ರಾತ್ರೋರಾತ್ರಿ ಕಿಂಗ್‌ ಕೊಹ್ಲಿ ಶಾಕಿಂಗ್‌ ನಿರ್ಧಾರ! – ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟ ವಿರಾಟ್!‌

ರಾತ್ರೋರಾತ್ರಿ ಕಿಂಗ್‌ ಕೊಹ್ಲಿ ಶಾಕಿಂಗ್‌ ನಿರ್ಧಾರ! – ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಕೊಟ್ಟ ವಿರಾಟ್!‌

ಟೀಂ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ವಿರಾಟ್‌ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ. ಆದ್ರೆ ಗುರುವಾರ ತಡರಾತ್ರಿ ಕಿಂಗ್‌ ಕೊಹ್ಲಿ ಫ್ಯಾನ್ಸ್‌ ಗೆ ಶಾಕ್‌ ಕೊಟ್ಟಿದ್ದಾರೆ. ವಿರಾಟ್‌ ಅವರ ಇನ್‌ಸ್ಟಾಗ್ರಾಂ ಖಾತೆ ಕಣ್ಮರೆಯಾಗಿದೆ.

ಇದನ್ನೂ ಓದಿ: ಈಗ ಫಿಲ್ಮ್ ಆಫರ್..‌ ನೆಕ್ಸ್ಟ್ ಬಿಗ್‌ಬಾಸ್.. ಹೂವಿನ ಬಾಣದ ಹುಡುಗಿಗೆ ಬಂಪರ್! – ವೈರಲ್‌ ಹಾಡು.. ಭವಿಷ್ಯವೇ ಬದಲು!

ಗುರುವಾರ ರಾತ್ರೋರಾತ್ರಿ  ವಿರಾಟ್ ಕೊಹ್ಲಿ ಹಾಗೂ ಅವರ ಅಣ್ಣ ವಿಕಾಸ್‌ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಕಣ್ಮರೆಯಾಗಿತ್ತು. ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆ ಕಣ್ಮರೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಕೊಹ್ಲಿ ಯಾವುದೇ ಸುಳಿವು ನೀಡದೇ ಇನ್‌ಸ್ಟಾಗ್ರಾಮ್ ಖಾತೆ ಡಿ ಆಕ್ಟಿವೇಟ್‌ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ರು. ಇದೀಗ ಕೊಹ್ಲಿಯ ಖಾತೆ ಬೆಳಿಗ್ಗೆ 8:30 ರ ಸುಮಾರಿಗೆ ಮತ್ತೆ ಸಕ್ರೀಯವಾಗಿದೆ. ಆದ್ರೆ ಕೊಹ್ಲಿ ಸಹೋದರ ವಿಕಾಸ್ ಅವರ ಖಾತೆ ಇನ್ನು ಸಕ್ರೀಯವಾಗಿಲ್ಲ. ಕಣ್ಮರೆ ಉದ್ದೇಶಪೂರ್ವಕವಾಗಿದೆಯೇ ಅಥವಾ ತಾಂತ್ರಿಕ ದೋಷದ ಪರಿಣಾಮವೇ ಎಂಬುದರ ಕುರಿತು ಕೊಹ್ಲಿ, ಅವರ ತಂಡ ಅಥವಾ ಇನ್‌ಸ್ಟಾಗ್ರಾಮ್‌ನಿಂದ ಯಾವುದೇ ಅಧಿಕೃತ ವಿವರಣೆ ಬಂದಿಲ್ಲ.

ಇನ್ನು ಖಾತೆ ನಿಷ್ಕ್ರೀಯ ಆಗ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಅನುಷ್ಕಾ ಶರ್ಮಾ ಅವರ ಖಾತೆಗೆ “ಭಾಭಿ, ಭಯ್ಯಾ ಕಾ ಅಕೌಂಟ್ ಕಹಾಂ ಗಯಾ?” ಎಂದು ಕೇಳಿದರು. ಇನ್ನು ಕೆಲವರು “ಸಹೋದರನ ಖಾತೆ ಎಲ್ಲಿಗೆ ಹೋಯಿತು?” ಎಂದು ಕೇಳಿದರು.

Shwetha M