ಬಾಂಗ್ಲಾ ಚಾಲೆಂಜ್ಗೆ KOHLI ರೆಡಿ – 4 ಇನ್ನಿಂಗ್ಸ್.. 152 ರನ್.. ಟಾಸ್ಕ್ ಏನು?
ವಿಶ್ವಕಪ್, ಲಂಕಾ ಫೇಲ್ ಸೇಡು ತೀರುತ್ತಾ?
2024ರ ಐಪಿಎಲ್ ನೋಡಿದ ಪ್ರತಿಯೊಬ್ಬರೂ ಕೂಡ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಫಿದಾ ಆಗಿದ್ರು. ಬೌಲರ್ ಯಾರೇ ಆಗಿದ್ರೂ ಡೋಂಟ್ಕೇರ್ ಌಟಿಟ್ಯೂಡ್ನಲ್ಲಿ ಬ್ಯಾಟ್ ಬೀಸ್ತಿದ್ದ ಕಿಂಗ್ ಆರ್ಭಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಫಿದಾ ಆಗಿತ್ತು. ಲೆಜೆಂಡರಿ ಆಟಗಾರರಂತೂ ಗುಣಗಾನ ಮಾಡಿದ್ದೂ ಮಾಡಿದ್ದೇ. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಕಿಂಗ್ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ರು. ಆದ್ರೆ ಐಪಿಎಲ್ ಮುಗಿದಿದ್ದೇ ಮುಗಿದಿದ್ದು. ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡ್ತಾನೇ ಇಲ್ಲ. ಟಿ-20 ವಿಶ್ವಕಪ್ನಲ್ಲಿ ಫೈನಲ್ ಪಂದ್ಯವನ್ನ ಹೊರತುಪಡಿಸಿದ್ರೆ ಇನ್ಯಾವ ಮ್ಯಾಚ್ನಲ್ಲೂ ಒಳ್ಳೆ ಸ್ಕೋರ್ ಮಾಡ್ಲಿಲ್ಲ. ಬಳಿಕ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಮತ್ತದೇ ನೀರಸ ಪ್ರದರ್ಶನ. ಬಟ್ ಈಗ ಕಿಂಗ್ ವಿರಾಟ್ ಗ್ರೇಟ್ ಕಮ್ ಬ್ಯಾಕ್ ಮಾಡೋಕೆ ದೊಡ್ಡ ಅವಕಾಶ ಸಿಕ್ಕಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್ ಮಿಷನ್ ಮತ್ತೊಮ್ಮೆ ಸಿಡಿದೇಳೋ ಮುನ್ಸೂಚನೆ ಸಿಕ್ಕಿದೆ. ವಿಶ್ವಕ್ರಿಕೆಟ್ ಪ್ರೇಮಿಗಳೂ ಕೂಡ ಆ ದಿನಕ್ಕಾಗಿ ಕಾಯ್ತಿದ್ದಾರೆ. ಅಷ್ಟಕ್ಕೂ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ವಿರಾಟ್ ಕೊಹ್ಲಿಗೆ ವರದಾನವಾಗುತ್ತಾ? ಇತಿಹಾಸ ಮರುಕಳಿಸುತ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್
ಟೀಂ ಇಂಡಿಯಾದ ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ಕಿಂಗ್ ವಿರಾಟ್ ಕೊಹ್ಲಿಯವ್ರ ಅಗ್ರೆಸ್ಸಿವ್ ಬ್ಯಾಟಿಂಗ್ ನೋಡೋಕೆ ಕ್ರಿಕೆಟ್ ಅಭಿಮಾನಿಗಳು ಕಾಯ್ತಿದ್ದಾರೆ. ಟಿ-20 ವಿಶ್ವಕಪ್ ವೇಳೆಯೂ ಸರಿಯಾಗಿ ಆಡ್ಲಿಲ್ಲ.. ಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಅಬ್ಬರಿಸಲಿಲ್ಲ. ಇದೀಗ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗಾದ್ರೂ ಅದ್ಭುತ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಬಟ್ ಐಪಿಎಲ್ ಬಳಿಕ ವಿರಾಟ್ ತಮ್ಮ ಹಳೇ ಖದರ್ ಕಳ್ಕೊಳ್ತಿದ್ದಾರೆ. ಬ್ಯಾಟಿಂಗ್ ಸರಾಸರಿ ಕುಸಿಯುತ್ತಿದೆ. ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳೆದುಕೊಂಡದ್ದನ್ನ ಮತ್ತೆ ಪಡೆದುಕೊಳ್ಳಲು ಕೊಹ್ಲಿಗೆ ಒಳ್ಳೆ ಅವಕಾಶ ಸಿಕ್ಕಿದೆ. ಮತ್ತೊಮ್ಮೆ ಜಗತ್ತಿನ ಎದುರು ತಾನೇನು, ತನ್ನ ಸಾಮರ್ಥ್ಯ ಏನು ಅನ್ನೋದನ್ನ ಪ್ರೂವ್ ಮಾಡೋ ಚಾನ್ಸ್ ಸಿಕ್ಕಿದೆ.
ವಿರಾಟ್ ಕೊಹ್ಲಿ ಆಟದ ಬಗ್ಗೆ ಸಪರೇಟ್ ಆಗಿ ಎಕ್ಸ್ಪ್ಲೇನ್ ಮಾಡೋ ಅವಶ್ಯಕತೆ ಏನೂ ಇಲ್ಲ. 3 ಫಾಮ್ಯಾಟ್ನಲ್ಲೂ 50 ಪ್ಲಸ್ ಆವರೇಜ್ ಮೆಂಟೇನ್ ಮಾಡಿದ್ರು. ಈವರೆಗೂ ಕೊಹ್ಲಿನ ಬಿಟ್ರೆ, ಬೇರೆ ಯಾವ ಬ್ಯಾಟರ್ ಕೂಡ ಈ ಸಾಧನೆ ಮಾಡಿಲ್ಲ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ತಮ್ಮ ಖದರ್ ಕಳೆದುಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಅವ್ರ ಬ್ಯಾಟಿಂಗ್ ಸರಾಸರಿ ಕುಸಿಯುತ್ತಿದೆ. ಈಗಾಗ್ಲೇ ಕೊಹ್ಲಿ 50ರ ಸರಾಸರಿ ಹೊಂದಿರೋ ಬ್ಯಾಟರ್‍ಗಳ ಕ್ಲಬ್ನಿಂದ ಹೊರಬಿದ್ದಿದ್ದಾರೆ. ಆದ್ರೀಗ, ಮತ್ತೆ 50 ಪ್ಲಸ್ ಆವರೇಜ್ ಕ್ಲಬ್‌ಗೆ ಎಂಟ್ರಿ ಕೊಡಲು ಬೆಸ್ಟ್ ಚಾನ್ಸ್ ಸಿಕ್ಕಿದೆ. ಟೀಂ ಇಂಡಿಯಾ ಸೆಪ್ಟೆಂಬರ್ 19ರಿಂದ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಸರಣಿಯಲ್ಲಿ ಅಬ್ಬರಿಸಿದ್ರೆ, ಕೊಹ್ಲಿ ಕಳೆದುಕೊಂಡಿದ್ದನ್ನ ಮತ್ತೆ ಪಡೆದುಕೊಳ್ಳಲಿದ್ದಾರೆ. ಸರಣಿಯ 4 ಇನ್ನಿಂಗ್ಸ್‌ಗಳಿಂದ 152 ರನ್ ಗಳಿಸಿದ್ರೆ, ಅವ್ರ ಬ್ಯಾಟಿಂಗ್ ಸರಾಸರಿ ಮತ್ತೆ 50ಕ್ಕೇರಲಿದೆ. ಆದ್ರೆ, 4 ಇನ್ನಿಂಗ್ಸ್ಗಳಲ್ಲೂ ಕೊಹ್ಲಿ ನಾಟ್ಔಟ್ ಆಗಿ ಉಳಿಯಬೇಕು. ಇನ್ನು ಎಲ್ಲಾ ಇನ್ನಿಂಗ್ಸ್ಗಳಲ್ಲಿ ಔಟಾದ್ರೂ, 50 ಪ್ಲಸ್ ಸರಾಸರಿ ಲಿಸ್ಟ್‌ಗೆ ಸೇರಬೇಕಂದ್ರೆ, ಕೊಹ್ಲಿ ಕನಿಷ್ಠ 350 ರನ್ ಗಳಿಸಬೇಕು.
ಭಾರತ ಮತ್ತು ಬಾಂಗ್ಲಾ ನಡುವಿನ ಟೆಸ್ಟ್ ಸರಣಿಯ ಅಂಕಿ ಅಂಶಗಳನ್ನ ನೋಡಿದ್ರೆ ವಿರಾಟ್ಗೆ ಕಮ್ ಬ್ಯಾಕ್ ಮಾಡೋದು ಕಷ್ಟ ಏನೂ ಅಲ್ಲ. ಕೊಹ್ಲಿ ಈವರೆಗೂ ಬಾಂಗ್ಲಾದೇಶ ವಿರುದ್ಧ 9 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 54.62ರ ಸರಾಸರಿಯಲ್ಲಿ 497 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 2 ಶತಕ ಸೇರಿದ್ದು, 204 ಹೈಯೆಸ್ಟ್ ಸ್ಕೋರ್ ಅಗಿದೆ. ಆದ್ರೆ ಒಂದು ವೇಳೆ ಈ ಸರಣಿಯಲ್ಲೂ ವಿಫಲರಾದ್ರೆ, ಕೊಹ್ಲಿಯ ಆವರೇಜ್ ಮತ್ತಷ್ಟು ಕುಸಿಯಲಿದೆ. 2019ರಲ್ಲಿ ವಿರಾಟ್ ಟೆಸ್ಟ್ ಫಾರ್ಮ್ ಪೀಕ್ನಲ್ಲಿತ್ತು. ಆ ವರ್ಷ ಕೊಹ್ಲಿ 11 ಇನ್ನಿಂಗ್ಸ್ಗಳಿಂದ 68.00ರ ಸರಾಸರಿಯಲ್ಲಿ 612 ರನ್ ಗಳಿಸಿದ್ರು. ಆದ್ರೆ 2020ರಲ್ಲಿ ಕೊಹ್ಲಿಯ ಫಾರ್ಮ್ ಪಾತಾಳಕ್ಕೆ ಕುಸಿದು ಬಿಡ್ತು. ಟ್ವೆಂಟಿ-ಟ್ವೆಂಟಿ ಇಯರ್ನಲ್ಲಿ ಕೊಹ್ಲಿ 6 ಇನ್ನಿಂಗ್ಸ್ಗಳಿಂದ ಕೇವಲ 19.33ರ ಸರಾಸರಿಯಲ್ಲಿ 116 ರನ್ ಗಳಿಸಿದ್ರು. 2021ರಲ್ಲೂ ಕೊಹ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ರು. 19 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ರು. ಇದ್ರಲ್ಲಿ 28.21ರ ಸರಾಸರಿಯಲ್ಲಿ 4 ಅರ್ಧಶತಕಗಳ ಸಹಿತ 536 ರನ್ಗಳಿಸಿದ್ರು. ಇನ್ನು ಕಳೆದ ವರ್ಷವೂ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಬರ ಎದುರಿಸಿದ್ರು. 2022ರಲ್ಲಿ ಕೊಹ್ಲಿ ಒಟ್ಟು 11 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ರು. 26.50ರ ಸರಾಸರಿಯಲ್ಲಿ 265 ಮಾತ್ರ ಸಿಡಿಸಿದ್ರು. ಆದ್ರೆ, 2023ರಲ್ಲಿ ಕೊಹ್ಲಿ ಫಾರ್ಮ್ ಕಂಡುಕೊಂಡ್ರು. 12 ಇನ್ನಿಂಗ್ಸ್ಗಳಿಂದ 55.91ರ ಸರಾಸರಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ಸಹಿತ 671 ರನ್ ಕಲೆಹಾಕಿದ್ರು. ಹೀಗಾಗಿ ಮತ್ತೊಮ್ಮೆ ಸರಾಸರಿ ಹೆಚ್ಚಿಸಿಕೊಳ್ಳೋಕೆ ವಿರಾಟ್ಗೆ ಬೆಸ್ಟ್ ಚಾನ್ಸ್ ಸಿಕ್ಕಿದೆ.
ಸದ್ಯ ಟಿ-20 ವಿಶ್ವಕಪ್ ಹಾಗೂ ಲಂಕಾ ಸರಣಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟ್ ಬೀಸೋಕೆ ಆಗದೆ ಒದ್ದಾಡಿದ ವಿರಾಟ್ ಈಗ ಬಾಂಗ್ಲಾ ಸರಣಿ ಮೂಲಕವಾದ್ರೂ ಗ್ರೇಟ್ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ತಮ್ಮ ಟೆಸ್ಟ್ ಕ್ರಿಕೆಟ್ ಸರಾಸರಿಯನ್ನ ಹೆಚ್ಚಿಸಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. ಆದ್ರೆ ಈ ಬಾರಿ ಬಾಂಗ್ಲಾ ಆಟಗಾರರನ್ನ ಅಷ್ಟು ಈಸಿಯಾಗಿ ತೆಗೆದುಕೊಳ್ಳೋಕೆ ಆಗಲ್ಲ. ಈಗಾಗ್ಲೇ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಅಬ್ಬರಿಸಿದ್ದು ಐತಿಹಾಸಿಕ ಸೋಲಿನ ಆಘಾತ ನೀಡಿದ್ರು. ಅದ್ರಲ್ಲೂ ಸ್ಪಿನ್ನರ್ಸ್ ತಂಡದ ಮೇನ್ ಅಸ್ತ್ರವಾಗಿದ್ದಾರೆ. ಬಟ್ ಸ್ಪಿನ್ನರ್ಸ್ ಎದುರು ವಿರಾಟ್ ಕೊಹ್ಲಿ ಬ್ಯಾಟ್ ಬೀಸೋಕೆ ಒದ್ದಾಡ್ತಾರೆ. 2020ರಿಂದ ವಿರಾಟ್ ಕೊಹ್ಲಿ, ಸ್ಪಿನ್ನರ್ಗಳ ಎದುರು ಆಡಿದ 31 ಇನ್ನಿಂಗ್ಸ್ಗಳಿಂದ 680 ರನ್ ಗಳಿಸಿದ್ದು, ಬರೋಬ್ಬರಿ 21 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಆದ್ರೆ ಪ್ರತೀ ಸಲ ಹೀಗೇ ಆಗುತ್ತೆ ಅಂತಾ ಹೇಳೋಕೆ ಆಗಲ್ಲ. ಅದೇನೆ ಇರಲಿ, ಬಾಂಗ್ಲಾ ಹುಲಿಗಳ ವಿರುದ್ಧದ ಟೆಸ್ಟ್ ಕಾದಾಟದಲ್ಲಿ ವಿರಾಟ್ ವಿರಾಟ ರೂಪ ತೋರಿಸಲಿ. ಆ ಮೂಲಕ ತಮ್ಮ ಗತವೈಭವಕ್ಕೆ ಮರಳಲಿ ಅನ್ನೋದೆ ಅಭಿಮಾನಿಗಳ ಆಶಯವಾಗಿದೆ.