ಕೊಹ್ಲಿಗೆ ಆರ್ಥೋಡಾಕ್ಸ್ ಅಸ್ತ್ರ? – ಕಿಂಗ್ OUT ಮಾಡೋಕೆ ABD ಪ್ಲ್ಯಾನ್?

ಡಿಸೆಂಬರ್ 26ರಿಂದ ಭಾರತ ಮತ್ತು ಸೌತ್ ಆಫ್ರಿಕಾ ಮಧ್ಯೆ ಫಸ್ಟ್ ಟೆಸ್ಟ್ ಮ್ಯಾಚ್ ನಡೆಯಲಿದೆ. 2 ಮ್ಯಾಚ್ಗಳ ಟೆಸ್ಟ್ ಸೀರಿಸ್ಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿರ್ತಾರೆ. ಈಗಾಗ್ಲೇ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ ದಕ್ಷಿಣ ಆಫ್ರಿಕಾದಲ್ಲಿ ಬೀಡು ಬಿಟ್ಟಿದೆ. ಕಳೆದ ಒಂದು ವಾರದಿಂದ ಪ್ರಾಕ್ಟೀಸ್ ನಡೆಸ್ತಾನೆ ಇದ್ದಾರೆ. ಈ ಮಧ್ಯೆ ವಿರಾಟ್ ಕೊಹ್ಲಿ ವಿಚಾರವಾಗಿ ಒಂದು ಮೇಜರ್ ಡೆವಲಪ್ಮೆಂಟ್ ಆಗಿದೆ. ಸೌತ್ ಆಫ್ರಿಕಾಗೆ ಹೋಗಿದ್ದ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಸೌತ್ ವಿರುದ್ಧ ಟೆಸ್ಟ್ ಸೀರಿಸ್ನಲ್ಲಿ ಕೊಹ್ಲಿ ಆಡಲ್ವಾ? ಸೌತ್ ಆಫ್ರಿಕಾಗೆ ಹೋಗಿ ಮತ್ತೆ ವಾಪಸ್ ಆಗಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಟೆಸ್ಟ್ ಸೀರಿಸ್ಗಾಗಿ ವಿರಾಟ್ ಕೊಹ್ಲಿ ಕೂಡ ದಕ್ಷಿಣ ಆಫ್ರಿಕಾಗೆ ತೆರಳಿದ್ರು. ಟೀಂ ಇಂಡಿಯಾದ ಉಳಿದೆಲ್ಲಾ ಆಟಗಾರರು ಒಂದು ವಾರದ ಹಿಂದೆಯೇ ಸೌತ್ ಆಫ್ರಿಕಾಗೆ ತೆರಳಿದ್ರೆ ಕೊಹ್ಲಿ ಮಾತ್ರ ಸ್ವಲ್ಪ ಲೇಟ್ ಆಗಿ ಟೀಮ್ನ್ನ ಜಾಯಿನ್ ಆಗಿದ್ರು. ಟೆಸ್ಟ್ ಸೀರಿಸ್ ಆರಂಭವಾಗೋ ಮುನ್ನ ಪ್ರಿಟೋರಿಯಾದಲ್ಲಿ ಮೂರು ದಿನಗಳ ಇಂಟ್ರಾ ಸ್ಕ್ಯಾಡ್ ಮ್ಯಾಚ್ನ್ನ ಟೀಂ ಇಂಡಿಯಾ ಆಡ್ತಿದೆ. ಆದ್ರೆ ಕೊಹ್ಲಿ ಈ ಪ್ರಾಕ್ಟೀಸ್ ಮ್ಯಾಚ್ನ್ನ ಮಿಸ್ ಮಾಡಿಕೊಳ್ತಿದ್ದಾರೆ. ದಕ್ಷಿಣ ಆಫ್ರಿಕಾದಿಂದ ವಿರಾಟ್ ಕೊಹ್ಲಿ ಈಗ ಮತ್ತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಪರ್ಸನಲ್ ಎಮರ್ಜೆನ್ಸಿ ರೀಸನ್ ಮೇಲೆ ಕೊಹ್ಲಿ ಭಾರತಕ್ಕೆ ಬಂದಿಳಿದಿದ್ದಾರೆ. ಏನೋ ಫ್ಯಾಮಿಲಿ ಎಮರ್ಜೆನ್ಸಿಯಾಗಿರೋ ಕಾರಣ ಮನೆಗೆ ಮರಳಿದ್ದಾರೆ. ಆದ್ರೆ ಇಲ್ಲಿ ವರಿ ಮಾಡೋ ಅವಶ್ಯಕತೆಯಂತೂ ಇಲ್ವೇ ಇಲ್ಲ. ಯಾಕಂದ್ರೆ ಫಸ್ಟ್ ಟೆಸ್ಟ್ ಆರಂಭವಾಗೋ ಮುನ್ನ ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾವನ್ನ ಜಾಯಿನ್ ಆಗ್ತಾ ಇದ್ದಾರೆ. ಎರಡೂ ಟೆಸ್ಟ್ ಮ್ಯಾಚ್ಗಳನ್ನ ಕೂಡ ಆಡಲಿದ್ದಾರೆ.
ಇದನ್ನೂ ಓದಿ: ಟಿ-20 ಮಾತ್ರವಲ್ಲ, ಏಕದಿನಕ್ಕೂ ಒಬ್ಬ ಬೆಸ್ಟ್ ಫಿನಿಷರ್! – ಟೆಸ್ಟ್ ಟೀಮ್ನಲ್ಲೂ ರಿಂಕು ಚಾನ್ಸ್ ಪಡೆಯುತ್ತಾರಾ?
ಟೆಸ್ಟ್ ಸೀರಿಸ್ನಲ್ಲಿ ಕೊಹ್ಲಿ ಆಡೋದಿಲ್ಲ ಅಂದ್ರೆ ಇಡೀ ಸೀರಿಸೇ ಸಪ್ಪೆಯಾಗಿರುತ್ತೆ. ಮೊದಲೇ ಟೆಸ್ಟ್ ಮ್ಯಾಚ್. ಈಗ ಟೆಸ್ಟ್ ಕ್ರಿಕೆಟ್ನ್ನ ನೋಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂಥಾ ಸ್ಟಾರ್ ಪ್ಲೇಯರ್ಸ್ಗಳಿದ್ರಷ್ಟೇ ಒಂದಷ್ಟು ಅವರ ಆಟವನ್ನ ನೋಡೋಕಾದ್ರೂ ಮ್ಯಾಚ್ ನೋಡಬಹುದು. ಆದ್ರೆ ಟಿ-20, ವಂಡೇಗಿಂತ ಟೆಸ್ಟ್ ಕ್ರಿಕೆಟೇ ಅಲ್ಟಿಮೇಟ್ ಅನ್ನೋದನ್ನ ಯಾರೂ ಮರೆಯುವಂತಿಲ್ಲ. ಅದ್ರಲ್ಲೂ ವಿರಾಟ್ ಕೊಹ್ಲಿಯಂತೂ ಟೆಸ್ಟ್ ಕ್ರಿಕೆಟ್ಗೆ ಇನ್ನಷ್ಟು ಮೆರುಗು ತಂದಂತಾ ಪ್ಲೇಯರ್. ತಮ್ಮ ಅಗ್ರೆಸ್ಸಿವ್ನೆಸ್. ಫೈಟಿಂಗ್ ನೇಚರ್ನಿಂದಾಗಿಯೇ ಕೊಹ್ಲಿ ಟೆಸ್ಟ್ ಕ್ರಿಕೆಟ್ನ್ನ ಇನ್ನಷ್ಟು ಇಂಟ್ರೆಸ್ಟಿಂಗ್ ಆಗಿಸಿರೋದು ಸುಳ್ಳಲ್ಲ. ಅದ್ರಲ್ಲೂ ಓವರ್ಸೀಸ್ ಟೆಸ್ಟ್ ಸೀರಿಸ್ಗಳಲ್ಲಂತೂ ಕೊಹ್ಲಿಯ ಪರ್ಫಾಮೆನ್ಸ್ ಮತ್ತು ಆಟಿಟ್ಯೂಡ್ ಇನ್ನೊಂದು ರೇಂಜ್ನಲ್ಲಿರುತ್ತೆ. ಈ ಹಿಂದೆ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಕೂಡ ಟೆಸ್ಟ್ ಕ್ರಿಕೆಟ್ನ್ನ ಕೊಹ್ಲಿ ಅಪ್ರೋಚ್ ಮಾಡೋ ರೀತಿಯನ್ನ ಅಪ್ರಿಶಿಯೇಟ್ ಮಾಡಿದ್ರು. ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿ ಇನ್ನಷ್ಟು ಜೀವ ತುಂಬಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಕೊಹ್ಲಿಯ ಕಾಂಟ್ರಿಬ್ಯೂಷನ್ ತುಂಬಾ ದೊಡ್ಡ ಮಟ್ಟದಲ್ಲಿದೆ ಅಂತಾ ಹೇಳಿದ್ರು. ಹೀಗಾಗಿ ಕೊಹ್ಲಿ ಇದ್ರೆ ಟೆಸ್ಟ್ ಮ್ಯಾಚ್ ಕೂಡ ನೋಡ್ಬೇಕು ಅಂತಾ ಅನ್ನಿಸೋದು ಸುಳ್ಳಲ್ಲ.
ಇನ್ನು ಸೌತ್ ಆಫ್ರಿಕಾಗೆ ಈಗ ದೊಡ್ಡ ತಲೆ ನೋವಾಗಿರೋದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಟೆಸ್ಟ್ ಮ್ಯಾಚ್ ಗೆಲ್ಲಬೇಕು ಅಂದ್ರೆ ದಕ್ಷಿಣ ಆಫ್ರಿಕಾ ಬೌಲರ್ಸ್ಗಳು ಇವರಿಬ್ಬರನ್ನ ಟಾರ್ಗೆಟ್ ಮಾಡ್ಲೇಬೇಕು. ಈಗಾಗ್ಲೇ ಕೊಹ್ಲಿ ಮತ್ತು ರೋಹಿತ್ಗಾಗಿ ಸೌತ್ ಆಫ್ರಿಕಾ ಟೀಂ ಸಪರೇಟ್ ಪ್ಲ್ಯಾನ್ ಮಾಡ್ತಾ ಇದೆ. ಯಾಕಂದ್ರೆ ದಕ್ಷಿಣ ಆಫ್ರಿಕಾ ಪಿಚ್ನಲ್ಲಿ ಕೊಹ್ಲಿಯ ಟ್ರ್ಯಾಕ್ ರೆಕಾರ್ಡ್ ತುಂಬಾ ಚೆನ್ನಾಗಿದೆ. ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೆಕೆಂಡ್ ಹೈಯೆಸ್ಟ್ ರನ್ ಗಳಿಸಿರೋ ಭಾರತೀಯ ಪ್ಲೇಯರ್ ಅಂದ್ರೆ ಅದು ವಿರಾಟ್ ಕೊಹ್ಲಿಯೇ. ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ 7 ಟೆಸ್ಟ್ ಮ್ಯಾಚ್ಗಳನ್ನಾಡಿದ್ದು, 51.35 ಎವರೇಜ್ನಲ್ಲಿ 719 ರನ್ ಗಳಿಸಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ಬೌಲರ್ಸ್ಗಳ ನಂಬರ್ 1 ಟಾರ್ಗೆಟ್ ಆಗಿರೋದು ವಿರಾಟ್ ಕೊಹ್ಲಿಯೇ. ಈ ನಡುವೆ ಕೊಹ್ಲಿಯ ದೋಸ್ತ್, ಸೌತ್ ಆಫ್ರಿಕಾದ ಫಾರ್ಮರ್ ಕ್ರಿಕೆಟರ್ ಎಬಿಡಿ ವಿಲಿಯರ್ಸ್ ಟೆಸ್ಟ್ನಲ್ಲಿ ಕೊಹ್ಲಿಯನ್ನ ಔಟ್ ಮಾಡೋದು ಹೇಗೆ ಅನ್ನೋ ವಿಚಾರವಾಗಿ ಮಾತನಾಡಿದ್ದಾರೆ. ಎಬಿಡಿ ಪ್ರಕಾರ ಟೆಸ್ಟ್ನಲ್ಲಿ ಕೊಹ್ಲಿಯನ್ನ ಔಟ್ ಮಾಡೋದಕ್ಕೆ ಒಂದೇ ಒಂದು ಒಂದು ಮಾರ್ಗವಿದ್ಯಂತೆ. ಪೇಸ್ ಬೌಲರ್ಸ್ಗಳು ವಿರಾಟ್ ಕೊಹ್ಲಿಗೆ ಫೋರ್ತ್ ಸ್ಟಂಪ್ ಲೈನ್ನಲ್ಲಿ ಬೌಲ್ ಮಾಡಬೇಕು. ಅದ್ರೆ ಜಸ್ಟ್ ಔಟ್ ಸೈಡ್ ದಿ ಆಫ್ ಸ್ಟಂಪ್ಗೆ ಬಾಲ್ ಎಸೀಬೇಕು. ಈ ರೀತಿ ಟಾರ್ಗೆಟ್ ಮಾಡಿ ಬೌಲ್ ಮಾಡಿದಾಗ ಬಾಲ್ ಪಿಚ್ ಆದ ಬಳಿಕ ಒಂದಷ್ಟು ಮೂಮೆಂಟ್ ಪಡೆದು ವಿರಾಟ್ ಕೊಹ್ಲಿಯ ಬ್ಯಾಟ್ನ ಎಡ್ಜಿಗೆ ಟಚ್ ಆಗಿ ಕ್ಯಾಚ್ ಔಟಾಗಬಹುದು ಅಂತಾ ಎಬಿಡಿ ವಿಲಯರ್ಸ್ ಹೇಳಿದ್ದಾರೆ. ಆರ್ಥೋಡಾಕ್ಸ್ ಬೌಲಿಂಗ್ನಿಂದ ಮಾತ್ರ ಕೊಹ್ಲಿಯನ್ನ ಔಟ್ ಮಾಡಬಹುದು. ನಿರಂತರವಾಗಿ ಜಸ್ಟ್ ಔಟ್ ಸೈಡ್ದಿ ಆಫ್ ಸ್ಟಂಪ್ ಬೌಲಿಂಗ್ ಮಾಡ್ತಾನೆ ಇರಬೇಕು. ಆ ಬಾಲ್ಗೆ ಕೊಹ್ಲಿ ಆಡುವಂತೆ ಅವರನ್ನ ಡ್ರ್ಯಾಗ್ ಮಾಡಬೇಕು. ಆ ಒಂದು ಮೂಮೆಂಟ್ನಲ್ಲಿ ಬಾಲ್ನ್ನ ಕೆಣಕೋಕೆ ಹೋದಾಗ ಬ್ಯಾಟ್ ಎಡ್ಜಿಗೆ ಟಚ್ ಆಗಿ ಕೊಹ್ಲಿ ಔಟ್ ಆಗುವ ಸಾಧ್ಯತೆ ಹೆಚ್ಚಿದೆ ಅನ್ನೋದು ಎಬಿಡಿ ವಿಲಯರ್ಸ್ ಒಪೀನಿಯನ್. ಎಬಿಡಿ ಇಲ್ಲಿ ಸೌತ್ ಆಫ್ರಿಕಾ ಬೌಲರ್ಸ್ಗಳಿಗೆ ಟಿಪ್ಸ್ ಕೊಟ್ಟಿದ್ದಾರೆ ಅಷ್ಟೇ. ವಿರಾಟ್ ಕೊಹ್ಲಿಯ ವೀಕ್ನೆಸ್ ಏನು ಅನ್ನೋದು ಎಬಿಡಿ ವಿಲಿಯರ್ಸ್ಗೆ ಚೆನ್ನಾಗಿಯೇ ಗೊತ್ತಿದೆ. ಆರ್ಸಿಬಿ ಪರ ಹಲವು ವರ್ಷಗಳ ಕಾಲ ಜೊತೆಗೆ ಆಡಿದ್ರಿಂದ ಕೊಹ್ಲಿಯ ಪ್ಲಸ್-ಮೈನಸ್ ಏನು ಅನ್ನೋದು ಎಬಿಡಿ ವಿಲಿಯರ್ಸ್ಗೆ ಚೆನ್ನಾಗಿಯೇ ಗೊತ್ತಿದೆ.
ಇನ್ನು ಈ ಹಿಂದೆ ಸುಮಾರು ಎರಡು ವರ್ಷಗಳ ಕಾಲ ವಿರಾಟ್ ಕೊಹ್ಲಿ ಸಂಪೂರ್ಣ ಔಟ್ ಆಫ್ ಫಾರ್ಮ್ನಲ್ಲಿದ್ದಿದ್ದು ನಿಮಗೆ ಗೊತ್ತೇ ಇದೆ. ಆ ಸಂದರ್ಭದಲ್ಲಿ ಕೊಹ್ಲಿ ಈಗ ಎಬಿಡಿ ಹೇಳಿದಂಥಾ ಬಾಲ್ಗೆ ಔಟಾಗ್ತಾ ಇದ್ರು. ಔಟ್ ಸೈಡ್ ಆಫ್ ಸ್ಟಂಪ್ ಬಾಲ್ಗಳನ್ನ ಕೆಣಕೋಕೆ ಹೋಗಿ ಕೀಪರ್ಗೆ, ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ಕೊಟ್ಟು ಔಟಾಗ್ತಾ ಇದ್ರು. ಎಸ್ಪೆಷಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಓವರ್ಸೀಸ್ನಲ್ಲಿ ನಡೆದ ಮ್ಯಾಚ್ಗಳಲ್ಲಿ. ಈಗ ಅದೇ ಆರ್ಥೋಡಾಕ್ಸ್ ಅಸ್ತ್ರವನ್ನೇ ಕೊಹ್ಲಿ ಮೇಲೆ ಪ್ರಯೋಗಿಸುವಂತೆ ಎಬಿಡಿ ವಿಲಯರ್ಸ್ ಟಿಪ್ಸ್ ಕೊಟ್ಟಿದ್ದಾರೆ. ಆದ್ರೆ ಕೊಹ್ಲಿಯೂ ಇದಕ್ಕೆ ಪ್ರಿಪೇರ್ ಆಗಿರ್ತಾರೆ. ಅದು ಬೇರೆ ವಿರಾಟ್ ಈಗ ಫುಲ್ ಫಾರ್ಮ್ನಲ್ಲಿರೋ ಬ್ಯಾಟ್ಸ್ಮನ್. ಸೋ ಈ ಬಾರಿ ಸೌತ್ ಆಫ್ರಿಕಾ ಫಾಸ್ಟ್ ಬೌಲರ್ಸ್ ಮತ್ತು ವಿರಾಟ್ ಕೊಹ್ಲಿ ನಡುವಿನ ಕಾಂಟೆಸ್ಟ್ ತುಂಬಾನೆ ಇಂಟ್ರೆಸ್ಟಿಂಗ್ ಆಗಿರಬಹುದು.