ವಿಶ್ವಕಪ್ ಫಸ್ಟ್ ಪಂದ್ಯಕ್ಕಿಲ್ಲ ಕೊಹ್ಲಿ – ರೋHIT ಗೆ ಕಾಡ್ತಿರೋ ಟೆನ್ಷನ್ ಏನು?
ದ್ರಾವಿಡ್ ಸ್ಟ್ರಾಟಜಿ ವರ್ಕೌಟ್ ಆಗುತ್ತಾ?

ವಿಶ್ವಕಪ್ ಫಸ್ಟ್ ಪಂದ್ಯಕ್ಕಿಲ್ಲ ಕೊಹ್ಲಿ – ರೋHIT ಗೆ ಕಾಡ್ತಿರೋ ಟೆನ್ಷನ್ ಏನು?ದ್ರಾವಿಡ್ ಸ್ಟ್ರಾಟಜಿ ವರ್ಕೌಟ್ ಆಗುತ್ತಾ?

ಕೌಂಟ್​ಡೌನ್ ಬಿಗಿನ್ಸ್.. 20 ತಂಡ.. ನೂರಾರು ಸ್ಟಾರ್ ಪ್ಲೇಯರ್ಸ್​. ಒಂದು ಕಿರೀಟ. ವಿಶ್ವಕಪ್ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಷ್ಟು ದಿನ ಐಪಿಎಲ್​ ಮೂಡ್​ನಲ್ಲಿದ್ದ ಕ್ರಿಕೆಟ್ ಫ್ಯಾನ್ಸ್ ಇದೀಗ ವರ್ಲ್ಡ್ ಕಪ್ ಫೈಟ್ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಜೂನ್ 2ರಿಂದ ಪ್ರಾರಂಭವಾಗಲಿರುವ ಈ ಮೆಗಾ ಬ್ಯಾಟಲ್​ನಲ್ಲಿ ಟೀಂ ಇಂಡಿಯಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಅಂದ್ರೆ ಜೂನ್ 1ರಂದು ಭಾರತ ತನ್ನ ಏಕೈಕ ಅಭ್ಯಾಸ ಪಂದ್ಯ ಆಡಲಿದೆ. ಬಟ್ ಟೀಂ ಇಂಡಿಯಾದ ಈ ಫಸ್ಟ್ ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿ ಹೊರಗುಳಿಯಲಿದ್ದಾರೆ. ಅಷ್ಟಕ್ಕೂ ಕೊಹ್ಲಿ ಯಾಕೆ ಪ್ರಾಕ್ಟೀಸ್ ಮ್ಯಾಚ್ ಮಿಸ್ ಮಾಡಿಕೊಳ್ತಿದ್ದಾರೆ? ಇದ್ರಿಂದ ಟೀಂ ಮೇಲೆ ಆಗುವ ಎಫೆಕ್ಟ್ ಏನು? ರೋಹಿತ್ ಶರ್ಮಾಗೆ ಇರೋ ಟೆನ್ಷನ್ ಏನು? ಕೋಚ್ ದ್ರಾವಿಡ್ ಮಾಡಿರೋ ಹೊಸ ಸ್ಟ್ರಾಟಜಿ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಗೆ ಕೌಂಟ್‌ ಡೌನ್‌ – ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊರ ಹಾಕಿದ ಟೀಂ ಇಂಡಿಯಾ ಕ್ಯಾಪ್ಟನ್‌

ಟೀಮ್ ಇಂಡಿಯಾ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಮತ್ತೆ ಚಾಂಪಿಯನ್ ಆಗಿಲ್ಲ. ಅಲ್ದೇ 2013ರ ಬಳಿಕ ಒಂದೇ ಒಂದು ಐಸಿಸಿ ಟ್ರೋಫಿಯನ್ನ ಗೆಲ್ಲೋಕೂ ಸಾಧ್ಯವಾಗಿಲ್ಲ. ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಫೈನಲ್​ವರೆಗೂ ಹೋಗಿ ಕೊನೆಗೆ ರನ್ನರ್ ಅಪ್ ಆಗುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಹೀಗಾಗಿ ಈ ವರ್ಷನಾದ್ರೂ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಟ್ರೋಫಿ ಬರ ನೀಗಿಸಿಕೊಳ್ಳೋಕೆ ಟೀಂ ಇಂಡಿಯಾ ಆಟಗಾರರು ಭರ್ಜರಿಯಾಗಿ ಪ್ರಾಕ್ಟೀಸ್ ನಲ್ಲಿ ತೊಡಗಿದ್ದಾರೆ. ಆದ್ರೆ ಬಾಂಗ್ಲಾದೇಶ ವಿರುದ್ಧ ಏಕೈಕ ಪ್ರಾಕ್ಟೀಸ್​ ಮ್ಯಾಚ್​ಗೆ ರನ್ ಮಷಿನ್ ವಿರಾಟ್ ಕೊಹ್ಲಿ ಆಡಲ್ಲ ಅನ್ನೋದೇ ಟೆನ್ಷನ್​ಗೆ ಕಾರಣವಾಗಿದೆ. ಅರೆ ಇದೊಂದು ಅಭ್ಯಾಸ ಪಂದ್ಯ. ಏನಂಥ ಪರಿಣಾಮ ಬೀರುತ್ತೆ ಅಂತಾ ನಿಮಗೆ ಅನ್ನಿಸ್ಬಬೋದು. ಬಟ್ ಕೊಹ್ಲಿ ಅಲಭ್ಯತೆ ಇಡೀ ತಂಡದ ಮೇಲೆಯೇ ಪರಿಣಾಮ ಬೀರಲಿದೆ. ಕಳೆದ 2 ತಿಂಗಳಿಂದ ಐಪಿಎಲ್​ನಲ್ಲೇ ಬ್ಯುಸಿಯಾಗಿದ್ದ ಆಟಗಾರರು ಲಾಸ್ಟ್ ವೀಕ್ ಅಷ್ಟೇ ನ್ಯೂಯಾರ್ಕ್​ಗೆ ವಿಮಾನ ಹತ್ತಿದ್ರು. ಕೆಲ ಆಟಗಾರರು ಇತ್ತೀಚೆಗೆ ತಂಡವನ್ನ ಸೇರಿಕೊಂಡಿದ್ದಾರೆ. ಅಲ್ಲಿನ ಪಿಚ್, ಹವಾಮಾನಕ್ಕೆ ಹೊಂದಿಕೊಳ್ಳೋದೇ ಸಮಸ್ಯೆ ಆಗ್ತಿದೆ. ಇದ್ರು ನಡುವೆ ಟೀಂ ಇಂಡಿಯಾಗೇ ಇರೋದೇ ಒಂದು ಅಭ್ಯಾಸ ಪಂದ್ಯ. ವಿರಾಟ್ ಕೊಹ್ಲಿ ಮೇ 31ರಂದು ನ್ಯೂಯಾರ್ಕ್‌ಗೆ ತೆರಳಿದ್ದು, ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಏಕೆಂದರೆ ಪಂದ್ಯಕ್ಕೂ ಮುನ್ನಾದಿನ ಬಂದಿರುವ ಕೊಹ್ಲಿಗೆ ವಿಶ್ರಾಂತಿ ನೀಡಬಹುದು. ಹಾಗೇನಾದ್ರೂ ವಿರಾಟ್ ಪಂದ್ಯದಿಂದ ಹೊರಗುಳಿದ್ರೆ ಇಡೀ ಟೀಮ್​ಗೆ ಹೊಡೆತ ಬೀಳಲಿದೆ. ಯಾಕಂದ್ರೆ ಕೊಹ್ಲಿ ಒಬ್ಬ ಅನುಭವಿ ಆಟಗಾರ. ಅವ್ರಿಂದ ಯಂಗ್ ಪ್ಲೇಯರ್ಸ್ ಕಲಿಯೋದು ತುಂಬಾನೇ ಇದೆ. ಕೊನೇ ಗಳಿಗೆಯಲ್ಲಿ ಕೊಹ್ಲಿ ಟೀಂ ಸೇರಿಕೊಂಡಿರೋದ್ರಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿನ ಅವ್ರ ಎಕ್ಸ್​ಪೀರಿಯನ್ಸ್ ಶೇರ್ ಮಾಡಿಕೊಳ್ಳೋಕೆ ಚಾನ್ಸ್ ಸಿಕ್ಕಿಲ್ಲ. ಮತ್ತೊಂದ್ಕಡೆ ಅಭ್ಯಾಸ ಪಂದ್ಯವನ್ನೂ ಮಿಸ್ ಮಾಡ್ಕೊಂಡ್ರೆ ಕೊಹ್ಲಿಗೆ ಮುಂದಿನ ಪಂದ್ಯದಲ್ಲಿ ಅಭ್ಯಾಸವಿಲ್ಲದೆಯೇ ಗ್ರೌಂಡ್​ಗೆ ಇಳೀಬೇಕು. ಇಂಥಾ ಟೈಮಲ್ಲಿ ಪಿಚ್ ಬಗ್ಗೆ ಕ್ಲಾರಿಟಿಯೇ ಇಲ್ಲದೆ ಬ್ಯಾಟ್ ಬೀಸೋದು ಕಷ್ಟವಾಗಲಿದೆ.

ಮತ್ತೊಂದೆಡೆ ವಿಶ್ವಕಪ್ ಗೆಲ್ಲೋಕೆ ಟೀಂ ಇಂಡಿಯಾ ಹೆಡ್​ಕೋಚ್ ರಾಹುಲ್ ದ್ರಾವಿಡ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಅದೇನಂದ್ರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಟೀಂ ಇಂಡಿಯಾ ಪರ ಆಡುವಾಗ ಕೊಹ್ಲಿ ಒನ್ ಡೌನ್ ನಲ್ಲಿ ಬ್ಯಾಟಿಂಗ್ ಮಾಡ್ತಾರೆ. ಐಪಿಎಲ್ ಫಾರ್ಮೂಲಾವನ್ನೇ ವಿಶ್ವಕಪ್​ಗೂ ಬಳಸೋಕೆ ದ್ರಾವಿಡ್ ಗೇಮ್ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಕೊಹ್ಲಿಯನ್ನು ಓಪನರ್ ಆಗಿ ಆಡಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಗ್ರೂಪ್ ಹಂತದ ಪಂದ್ಯಗಳಲ್ಲಿ ಕೊಹ್ಲಿಯನ್ನು ಆರಂಭಿಕರಾಗಿ ಪರೀಕ್ಷಿಸುವ ಸಾಧ್ಯತೆಯಿದೆ. ಇಲ್ಲಿ ಪ್ಲ್ಯಾನ್ ಓಕೆ ಆದ್ರೆ ಅದೇ ಆರ್ಡರ್​ನಲ್ಲಿ ಮುಂದುವರಿಸಲಾಗುತ್ತೆ. ಅಕಸ್ಮಾತ್ ಪ್ಲ್ಯಾನ್ ಫ್ಲಾಪ್ ಆದ್ರೆ ಮುಂದಿನ ಪಂದ್ಯಗಳಲ್ಲಿ ಬದಲಾವಣೆ ಮಾಡ್ಬೇಕಾ  ಅನ್ನೋದನ್ನ ಡಿಸೈಡ್ ಮಾಡ್ತಾರೆ. ರಾಹುಲ್ ದ್ರಾವಿಡ್ ಅವ್ರು ಕೊಹ್ಲಿ ವಿಚಾರದಲ್ಲಿ ಇಂಥಾದ್ದೊಂದು ನಿರ್ಧಾರಕ್ಕೆ ಬರೋಕೆ ಕಾರಣ ಐಪಿಎಲ್​ನಲ್ಲಿ ಅವ್ರ ಪ್ರದರ್ಶನ. ಆರ್​ಸಿಬಿ ಪರ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದ ಕೊಹ್ಲಿ 15 ಇನ್ನಿಂಗ್​ಗಳಿಂದ 741 ರನ್ ಬಾರಿಸಿದ್ದರು. ಆದ್ರೆ ರೋಹಿತ್ ಶರ್ಮಾ ಮಾತ್ರ ಈ ಬಾರಿ ಐಪಿಎಲ್‌‌ನಲ್ಲಿ ಅಷ್ಟೇನು ಫಾರ್ಮ್​ನಲ್ಲಿ ಇದ್ದಂತೆ ಇರಲಿಲ್ಲ. ಹೀಗಿದ್ರೂ ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡೋ ನಿರೀಕ್ಷೆ ಇದ್ದೇ ಇದೆ. ಪ್ಲ್ಯಾನ್ ಏನೋ ಓಕೆ. ಬಟ್ ಇದು ಹೊಸ ಚಾಲೆಂಜ್‌ ಆಗಲಿದೆ. ರೋಹಿತ್ ಶರ್ಮಾ ಜೊತೆಯಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದ್ರೆ ಸಂಜು ಸ್ಯಾಮ್ಸನ್ ಹಾಗೂ ರಿಷಬ್ ಪಂತ್ ಇಬ್ಬರೂ ತಂಡದಲ್ಲಿ ಆಡುವ ಸಾಧ್ಯತೆ ಇದೆ. ಆದ್ರೆ ಕೊಹ್ಲಿ ಓಪನರ್ ಆದ್ರೆ ಯಶಸ್ವಿ ಜೈಸ್ವಾಲ್ ಬೆಂಚ್ ಗೆ ಸೀಮಿತವಾದ್ರೂ ಅಚ್ಚರಿ ಇಲ್ಲ.

ಟೀಂ ಇಂಡಿಯಾದಲ್ಲಿ ಬಲಿಷ್ಠ ಆಟಗಾರರೇ ಇದ್ರೂ ಅಲ್ಲಿನ ಪಿಚ್​ದೇ ದೊಡ್ಡ ಟೆನ್ಷನ್ ಇದೆ. ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಆತಂಕ ಹೊರ ಹಾಕಿದ್ದಾರೆ. ಭಾರತವು ನ್ಯೂಯಾರ್ಕ್‌ನ ನಸ್ಸ್ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳನ್ನು ಆಡಬೇಕಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮೊದಲು ತಮ್ಮ ತಂಡವು ಪಿಚ್ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು. ಶನಿವಾರ ಕೂಡ ಇದೇ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಅಭ್ಯಾಸ ಪಂದ್ಯ ಆಡಬೇಕಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡುತ್ತಿರುವ ಏಕೈಕ ಅಭ್ಯಾಸ ಪಂದ್ಯ ಇದು. ಆಟಗಾರರಿಗೆ ಮತ್ತೊಂದು ಮೇನ್ ಚಾಲೆಂಜ್ ಅಂದ್ರೆ ಪಂದ್ಯ ಸ್ಟಾರ್ಟ್ ಆಗೋದು ಅಲ್ಲಿನ ಕಾಲಮಾನ ಬೆಳಗ್ಗೆ 10.30ಕ್ಕೆ.  ಐಪಿಎಲ್‌ನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರು ಈಗ ಹಗಲು ಪಂದ್ಯಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಅಲ್ದೇ ಭಾರತ ತಂಡ ಟ್ರೈನಿಂಗ್​ ಒಂದು ಕಡೆ ನಡೆಸಿದ್ರೆ ಅಭ್ಯಾಸವನ್ನ ಬೇರೆಡೆಗೆ ಮಾಡುತ್ತಿದೆ. ಅಧಿಕೃತವಾಗಿ ಕ್ಯಾಂಟಿಯಾಗ್ ಪಾರ್ಕ್​ನಲ್ಲಿ ಟ್ರೈನಿಂಗ್​​ ಸೌಲಭ್ಯವಿದೆ. ಆದರೆ ಅಭ್ಯಾಸಕ್ಕಾಗಿ ಬೇರೆಡೆಗೆ ಹೋಗಬೇಕಿದೆ. ಇದರಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ. ಇನ್ನು ಪಂದ್ಯ ನಡೆಯುವ ನಸ್ಸೌ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಅಭ್ಯಾಸಕ್ಕೆ ಅವಕಾಶವಿಲ್ಲ. ಅಲ್ಲಿ ಕೇವಲ ಪಂದ್ಯಗಳು ನಡೆಯುತ್ತವೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ಆಟಗಾರರು ಪ್ರದರ್ಶನ ನೀಡ್ಬೇಕಿದೆ.

ಇನ್ನು ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್ ವಿರುದ್ಧ ಆಡಲಿದೆ.  ಐರ್ಲೆಂಡ್ ವಿರುದ್ಧ ಭಾರತದ ಪ್ರದರ್ಶನ ಅತ್ಯುತ್ತಮವಾಗಿದೆ. ಈವರೆಗಿನ ಭಾರತ ಮತ್ತು ಐರ್ಲೆಂಡ್ ನಡುವಿನ ಹಣಾಹಣಿಯಲ್ಲಿ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಭಾರತ ತಂಡ ತನ್ನ ಎಲ್ಲಾ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ. ಟೀಂ ಇಂಡಿಯಾ ಲೀಗ್ ಹಂತದಲ್ಲಿ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗಲಿದೆ. ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿವೆ. ಲೀಗ್ ಹಂತದ ಪಂದ್ಯಗಳ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಗೆ ತೆರಳಲಿದೆ. ಎನಿವೇ.. ಜೂನ್ 1ರಂದು ಅಭ್ಯಾಸ ಪಂದ್ಯದ ಮೂಲಕ ವಿಶ್ವಕಪ್ ಬ್ಯಾಟಲ್​ಗೆ ಇಳಿಯುತ್ತಿರೋ ಭಾರತ ಗೆದ್ದು ಬರಲಿ.. ಏಕದಿನ ವಿಶ್ವಕಪ್​ನಲ್ಲಿ ಮಿಸ್ ಮಾಡಿಕೊಂಡ ಟ್ರೋಫಿ ಟಿ-20 ವಿಶ್ವಕಪ್ ಕದನದಲ್ಲಿ ಸಿಗಲಿ ಅನ್ನೋದಷ್ಟೇ ನಮ್ಮ ಹಾರೈಕೆ.

Shwetha M

Leave a Reply

Your email address will not be published. Required fields are marked *