ಕೊಹ್ಲಿ ಔಟ್ ಕೊಟ್ಟು ಅಂಪೈರ್ ಮೋಸ? – ಆರ್‌ಸಿಬಿಯ ಮುಗಿದು ಹೋದ ಅಧ್ಯಾಯ

ಕೊಹ್ಲಿ ಔಟ್ ಕೊಟ್ಟು ಅಂಪೈರ್ ಮೋಸ? – ಆರ್‌ಸಿಬಿಯ ಮುಗಿದು ಹೋದ ಅಧ್ಯಾಯ

ಆರ್​ಸಿಬಿಯಲ್ಲಿ ಬೌಲಿಂಗ್ ಯುನಿಟ್ ಚೆನ್ನಾಗಿಲ್ಲ. ಅದುಕ್ಕೇ ಟೀಂ ಸೋಲ್ತಿದೆ ಅಂತಾನೇ ಎಲ್ರೂ ಹೇಳ್ತಾರೆ. ಇದು ಸತ್ಯ ಕೂಡ. ಆದ್ರೆ ಆರ್​ಸಿಬಿಗೆ ಬೇಕಾಗಿರೋದು ಬರೀ ಬೌಲರ್ಸ್ ಅಲ್ಲ. ಅದೃಷ್ಟವನ್ನೂ ಕೂಡ ಕೊಂಡುಕೊಳ್ಳಬೇಕಿದೆ. ಇಲ್ದಿದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೋ ಹಾಗೇ ಕೆಕೆಆರ್ ವಿರುದ್ಧದ ಮ್ಯಾಚ್​ನಲ್ಲಿ ಸೋಲ್ತಾ ಇರ್ಲಿಲ್ಲ. ಗೆದ್ದೇ ಬಿಟ್ರು ಅನ್ಕೊಂಡಿದ್ದ ಪಂದ್ಯವನ್ನ ಕೈ ಚೆಲ್ಲಿದ ಬಳಿಕ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳಿಗೆ ಅನ್ನಿಸಿದ್ದೂ ಇದೇ. ಬ್ಯಾಡ್​ಲಕ್. ಜೊತೆಗೆ ವಿರಾಟ್ ಕೊಹ್ಲಿಯವ್ರ ಔಟ್ ಕೂಡ ಸಾಕಷ್ಟು ವಿವಾದ ಹುಟ್ಟು ಹಾಕಿದೆ. ಹಾಗಾದ್ರೆ ಕೊಹ್ಲಿ ಔಟ್ ಕೊಟ್ಟಿದ್ದು ತಪ್ಪಾ..? ಲಾಸ್ಟ್ ಓವರ್​ನಲ್ಲಿ ನಡೆದ ಮ್ಯಾಜಿಕ್ ಏನು..? ಆರ್​ಸಿಬಿಗೆ ಲಕ್ ಇಲ್ವಾ..? ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ರಣರೋಚಕ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ರೋಚಕ ಸೋಲು – ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಭಾನುವಾರ ಕೋಲ್ಕತ್ತಾದ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಬೆಗಳೂರು ಮತ್ತು ಕೊಲ್ಕತ್ತಾ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೀತು. ಲಾಸ್ಟ್ ಬಾಲ್​ವರೆಗೂ ಎರಡೂ ಟೀಮ್​ಗಳ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ರು. ಯಾಕಂದ್ರೆ ಲಾಸ್ಟ್ ಬಾಲ್ ಯಾವ ತಂಡ ಪಂದ್ಯ ಗೆಲ್ಲುತ್ತೆ ಅನ್ನೋದನ್ನ ನಿರ್ಧರಿಸಿತ್ತು. ಏನ್​ ಮಾಡೋದು ಆರ್​ಸಿಬಿಗೆ ಲಕ್ ಇರ್ಲೇ ಇಲ್ಲ. ಲಾಸ್ಟ್ ಮೂಮೆಂಟ್​ವರೆಗೂ ಹೋರಾಡಿ ಒಂದೇ ಒಂದು ರನ್​ನಿಂದ ಸೋತಿದ್ದಾರೆ. ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ರು. ಕೆಕೆಆರ್​ ಪರ ಓಪನರ್​ ಆಗಿ ಫಿಲಿಪ್​ ಸಾಲ್ಟ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಮೂರು ಭರ್ಜರಿ ಸಿಕ್ಸರ್​​ಗಳು ಮತ್ತು ಬರೋಬ್ಬರಿ 7 ಫೋರ್​ಗಳನ್ನ ಸಿಡಿಸಿದ್ರು. ಕೇವಲ 14 ಬಾಲ್​ನಲ್ಲಿ 48 ರನ್​ ಸಿಡಿಸಿದ ಸಾಲ್ಟ್ ಅವರ ಸ್ಟ್ರೈಕ್​ ರೇಟ್​ ಬರೋಬ್ಬರಿ 342.85 ಇತ್ತು. ಸಾಲ್ಟ್​​ ಔಟ್​​ ಆದ ಬಳಿಕ ಕೆಕೆಆರ್​ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್​ಗೆ ಬಂದ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​​ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ್ರು.1 ಸಿಕ್ಸರ್​​, 7 ಫೋರ್​ ಸಮೇತ 50 ರನ್​ ಚಚ್ಚಿದ್ರು. ಈ ಸೀಸನ್​ನಲ್ಲೇ ಶ್ರೇಯಸ್​ ದಾಖಲಿಸಿದ ಮೊದಲ ಅರ್ಧಶತಕ ಇದಾಗಿತ್ತು. ಇನ್ನು, ಕೆಕೆಆರ್​ ಪರ ರಿಂಕು ಸಿಂಗ್​ 24, ರಸ್ಸೆಲ್​​ 27, ರಮಣ್​ ದೀಪ್​ 20, ವೆಂಕಟೇಶ್​ ಅಯ್ಯರ್​ 16 ರನ್​ ಗಳಿಸಿದ್ರು. ಕೆಕೆಆರ್​​ ತಂಡ 6 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ನಲ್ಲಿ 222 ರನ್​ ಗಳಿಸಿ ಆರ್​​ಸಿಬಿಗೆ ಬಿಗ್​ ಟಾರ್ಗೆಟ್​ ಕೊಟ್ಟಿತ್ತು.  ಕೆಕೆಆರ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿ ಪರ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​​ ಡುಪ್ಲೆಸಿಸ್​ ಜೋಡಿ ಓಪನಿಂಗ್​ ಮಾಡಿತ್ತು. ಅಗ್ರೆಸ್ಸಿವ್​ ಆಗಿಯೇ ಬ್ಯಾಟಿಂಗ್​ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್​ನಲ್ಲಿ 2 ಸಿಕ್ಸರ್​, 1 ಫೋರ್​ ಸಮೇತ 18 ರನ್​ ಚಚ್ಚಿದ್ರು. ಆದ್ರೆ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ವೇಗಿ ಹರ್ಷಿತ್ ರಾಣಾಗೆ ಕೊಹ್ಲಿ ಕ್ಯಾಚ್ ನೀಡಿದರು. ಇದಾದ ನಂತರ ಫೀಲ್ಡ್ ಅಂಪೈರ್ ವಿರಾಟ್ ಕೊಹ್ಲಿ ಔಟ್ ಎಂದು ಘೋಷಿಸಿದರು. ಫೀಲ್ಡ್ ಅಂಪೈರ್‌ನ ಈ ನಿರ್ಧಾರದಿಂದ ಸಿಟ್ಟಾದ ಕೊಹ್ಲಿ ಚೆಂಡಿನ ಎತ್ತರವು ತನ್ನ ಸೊಂಟದ ಮೇಲಿದ್ದ ಕಾರಣ ಈ ಚೆಂಡು ನೋ ಬಾಲ್ ಎಂದು ನೀಡುವಂತೆ ಒತ್ತಾಯಿಸಿದ್ರು. ಕೂಡಲೇ ಡಿಆರ್ ಎಸ್ ಮಾಡುವಂತೆ ಆಗ್ರಹಿಸಿದರು. ಆದರೆ, ಡಿಆರ್‌ಎಸ್ ಕೂಡ ಕೊಹ್ಲಿ ವಿರುದ್ಧ ಬಂದಿತ್ತು.. ಇದಾದ ಬಳಿಕ ಸಿಟ್ಟಿಗೆದ್ದ ಕೊಹ್ಲಿ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಡ್ರೆಸ್ಸಿಂಗ್​ ರೂಮ್​ಗೆ ಹೋಗುವಾಗ್ಲೂ ಕಾಲಲ್ಲಿ ಡಸ್ಟ್​ಬಿನ್​ಗೆ ಒದ್ದು ತಮ್ಮ ಸಿಟ್ಟನ್ನ ಹೊರ ಹಾಕಿದ್ರು. ಕೊಹ್ಲಿಯವ್ರ ಔಟ್ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಗೆ ಗ್ರಾಸವಾಗಿದೆ.. ಹರ್ಷಿತ್ ರಾಣಾ ಬೌಲ್ ಮಾಡಿದಾಗ ಕೊಹ್ಲಿ ಕ್ರೀಸ್‌ನಿಂದ ಹೊರಗುಳಿದಿದ್ದರು ಮತ್ತು ಅವರು ಕಾಲ್ಬೆರಳುಗಳ ಮೇಲೆ ನಿಂತಿದ್ದರು. ಚೆಂಡು ವಿರಾಟ್ ಸೊಂಟದ ಮೇಲೆ ಹೆಚ್ಚು ಕಾಣಿಸುತ್ತಿತ್ತು. ಅಂಪೈರ್‌ನ ನಿರ್ಧಾರ ನೋಡಿ ಕಾಮೆಂಟೇಟರ್‌ಗಳು ಕೂಡ ಅಚ್ಚರಿಗೊಂಡಿದ್ರು. ರಿವ್ಯೂ ವೇಳೆ ಚೆಂಡು ಕೊಹ್ಲಿ ಅವರ ಸೊಂಟದ ಮೇಲಿರುವುದು ಸ್ಪಷ್ಟವಾಗಿ ಕಂಡ್ರೂ ಕೂಡ ಔಟ್ ನೀಡಿದ್ರು.

ಕೊಹ್ಲಿ ಔಟಾದ ಬಳಿಕ ಕ್ರೀಸ್​ಗೆ ಬಂದ ವಿಲ್​ ಜಾಕ್ಸ್​​​ ಕೇವಲ 26 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಕೆಕೆಆರ್​ ಬೌಲರ್​ಗಳ ಬೆಂಡೆತ್ತಿದ್ರು. ಬರೋಬ್ಬರಿ 5 ಸಿಕ್ಸರ್​​, 4 ಫೋರ್​ ಸಮೇತ 53 ರನ್​ ಸಿಡಿಸಿದ್ರು. ಆರ್​ಸಿಬಿ ಪರ​ ರಜತ್​ ಪಾಟಿದಾರ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 21 ಬಾಲ್​ನಲ್ಲಿ ಬರೋಬ್ಬರಿ 5 ಸಿಕ್ಸರ್​​, 3 ಫೋರ್​ ಸಮೇತ 52 ರನ್​ ಬಾರಿಸಿದ್ರು. ಸುಯಶ್​ ಪ್ರಭುದೇಸಾಯ್​​ 24, ದಿನೇಶ್​ ಕಾರ್ತಿಕ್​ 25, ಕರ್ಣ್​ ಶರ್ಮಾ 20 ರನ್​ ಸಿಡಿಸಿದ್ರೂ ಆರ್​ಸಿಬಿ 1 ರನ್​ನಿಂದ  ಸೋಲಬೇಕಾಯ್ತು. ಆದ್ರಿಲ್ಲಿ ಆರ್​ಸಿಬಿಯ ಸೋಲಿಗೆ ಮುಖ್ಯ ಕಾರಣ ದಿನೇಶ್ ಕಾರ್ತಿಕ್ ಎಂಬ ವಾದಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ 19ನೇ ಓವರ್​ನಲ್ಲಿ ಡಿಕೆ ತೋರಿಸಿದ ಅತಿಯಾದ ಆತ್ಮವಿಶ್ವಾಸ. ಆರ್​ಸಿಬಿ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್​ಗಳು ಬೇಕಿತ್ತು. ಅತ್ತ ದಿನೇಶ್ ಕಾರ್ತಿಕ್ ಹಾಗೂ ಕರ್ಣ್ ಶರ್ಮಾ ಕ್ರೀಸ್​ನಲ್ಲಿದ್ದರು. ಹೀಗಾಗಿಯೇ ಆರ್​ಸಿಬಿ ತಂಡವು ಚೇಸ್ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ್ಯಂಡ್ರೆ ರಸೆಲ್ ಎಸೆತದ 19ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಯಾವುದೇ ರನ್ ಓಡಿರಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸಿದರು. ಆದ್ರೆ 4ನೇ ಎಸೆತದಲ್ಲಿ ರನ್ ಓಡಲು ನಿರಾಕರಿಸಿದರು. 5ನೇ ಎಸೆತದಲ್ಲಿ ಫೋರ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮೂರು ಬಾರಿ 1 ರನ್ ಓಡುವ ಅವಕಾಶವಿದ್ದರೂ ದಿನೇಶ್ ಕಾರ್ತಿಕ್ ಕರ್ಣ್ ಶರ್ಮಾಗೆ ಸ್ಟ್ರೈಕ್ ನೀಡಲು ನಿರಾಕರಿಸಿದ್ದರು. ಆರ್​ಸಿಬಿ ತಂಡದಲ್ಲಿ ಆಲ್​ರೌಂಡರ್ ಆಗಿಯೇ ಸ್ಥಾನ ಪಡೆದಿರುವ ಕರ್ಣ್ ಶರ್ಮಾ ಮೇಲೆ ದಿನೇಶ್ ಕಾರ್ತಿಕ್ ಕಿಂಚಿತ್ತೂ ವಿಶ್ವಾಸ ಹೊಂದಿರಲಿಲ್ಲ. ಅಲ್ಲದೆ ತಾನೇ ಫಿನಿಶಿಂಗ್ ಮಾಡುತ್ತೇನೆ ಎಂಬ ಅತಿಯಾದ ಆತ್ವವಿಶ್ವಾಸದಲ್ಲಿ ಡಿಕೆ ಬ್ಯಾಟ್ ಬೀಸಿದ್ದರು. ಪರಿಣಾಮ 19ನೇ ಓವರ್​ನಲ್ಲಿ ಆರ್​ಸಿಬಿ 3 ರನ್​ಗಳನ್ನು ಕೈಚೆಲ್ಲಿಕೊಂಡಿತು. ಇತ್ತ ಕೊನೆಯ ಓವರ್​ನಲ್ಲಿ 21 ರನ್​ಗಳ ಗುರಿ ಪಡೆದ ಕರ್ಣ್ ಶರ್ಮಾ ತಾನು ಯಾವುದೇ ಫಿನಿಶರ್​ಗೂ ಕಮ್ಮಿ ಇಲ್ಲ ಎಂಬಂತೆ ಮಿಚೆಲ್ ಸ್ಟಾರ್ಕ್​ಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಆದರೆ 5ನೇ ಎಸೆತದಲ್ಲಿ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಕರ್ಣ್ ಶರ್ಮಾ ಹೊರನಡೆಯಬೇಕಾಯಿತು. ಅಂತಿಮವಾಗಿ ಆರ್​ಸಿಬಿ ತಂಡ 1 ರನ್​ನಿಂದ ಸೋಲೊಪ್ಪಿಕೊಳ್ಳಬೇಕಾಯ್ತು. ಒಂದು ವೇಳೆ ಡಿಕೆ 19ನೇ ಓವರ್​ನಲ್ಲಿ 3 ಬಾರಿ ಸಿಕ್ಕ ಅವಕಾಶದಲ್ಲಿ ಕನಿಷ್ಠ 1 ರನ್​ ಓಡಿದ್ದರೂ ಈ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವು ದಕ್ಕುತ್ತಿತ್ತು. ಆದರೆ ದಿನೇಶ್ ಕಾರ್ತಿಕ್ ಅವರ ಅತಿಯಾದ ಆತ್ಮವಿಶ್ವಾಸವೇ ಆರ್​ಸಿಬಿ ಪಾಲಿಗೆ ಮುಳುವಾಯಿತು ಎಂಬ ಚರ್ಚೆಯೂ ಇದೆ.

ಸದ್ಯ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ಸತತ 6ನೇ ಸೋಲನ್ನ ಕಂಡಿದೆ. ಆಡಿರುವ 8 ಪಂದ್ಯದಲ್ಲಿ 1ರಲ್ಲಿ ಮಾತ್ರ ಗೆದ್ದು ಉಳಿದ 7ರಲ್ಲಿ ಸೋತಿದ್ದು, 2 ಅಂಕದೊಂದಿಗೆ -1.046ರ ನೆಟ್​​ರನ್​ರೇಟ್​​ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಮೂಲಕ ಆರ್​​ಸಿಬಿ ಪ್ಲೇಆಫ್​ ಕನಸು ಬಹುತೇಕ ಭಗ್ನವಾಗಿದೆ. ಹಾಗೇನಾದ್ರೂ ಆರ್​ಸಿಬಿ ಪ್ಲೇಆಫ್ ಪ್ರವೇಶ ಮಾಡ್ಬೇಕು ಅಂದ್ರೆ ಪವಾಡ ನಡೀಬೇಕು ಅಷ್ಟೇ.. ಒಟ್ನಲ್ಲಿ ಆರ್​ಸಿಬಿ ಗೆಲ್ಲೋ ಮ್ಯಾಚ್​ಗಳನ್ನ ಕೈಚೆಲ್ಲಿಕೊಂಡೇ ಬಂದಿದೆ. ಇಲ್ಲಿ ಪ್ರದರ್ಶನದ ಜೊತೆಗೆ ಅದೃಷ್ಟವೂ ಬೇಕಿತ್ತು ಅನ್ನೋದು ಪ್ರೂವ್ ಆಗಿದೆ.

Shwetha M

Leave a Reply

Your email address will not be published. Required fields are marked *