ODIನಿಂದ ಹೊರಬಿದ್ದ RO-KO – ರಿಪ್ಲೇಸ್ ಮೆಂಟ್ RISK ಆಗುತ್ತಾ?
ಭಾರತಕ್ಕೆ AFG ಸರಣಿ ಸವಾಲ್!

ಐಪಿಎಲ್ನಲ್ಲಿ ಎಂಗೇಜ್ ಆಗಿದ್ದ ಟೀಂ ಇಂಡಿಯಾ ಸ್ಟಾರ್ಸ್ ಮತ್ತು ಫ್ಯಾನ್ಸ್ ಇನ್ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಂ ಬ್ಯಾಕ್ ಮಾಡ್ತಿದ್ದಾರೆ. ನಾಳೆಯಿಂದಲೇ ಅಫ್ಘಾನಿಸ್ತಾ ವಿರುದ್ಧ ಟೆಸ್ಟ್ ಮ್ಯಾಚ್ ಸ್ಟಾರ್ಟ್ ಆಗ್ತಿದೆ. ಒಂದೇ ಟೆಸ್ಟ್ ಮ್ಯಾಚ್ ಇರೋದು. ಆ ನಂತ್ರ ಜೂನ್ 13ರಿಂದ ಏಕದಿನ ಸರಣಿ ಸ್ಟಾರ್ಟ್ ಆಗುತ್ತೆ. ರೋಕೋ ಜೋಡಿಯನ್ನ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ನೋಡ್ಬೇಕು ಅನ್ಕೊಳ್ತಿದ್ದ ಫ್ಯಾನ್ಸ್ಗೆ ಬಿಗ್ ಶಾಕ್ ಎದುರಾಗಿದೆ. ಮತ್ತೊಂದ್ಕಡೆ ಪಾಂಡ್ಯನೂ ಕೈಕೊಡೋ ಲಕ್ಷಣ ಇದೆ.
ಇದನ್ನೂ ಓದಿ : RCBಯಲ್ಲಿ ರಿಲೀಸ್ ಲೆಕ್ಕಾಚಾರ – ಶೆಫರ್ಡ್ & ಸುಯಾಶ್ ಹೊರ ಬೀಳ್ತಾರಾ?
ಭಾರತ-ಅಫ್ಘನ್ ನಡುವೆ ಏಕೈಕ ಟೆಸ್ ಮ್ಯಾಚ್ ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತೆ. 2027ರ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿ ಭಾರತಕ್ಕೂ ತುಂಬಾನೇ ಮುಖ್ಯ ಇದೆ. ಆದ್ರೆ ಸರಣಿಗೆ ಕೆಲವೇ ದಿನಗಳು ಬಾಕಿ ಇರುವಾಗ ಇಂಜುರಿ ಭೂತ ಬೆನ್ನು ಬಿದ್ದಿದೆ. ಒಂದ್ಕಡೆ ವಿರಾಟ್ ಕೊಹ್ಲಿ ಗಾಯದಿಂದಾಗಿ ಇಡೀ ಸರಣಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ರೋಹಿತ್ ಶರ್ಮಾ ಕೂಡ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಅನ್ನೋ ಸುದ್ದಿ ಇದೆ. ಅತ್ತ ಹಾರ್ದಿಕ್ ಪಾಂಡ್ಯ ಕೂಡ ಆಡಲ್ಲ ಅನ್ನೋ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಕೊಹ್ಲಿ ರೂಲ್ಡ್ ಔಟ್ ಬೆನ್ನಲ್ಲೇ ರೋಹಿತ್ & ಪಾಂಡ್ಯನೂ ಡೌಟ್!
ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಪರ ಚೇಸಿಂಗ್ ಮಾಡ್ತಿದ್ದ ಕಿಂಗ್ ವಿರಾಟ್ ಕೊಹ್ಲಿ ಹಾರ್ಮ್ ಸ್ಟ್ರಿಂಗ್ ಅಂದ್ರೆ ಮಂಡಿರಜ್ಜು ಸ್ನಾಯುಗಳ ಸೆಳೆತಕ್ಕೆ ಒಳಗಾಗಿದ್ರು. ಹೀಗಿದ್ರೂ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರು. ಆದ್ರೆ ಈಗ ಮಂಡಿರಜ್ಜು ಸ್ನಾಯುಗಳಲ್ಲಿ ಗಾಯವಾಗಿರುವುದು ಕಂಡು ಬಂದಿದೆ. 2 ವಾರಗಳ ರೆಸ್ಟ್ ಹೇಳಿರೋದ್ರಿಂದ ಇಡೀ ಸರಣಿಯನ್ನೇ ಮಿಸ್ ಮಾಡಿಕೊಳ್ತಾರೆ. ಮತ್ತೊಂದೆಡೆ ರೋಹಿತ್ ಶರ್ಮಾ ಕೂಡ ಐಪಿಎಲ್ನಲ್ಲಿ ಇಂಜುರಿಯಿಂದ ಸಾಕಷ್ಟು ಪಂದ್ಯಗಳಿಂದ ಹೊರಗುಳಿದಿದ್ರು. ಹೀಗಾಗಿ ಅಜಿತ್ ಅಗರ್ಕರ್ ಹೇಳಿದಂತೆ ಸೂಚನೆಯಂತೆ ರೋಹಿತ್ ಸರಣಿಯಲ್ಲಿ ಆಡ್ಬೇಕು ಅಂದ್ರೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗ್ಬೇಕಿದೆ. ಈವರೆಗೂ ರೋಹಿತ್ ಫಿಟ್ನೆಸ್ ಪರೀಕ್ಷೆಯ ಬಗ್ಗೆ ಯಾವುದೇ ಅಪ್ಡೇಟ್ಸ್ ಇಲ್ಲ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ವರದಿ ಮಾಡಿಲ್ಲ. ಹೀಗಾಗಿ ರೋಹಿತ್ ಪ್ರಸೆನ್ಸ್ ಬಗ್ಗೆ ಡೌಟ್ಸ್ ಇದೆ. ಇನ್ನು ಏಕದಿನ ತಂಡದಲ್ಲಿ ಸ್ಥಾನ ಪಡೆದಿರೋ ಹಾರ್ದಿಕ್ ಪಾಂಡ್ಯರದ್ದೂ ಇದೇ ಕಥೆಯಾಗಿದೆ. ದೀರ್ಘಕಾಲದ ಬೆನ್ನುನೋವಿನ ಕಾರಣದಿಂದಾಗಿ ಪಾಂಡ್ಯ ಕೂಡ ಕೆಲ ಐಪಿಎಲ್ ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ರು. ರೋಹಿತ್ರಂತೆಯೇ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಬೌಲಿಂಗ್ ಮಾಡಲು ಅನುಮತಿ ಪಡೆದರೆ ಮಾತ್ರ ತಂಡದ ಭಾಗವಾಗುತ್ತಾರೆ. ಇಲ್ಲದಿದ್ದರೆ, ಆಯ್ಕೆದಾರರು ಪಾಂಡ್ಯ ಅವರ ಬದಲಿ ಆಟಗಾರನನ್ನು ಸೇರಿಸಬೇಕು.
ಬದಲಿ ಆಟಗಾರರ ರೇಸ್!
ಕೊಹ್ಲಿ ಬದಲಿಗೆ ದೇವದತ್ ಪಡಿಕ್ಕಲ್, ತಿಲಕ್ ವರ್ಮಾ ಹೆಸರು
ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಮತ್ತು ರಜತ್ ಪಾಟಿದಾರ್
ಯಾರೇ ಅವಕಾಶ ಪಡೆದ್ರೂ ಕೇವಲ ಒಂದು ಸ್ಟಾಪ್-ಗ್ಯಾಪ್ ವ್ಯವಸ್ಥೆಯಷ್ಟೇ
ರೋಹಿತ್ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ಯೂರ್ ಆದ್ರೆ ಯಶಸ್ವಿ ಜೈಸ್ವಾಲ್
ಇಶಾನ್ ಕಿಶನ್ ಅವರನ್ನು ಬ್ಯಾಕ್-ಅಪ್ ಆರಂಭಿಕ ಆಟಗಾರನನ್ನಾಗಿ ಆಯ್ಕೆ
ಪಾಂಡ್ಯ ಬದಲಿಯಾಗಿ ಯಾರನ್ನ ಆಯ್ಕೆ ಮಾಡಬೇಕು ಎನ್ನುವ ಚರ್ಚೆ

ನೋಡಿರಿ

