2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಒಂದು ನಿರಾಶೆಯ ಸುದ್ದಿಯಿದೆ. ಇಂಗ್ಲೆಂಡ್ ವಿರುದ್ಧದ 5 ಮ್ಯಾಚ್ ಟೆಸ್ಟ್ ಸೀರಿಸ್ನಲ್ಲಿ ಫಸ್ಟ್ 2 ಮ್ಯಾಚ್ಗಳನ್ನ ವಿರಾಟ್ ಕೊಹ್ಲಿ ಆಡ್ತಾ ಇಲ್ಲ. ಪರ್ಸನಲ್ ರೀಸನ್ಗೋಸ್ಕರ ಆಡದೆ ಇರೋಕೆ ತೀರ್ಮಾನಿಸಿದ್ದಾರೆ. ಈ ಬಗ್ಗೆ ಕೊಹ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗೂ ಚರ್ಚೆ ನಡೆಸಿದ್ದಾರೆ. ಹಾಗೆಯೇ ಬಿಸಿಸಿಐಗೂ ಇನ್ಫಾರ್ಮ್ ಮಾಡಿದ್ರು. ಫೈನಲಿ ಬಿಸಿಸಿಐ ಇದನ್ನ ಕನ್ಫರ್ಮ್ ಮಾಡಿದೆ. ಖಂಡಿತಾ ಫಸ್ಟ್ 2 ಮ್ಯಾಚ್ಗಳಲ್ಲಿ ಟೀಂ ಇಂಡಿಯಾಗೆ ಇದು ದೊಡ್ಡ ಲಾಸ್. ಈಗ ವಿರಾಟ್ ಕೊಹ್ಲಿಯನ್ನ ಯಾರು ರಿಪ್ಲೇಸ್ ಮಾಡ್ತಾರೆ ಅನ್ನೋ ಕುತೂಹಲವೂ ಇದೆ.
ಇದನ್ನೂ ಓದಿ:
ಇಂಗ್ಲೆಂಡ್ ವಿರುದ್ಧ ಫಸ್ಟ್ ಎರಡು ಟೆಸ್ಟ್ ಮ್ಯಾಚ್ಗಳಿಗೆ ವಿರಾಟ್ ಕೊಹ್ಲಿ ಪ್ಲೇಸ್ಗೆ ಈಗ ಪ್ರಮುಖವಾಗಿ ಮೂವರು ಕ್ರಿಕೆಟಿಗರು ರೇಸ್ನಲ್ಲಿದ್ದಾರೆ.
ನಂ.1: ರಜತ್ ಪಾಟೀದಾರ್
ಟೀಂ ಇಂಡಿಯಾದ ಯಂಗ್ ಬ್ಯಾಟ್ಸ್ಮನ್ ರಜತ್ ಪಾಟೀದಾರ್ ಈಗ ಟೆಸ್ಟ್ ಸ್ಕ್ವಾಡ್ ಸೇರಿಕೊಳ್ಳೋಕೆ ವನ್ ಆಫ್ ದಿ ಫ್ರಂಟ್ ರನ್ನರ್ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಜತ್ ಪಾಟೀದಾರ್ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ರಜತ್ ಪಾಟೀದಾರ್, ಸೌತ್ ಆಫ್ರಿಕಾ ವಿರುದ್ಧದ ವಂಡೇ ಸೀರಿಸ್ನಲ್ಲಿ ಡೆಬ್ಯೂ ಮಾಡಿದ್ರು. ಇದ್ರ ಜೊತೆಗೆ ಈಗ ಟೆಸ್ಟ್ ಸೀರಿಸ್ ಆರಂಭವಾಗೋ ಮುನ್ನ ಇಂಡಿಯಾ-ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ನಡೆದ ಪ್ರಾಕ್ಟೀಸ್
ಮ್ಯಾಚ್ನಲ್ಲಿ ರಜತ್ ಪಾಟೀದಾರ್ 151 ರನ್ ಹೊಡಿಯೋ ಮೂಲಕ ಸೆಂಚೂರಿ ಬಾರಿಸಿದ್ರು. ಅದು ಕೂಡ ಉಳಿದ ಐದು ಮಂದಿ ಬ್ಯಾಟ್ಸ್ಮನ್ಗಳು ಸಿಂಗಲ್ ಡಿಜಿಟ್ಗೆ ಔಟಾಗಿದ್ದಾಗ ರಜತ್ ಪಾಟೀದಾರ್ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು 151 ರನ್ ಹೊಡೆದಿದ್ರು. ಹೀಗಾಗಿಯೇ ಪಾಟೀದಾರ್ ಇನ್ನಿಂಗ್ಸ್ ಅಷ್ಟೊಂದು ಸ್ಪೆಷಲ್ ಆಗಿರೋದು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿಯನ್ನ ರಿಪ್ಲೇಸ್ ಮಾಡೋಕೆ ರಜತ್ ಪಾಟೀದಾರ್ ಫ್ರಂಟ್ ರನ್ನರ್ ಆಗಿರೋದು. ಹಾಗೆಯೇ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ರಜತ್ ಪಾಟೀದಾರ್ 45.97 ಬ್ಯಾಟಿಂಗ್ ಎವರೇಜ್ ಹೊಂದಿದ್ದಾರೆ. ಸೋ ರಜತ್ ಪಾಟೀದಾರ್ರನ್ನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಟೀಂಗೆ ಸೆಲೆಕ್ಟ್ ಮಾಡುವ ಚಾನ್ಸ್ ಇದೆ.
ನಂ.2: ಸರ್ಫರಾಜ್ ಖಾನ್
ಸರ್ಫರಾಜ್ ಖಾನ್ ಹೆಸರಂತೂ ಆಗಾಗ ಮುನ್ನಲೆಗೆ ಬರ್ತಾನೆ ಇರುತ್ತೆ. ಸರ್ಫರಾಜ್ಗೆ ಟೀಂ ಇಂಡಿಯಾದ ಒಂದು ಚಾನ್ಸ್ ನೀಡುವಂತೆ ಸಾಕಷ್ಟು ಒತ್ತಾಯ ಕೇಳಿ ಬರ್ತಾ ಇದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮುಂಬೈ ಪರ ಆಡುವ ಸರ್ಫರಾಜ್ ಖಾನ್ ಟ್ರ್ಯಾಕ್ ರೆಕಾರ್ಡ್ ಕೂಡ ಟಾಪ್ ಕ್ಲಾಸ್ ಆಗಿದೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 68.20ಯಷ್ಟು ಎವರೇಜ್ ಹೊಂದಿದ್ದಾರೆ. ಹಾಗೆಯೇ ಇಂಡಿಯಾ-ಎ VS ಇಂಗ್ಲೆಂಡ್ ಲಯನ್ಸ್ ವಾರ್ಮ್ಅಪ್ ಮ್ಯಾಚ್ನ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ 96 ರನ್ ಹೊಡೆದಿದ್ರು. ಹೀಗಾಗಿ ವಿರಾಟ್ ಕೊಹ್ಲಿಯನ್ನ ರಿಪ್ಲೇಸ್ ಮಾಡುವಲ್ಲಿ ಸರ್ಫರಾಜ್ ಖಾನ್ ಕೂಡ ರೇಸ್ನಲ್ಲಿದ್ದಾರೆ.
ನಂ.3: ರಿಂಕು ಸಿಂಗ್
ಟೀಂ ಇಂಡಿಯಾದ ಟಿ-20 ಸೂಪರ್ ಸ್ಟಾರ್ ರಿಂಕು ಸಿಂಗ್ ಯಾವ ರೀತಿ ಪರ್ಫಾಮ್ ಮಾಡ್ತಾ ಇದ್ದಾರೆ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ರಿಂಕು ಸಿಂಗ್ ಸದ್ಯ ಟಿ-20 ಸ್ಕ್ವಾಡ್ನಲ್ಲಷ್ಟೇ ಪರ್ಮನೆಂಟ್ ಸ್ಥಾನ ಪಡೆದುಕೊಂಡಿದ್ದಾರೆ. ಆದ್ರೆ ವಂಡೇ, ಟೆಸ್ಟ್ ಸೇರಿದಂತೆ ಕ್ರಿಕೆಟ್ನ ಮೂರೂ ಫಾರ್ಮೆಟ್ಗಳಲ್ಲಿ ಆಡುವ ಸಾಮರ್ಥ್ಯ ರಿಂಕು ಸಿಂಗ್ಗೆ ಇದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಉತ್ತರಪ್ರದೇಶ ಪರ ಆಡ್ತಿರೋ ರಿಂಕು ಸಿಂಗ್ ಬ್ಯಾಟಿಂಗ್ ಎವರೇಜ್ 58.47ರಷ್ಟಿದೆ. ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸ್ಕ್ವಾಡ್ನಲ್ಲಿ ರಿಂಕು ಹೆಸರು ಟೀಮ್ನಲ್ಲಿ ಇಲ್ಲದಿದ್ರೂ ಸಬ್ಸ್ಟಿಟ್ಯೂಟ್ ಫೀಲ್ಡರ್ ಆಗಿ ಗ್ರೌಂಡ್ಗೆ ಇಳಿದಿದ್ರು. ಆ್ಯಕ್ಚುವಲಿ ರಿಂಕು ಸಿಂಗ್ರನ್ನ ಸ್ಕ್ವಾಡ್ಗೆ ಸೆಲೆಕ್ಟ್ ಮಾಡೋಕೆ ಇದು ರೈಟ್ ಟೈಮ್. ಎಂಥದ್ದೇ ಸ್ವಿಚ್ಯುವೇಶನ್, ಯಾವುದೇ ಆರ್ಡರ್ನಲ್ಲಿ ಬೇಕಾದ್ರೂ ಬ್ಯಾಟಿಂಗ್ ಮಾಡೋ ಕೆಪಾಸಿಟಿ ರಿಂಕು ಸಿಂಗ್ಗೆ ಇದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೀರಿಸ್ಗೆ ಅವರನ್ನ ಕಣಕ್ಕಿಳಿಸುವ ಸಾಧ್ಯತೆ ಕೂಡ ಇದೆ.
ನಂ.4: ಚೇತೇಶ್ವರ ಪೂಜಾರ
ಕಳೆದ ಕೆಲ ಸಮಯದಿಂದ ಚೇತೇಶ್ವರ್ ಪೂಜಾರ್ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ನಿಂದ ಡ್ರಾಪ್ ಆಗಿದ್ದಾರೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡಿದ ಬಳಿಕ ಪೂಜಾರ ಒಂದೇ ಒಂದು ಟೆಸ್ಟ್ ಮ್ಯಾಚ್ ಆಡಿಲ್ಲ. ಔಟ್ ಆಫ್ ಫಾರ್ಮ್ನಿಂದಾಗಿ ಚೇತೇಶ್ವರ್ ಪೂಜಾರ ಇಂಗ್ಲೆಂಡ್ಗೆ ತೆರಳಿ ಕೌಂಟಿ ಕ್ರಿಕೆಟ್ ಆಡಿದ್ರು. ಅಲ್ಲಿ ಸೆಂಚೂರಿ ಕೂಡ ಬಾರಿಸಿದ್ರು. ಬಳಿಕ ಭಾರತದಲ್ಲಿ ಫಸ್ಟ್ ಕ್ಲಾಸ್ ಟೂರ್ನಿಗಳನ್ನ ಆಡಿ, ಇಲ್ಲೂ ಒಂದಷ್ಟು ಸೆಂಚೂರಿ ಹೊಡೆದಿದ್ರು. ರಣಜಿಯಲ್ಲಿ ಡಬಲ್ ಹಂಡ್ರೆಡ್ ಬೇರೆ ಬಾರಿಸಿದ್ರು. ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡೋಕೆ ಚೇತೇಶ್ವರ ಪೂಜಾರ ಸಾಕಷ್ಟು ಎಫರ್ಟ್ ಹಾಕುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೀರಿಸ್ಗೆ ಚೇತೇಶ್ವರ್ ಪೂಜಾರರನ್ನ ಸೆಲೆಕ್ಟ್ ಮಾಡಿದ್ರೂ ಆಶ್ಚರ್ಯ ಇಲ್ಲ.
ಇವೆಲ್ಲದರ ಮಧ್ಯೆ ವಿರಾಟ್ ಕೊಹ್ಲಿ ವಿಚಾರವಾಗಿ ಬಿಸಿಸಿಐ ಒಂದು ಸ್ಟ್ರಾಂಗ್ ಮೆಸೇಜ್ ಕೂಡ ಪಾಸ್ ಮಾಡಿದೆ. ಮೀಡಿಯಾದವರೇ ಆಗಲಿ, ಫ್ಯಾನ್ಸ್ಗಳೇ ಆಗಲಿ ಫಸ್ಟ್-2 ಟೆಸ್ಟ್ಗಳಲ್ಲಿ ಆಡಲ್ಲ ಎಂದಿರೋ ಕೊಹ್ಲಿಯ ಡಿಸೀಶನ್ನನ್ನ ರೆಸ್ಪೆಕ್ಟ್ ಮಾಡಬೇಕು. ಯಾವ ಕಾರಣಕ್ಕಾಗಿ ಆಡ್ತಿಲ್ಲ ಅನ್ನೋ ಬಗ್ಗೆ ಯಾವುದೇ ಸ್ಪೆಕ್ಯುಲೇಷನ್ಗಳು ಬೇಡ. ವಿರಾಟ್ ಕೊಹ್ಲಿ ಯಾವುದೇ ರೀತಿಯ ನಿರ್ಧಾರಗಳನ್ನ ಕೈಗೊಂಡ್ರೂ ಅದನ್ನ ನಾವು ರೆಸ್ಪೆಕ್ಟ್ ಮಾಡ್ತೀವಿ ಮತ್ತು ಫುಲ್ ಸಪೋರ್ಟ್ ಮಾಡ್ತೀವಿ ಅಂತಾ ಬಿಸಿಸಿಐ ಸ್ಟೇಟ್ಮೆಂಟ್ ರಿಲೀಸ್ ಮಾಡಿದೆ.
ಟೋಟಲಿ, ಫಸ್ಟ್ 2 ಟೆಸ್ಟ್ ಮ್ಯಾಚ್ಗಳನ್ನ ವಿರಾಟ್ ಕೊಹ್ಲಿ ಆಡ್ತಿಲ್ಲ. ಹೀಗಾಗಿ ಕೊಹ್ಲಿ ಪ್ಲೇಸ್ನ್ನ ರಿಪ್ಲೇಸ್ ಮಾಡೋದೆ ಈಗ ಮ್ಯಾನೇಜ್ಮೆಂಟ್ ಮುಂದಿರೋ ದೊಡ್ಡ ಸವಾಲು. ಜನವರಿ 25ರಿಂದ ಹೈದರಾಬಾದ್ನಲ್ಲಿ ಫಸ್ಟ್ ಟೆಸ್ಟ್ ಮ್ಯಾಚ್ ಶುರುವಾಗ್ತಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ವಿರಾಟ್ ಕೊಹ್ಲಿಯನ್ನ ರಿಪ್ಲೇಸ್ ಮಾಡೋ ಪ್ಲೇಯರ್ ಯಾರು ಅನ್ನೋದನ್ನ ಬಿಸಿಸಿಐ ಅನೌನ್ಸ್ ಮಾಡಬಹುದು.