ಕೊಹ್ಲಿ ಫುಲ್ ಟೈಮ್ ಆಧ್ಯಾತ್ಮ!? ವಿರಾಟ್ ಕೈಯಲ್ಲಿರೋದೆ ಸಾಕ್ಷಿ!
ಜಪತಪದಲ್ಲೇ ಕಿಂಗ್ ನಿವೃತ್ತಿ ಬದುಕು

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ನಂತ್ರ ಪತ್ನಿ ಅನುಷ್ಕಾ ಶರ್ಮಾ ಜೊತೆ ವೃಂದಾವನಕ್ಕೆ ತೆರಳಿ ಅಧ್ಯಾತ್ಮ ಗುರು ಪ್ರೇಮಾನಂದ ಮಹರಾಜ್ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ವು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿರಾಟ್ ನಿವೃತ್ತಿ ನಂತ್ರ ಹೆಚ್ಚು ಸಮಯ ಅಧ್ಯಾತ್ಮದಲ್ಲಿ ಕಳೆಯುತ್ತಾರೆ. ಸಂಪೂರ್ಣವಾಗಿ ಆಧ್ಯಾತ್ಮದಲ್ಲಿ ಮುಳುಗಿ ಹೋಗ್ತಾರಾ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ.
ಅನುಷ್ಕಾ ಶರ್ಮಾ ಅವರು ಪ್ರೇಮಾನಂದ ಮಹಾರಾಜರ ಮಾತುಗಳನ್ನು ಕೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶ್ರದ್ಧೆಯಿಂದ ಪ್ರೇಮಾನಂದ ಅವರ ಮಾತುಗಳನ್ನು ಕೇಳಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಇಲೆಕ್ಟ್ರಾನಿಕ್ ಉಂಗುರ ಇತ್ತು. ಜಪ ಮಾಡುವಾಗ ಹೇಗೆ ಮಾಲೆಯನ್ನು ಹಿಡಿದುಕೊಳ್ಳಲಾಗುತ್ತದೆಯೋ ಅದರ ಬದಲು ಈ ಉಂಗುರ ಬಳಸಲಾಗುತ್ತದೆ. ಎಷ್ಟು ಬಾರಿ ಜಪ ಮಾಡಿದರು ಎಂಬುದನ್ನು ಎಣಿಸಲು ಇದು ಸಹಕಾರಿ ಆಗಲಿದೆ.
‘ಕೊಹ್ಲಿ ಅವರು ಆಧ್ಯಾತ್ಮದ ಕಡೆ ಒಲಿದರೇ’
ಕೇವಲ ಆಶ್ರಮದಲ್ಲಿ ಮಾತ್ರವಲ್ಲ, ಇತ್ತೀಚೆಗೆ ಕೊಹ್ಲಿ ಹಾಗೂ ಅನುಷ್ಕಾ ಕಾರಿನಿಂದ ಹೊರ ಬರುವಾಗ ಇದೇ ಯಂತ್ರವನ್ನು ಹಿಡಿದಿದ್ದರು. ಕೊಹ್ಲಿ ಆಗಲೂ ಜಪ ಮಾಡುತ್ತಿದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ‘ಕೊಹ್ಲಿ ಅವರು ಆಧ್ಯಾತ್ಮದ ಕಡೆ ಒಲಿದರೇ’ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.
ಗುರೂಜಿ ಮಾತಿನಿಂದ ಬದಲಾಗ್ತಾರಾ ಕಿಂಗ್?
ಈ ವಿರಾಟ್ ಕೊಹ್ಲಿ ಬಳಿ ಕೋಟಿ ಕೋಟಿ ಆಸ್ತಿ ಇದೆ. ಕೈ ಕಾಲುಗಳಿಗೆ ಆಳುಗಳಿದ್ದಾರೆ.. ತಾನು ಇಷ್ಟ ಪಟ್ಟರು ಅದ್ದನ್ನ ಪಡೆಯೋ ಹಾಗೇ ಬೆಳೆದಿದ್ದಾರೆ. ಕ್ರಿಕೆಟ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಇದ್ರಲ್ಲಿ ಇವರ ಪರಿಶ್ರಮ ತುಂಬಾ ಇದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕೋಟಿ ಕೋಟಿ ಹೃದಯಗಳನ್ನ ಗೆದಿದ್ದಾರೆ. ಆದ್ರೆ ಈಗ ಹುಟ್ಟಿರೋ ಪ್ರಶ್ನೆ ಪ್ರೇಮಾನಂದ ಮಹಾರಾಜ್ ಅವರನಿಂದ ಕೊಹ್ಲಿ ಬದಲಾಗ್ತಾರಾ.. ಐಷರಾಮಿ ಬದುಕನ್ನ ಬಿಟ್ಟು ಜಪತಪದಲ್ಲೇ ಕಾಲ ಕಳೆಯುತ್ತಾರಾ ಅನ್ನೋದು. ವಿರಾಟ್‌ಗೆ ಗುರೂಜಿ ಏನ್ ಹೇಳಿದ್ದಾರೆ ನೋಡೋಣ ಬನ್ನಿ.
ನೀವು ಈಗ ಸಂಸಾರದಲ್ಲಿ ಹೇಗೆ ಬದುಕುತ್ತಿದ್ದೀರೋ ಹಾಗೆ ಜೀವನ ಮುಂದುವರೆಸಿ ಎಂದು ವಿರಾಟ್ ಮತ್ತು ಅನುಷ್ಕಾಗೆ ಹೇಳಿದ್ದಾರೆ. ಆದರೆ, ಒಳಗಿನ ಚಿಂತನೆ ಬದಲಾಗಬೇಕು. ಮನಸ್ಸಿನಲ್ಲಿ ಖ್ಯಾತಿಯ ಆಸೆಯಾಗಲಿ ಅಥವಾ ಸಂಪತ್ತನ್ನು ಹೆಚ್ಚಿಸುವ ಬಯಕೆಯಾಗಲಿ ಇರಬಾರದು. ದೇವರೇ, ನನ್ನ ಪ್ರಪಂಚ, ನೀನೇ ಬೇಕು ಎಂಬ ಆಲೋಚನೆ ಇರಬೇಕು. ಭಗವಂತನ ಹೆಸರನ್ನು ಸಂತೋಷದಿಂದ ಜಪಿಸಬೇಕು ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾಮ ಜಪಿಸುವುದರಿಂದ ಎಲ್ಲವೂ ಸಾಧ್ಯವೇ ಎಂದು ಅನುಷ್ಕಾ ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರಿಸಿದ ಪ್ರೇಮಾನಂದ್ ಮಹಾರಾಜ್, ನಾವು ಸಾಂಖ್ಯ ಯೋಗ, ಭಕ್ತಿ ಯೋಗ, ಅಷ್ಟಾಂಗ ಯೋಗ ಮತ್ತು ಕರ್ಮಯೋಗಗಳಿಗೆ ಪ್ರವೇಶ ಪಡೆದಿದ್ದೇವೆ. ಸಾಂಖ್ಯ ಯೋಗ, ಅಷ್ಟಾಂಗ ಯೋಗ ಮತ್ತು ಕರ್ಮಯೋಗವನ್ನು ಅರ್ಥಮಾಡಿಕೊಂಡ ನಂತ್ರವೇ ಭಕ್ತಿಗೆ ಬಂದಿದ್ದೇವೆ. ನಿಮ್ಮ ಮನಸ್ಸಿನಲ್ಲಿ ರಾಧಾ ರಾಧಾ ಎಂಬ ಹೆಸರು ಓಡುತ್ತಿದ್ದರೆ ನೀವು ದೇವರನ್ನು ತಲುಪುತ್ತೀರಿ ಎಂದು ಮಹಾರಾಜ್ ಹೇಳಿದ್ದಾರೆ. ರಾಧ ಹೆಸರನ್ನು ಜಪಿಸಬೇಕು ಮತ್ತು ಬರೆಯಬೇಕು ಎಂದಿರುವ ಪ್ರೇಮಾನಂದ್ ಮಹಾರಾಜ್, ಮಂತ್ರವನ್ನು ಎಲ್ಲೆಂದರಲ್ಲಿ ಜಪಿಸಬಾರದು ಎಂದಿದ್ದಾರೆ. ಸ್ನಾನ ಮಾಡಿದ ನಂತ್ರ ಶಾಂತವಾಗಿ ಕುಳಿತು ರಾಧೆಯನ್ನು ಧ್ಯಾನಿಸಬೇಕು. ಮತ್ತು ರಾಧೆ ಹೆಸರನ್ನು ಬರೆಯಬೇಕು. ಇದೇ ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ, ಆಗ ನೀವು ಫಲಿತಾಂಶಗಳನ್ನು ಕಾಣುತ್ತೀರಿ ಎಂದಿದ್ದಾರೆ. ಹಾಗೇ ಕಷ್ಟ ಬಂದ್ರೆ ದೇವರು ನಮ್ಮನ್ನು ಆಶೀರ್ವದಿಸುತ್ತಿದ್ದಾನೆಂದು ನೀವು ಅರ್ಥಮಾಡಿಕೊಳ್ಳಬೇಕು. ಸರಿಯಾದ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ಸಿಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿರುವ ಪ್ರೇಮಾನಂದ್ ಮಹಾರಾಜ್, ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ ವಿಷ್ಯವನ್ನು ಹೇಳಿದ್ದಾರೆ. ಈ ಜನ್ಮದಲ್ಲಿ ನೀವು ದೇವರನ್ನು ಪಡೆಯದಿದ್ದರೆ, ಭಕ್ತ ನಾಶವಾಗುವುದಿಲ್ಲ. ಶ್ರೀ ಕೃಷ್ಣ ಶ್ರೀಮಂತ ಮತ್ತು ಉದಾತ್ತ ಕುಟುಂಬದಲ್ಲಿ ನಿಮಗೆ ಜನ್ಮ ನೀಡುತ್ತಾನೆ. ಆದ್ರೆ ಭಜನೆಯನ್ನು ತಪ್ಪಿಸಬಾರದು ಎಂದು ಪ್ರೇಮಾನಂದ ಮಹಾರಾಜ್ ಸಲಹೆ ನೀಡಿದ್ದಾರೆ. ಪ್ರೇಮಾನಂದ್ ಮಹಾರಾಜ್ ಹೇಳಿದ್ದಂತೆ ಕೊಹ್ಲಿ ಕ್ರಿಕೆಟ್‌ಗೆ ಸಂಪೂರ್ಣವಾಗಿ ನಿವೃತ್ತಿ ಹೊಂದಿದ ಮೇಲೆ ಜಪತಪದಲ್ಲೇ ಕಾಲ ಕಳೆಯುತ್ತಾರಾ? ದೇಶ, ವಿದೇಶ ಅಂತ ಸುತ್ತುತ್ತಾ ಜಾಲಿ ಜಾಲಿ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.