಅನ್ನೋ ಹೋಪ್ ಹುಟ್ಟಿಕೊಂಡಿತ್ತು.. ಈಗ ಈ ಸೀಸನ್ ಮುಗಿದ ಅಧ್ಯಾಯ. ಆದ್ರೆ, ಒನ್ಸ್ ಅಗೇನ್ ಮುಂದಿನ ಸಲ ಕಪ್ ನಮ್ದೇ ಅಂತಾ ಫಾನ್ಸ್ ಕೂಡಾ ಡಿಸೈಡ್ ಮಾಡಿಯಾಗಿದೆ. ಜೊತೆಗೆ ಆರ್ಸಿಬಿ ಮಾಲೀಕರನ್ನ ಬದಲಾಯಿಸಿ, ಕ್ಯಾಪ್ಟನ್ ನ ಬದಲಾಯಿಸಿ ಅನ್ನೋ ಮಾತುಗಳು ಕೂಡ ಕೇಳಿ ಬರ್ತಾ ಇದೆ.. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಇದೀಗ RCB ಬಗ್ಗೆ ಟೀಂ ಇಂಡಿಯಾದ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ ಧ್ವನಿ ಎತ್ತಿದ್ದಾರೆ..  2025ರಲ್ಲಿ ಆರ್ಸಿಬಿಗೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಅಂತ ಹೇಳಿದ್ದಾರೆ.

ಆರ್ಸಿಬಿ ಫ್ರಾಂಚೈಸಿ ತಮ್ಮ ತಂಡದಲ್ಲಿ ಮೊದಲು ಉಳಿಸಿಕೊಳ್ಳುವ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಕೇವಲ ರಿಟೈನ್ ಮಾಡಿಕೊಂಡರೆ ಸಾಲದು, ಆರ್ಸಿಬಿಯ ಕ್ಯಾಪ್ಟನ್ ಆಗಿ ಕೊಹ್ಲಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ಆಗ ಫ್ರಾಂಚೈಸಿಗೂ ಒಂದು ಬಲ ಬರುತ್ತದೆ. ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರನ್ ಮಷಿನ್ ತೆಗೆದುಕೊಂಡರೆ ಉತ್ತಮ. ಇಲ್ಲದಿದ್ದರೆ, ಫ್ರಾಂಚೈಸಿಯವರು ಹೊಸ ನಾಯಕನಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ ಅಂತಾ ಆಕಾಶ್ ಚೋಪ್ರಾ ಹೇಳಿದ್ದಾರೆ.. ಇವ್ರ ಹೇಳಿಕೆಯಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..

ಇನ್ನು 2025ರಲ್ಲಿ ನಡೆಯುವ ಐಪಿಎಲ್ 18ನೇ ಸೀಸನ್ಗೆ ತಂಡದಿಂದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಅಲ್ಟಾರಿ ಜೋಸೆಫ್ ಮತ್ತು ಲಾಕೀ ಫೆರ್ಗಸನ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಕೈಬಿಡಲಿದೆ. ಫಾಫ್ ಗೆ ವಯಸ್ಸಾಗುತ್ತಿದೆ. ಅವರನ್ನು ಟೀಮ್ನಿಂದ ಬಿಡುವುದು ಬಹುತೇಕ ಖಚಿತ ಅಂತ ಆಕಾಶ್ ಚೋಪ್ರಾ ಹೇಳಿದ್ದಾರೆ. ಇವ್ರ ಈ ಹೇಳಿಕೆ ಈಗ ಭಾರಿ ಸೌಂಡ್ ಮಾಡ್ತಾ ಇದೆ.. ಹೀಗಾಗಿ ಕೊಹ್ಲಿ ಕ್ಯಾಪ್ಟನ್ ಆದ್ರೆ ನಮ್ಮ ಬೆಂಗಳೂರು ತಂಡ ಕಪ್ ಗೆಲ್ಲಬಹುದು ಅಂತಾ ಫ್ಯಾನ್ಸ್ ಮಾತಾಡಿಕೊಳ್ತಿದ್ದಾರೆ..

ಕಿಂಗ್ ಕೊಹ್ಲಿ ಈ ಹಿಂದೆಯೂ ಕ್ಯಾಪ್ಟನ್ ಆಗಿ ಆರ್ಸಿಬಿಯನ್ನು  ಮುನ್ನಡೆಸಿದ್ರು.. 2013ರಿಂದ 2021ರವರೆಗೆ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿದ್ರು.. 2016ರ ಆವೃತ್ತಿಯಲ್ಲಿ ತಂಡವನ್ನ ಫೈನಲ್ ವರೆಗೂ ಮುನ್ನಡೆಸಿದ್ದರು. ದುರದೃಷ್ಟವಶಾತ್ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಆರ್ಸಿಬಿ ಸೋತಿತು.. ಐಪಿಎಲ್ ಟೂರ್ನಿಯ 2021ರ ಆವೃತ್ತಿಯಲ್ಲಿ ಅಕ್ಟೋಬರ್ 11ರಂದು ಯುಎಇನ ಶಾರ್ಜಾ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಕೊನೇ ಬಾರಿ ಮುನ್ನಡೆಸಿದ್ದರು. ನಂತರ ಆರ್ಸಿಬಿ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದರು. ಇದೇ ಕಾರಣಕ್ಕೆ ಐಪಿಎಲ್ 2022 ಟೂರ್ನಿಯ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ದಕ್ಷಿಣ ಆಫ್ರಿಕಾದ ದಿಗ್ಗಜ ಫಾಫ್ ಡುಪ್ಲೆಸಿಸ್ ಅವರನ್ನು ಖರೀದಿ ಮಾಡಿತು.. ನಂತ್ರ  ಅವರಿಗೆ ನಾಯಕ್ವ ವಹಿಸಿತ್ತು.ಫಾಫ್ ಸಾರಥ್ಯದಲ್ಲಿ ಆರ್ಸಿಬಿ ಐಪಿಎಲ್ 2022 ಟೂರ್ನಿಯ ಪ್ಲೇ-ಆಫ್ಸ್ ತಲುಪಿ ಕ್ವಾಲಫೈಯರ್-2 ಪಂದ್ಯದಲ್ಲಿ ನಿರಾಶೆ ಅನುಭವಿಸಿತ್ತು. ಈ ಬಾರಿಯೂ ಆರ್ ಸಿಬಿ ಪ್ಲೇ ಆಫ್ ಗೆ ಪ್ರವೇಶಿಸಿತು.. ಆದ್ರೆ ಲಕ್ ನಮ್ಮ ತಂಡದ ಪರವಾಗಿಲ್ಲ.. ಹೀಗಾಗಿ ಕಪ್ ಬೇರೆ ತಂಡದ ಪಾಲಾಯ್ತು.. ಮುಂದಿನ ಟೂರ್ನಿಗಳಲ್ಲೂ ಎಷ್ಟು ಅಂತಾ ಸೋಲನ್ನ ನೋಡೋದು.. ಹೀಗಾಗಿ ಕಿಂಗ್ ಕೊಹ್ಲಿಯೇ ಕ್ಯಾಪ್ಟನ್ ಆಗಬೇಕು ಎಂಬ ಒತ್ತಾಯವೂ ಕೇಳಿಬರ್ತಿದೆ. ಇದ್ರ ಜೊತೆಗೆ ದಿನೇಶ್ ಕಾರ್ತಿಕ್ ಆರ್‌ಸಿಬಿ ಕೋಚ್ ಆಗಬೇಕು. ಆಗ ಡಿಕೆ, ವಿಕೆ ಇಬ್ರೂ ಸೇರಿದ್ರೆ ಆರ್‌ಸಿಬಿ ಗೆಲುವಿನ ಕೇಕೆ ಹಾಕೋದ್ರಲ್ಲಿ ಯಾವ ಅನುಮಾನವೂ ಇಲ್ಲ.

Shwetha M