RCB ಕಿಂಗ್‌ ದುಡ್ಡಿನ ಕೋಟೆ.. ಕೊಹ್ಲಿ Income ಕ್ರಿಕೆಟ್‌ನಿಂದ ಅಲ್ವಾ? – ವಿರಾಟ್‌ ಸಂಪತ್ತಿನ ರಹಸ್ಯ ರಿವೀಲ್‌

RCB ಕಿಂಗ್‌ ದುಡ್ಡಿನ ಕೋಟೆ.. ಕೊಹ್ಲಿ Income ಕ್ರಿಕೆಟ್‌ನಿಂದ ಅಲ್ವಾ? – ವಿರಾಟ್‌ ಸಂಪತ್ತಿನ ರಹಸ್ಯ ರಿವೀಲ್‌

ರನ್‌ ಮೆಷಿನ್  ವಿರಾಟ್‌ ಕೊಹ್ಲಿ.. ಬ್ಯಾಟ್‌ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ರೆ ರಾಜನಂತೆ ಮೆರಿತಾರೆ.. ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆ ಬರೆದಿರೋ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಅನೌನ್ಸ್‌ ಮಾಡಿದ್ರು. ಇದು ಕೊಹ್ಲಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ಮುಂದೆ ವೈಟ್‌ ಜೆರ್ಸಿಯಲ್ಲಿ ಕಿಂಗ್‌ ನ ಫ್ಯಾನ್ಸ್‌ ಮಿಸ್‌ ಮಾಡಿಕೊಳ್ಳೋದಂತೂ ಪಕ್ಕಾ.. ಇದೀಗ ಕಿಂಗ್‌ ಕೊಹ್ಲಿ ದುಡ್ಡಿನ ಸಾಮ್ರಾಜ್ಯದ ಬಗ್ಗೆ ಚರ್ಚೆಯೊಂದು ಹುಟ್ಕೊಂಡಿದೆ. ವಿರಾಟ್‌ ಎಷ್ಟು ಕೋಟಿಗಳ ಒಡೆಯ? ಕೊಹ್ಲಿ ಐಶಾರಾಮಿ ಜೀವನ ಹೇಗಿದೆ ಅಂತಾ ಫ್ಯಾನ್ಸ್‌ ತಿಳಿದುಕೊಳ್ಳಲು ಉತ್ಸುತರಾಗಿದ್ದಾರೆ.

ಇದನ್ನೂ ಓದಿ; ವಿದೇಶದಲ್ಲಿ ಪದವಿ ಪಡೆದ ಪವರ್‌ ಸ್ಟಾರ್‌ ಮಗಳು – ಧೃತಿ ಓದಿದ ಕಾಲೇಜು ಯಾವುದು?

ವಿರಾಟ್‌ ಕೊಹ್ಲಿ ಬ್ಯಾಟ್‌ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ರೆ ಅಭಿಮಾನಿಗಳ ಮೈಯಲ್ಲಿ ರೋಮಾಂಚನ. ಕಿಂಗ್‌ ಕೊಹ್ಲಿ ಸ್ಟೈಲ್‌, ಫಿಟ್‌ನೆಸ್‌ಗೆ ಫಾನ್ಸ್‌ ಮನಸೋತಿದ್ದಾರೆ. ವಿರಾಟ್ ಮೈದಾನದಲ್ಲಿ ಹೇಗೆ ಕಾಣುತ್ತಾರೋ ಅದಕ್ಕಿಂತ ಹೆಚ್ಚು ಆಕರ್ಷಕವಾಗಿ ಅವರು ಗ್ರೌಂಡ್ ಹೊರಗೆ ಕಾಣುತ್ತಾರೆ. ಸ್ಟೈಲ್‌ ಕಿಂಗ್‌ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕೊಹ್ಲಿ ಈಗ ಕೋಟಿಗಳ ಒಡೆಯ. ಮಕ್ಕಳು, ಮೊಮ್ಮಕ್ಕಳು ಕೂತು ತಿನ್ನುವಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ. ಆದ್ರೆ ಇದೆಲ್ಲಾ ಒಂದೇ ದಿನದಲ್ಲಿ ಸಿಕ್ಕಿದ್ದಲ್ಲ. ಕೋಟಿ ಸಾಮ್ರಾಜ್ಯ ಕಟ್ಟಲು ವಿರಾಟ್‌, ಸಾಕಷ್ಟು ಬೆವರು ಹರಿಸಿದ್ದಾರೆ. ಕ್ರಿಕೆಟ್‌ ಮಾತ್ರವದಲ್ಲದೇ ಬೇರೆ ಬೇರೆ ಕ್ಷೇತ್ರದಿಂದಲೂ ಕೊಹ್ಲಿ ಆದಾಯ ಗಳಿಸ್ತಿದ್ದಾರೆ.

ಅಂದ್ಹಾಗೆ ಕೊಹ್ಲಿ ಒಟ್ಟು ಆದಾಯ 1050 ಕೋಟಿ ರೂಪಾಯಿ. ಇನ್ನು ಪತ್ನಿ ಅನುಷ್ಕಾ ಶರ್ಮಾ ಆದಾಯ 250 ಕೋಟಿ ರುಪಾಯಿ ಎಂದು ವರದಿಯಾಗಿದೆ. ವರ್ಷದಿಂದ ವರ್ಷಕ್ಕೆ ಕೊಹ್ಲಿ ಆದಾಯ ಡಬಲ್‌ ಆಗ್ತಿದೆ. ಹೀಗಾಗೇ ಶ್ರೀಮಂತ ಕ್ರಿಕೆಟಿಗರಲ್ಲಿ ಕಿಂಗ್‌ ಕೊಹ್ಲಿ ಹೆಸ್ರೂ ಕೂಡ ಸೇರ್ಕೊಂಡಿದೆ. ಕೊಹ್ಲಿ ಸಂಪತ್ತಿನ ಮುಖ್ಯ ಆಧಾರ ಕ್ರಿಕೆಟ್ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಸಿಸಿಐ ಜೊತೆಗಿನ A+ ದರ್ಜೆಯ ಒಪ್ಪಂದದಿಂದ ವಿರಾಟ್‌ ಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿ ಸಿಗುತ್ತದೆ. ಇದರ ಜೊತೆಗೆ, ಅವರು ಆಡುವ ಪ್ರತಿ ಪಂದ್ಯಕ್ಕೂ ಹಣ ಪಡೆಯುತ್ತಾರೆ. ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಮತ್ತು T20I ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಸತತ 18 ಆವೃತ್ತಿಗಳಲ್ಲಿ ಆಡ್ತಾ ಬಂದಿದ್ದಾರೆ. 18 ಆವೃತ್ತಿಗಳಲ್ಲಿ ಇವರ ನಿವ್ವಳ ಮೌಲ್ಯ ದಿನೇ ದಿನೇ ಹೆಚ್ಚಾಗಿದೆ. ಈ ವರ್ಷದ ಟೂರ್ನಿಯಲ್ಲಿ ಆರ್‌ಸಿಬಿ ಫ್ರಾಂಚೈಸಿ 21 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.  ಇದೀಗ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರೂ ವಿರಾಟ್‌ ಇಡೀ ವಿಶ್ವದಲ್ಲಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಕ್ರಿಕೆಟಿಗರಾಗಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿಲ್ಲ. ಅವರು ಉದ್ಯಮ, ಜಾಹಿರಾತು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೌದು, ವಿರಾಟ್‌ ಕೊಹ್ಲಿ  ಕ್ರಿಕೆಟ್‌ ಮಾತ್ರವಲ್ಲ.. ಜಾಹಿರಾತು ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಕೊಹ್ಲಿಯನ್ನ ಹಾಕಿಕೊಂಡು ಜಾಹೀರಾತು ಮಾಡಲು ಸಾಕಷ್ಟು ಕಂಪನಿಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಈಗಾಗಲೇ ವಿರಾಟ್‌ 30ಕ್ಕೂ ಹೆಚ್ಚು ಕಂಪನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್‌ ಬಳಸುವ ಬ್ಯಾಟ್‌ ಮೇಲೆ ಪ್ರಾಯೋಜಕತ್ವಕ್ಕಾಗಿ 100 ಕೋಟಿ ರೂ. ಎಂಆರ್‌ಎಫ್‌ ನೀಡಿದೆ. ಉಳಿದಂತೆ ಹಲವು ಕಂಪನಿಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ಇದ್ರಿಂದಲೂ ಕೊಟ್ಯಾಂತರ ರೂಪಾಯಿ ಗಳಿಸ್ತಿದ್ದಾರೆ. ಇನ್ನು ಕೊಹ್ಲಿ ಸ್ವಂತ ಉದ್ಯಮವನ್ನೂ ನಡೆಸ್ತಿದ್ದಾರೆ.

ವಿರಾಟ್‌ ಕೊಹ್ಲಿ 2016 ರಲ್ಲಿ ಪೂಮಾ ಕಂಪನಿ ಜೊತೆ ಸೇರಿ One8  ಎಂಬ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಇದು ಸ್ಪೋರ್ಟ್‌ ಡ್ರೆಸ್, ಸುಗಂಧ ದ್ರವ್ಯಗಳು ಮತ್ತು ಕ್ಯಾಶುಯಲ್ ಡ್ರೆಸ್‌ಗಳನ್ನ ಒಳಗೊಂಡಿದೆ. ಇನ್ನು One8 ಕಮ್ಯೂನ್ ರೆಸ್ಟೋರೆಂಟ್ ಅನ್ನ ಕೂಡ ನಡೆಸ್ತಿದ್ದಾರೆ. ಈಗಾಗಲೇ ಚೈನ್ನೈ ಮುಂಬೈ, ಪುಣೆ, ಕೋಲ್ಕತ್ತಾ, ಬೆಂಗಳೂರಿನಂತಹ ನಗರಗಳಲ್ಲಿಈ ರೆಸ್ಟೋರೆಂಟ್‌ ಇದೆ. ನ್ಯೂಡೆಲ್ಲಿಯಲ್ಲಿ ವಿರಾಟ್‌ ನ್ಯೋವಾ ರೆಸ್ಟೋರೆಂಟ್‌ ಅನ್ನ ನಡೆಸ್ತಿದ್ದಾರೆ. ಅದ್ರ ಜೊತೆಗೆ ವ್ರೋಗನ್‌ ಎಂಬ ಬ್ರ್ಯಾಂಡ್‌ ಅನ್ನ ನಡೆಸ್ತಿದ್ದಾರೆ. ಇದು ಫ್ಯಾಷನ್ ಮತ್ತೆ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿದೆ. ಇದ್ರ ಜೊತೆ ವಿರಾಟ್ ಕೊಹ್ಲಿ ರಿಯಲ್ ಎಸ್ಟೇಟ್‌ನಲ್ಲಿಯೂ ಹೂಡಿಕೆ ಮಾಡಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿ ಎರಡು ದುಬಾರಿ ಮನೆಗಳನ್ನು ಹೊಂದಿದ್ದಾರೆ. ಗುರುಗ್ರಾಮದಲ್ಲಿ 10 ಸಾವಿರ ಚದರ ಅಡಿ ವಿಸ್ತೀರ್ಣದ ಬಂಗಲೆ ಇದೆ. ಇದರ ಬೆಲೆ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.ಇದ್ರಲ್ಲಿ ಜಿಮ್, ಬಾರ್, ಈಜುಕೊಳ ಎಲ್ಲಾ ಇದೆ. ಮುಂಬೈನಲ್ಲಿ 7 ಸಾವಿರ ಚದರ ಅಡಿ ವಿಸ್ತೀರ್ಣದ ಸಮುದ್ರದ ವ್ಯೂ ಹೊಂದಿರುವ ಅಪಾರ್ಟ್‌ಮೆಂಟ್ ಇದೆ. ಇದರ ಬೆಲೆ ಸುಮಾರು 34 ಕೋಟಿ ರೂಪಾಯಿ. ಇದ್ರ ಜೊತೆ ಕೊಹ್ಲಿ ದುಬಾರಿ ಕಾರನ್ನ ಕೂಡ ಹೊಂದಿದ್ದಾರೆ. ಹೀಗೆ ಕೊಹ್ಲಿ ಕೇವಲ ಕ್ರಿಕೆಟ್‌ ಗೆ ಮಾತ್ರ ಸೀಮಿತವಾಗಿಲ್ಲ.. ಉದ್ಯಮ, ಜಾಹೀರಾತು, ಹೂಡಿಕೆ ಎಲ್ಲದ್ರಲ್ಲೂ ಸಕ್ಸಸ್‌ ಕಂಡಿದ್ದಾರೆ. ಈ ಮೂಲಕ ಯುವಕರಿಗೆ ಮಾದರಿ ಆಗಿದ್ದಾರೆ.

Shwetha M

Leave a Reply

Your email address will not be published. Required fields are marked *