ಕೊಹ್ಲಿಗೆ ತುಂಟಾಟ, ಗಿಲ್‌ಗೆ ಪ್ರಾಣಸಂಕಟ – ಇನ್‌ಸೈಡ್ ‘ಪಂಚ್’ಗೆ ತಾಳಲಾರೆ.. ಹೇಳಲಾರೆ..!

ಕೊಹ್ಲಿಗೆ ತುಂಟಾಟ, ಗಿಲ್‌ಗೆ ಪ್ರಾಣಸಂಕಟ – ಇನ್‌ಸೈಡ್ ‘ಪಂಚ್’ಗೆ ತಾಳಲಾರೆ.. ಹೇಳಲಾರೆ..!

ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಎರಡು ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದೀಗ ಮೂರನೇ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಈ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ತುಂಟಾಟದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಮಾಡಿದ ಈ ಚೇಷ್ಟೆಯಿಂದ ಯುವ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಫುಲ್ ಶಾಕ್‌ಗೊಳಾಗಿದ್ದಾರೆ.

ಇದನ್ನೂ ಓದಿ:  ಅಣ್ಣ ತಂಗಿಯ ಸ್ನೋಮೊಬೈಲ್ ಸವಾರಿ – ‘ರಾಹುಲ್ – ಪ್ರಿಯಾಂಕ’ ಜಾಲಿಮೂಡ್

ವಿರಾಟ್ ಕೊಹ್ಲಿ ಆಟದ ವೇಳೆ ಅಥವಾ ಅಭ್ಯಾಸದ ವೇಳೆ ತುಂಟಾಟ ಮಾಡ್ತಾ ಇರ್ತಾರೆ. ಇದ್ರಿಂದ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ ಆಟದ ಸಮಯದಲ್ಲಿ ಎದುರಾಳಿ ಆಟಗಾರರನ್ನು ತನ್ನ ಆಕ್ರಮಣಶೀಲತೆಯಿಂದ ಕೆಣಕುವ ಕೊಹ್ಲಿ, ಆಟದ ನಂತರ ಎಲ್ಲರೊಂದಿಗೆ ಜಾಲಿಮೂಡ್​ನಲ್ಲಿರುತ್ತಾರೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟವೆಂಬಂತೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ಟೀಂ ಇಂಡಿಯಾದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದ ಕೊಹ್ಲಿ, ಶುಭ್​ಮನ್​ ಗಿಲ್ ಬಳಿ ಬಂದು ಅವರ ಖಾಸಗಿ ಭಾಗಕ್ಕೆ ತಮ್ಮ ಕೈನಿಂದ ಪಂಚ್ ನೀಡಿದ್ದಾರೆ. ಇದರಿಂದ ಶುಭ್​ಮನ್ ಸ್ವಲ್ಪ ಸಮಯ ಶಾಕ್ ಗೊಳಗಾಗುತ್ತಾರೆ. ಇತರೆ ಆಟಗಾರರು ಕೊಹ್ಲಿಯ ಕಪಿ ಚೇಷ್ಟೆ ನೋಡಿ ನಕ್ಕಿದ್ದಾರೆ. ಇತ್ತ ಪೆಟ್ಟು ತಿಂದ ಗಿಲ್ ಸ್ಥಿತಿ, ಅಯ್ಯಯ್ಯೋ ಹೇಳಲಾರೆ ತಾಳಲಾರೆ ಎಂಬಂತಾಗಿತ್ತು.

suddiyaana