RO-KO ಇಲ್ಲದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ – ಆಂಗ್ಲರ ನಾಡಲ್ಲಿ ಗೆಲ್ಲೋದು ಕಷ್ಟನಾ?

RO-KO ಇಲ್ಲದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ – ಆಂಗ್ಲರ ನಾಡಲ್ಲಿ ಗೆಲ್ಲೋದು ಕಷ್ಟನಾ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಟೀಂ ಇಂಡಿಯಾ ಹೊಸ ಯುಗದ ಆರಂಭಕ್ಕೆ ಮುನ್ನುಡಿ ಬರೆಯಬೇಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಟ್ಟೊಟ್ಟಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರೋದು ಸಾಕಷ್ಟು ಸವಾಲುಗಳನ್ನೂ ಸೃಷ್ಟಿಸಿದೆ. ಶುಬ್​ಮನ್ ಗಿಲ್ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ಟನ್ಸಿ ವಹಿಸಿದ್ದು ಅನುಭವದ ಕೊರತೆ ಕಾಡಬಹುದು. ಇಂಗ್ಲೆಂಡ್ ಸರಣಿಯಲ್ಲಿರೋ ಭಾರತೀಯ ತಂಡದಲ್ಲಿ ಕೆಎಲ್ ರಾಹುಲ್ ಕೆಲವೇ ಕೆಲವು ಅನುಭವಿ ಆಟಗಾರರಲ್ಲಿ ಒಬ್ಬರು. ಹೀಗಾಗಿ ರಾಹುಲ್ ಮೇಲೆ ಒತ್ತಡವೂ ಇದ್ದೇ ಇದೆ.

ಇದನ್ನೂ ಓದಿ : RCB ಮಾರಾಟಕ್ಕಿಟ್ಟ ಮಾಲೀಕರು – BCCI ಹೊಸ ರೂಲ್ಸ್ ಕಂಟಕವಾಯ್ತಾ?

ಕೆಎಲ್ ರಾಹುಲ್ ಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಸಾಕಷ್ಟು ಎಕ್ಸ್​ಪೀರಿಯನ್ಸ್ ಇದೆ. ಅವ್ರಲ್ಲಿರೋ ಪೇಷನ್ಸ್​ನಿಂದಲೇ ಹೆಚ್ಚು ಹೊತ್ತು ಕ್ರಿಸ್​ನಲ್ಲಿದ್ದು ರನ್ಸ್ ಕಲೆ ಹಾಕ್ತಾರೆ. ಅದೂ ಅಲ್ದೇ ಇಂಗ್ಲೆಂಡ್‌ನಲ್ಲಿ ಸಾಕಷ್ಟು ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು ರನ್‌ಗಳನ್ನು ಸಹ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ಭಾರತದ ಎ ತಂಡವನ್ನು ಆಯ್ಕೆ ಮಾಡಿದಾಗ, ಕೆಎಲ್ ರಾಹುಲ್ ಅವರ ಹೆಸರು ಅದರಲ್ಲಿ ಇರಲಿಲ್ಲ. ಬಟ್ ರಾಹುಲ್ ಅವ್ರೇ ಸ್ವತಃ ಮುಂದೆ ಬಂದು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಆಡೋದಾಗಿ ಬಿಸಿಸಿಐಗೆ ತಿಳಿಸಿದ್ರು. ಸಿಕ್ಕ ಅವಕಾಶವನ್ನ ಚೆನ್ನಾಗೇ ಬಳಸಿಕೊಂಡು ಮಿಂಚಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕೆಎಲ್ ರಾಹುಲ್ ಅದ್ಭುತ ಇನ್ನಿಂಗ್ಸ್ ಆಡಿದ್ರು. 168 ಎಸೆತಗಳಲ್ಲಿ 116 ರನ್ ಗಳಿಸಿದ್ರು. ಹಾಗೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಾಹುಲ್ 64 ಎಸೆತಗಳಲ್ಲಿ 51 ರನ್ ಗಳಿಸಿದರು. ಸೋ ಇಂಗ್ಲೆಂಡ್ ಪಿಚ್​ಗಳ ಆಳ, ಅಗಲ ಗೊತ್ತಿರೋ ರಾಹುಲ್ ಎಕ್ಸ್​ಪೀರಿಯನ್ಸ್ ಇತರೆ ಆಟಗಾರರಿಗೆ ಮಾರ್ಗದರ್ಶನ ನೀಡ್ಬೇಕಾಗುತ್ತೆ.

ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಕೆಎಲ್. ರಾಹುಲ್ ಅವರ ರೆಕಾರ್ಡ್ಸ್ ಕೂಡ ಚೆನ್ನಾಗಿದೆ.  ಇಂಗ್ಲೆಂಡ್ ವಿರುದ್ಧ  13 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರೋ ರಾಹುಲ್ 955 ರನ್ ಗಳಿಸಿದ್ದಾರೆ. ಸರಾಸರಿ 39.79 ಆಗಿದ್ದು, ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳೂ ಸೇರಿವೆ. ರಾಹುಲ್ ಆಂಗ್ಲರ ನಾಡಲ್ಲಿ ಇದುವರೆಗೆ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು 614 ರನ್ ಗಳಿಸಿದ್ದಾರೆ. ಅವರ ಸರಾಸರಿ 34.11. ರಾಹುಲ್ ಇಲ್ಲಿಯವರೆಗೆ ಇಂಗ್ಲೆಂಡ್‌ನಲ್ಲಿ ಎರಡು ಶತಕಗಳು ಮತ್ತು ಒಂದು ಅರ್ಧಶತಕವನ್ನು ಗಳಿಸಿದ್ದಾರೆ. ಸದ್ಯ ರಾಹುಲ್ ಫಾರ್ಮ್ ಗಮನಿಸಿದರೆ ಜೂನ್ 20ರಿಂದ ಶುರುವಾಗೋ ಅಧಿಕೃತ ಸರಣಿಯಲ್ಲೂ ಅಬ್ಬರಿಸೋದು ಪಕ್ಕಾ ಇದೆ.

ಅದೂ ಅಲ್ದೇ ಕೆಎಲ್ ರಾಹುಲ್ ಅಂತಾ ಬಂದಾಗ ಯಾವ ಸ್ಲಾಟ್​ನಲ್ಲಿ ಕಣಕ್ಕೀಳಿತಾರೆ ಅನ್ನೋ ಗೊಂದಲವೂ ಇದ್ದೇ ಇರುತ್ತೆ. ಬಟ್ ಈ ಸಲ ಆ ಕನ್ಫ್ಯೂಷನ್ಸ್ ಇರಲ್ಲ ಅನ್ಸುತ್ತೆ. ಯಾಕಂದ್ರೆ ರೋಹಿತ್‌ ಶರ್ಮಾ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಕೆಎಲ್ ರಾಹುಲ್ ತುಂಬಲು ಸಿದ್ಧರಾಗಿದ್ದಾರೆ. ಈಗಾಗಲೇ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಒಂದು ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಯಶಸ್ಸು ಕಂಡಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್‌ ಸರಣಿಯಲ್ಲೂ ಓಪನರ್ ಆಗಿಯೇ ಇನ್ನಿಂಗ್ಸ್ ಆರಂಭಿಸೋ ನಿರೀಕ್ಷೆ ಇದೆ.

ಇಂಗ್ಲೆಂಡ್‌ ನೆಲದಲ್ಲಿ ಆಡುವುದು ಎಂದರೆ ಟೀಂ ಇಂಡಿಯಾಗೆ ಅದು ಸವಾಲೇ ಸರಿ. ಈ ಪಿಚ್‌ಗಳಲ್ಲಿ ಬೌನ್ಸ್‌ ಇರುತ್ತದೆ. ಬೌನ್ಸ್‌ ಹಾಗೂ ವೇಗದ ಬೌಲರ್‌ಗಳ ಎಸೆತಗಳನ್ನ ಎದುರಿಸೋದು ಅಷ್ಟು ಸುಲಭ ಅಲ್ಲ. ಇದೇ ಕಾರಣಕ್ಕೆ ಭಾರತ ತಂಡ 2007ರ ಬಳಿಕ ಇಂಗ್ಲೆಂಡ್​​ನಲ್ಲಿ ಟೆಸ್ಟ್ ಸರಣಿ ಗೆದ್ದೇ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಈ ಸರಣಿಯಲ್ಲಿ ಹೇಗೆ ಆಡುತ್ತದೆ ಎಂಬುದರ ಮೇಲೆ ಎಲ್ಲರ ಕಣ್ಣಿದೆ. ಅನುಭವಿಗಳ ಆಬ್ಸೆನ್ಸ್​ನಲ್ಲಿ ಕೆಎಲ್ ರಾಹುಲ್ ಆಟವೇ ಇಂಪಾರ್ಟೆಂಟ್ ಆಗಲಿದೆ.

Shantha Kumari

Leave a Reply

Your email address will not be published. Required fields are marked *