15 ಇನ್ನಿಂಗ್ಸ್.. 1 ಶತಕ.. 318 ರನ್ ಗಳಿಸಿದ ಕೊಹ್ಲಿ!- ವಿರಾಟ್ ಕೊಹ್ಲಿ ಟೆಸ್ಟ್ ಫೇಲ್ಯೂರ್!

15 ಇನ್ನಿಂಗ್ಸ್.. 1 ಶತಕ.. 318 ರನ್ ಗಳಿಸಿದ ಕೊಹ್ಲಿ!- ವಿರಾಟ್ ಕೊಹ್ಲಿ ಟೆಸ್ಟ್ ಫೇಲ್ಯೂರ್!

ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ ಕೂಡ ಇತ್ತೀಚೆಗೆ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ ಬ್ಯಾಟ್ ಕೂಡ ಅಷ್ಟೇನು ಸದ್ದು ಮಾಡ್ತಿಲ್ಲ. ಕಳೆದ 15 ಇನ್ನಿಂಗ್ಸ್​ಗಳಲ್ಲಿ ಟೆಸ್ಟ್ ಪಂದ್ಯ ಆಡಿರೋ ಕೊಹ್ಲಿ ಒಂದು ಶತಕ ಗಳಿಸಿದ್ದು ಬಿಟ್ರೆ ಡಬಲ್ ಡಿಜಿಟ್ ಮುಟ್ಟೋಕೂ ಪರದಾಡಿದ್ದಾರೆ.

ಇದನ್ನೂ ಓದಿ:3 ಪಂದ್ಯ, 3 ಅದೇ ತಪ್ಪು, ಕೊಹ್ಲಿಗೆ ಕ್ಲಾಸ್ – ವಿರಾಟ್ ತಾಳ್ಮೆವಹಿಸಿ ಆಟವಾಡಬೇಕು ಎಂದು ಗವಾಸ್ಕರ್ ಸಲಹೆ

ಭಾರತದಲ್ಲೇ ನಡೆದಿದ್ದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್, ಸೆಕೆಂಡ್ ಇನ್ನಿಂಗ್​​ನಲ್ಲಿ 17 ರನ್ ಅಷ್ಟೇ ಗಳಿಸಿದ್ರು. ಎರಡನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 47 ರನ್ ಹಾಗೇ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 29 ರನ್ ಗಳಿಸಿದ್ರು. ಆ ಬಳಿಕ ಶುರುವಾದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಫಸ್ಟ್ ಮ್ಯಾಚ್​ನಲ್ಲೇ ಡಕ್ ಔಟ್ ಆಗಿದ್ದ ಕೊಹ್ಲಿ ನಂತರದ ಇನ್ನಿಂಗ್ಸ್​​ನಲ್ಲಿ 70 ರನ್ ಬಾರಿಸಿದ್ರು. ಇನ್ನು ಎರಡನೇ ಪಂದ್ಯದಲ್ಲಿ ಕ್ರಮವಾಗಿ 1 ಮತ್ತು 17 ರನ್ ಕಲೆ ಹಾಕಿದ್ರು. ಮೂರನೇ ಟೆಸ್ಟ್ ನಲ್ಲಿ 4 ಮತ್ತು 1 ರನ್ ಗಳಿಸಿ ನಿರಾಸೆ ಮೂಡಿಸಿದ್ರು. ಇದೀಗ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಮತ್ತೆ ಕಮ್ ಬ್ಯಾಕ್ ಹಿಂಟ್ ಕೊಟ್ಟಿದ್ರು. ಮೂರನೇ 2ನೇ ಟೆಸ್ಟ್​ಗೆ 7 ರನ್, 11 ರನ್ ಸಿಡಿಸಿ ನಿರಾಸೆ ಮೂಡಿಸಿದ್ರು. ಇದೀಗ ಗಾಬ್ಬಾದಲ್ಲಿ ನಡೆಯುತ್ತಿರೋ ಮೂರನೇ ಟೆಸ್ಟ್ ಮ್ಯಾಚ್​ನಲ್ಲಿ 3 ರನ್ ಗಳಿಸಿ ಮತ್ತೊಮ್ಮೆ ಫೇಲ್ಯೂರ್ ಅನುಭವಿಸಿದ್ದಾರೆ.

suddiyaana

Leave a Reply

Your email address will not be published. Required fields are marked *