ವಿಶ್ವಕಪ್​ನಲ್ಲಿ KINGಗೆ ಅಹಂ – ಸತ್ಯ ಒಪ್ಪಿಕೊಂಡ ವಿರಾಟ್ ಹೇಳಿದ್ದೇನು?
ವೈರಿಗಳಿಗೆ ಏಟು.. ಹೊಸಬರಿಗೆ ಪಾಠನಾ?

ವಿಶ್ವಕಪ್​ನಲ್ಲಿ KINGಗೆ ಅಹಂ – ಸತ್ಯ ಒಪ್ಪಿಕೊಂಡ ವಿರಾಟ್ ಹೇಳಿದ್ದೇನು?ವೈರಿಗಳಿಗೆ ಏಟು.. ಹೊಸಬರಿಗೆ ಪಾಠನಾ?

ಟೀಮ್ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ರನ್ ಹೊಡೆದ್ರೆ ಓಕೆ.. ಒಂದು ವೇಳೆ ಬೇಗ ಔಟಾದ್ರೆ ಮುಗೀತ್ ಕಥೆ. ಎಂಥೆಂಥಾ ಟೀಕೆಗಳು, ಅದೆಷ್ಟು ಅವಮಾನಗಳು. ಕೊಹ್ಲಿಗೆ ಧಿಮಾಕು, ವಿರಾಟ್‌ಗೆ ಅಹಂಕಾರ ತಲೆಗೇರಿದೆ. ಕೊಹ್ಲಿ ಫಾರ್ಮ್ ಕಳೆದುಕೊಂಡ್ರು.. ಸ್ವಲ್ಪ ತಲೆಯಿಂದ ಸ್ಟಾಂಡರ್ಡ್ ಕಮ್ಮಿ ಮಾಡ್ಕೊಂಡ್ರೆ ಒಳ್ಳೇದು, ಹೀಗೆ ಒಂದಾ ಎರಡಾ.. ನಿಮ್ಗೆ ಗೊತ್ತಾ ಸ್ನೇಹಿತರೇ, ಯಾರು ಕೊಹ್ಲಿಗೆ ಅಹಂ ಅಂದಿದ್ರೋ, ಅದೇ ಸತ್ಯ. ಹೌದಪ್ಪಾ, ನಂಗೆ ಅಹಂ ಇದೆ ಅನ್ನೋದನ್ನ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಯೇ ಸ್ವತಃ ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಬಾಯಿಗೆ ಬಂದಂಗೆ, ಕೊಹ್ಲಿ ಫಾರ್ಮ್‌ ಬಗ್ಗೆ ನಾನಾ ಟೀಕೆ ಮಾಡ್ತಿದ್ದವ್ರಿಗೆ ಕೊಹ್ಲಿ ಮಾತು ತಲೆ ಮೇಲೆ ರಪಕ್ ಅಂತಾ ಹೊಡೆದ ಹಾಗಾಗಿದೆ. ಹಾಗಾದ್ರೆ, ಕೊಹ್ಲಿ ಹೇಳಿದ್ದೇನು, ಸುಮ್ ಸುಮ್ನೆ ಕೊಹ್ಲಿ ಕಾಲೆಳೆದು ಕೆಣಕಿದವ್ರ ಸ್ಥಿತಿ ಏನಾಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಸೈಡ್​ಲೈನ್ ಸೀನಿಯರ್ಸ್ ನಿವೃತ್ತಿ ರೇಸ್ -KO-RO, ಜಡ್ಡು ಬಳಿಕ ಯಾರು?

ಕ್ರಿಕೆಟ್ ಅನ್ನೋದು ಭಾವನೆಗಳ ಜೊತೆ ಆಟಗಾರರ ಬಿಗ್ ಜರ್ನಿ. ಇಲ್ಲಿ ಆಟ ಇತ್ತದೆ. ಫ್ಯಾನ್ಸ್ ಫೀಲಿಂಗ್ಸ್ ಇರುತ್ತದೆ. ಜೊತೆಗೆ ಟೀಕೆ, ಅವಮಾನ, ಮೆಂಟಲ್ ಪ್ರೆಷರ್ ಕೂಡಾ ಸವಾಲಾಗಿರುತ್ತದೆ. ಇಂಥಾ ಅದೆಷ್ಟೋ ಸವಾಲುಗಳಿಗೆ ಎದೆಯೊಡ್ಡಿ ನಿಂತವರು ರನ್ ಮೆಷಿನ್ ಕಿಂಗ್ ಕೊಹ್ಲಿ. ರನ್ ಮಳೆ ಸುರಿಸಿದಾಗ ಮೆಚ್ಚಿಕೊಂಡು ಅಟ್ಟಕ್ಕೇರಿಸೋ ಕ್ರಿಕೆಟ್ ದಿಗ್ಗಜರು, ಫ್ಯಾನ್ಸ್, ವಿರಾಟ್ ಬೇಗ ಔಟಾದ್ರೆ ಮಾಡೋ ಟೀಕೆ ಒಂದಾ ಎರಡಾ. ಆದ್ರೆ, ಕೊಹ್ಲಿ ರೇಂಜೇ ಬೇರೇ ಬಿಡಿ. ತನ್ನ ಮೇಲೆ ಬಂದಿರೋ ಅಪವಾದಗಳಿಗೆ, ತನ್ನ ಮೇಲಾಗುತ್ತಿರೋ ನಿರಂತರ ಟೀಕೆಗಳಿಗೆ ಅದೆಷ್ಟೋ ಬಾರಿ ಬ್ಯಾಟಿಂಗ್‌ನಿಂದಲೇ ಉತ್ತರ ಕೊಟ್ಟು ಆಡಿಕೊಂಡವರು ಮುಟ್ಟಿನೋಡಿಕೊಳ್ಳುವಂತೆ ಮಾಡ್ತಿದ್ರು. ಅದೇನೇ ಆದ್ರೂ, ಕೊಹ್ಲಿಗೆ ಸಿಕ್ಕಾಪಟ್ಟೆ ಅಹಂಕಾರ, ಹೆಡ್ ವೇಯ್ಟ್ ಕಡಿಮೆ ಮಾಡ್ಕೊಂಡ್ರೆ ಅವ್ರಿಗೆ ಒಳ್ಳೇದು ಅನ್ನೋ ಮಾತು ಅದೆಷ್ಟು ಬಾರಿ ಕೇಳಿಬಂದಿತ್ತು. ಆದ್ರೆ, ಇದಕ್ಕೂ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಕೊಟ್ಟ ಆನ್ಸರ್ ಇದೆಯಲ್ಲಾ, ಭರ್ಜರಿ.. ಹೌದು ಸ್ನೇಹಿತರೇ, ಕಿಂಗ್ ಕೊಹ್ಲಿ ತನ್ನ ಬಗ್ಗೆ ಪಾಸಿಟಿವ್ ವಿಚಾರವೇ ಇರಲಿ, ನೆಗೆಟಿವ್ ವಿಚಾರವೇ ಇರಲಿ ಬಿಂದಾಸ್ ಆಗಿಯೇ ಶೇರ್ ಮಾಡಿಕೊಳ್ತಾರೆ. ಇದೀಗ ತನ್ನ ಬಗ್ಗೆ ಯಾರು ಏನೇ ಹೇಳಿದ್ರೂ ಕೇರ್ ಮಾಡದ ಕಿಂಗ್ ಕೊಹ್ಲಿ, ತನ್ನ ಬಗ್ಗೆಯೇ ಶಾಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಾಣಲು ಕಾರಣ ಏನೆಂಬುದನ್ನು ಅವರೇ ತಿಳಿಸಿದ್ದಾರೆ. ಕೊಹ್ಲಿ ಈ ಮಾತು ಕೇಳಿ ಫ್ಯಾನ್ಸ್ ಗೆ ಶಾಕ್ ಆಗಿದ್ಯೋ ಇಲ್ವೋ. ಆದ್ರೆ ಕೊಹ್ಲಿ ಹಾಗೇ, ಕೊಹ್ಲಿ ಹೀಗೆ ಅಂದವ್ರು ಮಾತ್ರ ಶಾಕ್ ಆಗಿದ್ದಾರೆ. ಫೈನಲ್​ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ನನ್ನ ​ಅಹಂಕಾರವೇ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈ ಟೂರ್ನಿಯಿಂದ ಜೀವನದಲ್ಲಿ ಹಲವು ಪಾಠ ಕಲಿತಿದ್ದೇನೆ. ನನ್ನ ಅಹಂ ಅನ್ನು ಬದಿಗೆ ಇಟ್ಟು ಹೇಳುವುದಾದರೆ, ನಾನೇ ಎಲ್ಲ, ನಾನೇ ಶ್ರೇಷ್ಠ ಎನ್ನುವ ಅಹಂ ಬಿಡಬೇಕು. ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ. ಒಂದು ಕ್ಷಣದಲ್ಲಿ ಎದುರಾದ ಪರಿಸ್ಥಿತಿಗೆ ಗೌರವಿಸಿ, ತಲೆಬಾಗಲೇ ಬೇಕು. ಇದನ್ನು ಬಿಟ್ಟು ಅಹಂ ತೋರಿದರೆ ದೇವರು ಕೂಡ ಮೆಚ್ಚುವುದಿಲ್ಲ. ನನ್ನ ವಿಚಾರದಲ್ಲೂ ಕೂಡ ಅದೇ ಆಗಿದೆ ಎಂದು ಕೊಹ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಅಹಂಕಾರ ಬಿಟ್ಟು ಆಡಬೇಕು ಅಂತಾ ಕ್ರಿಕೆಟ್ ದಿಗ್ಗಜರು ಅದೆಷ್ಟೋ ಬಾರಿ ಸಲಹೆ ನೀಡಿದ್ದರು. ಆದ್ರೆ, ಸದಾ ದಿಗ್ಗಜ ಕ್ರಿಕೆಟರ್ಸ್‌ಗೆ ರೆಸ್ಪೆಕ್ಟ್ ಕೊಡೋ ಕೊಹ್ಲಿ ಈ ಮಾತನ್ನು ಸಹಜವಾಗಿಯೇ ಸ್ವೀಕರಿಸಿದ್ದರು. ಜೊತೆಗೆ ತಾನು ಅಹಂಕಾರದಿಂದ ಆಡಿಯೇ ರನ್ ಗಳಿಸುತ್ತೇನೆ ಅನ್ನೋದನ್ನ ಅದೆಷ್ಟೋ ಸಲ ಪ್ರೂವ್ ಮಾಡಿ ತೋರಿಸಿದ್ದರು. ಆದ್ರೆ, ಇತ್ತೀಚೆಗೆ ಕೊಹ್ಲಿ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಮಾಡಿರೋದು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು. ಇವರ ಮಾತು ಪ್ಲಸ್ಸೋ ಮೈನಸ್ಸೋ ಕೊಹ್ಲಿ ಫ್ಯಾನ್ಸ್ ಮಾತ್ರ ಸಿಕ್ಕಾಪಟ್ಟೆ ಸಿಟ್ಟಾಗಿದ್ದರು. ಅದ್ರಲ್ಲೂ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಆಟಗಾರ ಅಂಬಾಟಿ ರಾಯುಡು, ವಿರಾಟ್ ಕೊಹ್ಲಿ ಒಬ್ಬ ಅಹಂಕಾರಿ ಬ್ಯಾಟರ್ ಎಂಬ ಹೇಳಿಕೆ ನೀಡಿದ್ದರು. ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್​ ಕಮ್ಮಿ ಮಾಡುಕೊಳ್ಳುವುದು ಸೂಕ್ತ ಎಂದಿದ್ದರು. ರಾಯುಡು ಹೇಳಿದ್ದಕ್ಕೂ, ಅಮೇರಿಕಾ ನೆಲದಲ್ಲಿ ಕೊಹ್ಲಿ ರನ್ ಗಳಿಸಲು ಪರದಾಡಿದ್ದಕ್ಕೂ ಸರಿ ಹೋಗಿತ್ತು. ಇದೀಗ ಕೊಹ್ಲಿಯೇ ತಾನೊಬ್ಬ ಅಹಂಕಾರಿ ಕ್ರಿಕೆಟರ್ ಅಂತಾ ಹೇಳೋ ಮೂಲಕ ಶಾಕ್ ಕೊಟ್ಟಿದ್ದಾರೆ. ನಾನೇ ಎಲ್ಲಾ, ನನ್ನಿಂದಲೇ ರನ್ ಹೊಡೆಯೋಕೆ ಸಾಧ್ಯ ಅಂತಾ ನಾನೇ ಹೆಮ್ಮೆಪಟ್ಟುಕೊಂಡರೆ ಏನೂ ಮಾಡಲು ಸಾಧ್ಯವಿಲ್ಲ. ನಾನು ವಿಶ್ವಕಪ್‌ ಟೂರ್ನಿಗೂ ಮೊದಲು ಉತ್ತಮ ಪ್ರದರ್ಶನ ನೀಡಿದ್ದೆ. ಅದೇ ಪ್ರದರ್ಶನ ಟಿ20 ವಿಶ್ವಕಪ್‌ನಲ್ಲಿ ತೋರಿಸ್ತೀನಿ ಅನ್ನೋ ಅಹಂಕಾರವಿತ್ತು. ನಾನು ಏನೋ ಸಾಧನೆ ಮಾಡ್ತೀನಿ ಅಂತಾ ನಂಬಿದ್ದೆ. ವಿಶ್ವಕಪ್ ಟೂರ್ನಿಯಲ್ಲಿ ಬಾಲ್ ಹೆಚ್ಚು ಸ್ವಿಂಗ್ ಆಯ್ತು. ಈ ವಿಶ್ವಕಪ್ ನನ್ನ ಬದುಕಿನಲ್ಲಿ ಶ್ರೇಷ್ಠ ಪಾಠ ಕಲಿಸಿದೆ. ನಾವು ಯಾವುದೇ ಅಚ್ಚರಿಗಳನ್ನು ಮಾಡಬಲ್ಲೆ ಅಂದುಕೊಂಡಲ್ಲಿ ನಾನು ಏನೇನೂ ಅಲ್ಲ, ಒಂದು ಕ್ಷಣದಲ್ಲಿ ಎದುರಾದ ಪರಿಸ್ಥಿತಿಯನ್ನ ಗೌರವಿಸಿ, ತಲೆಬಾಗಲೇಬೇಕು. ನಿನ್ನಷ್ಟಕ್ಕೆ ನೀನು ಹೆಮ್ಮೆ ಪಟ್ಟುಕೊಂಡರೆ ದೇವರು ಮೆಚ್ಚುವುದಿಲ್ಲ ಅಂತಾ ಹೇಳೋ ಮೂಲಕ ತನ್ನ ವೈಫಲ್ಯಕ್ಕೆ ತಾನೇ ಉತ್ತರ ಕಂಡುಕೊಂಡಿದ್ದಾರೆ ಕೊಹ್ಲಿ. ಈ ಮಾತು ಕೊಹ್ಲಿ ಆಡಿದ್ದಕ್ಕೂ ಕಾರಣವಿದೆ. ಟಿ20 ವಿಶ್ವಕಪ್ ಟೂರ್ನಿ ಮುಗಿದ ಮೇಲೆ ವಿರಾಟ್, ನಿವೃತ್ತಿ ಘೋಷಿಸಿದ್ದರು. ನಂತರ ತನ್ನ ಅನುಭವವನ್ನು ಹಂಚಿಕೊಂಡರು. ಇದು ತನ್ನಂತೆ ಮುಂದೆ ಬರುವ ಕ್ರಿಕೆಟರ್ಸ್‌ಗೆ ಕೊಟ್ಟ ಸಂದೇಶವೂ ಹೌದು ಎಂದು ಕ್ರಿಕೆಟ್ ದಿಗ್ಗಜರು ವಿಶ್ಲೇಷಣೆ ಮಾಡ್ತಿದ್ದಾರೆ. ತನ್ನಂತೆ ಅಹಂ ನಂಬಿ ಬ್ಯಾಟ್ ಎತ್ತಬೇಡಿ ಅಂತಾ ಕೊಹ್ಲಿ ಸಲಹೆ ನೀಡಿದ್ದರು ಅನ್ನೋದೇ ಈ ಮಾತಿನ ಸಾರಾಂಶ ಎನ್ನಲಾಗ್ತಿದೆ. ಅದೇನೇ ಇರಲಿ, ಈ ರೀತಿ ತನ್ನನ್ನ ತಾನೇ ವಿಮರ್ಶೆ ಮಾಡಿಕೊಳ್ಳಲು ಕೊಹ್ಲಿ ಅಂಥಾ ಗ್ರೇಟ್ ಕ್ರಿಕೆಟರ್‌ಗೆ ಮಾತ್ರ ಸಾಧ್ಯ. ತನ್ನ ಸಾಧನೆ ಜೊತೆಗೆ ತನ್ನ ನೆಗೆಟಿವ್ ಬಗ್ಗೆ ಮಾತಾಡಲೂ ಕೂಡಾ ಎದೆಗಾರಿಕೆ ಇರಬೇಕು. ಅದು ಇರೋದು ಒನ್ ಆಂಡ್ ಓನ್ಲಿ ಕೊಹ್ಲಿಗೆ ಮಾತ್ರ.

Shwetha M

Leave a Reply

Your email address will not be published. Required fields are marked *