ಭಾರತಕ್ಕೆ ಭಾರವಾದ ನಂ.3 ಬ್ಯಾಟರ್ – 18 ತಿಂಗಳಲ್ಲಿ ಬಂದು ಹೋದವರೆಷ್ಟು?
15 ವರ್ಷ ಆಳಿದ್ದೇಗೆ ಕಿಂಗ್ ಕೊಹ್ಲಿ?

ಭಾರತಕ್ಕೆ ಭಾರವಾದ ನಂ.3 ಬ್ಯಾಟರ್ – 18 ತಿಂಗಳಲ್ಲಿ ಬಂದು ಹೋದವರೆಷ್ಟು?15 ವರ್ಷ ಆಳಿದ್ದೇಗೆ ಕಿಂಗ್ ಕೊಹ್ಲಿ?

ಟಿ-20 ವಿಶ್ವಕಪ್​ನ ಹೈವೋಲ್ಟೇಜ್​ ಮ್ಯಾಚ್​ಗೆ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ ಸಿದ್ಧವಾಗ್ತಿದೆ. ಸೆಮೀಸ್ ಟಿಕೆಟ್ ಟಾರ್ಗೆಟ್​ನೊಂದಿಗೆ ಭಾರತ-ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿ ಆಗಲಿವೆ. ಌಕ್ಚುಲಿ ಟಿ-20ಐ ಫಾರ್ಮೆಟ್​ನಲ್ಲಿ ಭಾರತ ತಂಡಕ್ಕೆ ಪ್ಲಸ್ ಆಗ್ತಿರೋದೂ ಬ್ಯಾಟಿಂಗ್.. ವೀಕ್​ನೆಸ್ ಕೂಡ ಅದೇ ಬ್ಯಾಟಿಂಗ್.. ಬಿಗ್ ಹಿಟ್ಸ್ ಬಂದಾಗ್ಲೆಲ್ಲಾ ಗೆಲ್ತಾರೆ ಆವರೇಜ್ ಸ್ಕೋರ್ ಇದ್ದಾಗ ಸೋಲ್ತಿದ್ದಾರೆ. ಆದ್ರೆ ಗೇಮ್ ಚೇಂಜಿಂಗ್ ಸ್ಲಾಟ್ ಆಗಿರೋ ನಂಬರ್ 3 ಬ್ಯಾಟರ್ ಫೇಲ್ಯೂರ್ ಪಂದ್ಯದ ದಿಕ್ಕನ್ನೇ ಬದಲಿಸ್ತಿದೆ. ವಿರಾಟ್ ಕೊಹ್ಲಿ ಹೋದ್ಮೇಲೆ ನಂಬರ್ 3ನಲ್ಲಿ ಅದೆಷ್ಟು ಜನ ಬಂದು ಹೋಗಿದ್ದಾರೆ.

ಇದನ್ನೂ ಓದಿ : ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

2024ರ ಟಿ-20 ವಿಶ್ವಕಪ್​ವರೆಗೂ ಭಾರತಕ್ಕೆ ನಂಬರ್ 3 ಬ್ಯಾಟರ್ ಆಗಿದ್ದು ಕಿಂಗ್ ವಿರಾಟ್ ಕೊಹ್ಲಿ. ಸತತ 15 ವರ್ಷಗಳ ಕಾಲ ಸಿಂಗಲ್ ಶೇರ್​ನಂತೆ ನಿಂತು ತಂಡಕ್ಕೆ ಪಿಲ್ಲರ್ ಆಗಿದ್ರು. ಆದ್ರೆ 2024ರ ಟಿ=-20 ವಿಶ್ವಕಪ್ ಗೆದ್ದು ಟಿ-20ಐ ಫಾರ್ಮೆಟ್​ಗೆ ಗುಡ್ ಬೈ ಹೇಳಿದ್ಮೇಲೆ ಸ್ಟಿಲ್ ಈವರೆಗೂ ಒಬ್ಬೇ ಒಬ್ಬ ಆಟಗಾರ ಆ ಸ್ಲಾಟ್​ನಲ್ಲಿ ನಿಲ್ಲೋಕೆ ಸಾಧ್ಯವಾಗಿಲ್ಲ. ಈಗ ವಿಶ್ವಕಪ್​ನಲ್ಲೂ ಭಾರತಕ್ಕೆ ನಂಬರ್ 3 ಸ್ಲಾಟ್ ಎಷ್ಟು ಮುಖ್ಯ ಅನ್ನೋದು ಗೊತ್ತಾಗಿದೆ.

10 ಬ್ಯಾಟರ್ ಗಳನ್ನ ಬದಲಿಸಿದ್ರೂ ಸಿಗಲಿಲ್ಲ ಗೇಮ್ ಚೇಂಜರ್!

ಭಾರತ ತಂಡಕ್ಕೆ ಇದುವರೆಗೆ ನಂಬರ್ 3 ಬ್ಯಾಟರ್ ಯಾರು ಅನ್ನೋ ಪ್ರಶ್ನೆಗೆ ಕನ್ಫ್ಯೂಷನ್ ಇದ್ದೇ ಇದೆ. ಟಿ-20 ವಿಶ್ವಕಪ್​ನಲ್ಲೂ ಮ್ಯೂಸಿಕಲ್ ಚೇರ್ ಆಗಿದೆ. ಕಳೆದ 18 ತಿಂಗಳಲ್ಲಿ ಸರಣಿಗಳು, ಏಷ್ಯಾಕಪ್, ವಿಶ್ವಕಪ್ ಹೀಗೆ 8 ರಿಂದ 10 ಬ್ಯಾಟರ್​ಗಳನ್ನ ಈ ಸ್ಲಾಟ್​ನಲ್ಲಿ ಪ್ರಯೋಗ ಮಾಡಲಾಗಿದೆ. ಅದ್ರಲ್ಲೂ ಎಕ್ಸ್​ಪೆರಿಮೆಂಟ್ ಕಿಂಗ್ ಗೌತಮ್ ಗಂಭೀರ್ ಅಂತೂ ಬೌಲರ್​ಗಳನ್ನೂ ತಂದು ಇಲ್ಲಿ ಆಡ್ಸಿದ್ದಾರೆ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶುಭ್​ಮನ್ ಗಿಲ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರಿಂಕು ಸಿಂಗ್, ಈಗ ಇಶಾನ್ ಕಿಶನ್.. ಹೀಗೆ ಹಲವರು ಬಂದು ಹೋಗಿದ್ದಾರೆ. ಹೀಗಿದ್ರೂ ಕಿಶನ್ ಬಿಟ್ರೆ ಉಳಿದವರ್ಯಾರು ಈ ಸ್ಲಾಟ್​ನಲ್ಲಿ ನಿಂತು ಆಡೋಕೆ ಸಾದ್ಯನೇ ಆಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಿಶನ್ ನಂಬರ್ 3ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಹೀಗಾಗಿ ಭಾರತ ಆ ಸರಣಿಯನ್ನ ಗೆದ್ದಿತ್ತು. ಇದಕ್ಕೂ ಮುನ್ನ ಓಪನರ್ ಅಭಿಷೇಕ್ ಶರ್ಮಾ ಬ್ಯಾಟಿಂದ ಬಿಗ್ ಸ್ಕೋರ್ ಬರ್ತಿದ್ರಿಂದ ಭಾರತ  ಸರಣಿಗಳನ್ನ ಗೆಲ್ತಿತ್ತು. ಸೋ ನಂಬರ್ 3 ಬ್ಯಾಟರ್ ಇಂಪಾರ್ಟೆನ್ಸ್ ಗೊತ್ತಾಗ್ತಿಲ್ಲ. ಆದ್ರೆ ವಿಶ್ವಕಪ್​ನಲ್ಲಿ ಅಭಿಷೇಕ್ ಕೈಕೊಟ್ಮೇಲೆ ಮತ್ತೆ ಸ್ಟ್ರಗಲ್ ಪಟ್ಟಿದೆ. ಒಂದೂವರೆ ದಶಕ ವಿರಾಟ್ ಕೊಹ್ಲಿ ಸಾಮ್ರಾಜ್ಯವನ್ನೇ ಕಟ್ಟಿದ್ದ ಈ ಸ್ಲಾಟ್​ನಲ್ಲಿ ಈಗ ಕ್ಲಾರಿಟಿಯೇ ಇಲ್ಲದಾಗಿದೆ.

ನಂಬರ್ 3 ಬ್ಯಾಟರ್ಸ್ ಫೇಲ್ಯೂರ್!

ಓಪನರ್ ಬೇಗ ಔಟ್ ಆದಾಗ ನಂ.3 ಬ್ಯಾಟರ್ ಮೇಲೆ ಪ್ರೆಶರ್

ಒತ್ತಡ ನಿಭಾಯಿಸಿ ರನ್ ಗಳಿಕೆ ಜೊತೆಗೆ ವಿಕೆಟ್ ಚಾಲೆಂಜ್

ಈ ಎರಡನ್ನೂ ವಿರಾಟ್ ಕೊಹ್ಲಿ ಅಚ್ಚುಕಟ್ಟಾಗಿ ನಿಭಾಯಿಸಿದ್ರು

ಚೇಸಿಂಗ್ ಅಂತಾ ಬಂದಾಗ ಸಿಂಗಲ್ಲಾಗಿ ನಿಂತು ಮ್ಯಾಚ್ ವಿನ್

ತಿಲಕ್ ವರ್ಮಾ 118 ಸ್ಟ್ರೈಕ್ ನಲ್ಲಿ ಬ್ಯಾಟಿಂಗ್.. ಬೇಗ ಔಟ್

ಎಷ್ಟೇ ಬ್ಯಾಟರ್ಸ್ ಬಂದು ಹೋದ್ರೂ ಕ್ರೀಚ್ ಕಚ್ಚಿ ನಿಂತಿಲ್ಲ

ಇದನ್ನೆಲ್ಲಾ ನೋಡಿದ್ರೇನೇ ಗೊತ್ತಾಗುತ್ತೆ. ನಂಬರ್ 3 ಬ್ಯಾಟರ್ ಇಂಪಾರ್ಟೆನ್ಸ್ ಏನು ಅನ್ನೋದು.   2024ರವರೆಗೆ ಎಂಥದ್ದೇ ಪ್ರೆಶರ್ ಇದ್ರೂ ಅದನ್ನ ಹ್ಯಾಂಡಲ್ ಮಾಡ್ತಿದ್ದ ಕೊಹ್ಲಿ ಸಿಂಗಲ್ಲಾಗಿ ನಿಂತು ಪಂದ್ಯಗಳನ್ನ ಗೆಲ್ಲಿಸಿಕೊಡ್ತಿದ್ರು. ಆದ್ರೆ ಈಗ ನಂಬರ್ 3ನಲ್ಲಿ ಬ್ಯಾಟರ್​ಗಳ ಎಕ್ಸ್​ಪೆರಿಮೆಂಟ್ ನಡೀತಾ ಇದ್ಯೇ ಹೊರತು ಯಾರೊಬ್ರೂ ಜವಾಬ್ದಾರಿ ತಗೊಳ್ಳೋಕೆ ರೆಡಿನೇ ಇಲ್ಲ. ಕೆಲವು ಸ್ಥಾನಗಳನ್ನ ಫಿಲ್ ಮಾಡಬಹುದು ಅಷ್ಟೇ ಬಟ್ ಅದನ್ನ ಸಂಪಾದನೆ ಮಾಡೋಕೆ ಚಾನ್ಸೇ ಇಲ್ಲ.

Shantha Kumari

Leave a Reply

Your email address will not be published. Required fields are marked *