RCB ಕ್ಯಾಂಪ್ ನಲ್ಲಿ ಕೊಹ್ಲಿ ಪವರ್ – ಇಂಜುರಿ ಬೆಥೆಲ್ ಕಂಪ್ಲೀಟ್ ಫಿಟ್

ವಿಶ್ವದ ಶ್ರೀಮಂತ ಲೀಗ್ನಲ್ಲಿ ಮದಗಜಗಳ ಕಾದಾಟಕ್ಕೆ ಜಸ್ಟ್ ಒಂದೇ ಒಂದು ವಾರವಷ್ಟೇ ಬಾಕಿ. ಮಾರ್ಚ್ 22ರಿಂದ ಶುರುವಾಗಲಿರುವ ಐಪಿಎಲ್ನಲ್ಲಿ 10 ತಂಡಗಳು ಆಡ್ತಿದ್ದು, 74 ಪಂದ್ಯಗಳು ನಡೆಯಲಿವೆ. ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿರವ ಆರ್ಸಿಬಿ ಬಾಯ್ಸ್ ಗೆಲುವಿನ ಶುಭಾರಂಭಕ್ಕೆ ಭರ್ಜರಿ ತಾಲೀಮು ನಡೆಸ್ತಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿ, ಹಾಗೇ ಇಂಗ್ಲೆಂಡ್ ನ ಸ್ಟಾರ್ ಆಲ್ ರೌಂಡರ್ ಜೇಕಬ್ ಬೆಥೆಲ್ ಕೂಡ ತಂಡವನ್ನ ಕೂಡಿಕೊಂಡಿದ್ದಾರೆ.
ಇದನ್ನೂ ಓದಿ : ಇಂಡಿಯಾ ಮಾಸ್ಟರ್ಸ್ಗೆ ಚಾಂಪಿಯನ್ ಕಿರೀಟ- ಸಚಿನ್ ನಾಯಕತ್ವದಲ್ಲಿ ಜಯ
ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದೊಂದಿಗೆ ಐಪಿಎಲ್ ಕದನ ಆರಂಭವಾಗಲಿದೆ. ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ನೆಟ್ಸ್ನಲ್ಲಿ ಬೆವರು ಹರಿಸುತ್ತಿವೆ. ಎರಡು ತಂಡಗಳು ಭಾಗಶಃ ಆಟಗಾರರು ತಮ್ಮ ತಮ್ಮ ತಂಡಗಳ ಕ್ಯಾಂಪ್ ಸೇರಿಕೊಂಡಿದ್ದು, ಪ್ರಾಕ್ಟೀಸ್ ಮಾಡ್ತಿದ್ದಾರೆ. ಇತ್ತ ರಜತ್ ಪಾಟಿದರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಆರ್ಸಿಬಿಯಲ್ಲೂ ಆಲ್ಮೋಸ್ಟ್ ಆಟಗಾರರು ಕೂಡಿಕೊಂಡಿದ್ದಾರೆ. ಬ್ಯಾಟಿಂಗ್ ಜೀವಾಳವಾಗಿರುವ ಕಿಂಗ್ ಕೊಹ್ಲಿಯ ಎಂಟ್ರಿ ಕೊಟ್ಟಿರೋದು ಹೈವೋಲ್ಟೇಜ್ ಪವರ್ ಬಂದಂತಾಗಿದೆ.
ಇನ್ನು ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಬೆಂಗಳೂರಿಗೆ ಆಗಮಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಬಟ್ ಬೆಥೆಲ್ ಇಂಜುರಿಯಿಂದಾಗಿ ಈ ಬಾರಿಯ ಟೂರ್ನಿ ಮಿಸ್ ಮಾಡಿಕೊಳ್ತಾರೆ ಅನ್ನೋ ಆತಂಕವೂ ಇತ್ತು. ಗಾಯದಿಂದಾಗಿ ಭಾರತ ವಿರುದ್ಧದ ಏಕದಿನ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ರು. ಫೆಬ್ರುವರಿ 6 ರಂದು ನಾಗ್ಪುರದಲ್ಲಿ ಭಾರತ ವಿರುದ್ಧದ ಮೊದಲ ಏಕದಿನ ಸೋಲಿನ ಸಮಯದಲ್ಲಿ ಮಂಡಿ ಸೆಳೆತದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು. ಹೀಗಾಗಿ ಐಪಿಎಲ್ಗೂ ಬರ್ತಾರೋ ಇಲ್ವೋ ಅನ್ನೋ ಅನುಮಾನಗಳಿದ್ವು. ಬಟ್ ಫೈನಲಿ ಬೆಥೆಲ್ ಅವರು ಕಂಪ್ಲೀಟ್ ಆಗಿ ರಿಕವರ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೂ ಮುನ್ನ ಬೆಥೆಲ್ ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ. ಕಳೆದ ವರ್ಷವನ್ನೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಇಂಗ್ಲೆಂಡ್ ಪರ ಮೂರು ಸ್ವರೂಪಗಳಲ್ಲೂ ಆಡಿದ್ದಾರೆ. ಇಲ್ಲಿಯವರೆಗೆ 10 ಟಿ20 ಪಂದ್ಯಗಳನ್ನು ಆಡಿದ್ದು, ಒಂಬತ್ತು ಇನಿಂಗ್ಸ್‌ಗಳಲ್ಲಿ 32.66 ಸರಾಸರಿ ಮತ್ತು 147.36 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಸ್ಪಿನ್ ಬೌಲಿಂಗ್ ನಲ್ಲಿ 11 ವಿಕೆಟ್ ಬೇಟೆಯಾಡಿದ್ದಾರೆ. ಈ ಬಾರಿ ಮೆಗಾ ಹರಾಜಿನಿಂದಾಗಿ ಬೆಂಗಳೂರು ಟೀಂ ಟೋಟಲಿ ಡಿಫ್ರೆಂಟ್ ಆಗಿದೆ.
ಬ್ಯಾಟರ್ಸ್: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್, ಮನೋಜ್ ಭಾಂಡಗೆ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ.
ವಿಕೆಟ್ ಕೀಪರ್ಸ್ : ಫಿಲ್ ಸಾಲ್ಟ್, ಜಿತೇಶ್ ಶರ್ಮಾ
ಆಲ್ ರೌಂಡರ್ಸ್: ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಮೋಹಿತ್ ರಾಠಿ
ಸ್ಪಿನ್ನರ್ಸ್ : ಸುಯೇಶ್ ಶರ್ಮಾ, ಅಭಿನಂದನ್ ಸಿಂಗ್
ವೇಗದ ಬೌಲರ್ ಗಳು : ಜೋಶ್ ಹೇಜಲ್‌ವುವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಖ್ ಸಲಾಂ, ನುವಾನ್ ತುಷಾರ, ಲುಂಗಿ ಎಂಗಿಡಿ