ಆಧ್ಯಾತ್ಮದ ಮೊರೆ ಹೋಗಿದ್ದೇಕೆ ಈ ಕ್ರಿಕೆಟರ್ಸ್‌? – ಕೂಲ್‌ ಕ್ಯಾಪ್ಟನ್‌ ಧ್ಯಾನ ರಹಸ್ಯ!

ಆಧ್ಯಾತ್ಮದ ಮೊರೆ ಹೋಗಿದ್ದೇಕೆ ಈ ಕ್ರಿಕೆಟರ್ಸ್‌? – ಕೂಲ್‌ ಕ್ಯಾಪ್ಟನ್‌ ಧ್ಯಾನ ರಹಸ್ಯ!

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಕ್ರಿಕೆಟರ್ಸ್‌ ಗಳು ಕೂಡ ಭಾಗಿಯಾಗಿದ್ರು. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಹೀಗೆ ಮಾಜಿ ಮತ್ತು ಹಾಲಿ ಕ್ರಿಕೆಟರ್ಸ್ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದ್ರು. ಪೂಜೆ, ಪುನಸ್ಕಾರದಲ್ಲಿ ತೊಡಗದೆ ಇದ್ದವರು ಬಳಿಕ ಹೇಗೆ ಬದಲಾದ್ರು? ವಿರಾಟ್ ಕೊಹ್ಲಿ ಅತ್ಯಂತ ದೊಡ್ಡ ದೈವ ಭಕ್ತನಾಗಿದ್ದು ಹೇಗೆ? ಕ್ಯಾಪ್ಟನ್ ರೋಹಿತ್ ಶರ್ಮಾ ಆಧ್ಯಾತ್ಮದ ಮೊರೆ ಹೋಗಿದ್ಯಾಕೆ? ಧೋನಿ ನಾಯಕತ್ವದಲ್ಲೇ ಆಧ್ಯಾತ್ಮ ಅಡಗಿರೋದು ಹೇಗೆ? ಭಗವದ್ಗೀತೆಯನ್ನ ಹೊತ್ತು ಸಾಗೊ ಕ್ರಿಕೆಟರ್ಸ್ ಯಾರು? ಈ ಎಲ್ಲಾ ವಿಚಾರಗಳ ಬಗ್ಗೆಯೂ ಒಂದಷ್ಟು ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ದ್ರಾವಿಡ್ ಸೂಚನೆಗೂ ಅಹಂಕಾರಿ ಇಶಾನ್ ಕಿಶನ್ ಡೋಂಟ್‌ಕೇರ್‌- ಟೀಂ ಇಂಡಿಯಾ ಬಾಗಿಲು ಬಂದ್?

ಅದೊಂದು ಬಾರಿ ಪ್ರೆಸ್ಮೀಟ್‌ನಲ್ಲಿ ವಿರಾಟ್ ಕೊಹ್ಲಿ ಬಳಿ ನಿತ್ಯವೂ ನೀವು ದೇವರ ಪೂಜೆ ಮಾಡ್ತೀರಾ ಅಂತಾ ಕೇಳಿದ್ರು. ಅದಕ್ಕೆ ಕೊಹ್ಲಿ ನಾನು ಪೂಜೆ ಎಲ್ಲಾ ಮಾಡುವವನ ಥರಾ ಕಾಣ್ತೀನಾ ಅಂದಿದ್ರು. ಆ ವೇಳೆಗೆ ಕೊಹ್ಲಿ ಪರಮಭಕ್ತರಾಗಿರಲಿಲ್ಲ. ಆದ್ರೆ ಕೆಲ ಸಮಯದಲ್ಲೇ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ ಭಗವಂತನ ಪರಮಭಕ್ತರಾಗಿ ಬಿಡ್ತಾರೆ. ನಿಮಗೆ ಗೊತ್ತೇ ಇದೆ, ಕೊಹ್ಲಿ ಮೂರು ವರ್ಷಗಳ ಕಾಲ ತುಂಬಾನೆ ಸ್ಟ್ರಗಲ್ ಮಾಡಿದ್ರು. ಮೂರು ವರ್ಷ ಒಂದೇ ಒಂದು ಸೆಂಚೂರಿ ಕೂಡ ಬಾರಿಸಿರಲಿಲ್ಲ.

ಪ್ರತಿ ಬಾರಿ ಬ್ಯಾಟಿಂಗ್ಗೆ ಇಳಿದಾಗಲೂ ಫೇಲ್ಯೂರ್. ನಿರಂತರ ಸ್ಟ್ರಗಲ್. ಮೇಲಿಂದ ಮೇಲೆ ಔಟಾಗ್ತಿದ್ದಾಗ ವಿರಾಟ್ ಕೊಹ್ಲಿ ತಲೆ ಎತ್ತಿ ಏನಾಗ್ತಿದೆ ಅನ್ನೋ ರೀತಿ ತಮ್ಮ ಎಮೋಷನನ್ನ ಎಕ್ಸ್ಪ್ರೆಸ್ ಮಾಡ್ತಿದ್ರು. ಮಾಧ್ಯಮಗಳಲ್ಲಂತೂ ಕೊಹ್ಲಿ ಔಟ್ ಆಫ್ ಫಾರ್ಮ್‌ ನದ್ದೇ ಚರ್ಚೆ. ವಿರಾಟ್ ಕೊಹ್ಲಿಯನ್ನ ಟೀಮ್‌ನಿಂದ ಡ್ರಾಪ್ ಮಾಡಬೇಕು ಅಂತೆಲ್ಲಾ ಕ್ರಿಕೆಟ್ ಎಕ್ಸ್ಪರ್ಟ್ಗಳು, ಮಾಜಿ ಕ್ರಿಕೆಟರ್ಸ್ ಮಾತನಾಡ್ತಾ ಇದ್ರು. ಎಲ್ಲರೂ ಕೊಹ್ಲಿ ಕೆರಿಯರ್ ಮುಗೀತು ಅಂತಾನೆ ಅಂದುಕೊಂಡಿದ್ರು. ವಿರಾಟ್ ಕೊಹ್ಲಿ ಕೂಡ ಅಷ್ಟೇ ತುಂಬಾನೆ ಪ್ರೆಷರ್ನಲ್ಲಿದ್ರು. ಮೆಂಟಲಿ ಸ್ಟ್ರೆಸ್‌ಲ್ಲಿದ್ರು. ಇದೇ ಟೈಮ್ನಲ್ಲಿ ನೋಡಿ ವಿರಾಟ್ ಕೊಹ್ಲಿ ದೇವರ ಮೊರೆ ಹೋಗಿರೋದು. ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಮೊದಲಿನಿಂದಲೇ ತುಂಬಾ ಸ್ಪಿರಿಚ್ಯುವಲ್ ಪರ್ಸನ. ದೇವಸ್ಥಾನಕ್ಕೆ ಹೋಗೋದು, ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ತಿದ್ರು. ಹೀಗಾಗಿ ವಿರಾಟ್ ಕೊಹ್ಲಿಗೂ ಈ ಬಗ್ಗೆ ಸಲಹೆ ಕೊಡ್ತಾರೆ. ಇದಾದ್ಮೇಲೆ  ಕೊಹ್ಲಿ ಆಧ್ಯಾತ್ಮದತ್ತ ವಾಲ್ತಾರೆ. ಆಧ್ಯಾತ್ಮ, ದೇವರಿಗೆ ಸಂಬಂಧಿಸಿದ ಪುಸ್ತಕಗಳನ್ನ ಓದೋಕೆ ಶುರು ಮಾಡ್ತಾರೆ. ಧ್ಯಾನದಲ್ಲಿ ತೊಡಗಿಕೊಳ್ತಾರೆ. ಪ್ರತಿ ದಿನ ಬೆಳಗ್ಗೆ ನೆಟ್ ಪ್ರಾಕ್ಟೀಸ್‌ಗೆ ಇಳಿಯೋ ಮುನ್ನ ಕೊಹ್ಲಿ ಧ್ಯಾನ ಮಾಡ್ತಾರೆ.  ದೇವಾಲಯಗಳು, ಮಠಗಳಿಗೆ ಭೇಟಿಕೊಡ್ತಾರೆ. ವಿವಿಧ ಸ್ವಾಮೀಜಿಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಆಶೀರ್ವಚನಗಳನ್ನ ಕೇಳ್ತಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಮೆಂಟಲಿ ಒಂದಷ್ಟು ಕ್ಲ್ಯಾರಿಟಿ ಸಿಗುತ್ತೆ.  ಇದ್ರಿಂದಾಗಿ ವಿರಾಟ್ ಕೊಹ್ಲಿಗೆ ಆಡುವಾಗಲೂ ಡಿಸೀಶನ್ಗಳನ್ನ ತೆಗೆದುಕೊಳ್ಳೋಕೆ ಸುಲಭವಾಗುತ್ತೆ. ಅಂದ್ರೆ ಶಾಟ್ ಸೆಲೆಕ್ಷನ್ ವಿಚಾರದಲ್ಲಿ, ಯಾವ ಬಾಲ್ಗೆ ಹೇಗೆ ಆಡ್ಬೇಕು, ಯಾವ ಬಾಲ್‌ನ ಬೀಟ್ ಮಾಡ್ಬೇಕು ಇಂಥಾ ಡಿಸೀಶನ್‌ಗಳನ್ನ ತೆಗೆದುಕೊಳ್ಳೋಕೆ ಹೆಲ್ಪ್ ಆಗುತ್ತೆ. ವಿರಾಟ್ ಕೊಹ್ಲಿ ಔಟ್ ಫಾರ್ಮ್‌ನಲ್ಲಿದ್ದ ಸಂದರ್ಭದಲ್ಲಿ ಹೆಚ್ಚಾಗಿ ಔಟ್ಸೈಡ್ ದಿ ಆಫ್ ಸ್ಟಂಪ್ ಬಾಲ್‌ಗಳನ್ನ ಆಡೋಕೆ ಹೋಗಿಯೇ ಔಟಾಗ್ತಿದ್ರು. ಎಷ್ಟೇ ಗ್ರೇಟ್ ಪ್ಲೇಯರ್ ಆದ್ರೂ, ಟ್ಯಾಲೆಂಟೆಡ್ ಆಗಿದ್ರೂ ಕೆಲವೊಂದು ಟೈಮ್‌ನಲ್ಲಿ ಒದ್ದಾಟ ತಪ್ಪಿದ್ದಲ್ಲ. ಟೈಮ್ ಕೆಟ್ಟಿದೆ ಅಂತಾರಲ್ಲಾ..ಸೇಮ್ ಸ್ವಿಚ್ಯುವೇಶನ್ನನ್ನ ವಿರಾಟ್ ಕೊಹ್ಲಿ ಕೂಡ ಎದುರಿಸಿದ್ರು. ಫೈನಲಿ ಇದ್ರಿಂದ ಹೊರ ಬರೋಕೆ ಕೊಹ್ಲಿಗೆ ಹೆಲ್ಪ್ ಆಗಿರೋದು ದೇವರು, ಆಧ್ಯಾತ್ಮ ಜೊತೆಗೆ ಹಾರ್ಡ್ವರ್ಕ್. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪ್ರಮುಖವಾಗಿ ಎರಡು ಪುಸ್ತಕಗಳನ್ನ ಓದಿದ್ರಂತೆ. ಒಂದಿ ದಿ ಪವರ್ ಆಫ್ ನೌ ಅನ್ನೋ ಆಧ್ಯಾತ್ಮದ ಮಾರ್ಗದರ್ಶನ ಮಾಡೋ ಪುಸ್ತಕ. ಮತ್ತೊಂದು ಭಗವದ್ಗೀತೆ. ಇಂದಿಗೂ ವಿರಾಟ್ ಕೊಹ್ಲಿ ಭಗವದ್ಗೀತೆ ಪುಸ್ತಕವನ್ನ ತಮ್ಮ ಜೊತೆಗೆ ತೆಗೆದುಕೊಂಡು ಹೋಗ್ತಾರಂತೆ. ಶ್ಲೋಕಗಳನ್ನ ಪಠಿಸ್ತಾರಂತೆ. ಗ್ರೌಂಡ್‌ನಲ್ಲಿ ನಾನೇನೆ ಪರ್ಫಾಮ್ ಮಾಡಬೇಕಿದ್ರೂ ಅದು ಕೇವಲ ನನ್ನೊಬ್ಬನ ಶಕ್ತಿಯಿಂದಷ್ಟೇ ಸಾಧ್ಯವಿಲ್ಲ. ದೈವಿಕ ಆಶೀರ್ವಾದ ಅನ್ನೋದು ಬೇಕೇಬೇಕು ಅಂತಾ ವಿರಾಟ್ ಕೊಹ್ಲಿ ಅರ್ಥ ಮಾಡಿಕೊಳ್ತಾರೆ.

ಯಾವಾಗ ವಿರಾಟ್ ಕೊಹ್ಲಿ ದೇವರ ಪೂಜೆ, ಆಧ್ಯಾತ್ಮವನ್ನವನ್ನ ಫಾಲೋ ಮಾಡೋಕೆ ಶುರು ಮಾಡ್ತಾರೋ, ನಿಧಾನಕ್ಕೆ ವಿರಾಟ್ ಕೊಹ್ಲಿಯ ಆಟದಲ್ಲೂ ಬದಲಾವಣೆಯಾಗೋಕೆ ಶುರುವಾಗುತ್ತೆ. ಶಾಟ್ ಸೆಲೆಕ್ಷನ್, ಡಿಸೀಶನ್ಗಳು ಸ್ಮಾರ್ಟ್.. ಕೊಹ್ಲಿ ಹೆಚ್ಚು ಕಾನ್ಫಿಡೆನ್ಸ್ನಲ್ಲಿ ಆಡ್ತಾರೆ. ಸುಮಾರು ಮೂರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಮ್ಯಾಚ್‌ನಲ್ಲಿ ಸೆಂಚೂರಿ ಬಾರಿಸಿದ್ರು. ಬಳಿಕ ತಿರುಗಿ ನೋಡಿದ್ದೇ ಇಲ್ಲ, ಹಳೆಯ ಕೊಹ್ಲಿ ಈಗ ಹೊಸ ಅವತಾರದಲ್ಲಿ ಆಡ್ತಾ ಇದ್ದಾರೆ. ವಂಡೇ ಕ್ರಿಕೆಟ್ನಲ್ಲಿ ಹೈಯೆಸ್ಟ್ ಸೆಂಚೂರಿ ರೆಕಾರ್ಡ್ ಕೂಡ ಮಾಡಿದ್ರು. ದಾಖಲೆಗಳ ಮೇಲೆ ದಾಖಲೆಗಳನ್ನ ಬರೀತಾ ಇದ್ದಾರೆ. ಇತ್ತೀಚೆಗಷ್ಟೇ ಉಜ್ಜಯಿನಿಯ ಮಾಹಾಕಾಳೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ಇತ್ತೀಚಿಗೆ ವಿರಾಟ್ ಕೊಹ್ಲಿ ಇಂಟರ್ವ್ಯೂಗಳಲ್ಲೂ ತಮ್ಮ ಸ್ಪಿರಿಚ್ಯುವಲ್ ಜರ್ನಿ ಬಗ್ಗೆ ಓಪನ್ ಆಗಿ ಮಾತನಾಡೋಕೂ ಶುರು ಮಾಡಿದ್ರು. ದೇವರ ಮೇಲಿನ ನಂಬಿಕೆ ನನ್ನ ಪರ್ಫಾಮೆನ್ಸ್, ಜೀವನವನ್ನ ಬದಲಾಯಿಸಿತು. ಜಗತ್ತನ್ನ ನೋಡೋಕೆ ಇನ್ನೊಂದು ದೃಷ್ಟಿ ಸಿಕ್ಕಂತಾಗಿದೆ  ಅಂತಾ ವಿರಾಟ್ ಕೊಹ್ಲಿ ಹೇಳಿದ್ದಾರೆ. ದೇವರು-ಆಧ್ಯಾತ್ಮ ಅನ್ನೋದು ಯಾವ ರೀತಿ ವ್ಯಕ್ತಿಯನ್ನ ಬದಲಾಯಿಸುತ್ತೆ, ಪೊಸಿಟಿವ್ ಎನರ್ಜಿ ನೀಡುತ್ತೆ ಅನ್ನೋದಕ್ಕೆ ವಿರಾಟ್ ಕೊಹ್ಲಿಯ ಈ ಲೈಫ್ ಸ್ಟೋರಿಯೇ  ಸಾಕ್ಷಿ.

ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಅಷ್ಟೇ, ತುಂಬಾನೆ ಆಧ್ಮಾತ್ಮಿಕ ವ್ಯಕ್ತಿ. ರೋಹಿತ್ ಶರ್ಮಾ ಕೂಡ ಅಷ್ಟೇ, ಪಾಸಿಟಿವಿಟಿಗಾಗಿ ಆಧ್ಮಾತ್ಮದ ಮೊರೆ ಹೋಗಿದ್ರು. ಹೈದರಾಬಾದ್ ಮೂಲದ ಕಮಲೇಶ್ ಪಟೇಲ್ ದಾಜಿ ಅನ್ನೋರು ರೋಹಿತ್ ಶರ್ಮಾರ ಆಧ್ಯಾತ್ಮಿಕ ಗುರು. ಇವರ ಬಳಿಗೆ ಹೋಗಿಯೇ ರೋಹಿತ್ ಧ್ಯಾನ ಮಾಡೋದನ್ನ ಕಲಿತಿದ್ರು. ಹಾರ್ಟ್ಫುಲ್ನೆಸ್ ಮಡಿಟೇಶನ್ ಅನ್ನೋ ಸೆಷನ್ನನಲ್ಲಿ ರೋಹಿತ್ ಶರ್ಮಾ ಭಾಗಿಯಾಗಿದ್ರು. ಹಾಗೆಯೇ ರೋಹಿತ್ ದೇಶದ ವಿವಿಧ ದೇವಾಲಯಗಳಿಗೂ ಭೇಟಿ ಕೊಡ್ತಾ ಇರ್ತಾರೆ. ವರ್ಲ್ಡ್ಕಪ್ಗೂ ತಿರುಪತಿಗೂ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ರು. ರೋಹಿತ್ ಶರ್ಮಾ ಮೂಲತ: ಆಂಧ್ರದವರಾಗಿದ್ದು, ಹೀಗಾಗಿ ಪ್ರತಿ ವರ್ಷ ತಿರುಪತಿಗೆ ಭೇಟಿ ನೀಡ್ತಾರೆ.

ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯೂ ಅಷ್ಟೇ. ತುಂಬಾನೆ ಆಧ್ಮಾತ್ಮಿಕ ವ್ಯಕ್ತಿ. ಬಟ್ ಎಲ್ಲಿಯೂ ಅವರು ಅದನ್ನ ಹೆಚ್ಚು ಎಕ್ಸ್ಪ್ರೆಸ್ ಮಾಡೋದಿಲ್ಲ. ಧೋನಿಯೂ ಆಗಾಗ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸ್ತಾನೆ ಇರ್ತಾರೆ. ಇತ್ತೀಚಿಗೆ ಜಾರ್ಖಂಡ್‌ನಲ್ಲಿ ತಾವು ಹುಟ್ಟಿ ಬೆಳೆದ ಹಳ್ಳಿಗೆ ತೆರಳಿ ಅಲ್ಲಿನ ಸಣ್ಣ ಸಣ್ಣ ಗುಡಿಗಳು, ಮಂದಿರಗಳಿಗೆ ಭೇಟಿ ಕೊಟ್ಟಿದ್ರು. ಕ್ರಿಕೆಟ್‌ನ ಧೋನಿ ತುಂಬಾ ಆಧ್ಯಾತ್ಮಿಕವಾಗಿಯೇ ಅಪ್ರೋಚ್ ಮಾಡ್ತಾರೆ. ಈ ಕಾರಣಕ್ಕಾಗಿಯೇ ಎಂಎಸ್ಡಿ ಒಬ್ಬ ಕೂಲ್ ಮತ್ತು ಸಕ್ಸಸ್ಫುಲ್ ಕ್ಯಾಪ್ಟನ್ ಆಗಿರೋದು ಅಂತಾ ಕಾಮೆಂಟ್ರೇಟರ್ ಸಂಜಯ್ ಮಂಜ್ರೇಕರ್ ಈ ಹಿಂದೆ ಹೇಳಿದ್ರು. ಮ್ಯಾಚ್ ಗೆದ್ರೂ, ಸೋತ್ರೂ ಧೋನಿ ಯಾವಾಗಲೂ ಒಂದೇ ರೀತಿ ಇರ್ತಾರೆ. ಧೋನಿ ಆ ಟೈಮ್ನಲ್ಲಿ ಏನು ಡಿಸೀಶನ್ ತೆಗೆದುಕೊಳ್ಳಬೇಕೋ ಆ ಬಗ್ಗೆಯಷ್ಟೇ ಯೋಚನೆ ಮಾಡ್ತಾರೆ. ಆಫ್ಟರ್ ಮ್ಯಾಚ್ ಮಾತನಾಡೋವಾಗ, ಇಲ್ಲಾ ಪ್ರೆಸ್ಮೀಟ್‌ನಲ್ಲಿ ಧೋನಿ ಪ್ರಾಸೆಸ್ ಅನ್ನೋ ವರ್ಡ್ ನ ಹೆಚ್ಚು ಬಳಸ್ತಾರೆ. ಕ್ರಿಕೆಟ್ ಅನ್ನೋದು, ಮ್ಯಾಚ್ ಅನ್ನೋದು ಒಂದು ಪ್ರಾಸೆಸ್ ಅಷ್ಟೇ. ಜೀವನದ ಒಂದು ಪಾರ್ಟ್.. ಸೋ ಅಪ್ & ಡೌನ್ ಇದ್ದೇ ಇರುತ್ತೆ. ಜಸ್ಟ್ ಎಂಜಾಯ್ ದಿ ಪ್ರಾಸೆಸ್ ಅನ್ನೋ ಮಾತನ್ನ ಧೋನಿ ಹಲವು ಬಾರಿ ಹೇಳಿದ್ರು. ಹೀಗಾಗಿ ಗ್ರೌಂಡ್ನಲ್ಲಿದ್ದಾಗ ಧೋನಿ ರಿಸಲ್ಟ್ ಬಗ್ಗೆ ಯೋಚನೆಯೇ ಮಾಡೋದಿಲ್ಲ. ಇದೇ ಕಾರಣಕ್ಕೆ ಅಷ್ಟೊಂದು ಕೂಲ್ ಆಗಿ, ಕಂಪೋಸ್ಡ್ ಆಗಿ ಎಲ್ಲವನ್ನೂ ಹ್ಯಾಂಡಲ್ ಮಾಡ್ತಾರೆ. ಪೇನ್ & ಪ್ಲೆಶರ್ ಎರಡನ್ನೂ ಈಕ್ವಲ್ ಆಗಿ ಟ್ರೀಟ್ ಮಾಡ್ತಾರೆ. 2011ರಲ್ಲಿ ವಲ್ಡ್‌ ಕಪ್ ಫೈನಲ್ನಲ್ಲಿ ವಿನ್ನಿಂಗ್ ಸಿಕ್ಸ್ ಹೊಡೆದ ಮೇಲೂ ಮಹೇಂದ್ರ ಸಿಂಗ್ ಧೋನಿ ಆ ಜಾಯ್ನ್ನ ಎಕ್ಸ್ಪ್ರೆಸ್ ಮಾಡಿರಲಿಲ್ಲ. ಮನುಷ್ಯನಿಗೆ ಇಂಥಾ ಹೈ ಕ್ವಾಲಿಟಿಗಳು ಬರೋದೆ ಆತ ಆಧ್ಮಾತ್ಮಿಕವಾಗಿದ್ದಾಗ. ಇ್ತತೀಚೆಗಷ್ಟೇ ಧೋನಿ ಕಾರಿನಲ್ಲಿ ಹೋಗೋವಾಗ ಕೈಯಲ್ಲಿ ಭಗವದ್ಗೀತೆಯನ್ನ ಹಿಡಿದುಕೊಂಡಿದ್ದ ಫೋಟೋ ವೈರಲ್ ಆಗಿತ್ತು.

ಹಾಗೆಯೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅಂತೂ ದೊಡ್ಡ ದೈವ ಭಕ್ತ. ಆಗಾಗ ದೇವಾಲಯಗಳಿಗೆ ಸಚಿನ್ ಭೇಟಿ ನೀಡ್ತಾನೆ ಇರ್ತಾರೆ. ಅದ್ರಲ್ಲೂ ಗಣಪತಿ ಸಚಿನ್ ತೆಂಡೂಲ್ಕರ್ ಮನೆ ದೇವರಾಗಿದ್ದು, ಗಣೇಶ ಹಬ್ಬದ ಸಮಯದಲ್ಲಿ ತಮ್ಮ ನಿವಾಸದಲ್ಲೂ ಮೂರ್ತಿಯನ್ನ ತಂದು ಪೂಜೆ ಮಾಡ್ತಾರೆ. ಹಾಗೆಯೇ ಸಾಯಿಬಾಬಾ ಭಕ್ತರಾಗಿರೋ ಸಚಿನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ಅವರು ಆಯೋಜಿಸಿದ್ದ ವನ್ ವರ್ಲ್ಡ್ ವನ್ ಫ್ಯಾಮಿಲಿ ಕಪ್ ಕ್ರಿಕೆಟ್ ಮ್ಯಾಚ್ನಲ್ಲಿ ಆಡಿದ್ರು. ಸತ್ಯಸಾಯಿ ಆಯೋಜನೆ ಮಾಡುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಸಚಿನ್ ಭಾಗಿಯಾಗ್ತಾರೆ. ಸಾಯಿಬಾಬ ಬದುಕಿದ್ದಾಗಂತೂ ಆಗಾಗ ಪುಟ್ಟಬರ್ತಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ತಿದ್ರು. ತಮ್ಮ ಕ್ರಿಕೆಟ್ ಕಿಟ್ನಲ್ಲಿ ಸಾಯಿಬಾಬ ಸೇರಿದಂತೆ ದೇವರುಗಳ ಫೋಟೋ ಇಟ್ಟುಕೊಂಡಿದ್ರು.

ಹೀಗೆ ಭಾರತದ ಬಹುತೇಕ ಎಲ್ಲಾ ಕ್ರಿಕೆಟರ್ಸ್ ಕೂಡ ದೈವ ಭಕ್ತರಾಗಿದ್ದಾರೆ. ಭಾರತದಲ್ಲೇ ಮ್ಯಾಚ್‌ಗಳು ನಡೆಯೋವಾಗ ಕೆಲವೊಮ್ಮೆ ಇಡೀ ತಂಡವೇ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸ್ತಾರೆ. ಪಾಕಿಸ್ತಾನ, ಬಾಂಗ್ಲಾದ ಕೆಲ ಆಟಗಾರರು ಮೈದಾನದಲ್ಲಿ ನಮಾಜ್ ಮಾಡ್ತಾರೆ. ಕ್ರಿಕೆಟ್ನಲ್ಲಿ ಮಾತ್ರವಲ್ಲ ಫುಟ್ಬಾಲ್‌ನಲ್ಲಿ ಕೂಡ ಇದು ನಡೆಯುತ್ತೆ. ಅದು ಅವರವರ ನಂಬಿಕೆ, ಅನುಕರಣೆಗೆ ಬಿಟ್ಟ ವಿಚಾರ. ಅದನ್ನ ಯಾರೂ ಪ್ರಶ್ನೆ ಮಾಡೋಕೆ ಆಗೋದಿಲ್ಲ. ಹೀಗಾಗಿ ದೇವರು, ಆಧ್ಯಾತ್ಮ ಅನ್ನೋದು ಕೇವಲ ನಂಬಿಕೆಗಷ್ಟೇ ಸೀಮಿತವಾಗಿಲ್ಲ. ಭಯ, ಭಕ್ತಿ ಇದ್ದಾಗ ಮನುಷ್ಯನ ಅಹಂಕಾರ ಕಡಿಮೆಯಾಗುತ್ತೆ. ನಾನೇ ಎಲ್ಲಾ.. ನನ್ನಿಂದಾಗಿಯೇ ಎಲ್ಲಾ ಅನ್ನೋದನ್ನ ಈ ಜಗತ್ತು ಒಪ್ಪೋದಿಲ್ಲ. ಜಗತ್ತು, ಬ್ರಹ್ಮಾಂಡದ ಸೃಷ್ಟಿ ಹೇಗಾಯ್ತು ಅನ್ನೋದನ್ನ ಇನ್ನೂ ಮಾನವನಿಗೆ ಕಂಡುಹಿಡಿಯೋಕೆ ಸಾಧ್ಯವಾಗಿಲ್ಲ.

ಈ ಬ್ರಹ್ಮಾಂಡದ ಮೂಲ ಏನು ಅನ್ನೋದು ಇನ್ನೂ ಯಾರಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅದ್ಕೇ ಒಂದು ಮಾತಿದೆ..ಎಲ್ಲಿ ವಿಜ್ಞಾನ ಅಂತ್ಯವಾಗುತ್ತೋ..ಅಲ್ಲಿಂದ ಆಧ್ಯಾತ್ಮ ಶುರುವಾಗುತ್ತೆ. ದೈವ, ದೇವರು ಅನ್ನೋದು ಆರಂಭವಾಗುತ್ತೆ ಅಂತಾ. ನಮ್ಮ ಯಾರೆ ಕೈಯಲ್ಲೂ ಇಲ್ಲದ ಒಂದು ಅದೃಶ್ಯ ಶಕ್ತಿ ಇದೆ, ಒಂದು ಎನರ್ಜಿ ಇದೆ ಅನ್ನೋ ಕಾರಣಕ್ಕಾಗಿಯೇ ಇಡೀ ಜಗತ್ತಿನದಲ್ಲಿ ವಿವಿಧ ದೇವರುಗಳು, ಧರ್ಮಗಳು ಈಗಲೂ ಇರೋದು. ವಿಜ್ಞಾನ ಎಷ್ಟೇ ಮುಂದುವರಿದ್ರೂ ಜನರು ದೇವರ ಮೊರೆ ಹೋಗೋದ್ಯಾಕೆ ಅನ್ನೋದಕ್ಕೆ ಉತ್ತರ ಇಲ್ಲೇ ಇದೆ.

Shwetha M