RCBಗೆ ಕೊಹ್ಲಿ ಗುಡ್ ಬೈ – ಜಾಹೀರಾತು ಒಪ್ಪಂದ ರದ್ದು!
ಫ್ರಾಂಚೈಸಿಗೂ ಸಿಕ್ಕಿತಾ ನಿವೃತ್ತಿ ಹಿಂಟ್?

ಕೋಟ್ಯಂತರ ಅಭಿಮಾನಿಗಳಿಗೆ ಕ್ರಿಕೆಟ್ ಹುಚ್ಚು ಹಿಡಿಸಿದ ಲೆಜೆಂಡರಿ ಪ್ಲೇಯರ್ ವಿರಾಟ್ ಕೊಹ್ಲಿ. ಟೀಂ ಇಂಡಿಯಾದಲ್ಲಿ ಆಲ್ರೆಡಿ ಟಿ-20ಐ ಹಾಗೇ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಏಕದಿನ ಮಾದರಿಯಲ್ಲಿ ಮಾತ್ರವೇ ಕಂಟಿನ್ಯೂ ಆಗ್ತಿದ್ದು ಇದು ಕೂಡ ಜಾಸ್ತಿ ದಿನ ಇಲ್ಲ. ಹೋಗ್ಲಿ ಐಪಿಎಲ್ನಲ್ಲಾದ್ರೂ ಇನ್ನೊಂದಷ್ಟು ವರ್ಷ ವಿರಾಟ್ ವೈಭವ ನೋಡಬಹುದು ಅಂದ್ರೆ ಈಗ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ. ವಿರಾಟ್ ಕೊಹ್ಲಿ ಐಪಿಎಲ್ನಿಂದ ಯಾವಾಗ ಬೇಕಿದ್ರೂ ನಿವೃತ್ತಿ ಘೋಷಣೆ ಮಾಡೋ ಸಾಧ್ಯತೆ ಇದೆ. ಈ ಬಗ್ಗೆ ಹಿಂಟ್ ಕೂಡ ಹೊರ ಬಿದ್ದಿದೆ.
ಇದನ್ನೂ ಓದಿ : ಪಾರ್ಟ್ನರ್ ಗಿಲ್ಲಿ ಬೇಡ ಎಂದ ಕಾವ್ಯ – ಡೊಡ್ಮನೆಯ ಒಂಟಿ, ಜಂಟಿ ಆಟಕ್ಕೆ ಕಡೆಗೂ ಬ್ರೇಕ್!
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿರೋ ಟೀಂ ಇಂಡಿಯಾ ನೆಕ್ಸ್ಟ್ ವೀಕ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವೈಟ್ ಬಾಲ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಅಕ್ಟೋಬರ್ 19ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಸರಣಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಅದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಚಾಂಪಿಯನ್ಸ್ ಟ್ರೋಫಿ ಬಳಿಕ ಈ ಇಬ್ಬರು ಆಟಗಾರರು ಇದೇ ಮೊದಲ ಬಾರಿಗೆ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಕಣಕ್ಕಿಳೀತಿದ್ದಾರೆ. ಆತಂಕದ ವಿಚಾರ ಏನಂದ್ರೆ ಈ ಸರಣಿಯೇ ಈ ಇಬ್ಬರಿಗೂ ಭಾರತದ ಪರ ಕೊನೇ ಸರಣಿ ಅನ್ನೋ ಮಾತುಗಳೂ ಇವೆ. ಅದ್ರಲ್ಲೂ ಆರ್‌ಸಿಬಿ ಫ್ಯಾನ್ಸ್ಗಂತೂ ಹಾರ್ಟ್ ಬ್ರೇಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ.
ಐಪಿಎಲ್ ಗೂ ವಿದಾಯ ಘೋಷಿಸುತ್ತಾರಾ ವಿರಾಟ್ ಕೊಹ್ಲಿ?
ಐಪಿಎಲ್ ನ ದಿ ಮೋಸ್ಟ್ ಫ್ಯಾನ್ ಬೇಸ್ಡ್ ಫ್ರಾಂಚೈಸಿ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಅದ್ರಲ್ಲೂ ಲಾಯಲ್ ಫ್ಯಾನ್ಸ್ ಇರೋ ಟೀಂ. ಇಂಥಾ ಆರ್ ಸಿಬಿಯ ಜೀವಾಳವೇ ಕಿಂಗ್ ವಿರಾಟ್ ಕೊಹ್ಲಿ. ಸಾಕಷ್ಟು ಸ್ಟಾರ್ ಆಟಗಾರರನ್ನೇ ಕಂಡಿರೋ ಫ್ರಾಂಚೈಸಿ 18ನೇ ಸೀಸನ್ನಲ್ಲಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. ಪಂಜಾಬ್ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆಲ್ಲೋ ಮೂಲಕ ಚಾಂಪಿಯನ್ ಪಟ್ಟಕ್ಕೇರಿದ್ರು. ಆ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಕುಸಿದು ಕಣ್ಣೀರಿಟ್ಟಿದ್ರು. ಈ ಕ್ಷಣವನ್ನ ಫ್ಯಾನ್ಸ್ ಯಾವತ್ತೂ ಮರೆಯೋಕೆ ಚಾನ್ಸೇ ಇಲ್ಲ. ಈ ಸಾರ್ಥಕ ಕ್ಷಣವನ್ನ ಕಂಡಿದ್ದ ವಿರಾಟ್ ಕೊಹ್ಲಿ ಈಗ ಐಪಿಎಲ್ನಿಂದಲೇ ಹೊರ ನಡೆಯೋ ಮನಸ್ಸು ಮಾಡಿದಂತಿದೆ. ಅಂದ್ರೆ ಆಲ್ ಫಾರ್ಮೆಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡೋ ಟೈಂ ಬಂದಂತಿದೆ.
ಆಸ್ಟ್ರೇಲಿಯಾ ಸರಣಿ ಬೆನ್ನಲ್ಲೇ ವಿದಾಯ ಘೋಷಣೆ!
ಪ್ರಸ್ತುತ ಐಪಿಎಲ್ನ ಹಾಲಿ ಚಾಂಪಿಯನ್ಸ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟಿದಾರ್ ಕ್ಯಾಪ್ಟನ್ ಆಗಿದ್ದಾರೆ. 2026ರ ಮಾರ್ಚ್ ತಿಂಗಳಲ್ಲಿ 19ನೇ ಆವೃತ್ತಿಯ ಟೂರ್ನಿ ಆರಂಭ ಆಗ್ಲಿದೆ. ಮುಂಬರುವ ಡಿಸೆಂಬರ್ನಲ್ಲಿ ಮಿನಿ ಆಕ್ಷನ್ ನಡೆಯಲಿದ್ದು ಈಗಾಗ್ಲೇ ಆಟಗಾರರ ರಿಲೀಸ್ಗೆ ಡೆಡ್ಲೈನ್ ಕೂಡ ನೀಡಲಾಗಿದೆ. ಸೋ ಅಲ್ಲಿಗೆ ನೆಕ್ಸ್ಟ್ ಸೀಸನ್ ಐಪಿಎಲ್ನ ಸಿದ್ಧತೆಗಳು ಜೋರಾಗಿವೆ. ಇದಕ್ಕೆ ಆರ್ಸಿಬಿಯೂ ಹೊರತಲ್ಲ. ಫ್ರಾಂಚೈಸಿ ಕೂಡ ಕಮರ್ಷಿಯಲ್ ಒಪ್ಪಂದಗಳನ್ನೂ ಕಂಟಿನ್ಯೂ ಮಾಡ್ತಿದೆ. ಆದ್ರೆ ವಿರಾಟ್ ಕೊಹ್ಲಿ 2026ರ ಐಪಿಎಲ್ಗೆ ಆರ್‌ಸಿಬಿ ಫ್ರಾಂಚೈಸಿ ಜೊತೆ ಟೈ ಅಪ್ ಆಗಿರೋ ಪ್ರಮುಖ ಕಂಪನಿಯೊಂದಿಗೆ ತಮ್ಮ ಕಾಂಟ್ರ್ಯಾಕ್ಟ್ನ ರಿನೀವಲ್ ಮಾಡಿಸೋಕೆ ನಿರಾಕರಿಸಿದ್ದಾರೆ. ಅಂದ್ರೆ ಒಪ್ಪಂದವನ್ನು ನವೀಕರಿಸೋಕೆ ಒಪ್ಪಿಗೆ ನೀಡಿಲ್ಲ. ವಿರಾಟ್ ಕೊಹ್ಲಿಯವ್ರ ಇದೇ ನಡೆಯೇ ಅನುಮಾನಕ್ಕೆ ಕಾರಣವಾಗಿದೆ. ಐಪಿಎಲ್ಗೂ ನಿವೃತ್ತಿ ಘೋಷಣೆ ಮಾಡ್ತಾರೇನೋ ಎನ್ನುವಂತ ಟೆನ್ಷನ್ ಕಾಡ್ತಿದೆ. ಅದೂ ಅಲ್ದೇ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಕಿಂಗ್ ಕೊಹ್ಲಿ ಒಡಿಐ ಕ್ರಿಕೆಟ್ಗೂ ವಿದಾಯ ಹೇಳ್ತಾರೆ ಎನ್ನಲಾಗುತ್ತಿದೆ. ಇದರ ನಡುವೆ ಐಪಿಎಲ್ಗೂ ಗುಡ್ ಬೈ ಹೇಳುವ ಯೋಚನೆಯಲ್ಲಿದ್ದಾರಾ ಅನ್ನೋ ಟಾಕ್ ಇದೆ. ಬಹುಶಃ 2026ರ ಐಪಿಎಲ್ನಲ್ಲಿ ಕೊಹ್ಲಿ ಕಣಕ್ಕಿಳಿದು 20ನೇ ಆವೃತ್ತಿಗೂ ಮುನ್ನ ರಿಟೈರ್ ಆಗೋ ಚಾನ್ಸಸ್ ಇದೆ.
ಐಪಿಎಲ್ ನಲ್ಲೂ ಬ್ಯಾಟಿಂಗ್ ಕಿಂಗ್ ವಿರಾಟ್!
ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಿಂತ್ರೆ ಹಸಿದ ಹೆಬ್ಬುಲಿ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಅದ್ರಲ್ಲೂ ಚೇಸಿಂಗ್ ಅಂತಾ ಬಂದ್ರೆ ಕೊಹ್ಲಿಯನ್ನ ತಡೆಯೋರೇ ಯಾರೂ ಇರಲ್ಲ. ಐಪಿಎಲ್ನಲ್ಲೂ ಕೂಡ ಹೈಯೆಸ್ಟ್ ರನ್ಸ್ ಕಲೆ ಹಾಕಿರೋ ಬ್ಯಾಟರ್ ಕೂಡ ಕೊಹ್ಲಿಯೇ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಆರ್‌ಸಿಬಿ ಪರ 267 ಪಂದ್ಯಗಳಲ್ಲಿ, ಅವರು 39.54 ಸರಾಸರಿ ಮತ್ತು 132.85 ಸ್ಟ್ರೈಕ್ ರೇಟ್‌ನಲ್ಲಿ ಎಂಟು ಶತಕಗಳು ಮತ್ತು 63 ಅರ್ಧಶತಕಗಳನ್ನು ಒಳಗೊಂಡಂತೆ 8,661 ರನ್ ಗಳಿಸಿದ್ದಾರೆ. ಆರ್‌ಸಿಬಿ ತಂಡ 2025ರಲ್ಲಿ ಚಾಂಪಿಯನ್ ಆಗುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. 15 ಪಂದ್ಯಗಳಲ್ಲಿ 54.75 ರ ಅದ್ಭುತ ಸರಾಸರಿ ಮತ್ತು 144.71 ರ ಸ್ಟ್ರೈಕ್ ರೇಟ್‌ನಲ್ಲಿ 657 ರನ್‌ಗಳನ್ನು ಗಳಿಸಿದರು. 73* ರ ಗರಿಷ್ಠ ಸ್ಕೋರ್‌ನೊಂದಿಗೆ ಎಂಟು ಅರ್ಧಶತಕಗಳನ್ನು ದಾಖಲಿಸಿದ್ರು. ಹಾಗೇ ಆವೃತ್ತಿಯೊಂದ್ರಲ್ಲಿ ಹೈಯೆಸ್ಟ್ ರನ್ ಕಲೆ ಹಾಕಿರೋ ದಾಖಲೆ, ಅತೀ ಹೆಚ್ಚು ಶತಕಗಳ ದಾಖಲೆ ಕೂಡ ವಿರಾಟ್ ಹೆಸರಲ್ಲೇ ಇದೆ.
ಆರ್‌ಸಿಬಿ ಅಂದ್ರೆ ವಿರಾಟ್.. ವಿರಾಟ್ ಅಂದ್ರೆ ಆರ್ ಸಿಬಿ. ಡೇ ಒನ್ನಿಂದ ಒಂದೇ ಫ್ರಾಂಚೈಸಿ ಪರ ಆಡ್ತಿರೋ ಏಕೈಕ ಆಟಗಾರ. ಸೋ ಟ್ರೋಫಿ ಗೆದ್ದಿರೋ ಆ ಸಾರ್ಥಕ ಕ್ಷಣವನ್ನ ಕಂಡಿರೋ ವಿರಾಟ್ ಯಾವಾಗ ಬೇಕಿದ್ರೂ ಎಲ್ಲಾ ಫಾರ್ಮೆಟ್ನಿಂದಲೂ ಹೊರ ನಡೆಯಬಹುದು. ಅದೆಲ್ಲಕ್ಕಿಂತ ಹೆಚ್ಚಾಗಿ ಫಾರ್ಮ್ನಲ್ಲಿ ಇದ್ದಾಗ್ಲೇ ಹಾಗೇ ಮತ್ತೊಬ್ರು ನಿವೃತ್ತಿ ತಗೊಳ್ಳೀ ಅಂತಾ ಹೇಳೋ ಮೊದ್ಲೇ ಹೊರನಡೆಯೋ ವ್ಯಕ್ತಿತ್ವ ಅವ್ರದ್ದು. ಅದೂ ಅಲ್ದೇ ಇತ್ತೀಚಿನ ವರ್ಷಗಳಲ್ಲಿ ವಿರಾಟ್ ಭಾರತದಲ್ಲಿ ಇದ್ದಿದ್ದಕ್ಕಿಂತ ಲಂಡನ್ನಲ್ಲಿ ಇದ್ದದ್ದೇ ಜಾಸ್ತಿ. ಐಪಿಎಲ್ ಬಳಿಕ ಲಂಡನ್ಗೆ ಹಾರಿದ್ದ ವಿರುಷ್ಕಾ ಜೋಡಿ ಅಲ್ಲಿಯೇ ಇದ್ದಾರೆ. ಕಾಮನ್ ಪೀಪಲ್ಸ್ ಥರ ಲೈಫ್ ಲೀಡ್ ಮಾಡೋ ಆಸೆಯಲ್ಲಿರೋ ಈ ಸ್ಟಾರ್ ಜೋಡಿ ಮುಂದಿನ ದಿನಗಳಲ್ಲಿ ಲಂಡನ್ನಲ್ಲೇ ಸೆಟಲ್ ಆಗೋ ಪ್ಲ್ಯಾನ್ನಲ್ಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಸಾಮ್ರಾಟನಾಗಿ ಮೆರೆದಿದ್ದು ಯಾವುದೇ ಕ್ಷಣದಲ್ಲೂ ನಿವೃತ್ತಿ ಘೋಷಣೆ ಮಾಡೋ ಸಾಧ್ಯತೆಯಂತೂ ಇದೆ.

ನೋಡಿರಿ

