World Cupಗೆ ಕೈ ಕೊಟ್ರಾ ಕೊಹ್ಲಿ? – ಮೊದಲ ಪಂದ್ಯದಲ್ಲಿ ಆಡ್ತಿಲ್ಲ ಯಾಕೆ?
ಅಮೆರಿಕದಲ್ಲಿ ವಿರಾಟ್​ ಗಿರೋ ಸವಾಲೇನು? 

World Cupಗೆ ಕೈ ಕೊಟ್ರಾ ಕೊಹ್ಲಿ? – ಮೊದಲ ಪಂದ್ಯದಲ್ಲಿ ಆಡ್ತಿಲ್ಲ ಯಾಕೆ?ಅಮೆರಿಕದಲ್ಲಿ ವಿರಾಟ್​ ಗಿರೋ ಸವಾಲೇನು? 

ಕ್ರಿಕೆಟ್ ಲೋಕದ ಲೆಜೆಂಡರಿ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ರನ್ ಮಷಿನ್ ಅನ್ನೋದ್ರಲ್ಲಿ ನೋ ಡೌಟ್. ಅದು ಐಪಿಎಲ್ಲೇ ಆಗಿರಲಿ ಅಥವಾ ಐಸಿಸಿ ಟೂರ್ನಮೆಂಟ್​ಗಳೇ ಇರಲಿ. ಕೊಹ್ಲಿ ಕ್ರೀಸ್​ನಲ್ಲಿ ಇರುವಷ್ಟು ಹೊತ್ತೂ ಟೀಂ ಇಂಡಿಯಾ ಗೆಲುವಿಗೆ ಹತ್ತಿರವಾಗ್ತಿದೆ ಅಂತಾನೇ ಅರ್ಥ. ಇದೀಗ ಮುಂಬರೋ ಟಿ20 ವಿಶ್ವಕಪ್​ನಲ್ಲೂ ವಿರಾಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಆದರೆ ಐಪಿಎಲ್​​ ಆರೆಂಜ್​ ಕ್ಯಾಪ್ ವಿನ್ನರ್​​​, ಅದೇ ಖದರ್​​ ಅನ್ನ ಚುಟುಕು ದಂಗಲ್​ನಲ್ಲಿ ರಿಪೀಟ್ ಮಾಡ್ತಾರಾ ಅನ್ನೋ ಅನುಮಾನ ಕಾಡ್ತಿದೆ. ಯಾಕಂದ್ರೆ ಈಗಾಗ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ ಆ್ಯಂಡ್​​ ಗ್ಯಾಂಗ್​​ನ ಅನೇಕ ಆಟಗಾರರು ಟಿ20 ವಿಶ್ವಕಪ್​​​​​​​​​​​​​ ಆಡಲು ಅಮೇರಿಕಾಗೆ ತೆರಳಿದ್ದಾರೆ. ಆದರೆ ವಿಶ್ರಾಂತಿ ಬಯಸಿರೋ ಕೊಹ್ಲಿ ಮೊದಲ ಬ್ಯಾಚ್​​​​​​​​ ಜೊತೆ ಪ್ರಯಾಣಿಸಿಲ್ಲ. ಈ ತಿಂಗಳಾಂತ್ಯದಲ್ಲಿ ಅಮೆರಿಕಾಗೆ ಫ್ಲೈಟ್ ಏರಲಿದ್ದಾರೆ ಎಂದು ಹೇಳಲಾಗ್ತಿದೆ. ಕೊಹ್ಲಿಯ ಇದೇ ನಿರ್ಧಾರ ಈಗ ಟೀಂ ಇಂಡಿಯಾಗೆ ಆತಂಕ ತಂದಿದೆ.

ಇದನ್ನೂ ಓದಿ: ಸುಧಾಕರ್‌ಗೆ ಒಂದು ವೋಟ್‌ ಜಾಸ್ತಿ ಬಂದ್ರೂ ಶಾಸಕ ಸ್ಥಾನಕ್ಕೆ ರಾಜೀನಾಮೆ -ಪ್ರದೀಪ್ ಈಶ್ವರ್

ಅಮೆರಿಕದಲ್ಲಿ ಕೊಹ್ಲಿ ಫ್ಲಾಪ್ ಶೋ!  

ಜೂನ್​​ 1 ರಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದ್ದು, ವಿರಾಟ್​​​​​​​ ಆಡುವುದು ಅನುಮಾನ ಎನ್ನಲಾಗ್ತಿದೆ. ಹಾಗೇನಾದ್ರೂ ಕೊಹ್ಲಿ ವಾರ್ಮ್​ಅಪ್​​​​ ಮ್ಯಾಚ್​ ತಪ್ಪಿಸಿಕೊಂಡ್ರೆ ಬಿಗ್​​​ ಲಾಸ್ ಆಗಲಿದೆ. ಯಾಕಂದ್ರೆ ಮೆಗಾ ಬ್ಯಾಟಲ್​ಗೂ ಮುನ್ನ ಭಾರತ ಆಡುವುದು ಏಕೈಕ ಅಭ್ಯಾಸ ಪಂದ್ಯ ಮಾತ್ರ. ಇದನ್ನ ಬಿಟ್ರೆ ನೇರವಾಗಿ ಜೂನ್​ 5 ರಂದು ಐರ್ಲೆಂಡ್ ವಿರುದ್ಧ ಅಖಾಡಕ್ಕೆ ಧುಮುಕಲಿದೆ. ಕೊಹ್ಲಿ ಸಿದ್ಧತೆ ನಡೆಸದೇ ಏಕ್​​ದಮ್​​​​​​​​​​​​​​​​ ವಿಶ್ವಕಪ್ ಆಡಿದ್ರೆ ಪರ್ಫಾಮೆನ್ಸ್​ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗೇ ಭಾರತ ತಂಡ ಗುಂಪು ಹಂತದ 4 ಪಂದ್ಯಗಳನ್ನ ಅಮೆರಿಕಾದಲ್ಲೇ ಆಡಲಿದೆ. ಆದ್ರೆ ಅಮೆರಿಕ ನೆಲದಲ್ಲಿ ಕೊಹ್ಲಿ ಫರ್ಫಾಮೆನ್ಸ್ ಕಳಪೆಯಾಗಿದೆ. ಕೊಹ್ಲಿ ಅಮೆರಿಕಾದಲ್ಲಿ ಈವರೆಗೆ 4 ಪಂದ್ಯಗಳನ್ನ ಆಡಿದ್ದು, ಬರೀ 63 ರನ್ ಅಷ್ಟೇ ಬಾರಿಸಿದ್ದಾರೆ. ಅದಕ್ಕಾಗಿ 61 ಎಸೆತ ತೆಗೆದುಕೊಂಡಿದ್ದಾರೆ. ಇನ್ನು ಬ್ಯಾಟಿಂಗ್ ಎವರೇಜ್​​ 21 ಆಗಿದೆ. ಕಿಂಗ್ ಕೊಹ್ಲಿ ವೃತ್ತಿ ಜೀವನದಲ್ಲಿ ಎರಡು ಬಾರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಎರಡೂ ಪ್ರವಾಸದಲ್ಲಿ ಅತಿಕೆಟ್ಟ ಆಟವಾಡಿದ್ದಾರೆ. 2016ರ ಮೊದಲ ಪ್ರವಾಸದಲ್ಲಿ ಕೊಹ್ಲಿ 1 ಇನ್ನಿಂಗ್ಸ್ ಆಡಿ ಬರೀ 16 ರನ್​ ಗಳಿಸಲಷ್ಟೇ ಶಕ್ತರಾಗಿದ್ರು. 2019 ರಲ್ಲೂ 2 ಇನ್ನಿಂಗ್ಸ್ ಆಡಿ ಕೇವಲ 47 ರನ್ ಗಳಿಸಿ ನಿರಾಸೆ ಮೂಡಿಸಿದ್ರು.

ಹೀಗಾಗಿ ಐಪಿಎಲ್​ನಲ್ಲಿ ಮಿಂಚಿದ್ದ ಕಿಂಗ್ ವಿರಾಟ್ ಕೊಹ್ಲಿಗೆ ಮುಂಬರೋ ಟಿ20 ವಿಶ್ವಕಪ್​​​ ಅಂತೂ ಸುಲಭವಿಲ್ಲ. 17ನೇ ಐಪಿಎಲ್​​ನ ರನ್​ರಾಜನ ಮುಂದೆ ಬಿಗ್ ಚಾಲೆಂಜಸ್​ಗಳಿವೆ. ವೈಫಲ್ಯ ಮೆಟ್ಟಿ ನಿಲ್ಲೋದ್ರ ಜೊತೆ ಅಮೆರಿಕಾ ಕಂಡಿಷನ್​​ಗೆ ಹೊಂದಿಕೊಳ್ಳಬೇಕಾದ ಸವಾಲಿದೆ. ಕೊಹ್ಲಿ ಮಾತ್ರವಲ್ಲದೆ ಐಪಿಎಲ್ ಗುಂಗಲ್ಲಿದ್ದ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗೂ ಸೇಮ್ ಸಿಚುಯೇಶನ್ ಇದೆ. ಇದನ್ನೆಲ್ಲಾ ಮೆಟ್ಟಿ ಹೇಗೆ ಪರ್ಫಾಮ್ಸ್ ಮಾಡ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

Shwetha M