3 ಮ್ಯಾಚ್.. 5 ರನ್.. KOHLI ಫೇಲ್ –  IPL ಹೀರೋ ವಿಶ್ವಕಪ್ ZERO
ವಿರಾಟ್ ಫೇಲ್ಯೂರ್ ಎಫೆಕ್ಟ್ ಏನು?

3 ಮ್ಯಾಚ್.. 5 ರನ್.. KOHLI ಫೇಲ್ –  IPL ಹೀರೋ ವಿಶ್ವಕಪ್ ZEROವಿರಾಟ್ ಫೇಲ್ಯೂರ್ ಎಫೆಕ್ಟ್ ಏನು?

ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಡಿರೋ ಮೂರೂ ಪಂದ್ಯಗಳನ್ನ ಗೆದ್ದಿದೆ ಅನ್ನೋದೇನೋ ನಿಜ. ಬಟ್ ಈ ಯಾವ ಗೆಲುವೂ ಕೂಡ ಸುಲಭಕ್ಕೆ ದಕ್ಕಿಲ್ಲ. ಹಂಗಂತ ಎದುರಾಳಿ ಟೀಂ ತುಂಬಾ ಸ್ಟ್ರಾಂಗ್ ಇತ್ತು. ಸೋ ಸ್ಟ್ರಗಲ್ ಪಟ್ಟು ಗೆಲ್ಲಬೇಕಾಯ್ತು ಅಂತಾ ಹೇಳೋಕೂ ಆಗಲ್ಲ. ಯಾಕಂದ್ರೆ ಅದು ಚೇಸಿಂಗೇ ಇರ್ಲಿ, ಡಿಫೆಂಡಿಗೇ ಇರ್ಲಿ. ಕಡಿಮೆ ಸ್ಕೋರ್ನಲ್ಣೂ ಭಾರತ ತುಂಬಾನೇ ಪರದಾಡಿದೆ. ಅದಕ್ಕೆ ಮೇನ್ ರೀಸನ್ ಪಿಚ್. ಸ್ಲೋ ಪಿಚ್ನಲ್ಲಿ ಟೀಂ ಇಂಡಿಯಾದ ಘಟಾನುಘಟಿ ಬ್ಯಾಟರ್ಗಳೇ ಒದ್ದಾಡಿದ್ದಾರೆ. ಅದ್ರಲ್ಲೂ ಕ್ರಿಕೆಟ್ ಲೋಕದ ಕಿಂಗ್ ಅಂತಾ ಕರೆಸಿಕೊಳ್ಳೋ ವಿರಾಟ್ ಕೊಹ್ಲಿಯೂ ಫೇಲ್ಯೂರ್ ಆಗಿದ್ದಾರೆ. ವಿರಾಟ್ರ ಇದೇ ಪ್ರದರ್ಶನ ಈಗ ಟೀಂ ಇಂಡಿಯಾಗೆ ಟೆನ್ಷನ್ ತಂದಿಟ್ಟಿದೆ. ಅಷ್ಟಕ್ಕೂ ವಿಶ್ವಕಪ್ನಲ್ಲಿ ವಿರಾಟ್ಗೆ ಏನಾಯ್ತು? ಬ್ಯಾಟ್ ಸದ್ದು ಮಾಡ್ತಿಲ್ಲ ಯಾಕೆ? ಮೂರೂ ಪಂದ್ಯಗಳ ಕಳಪೆ ಪ್ರದರ್ಶನಕ್ಕೆ ಕಾರಣ ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಪವಿತ್ರ ಬಂಧಕ್ಕಾಗಿ ದಾರಿ ತಪ್ಪಿದ ಸಾರಥಿ – ದಚ್ಚು ಬಾಳಿಗೆ ಬಂದಿದ್ದೇಗೆ ಮಾಯಾಂಗನೆ?

ಐಪಿಎಲ್ನಲ್ಲಿ ಹೀರೋ ಆಗಿ ಮೆರೆದವರು ಕಿಂಗ್ ವಿರಾಟ್ ಕೊಹ್ಲಿ. ಆರೆಂಜ್ ಕ್ಯಾಪ್ ಧರಿಸಿ ಕ್ರೀಡಾಂಗಣದಲ್ಲಿ ಕೊನೇ ಪಂದ್ಯದವರೆಗೂ ರಾಜನಂತೆ ಬೀಗಿದವ್ರು. ಬಟ್ ಅದೇ ಐಪಿಎಲ್ ಹೀರೋ ಈಗ ವಿಶ್ವಕಪ್ನಲ್ಲಿ ಝೀರೋ ಆಗ್ತಿದ್ದಾರೆ. ಆಡಿದ ಮೂರೂ ಪಂದ್ಯಗಳಲ್ಲೂ ಒಂದಂಕಿ ದಾಟೋಕೂ ಆಗಿಲ್ಲ. ಅಷ್ಟೇ ಯಾಕೆ ಮೂರೂ ಮ್ಯಾಚ್ಗಳ ರನ್ಗಳನ್ನೆಲ್ಲಾ ಒಟ್ಟುಗೂಡಿಸಿದ್ರೂ ಒಂದು ಸಿಕ್ಸ್ಗೂ ಸಮ ಆಗಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ ವಿಶ್ವಕಪ್ನಲ್ಲಿ ಮಂಕಾಗಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಮಿಂಚಿದ್ದರಿಂದ ಟಿ20 ವಿಶ್ವಕಪ್ನಲ್ಲಿ ಕೊಹ್ಲಿಯನ್ನು ಓಪನರ್ ಆಗಿ ಕಣಕ್ಕಿಳಿಸಲಾಗಿತ್ತು. ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಈ ಲೆಕ್ಕಾಚಾರಗಳು ತಲೆಕೆಳಗಾಗಿದೆ. ಇದಕ್ಕೆ ಸಾಕ್ಷಿಯೇ ಮೊದಲ ಮೂರು ಪಂದ್ಯಗಳಲ್ಲಿ ಕೊಹ್ಲಿಯ ಪ್ರದರ್ಶನ. ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕೊಹ್ಲಿ ಈವರೆಗೆ ಎರಡಂಕಿ ಮೊತ್ತ ಕಲೆಹಾಕಿಲ್ಲ ಎಂಬುದೇ ಅಚ್ಚರಿ.

ಐಪಿಎಲ್ ಅಬ್ಬರ.. ವಿಶ್ವಕಪ್ ಫೇಲ್!

ಈ ಬಾರಿಯ ಐಪಿಎಲ್ನಲ್ಲಿ 15 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದ್ದ ವಿರಾಟ್ ಕೊಹ್ಲಿ 61.75 ಸರಾಸರಿಯಲ್ಲಿ ಒಟ್ಟು 741 ರನ್ ಕಲೆಹಾಕಿದ್ದರು. ಈ ವೇಳೆ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಒಂದು ಭರ್ಜರಿ ಶತಕ ಹಾಗೂ 5 ಅರ್ಧಶತಕಗಳು ಮೂಡಿಬಂದಿದ್ದವು. ಆದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೊಹ್ಲಿಯ ಬ್ಯಾಟ್ ಸದ್ದು ಮಾಡುತ್ತಿಲ್ಲ. ಐರ್ಲೆಂಡ್ ವಿರುದ್ಧ ಜಯಿಸಿ ಟೀಮ್ ಇಂಡಿಯಾ ಟೂರ್ನಮೆಂಟ್ನಲ್ಲಿ ಶುಭಾರಂಭ ಮಾಡಿತ್ತು ನಿಜ. ಆದ್ರೆ ಪಂದ್ಯದಲ್ಲಿ ಭಾರತ ಗೆದ್ರೂ ಕಿಂಗ್ ಕೊಹ್ಲಿ ಸೋತಿದ್ರು. ಸೂಪರ್ ಸ್ಟಾರ್ ಬ್ಯಾಟಿಂಗ್ ನೋಡಲೆಂದೇ ಸಾವಿರಾರು ಜನ ಮೈದಾನಕ್ಕೆ ನುಗ್ಗಿ ಬಂದಿದ್ರು. ಆದ್ರೆ ಅವರ ಆಸೆಗೆ ಕೊಹ್ಲಿ ತಣ್ಣೀರೆರೆಚಿದ್ರು. ಬಲಾಢ್ಯವಲ್ಲದ ಐರ್ಲೆಂಡ್ ವಿರುದ್ಧ 5 ಬಾಲ್ ಎದುರಿಸಿ ಬರೀ 1 ರನ್ಗೆ ಆಟ ನಿಲ್ಲಿಸಿದ್ರು. ಐರ್ಲೆಂಡ್ ವಿರುದ್ಧ ಮುಗ್ಗರಿಸಿದ್ದ ಕಿಂಗ್ ಕೊಹ್ಲಿ ಬದ್ಧವೈರಿ ಪಾಕ್ ವಿರುದ್ಧನಾದ್ರು ಅಬ್ಬರಿಸ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಯಾಕಂದ್ರೆ, ಪಾಕಿಸ್ತಾನ ಎದುರು ಔಟ್ ಸ್ಟ್ಯಾಂಡಿಂಗ್ ರೆಕಾರ್ಡ್ ಹೊಂದಿದ್ರು. ಆದ್ರೆ ಅಲ್ಲೂ ಕೂಡ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳನ್ನ ನಿರಾಸೆಗೊಳಿಸಿದ್ರು. ಇನ್ನು ಮೂರನೇ ಪಂದ್ಯದಲ್ಲಿ ಕ್ರಿಕೆಟ್ನ ಶಿಶು ಅಮೆರಿಕ ತಂಡದ ವಿರುದ್ಧ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿರುವುದು ಭಾರೀ ಆಘಾತ ನೀಡಿದೆ. ಏಕೆಂದರೆ ಈಗತಾನೆ ಕ್ರಿಕೆಟ್ ಕ್ಷೇತ್ರಕ್ಕೆ ಆಗಮಿಸಿರುವ ಅಮೆರಿಕ ತಂಡದ ವಿರುದ್ಧ ಕೊಹ್ಲಿ ಡಕೌಟ್ ಆಗಿದ್ದು ನಿರಾಸೆ ಭಾರೀ ಮೂಡಿಸಿದೆ. ಈ ಮೂರು ಪಂದ್ಯಗಳಲ್ಲಿ ಕೊಹ್ಲಿ ಎದುರಿಸಿದ್ದು ಕೇವಲ 9 ಎಸೆತಗಳನ್ನು ಮಾತ್ರ. ಹಾಗೇ ಗಳಿಸಿದ್ದು ಐದು ರನ್ಗಳನ್ನ ಅಷ್ಟೇ. ಅಂದರೆ ಇಲ್ಲಿ ವಿರಾಟ್ ಕೊಹ್ಲಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬುದೇ ಸತ್ಯ. ಹೀಗಾಗಿಯೇ ಪವರ್ಪ್ಲೇನಲ್ಲೇ ವಿಕೆಟ್ ಒಪ್ಪಿಸಿ ಹಿಂತಿರುಗುತ್ತಿದ್ದಾರೆ. ಅದರಲ್ಲೂ ಯುಎಸ್ಎ ಮತ್ತು ಐರ್ಲೆಂಡ್ನಂತಹ ತಂಡಗಳ ವಿರುದ್ಧ ಕೊಹ್ಲಿ ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

ನಾರ್ಮಲಿ ಬಿಗ್ ಟೂರ್ನಮೆಂಟ್ ಅಂತ ಬಂದ್ರೆ ವಿರಾಟ್ ಯಾವಾಗ್ಲೂ ಮುಂಚೂಣಿಯಲ್ಲಿದ್ದು, ಜೈಕಾರ ಹಾಕಿಸಿಕೊಳ್ತಿದ್ರು. ಆದ್ರೀಗ ತಲೆ ತಗ್ಗಿಸಿ ಪೆವಿಲಿಯನ್ನತ್ತ ಹೆಜ್ಜೆ ಹಾಕ್ತಾರೆ. ಕೊಹ್ಲಿ ಕೈ ಕೊಡ್ತಾ ಇರೋದು ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಗಿದೆ. ಸದ್ಯ ಭಾರತ ಮೂರು ಪಂದ್ಯಗಳನ್ನ ಗೆದ್ದು ಸೂಪರ್ 8 ಹಂತಕ್ಕೆ ಸೆಲೆಕ್ಟ್ ಆಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪಾಲಿಗೆ ಸೂಪರ್-8 ಪಂದ್ಯಗಳು ನಿರ್ಣಾಯಕ. ಈ ವೇಳೆಗೆ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ. ಇಲ್ಲಿ ಪ್ರತಿ ಪಂದ್ಯಗಳು ಮುಖ್ಯವಾಗಿರಲಿದ್ದು, ಅದರಲ್ಲೂ ಕೊಹ್ಲಿಯಂತಹ ಅನುಭವಿ ಆಟಗಾರನ ಪಾತ್ರ ನಿರ್ಣಾಯಕವಾಗಿರುತ್ತದೆ. ಹೀಗಾಗಿಯೇ ಕೊಹ್ಲಿಯ ಫಾರ್ಮ್ ಬಗ್ಗೆ ಟೀಮ್ ಇಂಡಿಯಾ ತಲೆಕೆಡಿಸಿಕೊಂಡಿದೆ. ಇಲ್ಲಿ ನ್ಯೂಯಾರ್ಕ್ ಪಿಚ್ ಬೌಲಿಂಗ್ಗೆ ಸಹಕಾರಿ ಎನ್ನುವುದಾದರೆ, ಅನುಭವಿ ಬ್ಯಾಟರ್ ಆಗಿರುವ ಕೊಹ್ಲಿ ಕನಿಷ್ಠ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನಾದರೂ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಆದರೆ ಕಿಂಗ್ ಕೊಹ್ಲಿ ಕಡೆಯಿಂದ ಅಂತಹ ಯಾವುದೇ ಪ್ರಯತ್ನ ಕೂಡ ಕಂಡು ಬರುತ್ತಿಲ್ಲ ಎಂಬುದೇ ಅಚ್ಚರಿ. ಹೀಗಾಗಿ ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಫಲರಾದರೆ, ಆರಂಭಿಕನ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅಲ್ಲದೆ ಈ ಹಿಂದಿನಂತೆ ಮತ್ತೆ ಮೂರನೇ ಕ್ರಮಾಂಕದಲ್ಲೇ ಆಡಬಹುದು. ಒಟ್ನಲ್ಲಿ ಕಿಂಗ್ ಕೊಹ್ಲಿ ವಿಶ್ವಕಪ್ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡ್ತಿಲ್ಲ. ಆರಂಭಿಕನಾಗಿ ಕಂಪ್ಲೀಟ್ ಫೇಲಾಗಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ರಮಾಂಕ ಚೇಂಜ್ ಮಾಡ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M