ಕ್ರಿಕೆಟರ್‌ ಆಗುತ್ತಾಳಾ ಕೊಹ್ಲಿ ಮಗಳು! – ವಮಿಕಾ ಬಗ್ಗೆ ವಿರಾಟ್ ಹೇಳಿದ್ದೇನು?

ಕ್ರಿಕೆಟರ್‌ ಆಗುತ್ತಾಳಾ ಕೊಹ್ಲಿ ಮಗಳು! – ವಮಿಕಾ ಬಗ್ಗೆ ವಿರಾಟ್ ಹೇಳಿದ್ದೇನು?

ರನ್ ಮಷಿನ್ ವಿರಾಟ್ ಕೊಹ್ಲಿ, 16 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ  ಹಲವು ದಾಖಲೆಗಳನ್ನ ಬರೆದಿದ್ದಾರೆ. ದೇಶ-ವಿದೇಶಗಳಲ್ಲಿ ಅದ್ಭುತ ಇನ್ನಿಂಗ್ಸ್‌ಗಳ ಮೂಲಕ ಅಬ್ಬರಿಸಿದ್ದಾರೆ. ವಿರಾಟ್‌ ಹಾಗೇ ಅವರ ಮಕ್ಕಳು ಕೂಡ ಕ್ರಿಕೆಟ್‌ ಲೋಕಕ್ಕೆ ಕಾಲಿಡುತ್ತಾರಾ ಅಂತಾ ಫ್ಯಾನ್ಸ್‌ಗೆ ಕುತೂಹಲ ಇದ್ದೇ ಇರುತ್ತೆ. ಇದೀಗ ಫ್ಯಾನ್ಸ್‌ಗೆ ಈ ಬಗ್ಗೆ ಕೊಹ್ಲಿ ದೊಡ್ಡ ಸೂಚನೆಯೊಂದನ್ನು ಕೊಟ್ಟಿದ್ದಾರೆ. ಇದ್ರಿಂದಾಗಿ ವಿರಾಟ್‌ ಫ್ಯಾನ್ಸ್‌ ಫುಲ್‌ ಖುಷಿ ಆಗಿದ್ದಾರೆ.

ಇದನ್ನೂ ಓದಿ:‌ 1 ರನ್.. 1 ಸೋಲು.. RCBಗೆ ಕಪ್ – WPLನಂತೆಯೇ ನಡೀತಿದ್ಯಾ IPL?

ಹೌದು, ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಸದ್ಯ ಮಿಂಚುತ್ತಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್​ನ ಉಳಿಸಿಕೊಂಡಿದ್ದಾರೆ. ಈಗ ಅವರು ನಟ ಹಾಗೂ ಆರ್​​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಟ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಮಕ್ಕಳು ಕ್ರಿಕೆಟ್‌ ಜಗತ್ತಿಗೆ ಕಾಲಿಡಬಹುದಾ, ಇಲ್ವಾ ಅಂತಾ ಅನ್ನೋದ್ರ ಬಗ್ಗೆ ದೊಡ್ಡ ಸೂಚನೆ ಒಂದನ್ನು ಕೊಟ್ಟಿದ್ದಾರೆ. ಜೊತೆಗೆ ಅಂತಿಮ ಆಯ್ಕೆ ಕೂಡ ಅವರದ್ದೇ ಎಂದಿದ್ದಾರೆ.

‘ಮಗ ಹೇಗಿದ್ದಾನೆ’ ಎಂದು ದ್ಯಾನಿಶ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಿರಾಟ್, ‘ಮಗ ಆರೋಗ್ಯವಾಗಿದ್ದಾನೆ’ ಎಂದಿದ್ದಾರೆ. ಆ ಬಳಿಕ ಮಗಳ ಬಗ್ಗೆ ಅವರು ಹೇಳಿದ್ದಾರೆ. ‘ಮಗಳು ಬ್ಯಾಟ್ ತೆಗೆದುಕೊಂಡು ಸ್ವಿಂಗ್ ಮಾಡುತ್ತಾಳೆ. ಅವಳಿಗೆ ಅದು ಇಷ್ಟ. ಅಂತಿಮವಾಗಿ ಅವಳ ಆಯ್ಕೆ’ ಎಂದಿದ್ದಾರೆ  ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ನೀಡಿರೋ ಈ ಹೇಳಿಕೆ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ. ವಿರಾಟ್ ಕೊಹ್ಲಿ ಅವರ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಾರೋ ಅಥವಾ ಕ್ರಿಕೆಟ್ ಲೋಕಕ್ಕೆ ಪರಿಚಯಿಸುತ್ತಾರೋ ಎನ್ನುವ ಕುತೂಹಲ ಮೂಡಿದೆ.

Shwetha M