ರನ್‌ ಮಷೀನ್ KING, 800 ಬೌಂಡರಿ.. ಸಿಕ್ಸರ್‌ ಸುರಿಮಳೆ! – ಕೊಹ್ಲಿ NEXT ಟಾರ್ಗೆಟ್‌ ಏನು?

ರನ್‌ ಮಷೀನ್ KING,  800 ಬೌಂಡರಿ.. ಸಿಕ್ಸರ್‌ ಸುರಿಮಳೆ! – ಕೊಹ್ಲಿ NEXT ಟಾರ್ಗೆಟ್‌ ಏನು?

ಟೀಂ ಇಂಡಿಯಾ ಅಷ್ಟೇ ಅಲ್ಲದೆ ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ. ಕ್ರಿಕೆಟ್ ಕರಿಯರ್​​ನಲ್ಲಿ ದಾಖಲೆಗಳನ್ನೇ ಮೆಟ್ಟಿಲು ಮಾಡ್ಕೊಂಡು ಬೆಳೆದಿರೋ ವಿರಾಟ್ ಐಪಿಎಲ್‌ನಲ್ಲಿ ರೆಕಾರ್ಡ್‌ ಮೇಲೆ ರೆಕಾರ್ಡ್ ಬರೆಯುತ್ತಿದ್ದಾರೆ. ಕ್ರಿಕೆಟ್‌ಗೆ ನಾನೇ ಕಿಂಗ್ ಅಂತ ತೋರಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈಯುತ್ತಿರೋ ಕಿಂಗ್ ಈಗ ಮತ್ತಷ್ಟು ರೆಕಾರ್ಡ್ ಬ್ರೇಕ್ ಮಾಡೋಕೆ ಕಾಯುತ್ತಿದ್ದಾರೆ .

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್‌ ಶಾಕ್!‌ – ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ!

ಕಳೆದ ಸೀಸನ್​ನಲ್ಲಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿರೋ ಆರ್​ಸಿಬಿ ಫ್ರಾಂಚೈಸಿ ಈ ಸಲ ಮತ್ತೆ ಚಾಂಪಿಯನ್ ಆಗೋ  ಫೇವರೆಟ್ ಟೀಂ ಆಗಿದೆ. ಯಾಕಂದ್ರೆ ಈ ಸಲನೂ ಆ ಮಟ್ಟಿಗೆ ನಮ್ಮ ಬೆಂಗಳೂರು ಹುಡುಗರು ಆಡುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಫ್ರಾಂಚೈಸಿಯ ಹಾರ್ಟ್​ಬೀಟ್ ವಿರಾಟ್ ಕೊಹ್ಲಿ ಆರ್‌ಸಬಿಯಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ತನ್ನ ಬೆಂಕಿ ಆಟದ ಮೂಲಕ ಸಾಕಷ್ಟು ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿದ್ದು, ತನ್ನ ಮುಂದೆ ದೊಡ್ಡ ದೊಡ್ಡ ಟಾರ್ಗೆಟ್‌ಗಳನ್ನ ಇಟ್ಟುಕೊಂಡಿದ್ದಾರೆ..

ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಕಿಂಗ್ ಕೊಹ್ಲಿ

ನಮ್ಮ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ GT ವಿರುದ್ಧದ ಪಂದ್ಯದಲ್ಲಿ ಆಫ್ ಸೆಂಚುರಿ ಹೊಡೆಯೋ ಮೂಲಕ  ಭಾರತದಲ್ಲಿ ತಮ್ಮ 10,000ನೇ ಟಿ20 ರನ್ ಗಳಿಸಿದರು. ಈ ಪಂದ್ಯಕ್ಕೂ ಮುನ್ನ ಈ ಮೈಲುಗಲ್ಲು ತಲುಪಲು ಅವರಿಗೆ 49 ರನ್‌ಗಳು ಬೇಕಿತ್ತು. ಇದೀಗ 81 ರನ್​ಗಳಿಸಿದ ವಿರಾಟ್ ಕೊಹ್ಲಿ ಒಂದೇ ದೇಶದಲ್ಲಿ 10 ಸಾವಿರ ಟಿ20 ರನ್​ಗಳ ಮೈಲುಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ ಎಂದು ದಾಖಲೆಗೆ ಸೇರಿದ್ದಾರೆ. ಕೊಹ್ಲಿಯ ಈ 10,000 ರನ್​ಗಳ ವಿಭಜಿಸಿದರೆ ಐಪಿಪಿಎಲ್​ನಿಂದಲೇ ಹೆಚ್ಚು ರನ್ ಬಂದಿದೆ. ಆರ್‌ಸಿಬಿ ಪರ ಕೊಹ್ಲಿ 230 ಪಂದ್ಯಗಳನ್ನಾಡಿದ್ದು, 7,933 ರನ್​ಗಳಿಸಿದ್ದಾರೆ. ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ 311 ರನ್​ಗಳಿಸಿದ್ದಾರೆ. ಈ ಅದ್ಭುತ ಇನ್ನಿಂಗ್ಸ್ ಮೂಲಕ ಕೊಹ್ಲಿ ಇನ್ನೂ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಐಪಿಎಲ್‌ನಲ್ಲಿ 800 ಫೋರ್ ಹೊಡೆದ ವಿರಾಟ್ 

GT ವಿರುದ್ಧದ ಪಂದ್ಯದಲ್ಲಿ ಇನ್ನುಂದು ದಾಖಲೆ ಅಂದ್ರೆ ಫೋರ್‌ಗಳ ದಾಖಲೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 800ನೇ ಫೋರ್ ಹೊಡೆದಿದ್ದು, ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.GT ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಐಪಿಎಲ್‌ ಇತಿಹಾಸದಲ್ಲಿ 799 ಬೌಂಡರಿಗಳನ್ನು ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಪಂದ್ಯದಲ್ಲಿ ವಿರಾಟ್‌ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ ಎರಡು ಬೌಂಡರಿ ಬಾರಿಸುತ್ತಲೇ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ 800 ಬೌಂಡರಿ ಬಾರಿಸಿದ ಮೊದಲು ಬ್ಯಾಟರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

300 ಸಿಕ್ಸರ್‌ಗಳನ್ನು ಸಿಡಿಸಿದ KING

ಇನ್ನು ಕೊಹ್ಲಿ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿಗೆ 300 ಸಿಕ್ಸರ್‌ ಪೂರ್ಣಗೊಳಿಸಲು ಒಂದು ಸಿಕ್ಸರ್‌ನ ಅಗತ್ಯವಿತ್ತು. ಗುಜರಾತ್‌ ವಿರುದ್ಧ ಇವರು 4 ಸಿಕ್ಸರ್‌ ಬಾರಿಸಿ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ, ಕೊಹ್ಲಿ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಒಳಗೊಂಡ ವಿಶೇಷ ಕ್ಲಬ್‌ಗೆ ಸೇರಿದರು.

ಕೊಹ್ಲಿ NEXT ಟಾರ್ಗೆಟ್‌ ಏನು?

ಐಪಿಎಲ್‌ನಲ್ಲಿ ಕೊಹ್ಲಿ ಈಗ 274 ಪಂದ್ಯಗಳಿಂದ 8989 ರನ್‌ಗಳನ್ನು ಗಳಿಸಿದ್ದಾರೆ. ಇನ್ನು 11 ರನ್‌ಗಳು ಗಳಿಸಿದರೆ ಅವರು ಐಪಿಎಲ್‌ನಲ್ಲಿ 9000 ರನ್ ಗಳಿಸಿದ ಮೊದಲ ಆಟಗಾರರಾಗುತ್ತಾರೆ. ಐಪಿಎಲ್‌ ಇತಿಹಾಸದಲ್ಲೇ 7500 ರನ್‌ಗಳನ್ನು ಗಳಿಸಿದ ಇನ್ನೊಬ್ಬ ಆಟಗಾರರೂ ಇಲ್ಲ .ಒಂದೇ ತಂಡದ ಪರ ಐಪಿಎಲ್‌ನಲ್ಲಿ 9000 ರನ್‌ಗಳಿಸಿದ ಮೊದಲ ಆಟಗಾರ ಆಗುತ್ತಾರೆ. ಅಷ್ಟೇ ಅಲ್ಲ 26 ಐಪಿಎಲ್ ಪಂದ್ಯ ಆಡಿದ್ರೆ 300ಕ್ಕೂ ಹೆಚ್ಚು ಐಪಿಎಲ್‌ ಪಂದ್ಯ ಆಡಿದ ಆಟಗಾರ ಆಗ್ತಾರೆ. ಹಾಗೇ ODIನಲ್ಲಿ ಈಗಾಗಲೇ 14797 ರನ್‌ಗಳಿಸಿದ್ದು, ಇನ್ನೂ 203 ರನ್‌ಗಳಿಸಿದ್ರೆ  ODIನಲ್ಲಿ 15 ಸಾವಿರ ರನ್‌ಗಳಿಸಿದ ಆಟಗಾರ ಆಗ್ತಾರೆ. ಹಾಗೇ ಮತ್ತಷ್ಟು ಸಿಕ್ಸ್‌, ಫೋರ್‌ಗಳನ್ನ ಸಿಡಿಸೋಕೆ ವಿರಾಟ್ ಕಾಯುತ್ತಿದ್ದಾರೆೆ.  ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮೂಲಕ ತಿಳಿಸಿ ನಮಸ್ಕಾರ.

 

Kishor KV