ದೇಶಕ್ಕಿಂತಲೂ ಹೆಚ್ಚಾಯ್ತಾ ವೈಯಕ್ತಿಕ ವಿಚಾರ? – ವಿರಾಟ್ ಕೊಹ್ಲಿ ಬಗ್ಗೆ ಪರ ವಿರೋಧದ ಚರ್ಚೆ

ದೇಶಕ್ಕಿಂತಲೂ ಹೆಚ್ಚಾಯ್ತಾ ವೈಯಕ್ತಿಕ ವಿಚಾರ? – ವಿರಾಟ್ ಕೊಹ್ಲಿ ಬಗ್ಗೆ ಪರ ವಿರೋಧದ ಚರ್ಚೆ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಂದು ರಾಜ್‌ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ನಡುವೆ ಇಂಗ್ಲೆಂಡ್​ ವಿರುದ್ಧ ಇನ್ನುಳಿದ ಮೂರು ಟೆಸ್ಟ್ ಮ್ಯಾಚ್​ಗಳಿಗೆ ಟೀಂ ಇಂಡಿಯಾದ ಸ್ಕ್ವಾಡ್​ ಅನೌನ್ಸ್ ಆಗಿದೆ. ಹಾಗೆಯೇ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳು ಕೂಡ ಆಗಿವೆ. ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಪ್ರಮುಖ ಆಟಗಾರರ ವಿಚಾರದಲ್ಲೂ ಬಿಗ್ ಅಪ್​ಡೇಟ್ ಆಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಟೀಮ್ ಪ್ರಕಟ – ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯ

ವಿರಾಟ್ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಇಡೀ ಸೀರಿಸ್​ನಿಂದಲೇ ಔಟ್ ಆಗಿರುವ ವಿಚಾರ ಅಭಿಮಾನಿಗಳಂತೂ ಬೇಸರದ ಸಂಗತಿ. ಪಸ್ಟ್ ಎರಡು ಟೆಸ್ಟ್​ ಮ್ಯಾಚ್​​ಗಳನ್ನ ಆಡಿರಲಿಲ್ಲ. ಇನ್ನುಳಿದ ಮೂರೂ ಟೆಸ್ಟ್​ ಮ್ಯಾಚ್​​ಗಳನ್ನ ಕೂಡ ಕೊಹ್ಲಿ ಆಡೋದಿಲ್ಲ. ಪರ್ಸನಲ್​ ರೀಸನ್​ನಿಂದಾಗಿ ಕೊಹ್ಲಿ ಇಡೀ ಸೀರಿಸ್​​ನ್ನೇ ಮಿಸ್ ಮಾಡಿಕೊಂಡಿದ್ದಾರೆ. ಮೂರೂ ಟೆಸ್ಟ್​ ಮ್ಯಾಚ್​​ಗಳಲ್ಲೂ ಆಡೋದಿಲ್ಲ ಅಂತಾ ವಿರಾಟ್ ಕೊಹ್ಲಿ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಮೂರು, ನಾಲ್ಕು ಮತ್ತು ಐದನೇ ಟೆಸ್ಟ್​​ಗೆ ಕೊಹ್ಲಿ ಕಮ್​ಬ್ಯಾಕ್​​ ಮಾಡ್ತಾರೆ ಅಂತಾ ಆರಂಭದಲ್ಲಿ ಹೇಳಲಾಗಿತ್ತು. ನಂತರ 5ನೇ ಟೆಸ್ಟ್​ ವೇಳೆಗೆ ಟೀಮ್​​ ಜಾಯಿನ್ ಆಗಬಹುದು ಅಂತಾನೂ ಸುದ್ದಿಯಾಯ್ತು. ಈಗ ನೋಡಿದ್ರೆ ಇಡೀ ಸೀರಿಸ್​​ನಲ್ಲೇ ವಿರಾಟ್ ಕೊಹ್ಲಿ ಆಡ್ತಾ ಇಲ್ಲ. ಕೊಹ್ಲಿ ನೀಡಿರೋ ಆ ಪರ್ಸನಲ್​ ರೀಸನ್ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಪರ್ಸನಲ್​ ರೀಸನ್ ಏನೇ ಇರಬಹುದು ಅದನ್ನ ಪ್ರಶ್ನಿಸೋ ಅವಶ್ಯಕತೆ ಕೂಡ ಇಲ್ಲ. ಎಲ್ಲರಿಗೂ ಅವರವರ ಲೈಫ್​​ನಲ್ಲಿ ಪ್ರೈವಸಿ ಅಂತಾ ಇರುತ್ತೆ. ಅದನ್ನ ರೆಸ್ಪೆಕ್ಟ್ ಮಾಡಲೇಬೇಕಾಗುತ್ತೆ.

ಆದ್ರೆ ಇಲ್ಲೊಂದಷ್ಟು ಪರ ವಿರೋಧದ ಚರ್ಚೆ ಕೂಡ ಶುರುವಾಗಿದೆ. ದೇಶಕ್ಕಾಗಿ ಆಡೋವಾಗ ಕೆಲ ಪರ್ಸನಲ್ ವಿಚಾರಗಳನ್ನ ಸ್ಯಾಕ್ರಿಫೈಸ್ ಮಾಡಬೇಕಲ್ವಾ? ಒಂದು, ಎರಡು ಟೆಸ್ಟ್​ನಲ್ಲಿ ಆಡದೆ ಇರೋದು ಓಕೆ. ಬಟ್ ಇಡೀ ಸೀರಿಸ್​​ನಿಂದಲೇ ಹೊರಗುಳಿಯೋದು. ಅದ್ರಲ್ಲೂ ಇಂಗ್ಲೆಂಡ್​​ನಂಥಾ ಮೇನ್​ ಟೀಮ್ ಜೊತೆಗಿನ ಸೀರಿಸ್​​ನಲ್ಲಿ ಒಂದೇ ಒಂದು ಮ್ಯಾಚ್ ಕೂಡ ಆಡದೆ ಇರೋದು ಎಷ್ಟು ಸರಿ ಅಂತಾನೂ ಒಂದಷ್ಟು ಚರ್ಚೆಗಳಾಗ್ತಾ ಇದೆ. ಬಟ್ ಇಲ್ಲಿ ಒಂದು ಸಂಗತಿಯನ್ನ ತಿಳಿದುಕೊಳ್ಳಲೇಬೇಕಾಗುತ್ತೆ. ಕಳೆದ 15 ವರ್ಷಗಳ ಕ್ರಿಕೆಟ್​ ಕೆರಿಯರ್​​ನಲ್ಲಿ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಹೋಮ್​​ ಸೀರಿಸ್​​ನಲ್ಲಿ ಆಡ್ತಾ ಇಲ್ಲ. ಈ ಹಿಂದೆ ಭಾರತದಲ್ಲಿ ನಡೆದ ಎಲ್ಲಾ ಟೆಸ್ಟ್​ ಸೀರಿಸ್​​ಗಳಲ್ಲೂ ಕೊಹ್ಲಿ ಆಡಿದ್ರು. ಹೀಗಾಗಿ ದೇಶಕ್ಕಾಗಿ ಆಡೋವಾಗ ಪರ್ಸನಲ್ ರೀಸನ್​​ಗಳನ್ನ ಪುಶ್ ಮಾಡಬಾರದು ಅಂತಾ ಹೇಳುವವರು ಈ ವಿಚಾರವನ್ನ ಅರ್ಥ ಮಾಡಿಕೊಳ್ಳಲೇಬೇಕಾಗುತ್ತೆ. ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿಯ ಕಾಂಟ್ರಿಬ್ಯೂಷನ್ ಮತ್ತು ಡೆಡಿಕೇಶನ್​ನನ್ನ ಪ್ರಶ್ನೆ ಮಾಡೋಕೆ ಸಾಧ್ಯವೇ ಇಲ್ಲ. ಈ ಬಾರಿ ಏನೊ ಇಂಪಾರ್ಟೆಂಟ್ ರೀಸನ್​ ಇರಬಹುದೋ ಏನೊ. ವಿರಾಟ್ ಕೊಹ್ಲಿ ಆಡೋ ಮೈಂಡ್​​ಸೆಟ್​​ನಲ್ಲಿ ಇಲ್ಲದೆ ಇರಬಹುದು. ಕಂಪ್ಲೀಟ್ ಆಗಿ ಗೇಮ್ ಮೇಲೆ ಫೋಕಸ್ ಮಾಡೋಕೆ ಆಗದಂಥಾ ಸ್ವಿಚ್ಯುವೇಶನ್​​ನಲ್ಲಿರಬಹುದು. ಅದೇನೇ ಕಾರಣ ಇರಲಿ, ಮೆಂಟಲಿ ಫಿಟ್ ಆಗಿಲ್ಲಾಂದ್ರೆ ಆಡೋದು ಕೂಡ ಒಳ್ಳೆಯದಲ್ಲ. ಅದ್ರಿಂದ ಇಡೀ ಟೀಮ್​ಗೆ ಎಫೆಕ್ಟ್ ಆಗೋ ಸಾಧ್ಯತೆ ಇರುತ್ತೆ. ಹೀಗಾಗಿಯೇ ವಿರಾಟ್ ಕೊಹ್ಲಿಯ ಡಿಸೀಶನ್​ನನ್ನ ಬಿಸಿಸಿಐ ರೆಸ್ಪೆಕ್ಟ್ ಮಾಡಿದೆ. ನಾವು ಎಲ್ಲಾ ರೀತಿಯಲ್ಲೂ ಕೊಹ್ಲಿಗೆ ಸಪೋರ್ಟ್​​ ಮಾಡ್ತೀವಿ ಅಂತಾ ಬಿಸಿಸಿಐ ಕೂಡ ಕ್ಲೀಯರ್ ಆಗಿ ಹೇಳಿದೆ.

ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲ ಶ್ರೇಯಸ್ ಅಯ್ಯರ್ ಕೂಡ ಮುಂದಿನ ಮೂರೂ ಟೆಸ್ಟ್​ ಮ್ಯಾಚ್​ಗಳನ್ನ ಆಡೋದಿಲ್ಲ. ಶ್ರೇಯಸ್​​ ಅಯ್ಯರ್​​ ಬ್ಯಾಕ್​​ಪೇನ್​ಗೆ ಒಳಗಾಗಿದ್ದು, ಇಡೀ ಸೀರಿಸ್​ನಿಂದಲೇ ಔಟಾಗಿದ್ದಾರೆ. ಶ್ರೇಯಸ್ ಅಯ್ಯರ್ ಈಗ ಬೆಂಗಳೂರಿನ ಎನ್​ಸಿಎಗೆ ರೀಚ್​ ಆಗಿದ್ದು, ಅಲ್ಲಿ ಅವರನ್ನ ಮಾನಿಟರ್ ಮಾಡಲಾಗ್ತಿದೆ. ಇನ್ನು ಇಂಜ್ಯೂರಿಗೊಳಗಾಗಿ ಸೆಕೆಂಡ್​ ಟೆಸ್ಟ್​ನಲ್ಲಿ ಆಡದೆ ಇದ್ದ ಕೆಎಲ್​. ರಾಹುಲ್ ಮತ್ತು ರವೀಂದ್ರ ಜಡೇಜಾರನ್ನ ಉಳಿದ ಮೂರು ಟೆಸ್ಟ್​ಗಳಿಗಾಗಿ ಟೀಮ್​ಗೆ ಪಿಕ್ ಮಾಡಲಾಗಿದೆ. ಆದ್ರೆ ಇವರಿಬ್ಬರಿಗೂ ಒಂದು ಕಂಡೀಷನ್​ ಅಪ್ಲೈ ಆಗುತ್ತೆ. ಬಿಸಿಸಿಐ ಮೆಡಿಕಲ್ ಟೀಮ್​ನಿಂದ​ ಫಿಟ್ನೆಸ್ ಕ್ಲೀಯರೆನ್ಸ್ ಸಿಕ್ಕರಷ್ಟೇ ಕೆಎಲ್​ ರಾಹುಲ್ ಮತ್ತು ರವೀಂದ್ರ ಜಡೇಜರನ್ನ ಅಖಾಡಕ್ಕಿಳಿಸಲಾಗುತ್ತೆ. ಇಲ್ಲಾಂದ್ರೆ ಬೇರೆ ಪ್ಲೇಯರ್​ಗಳನ್ನ ರಿಪ್ಲೇಸ್ ಮಾಡಲಾಗುತ್ತೆ.

ಹಾಗೆಯೇ ಉತ್ತರಪ್ರದೇಶದ ಸ್ಪಿನ್ನರ್ ಸೌರಬ್ ಕುಮಾರ್​ರನ್ನ 2ನೇ ಟೆಸ್ಟ್​ ವೇಳೆಗೆ ಸ್ಕ್ವಾಡ್​ಗೆ ಪಿಕ್​ ಮಾಡಲಾಗಿತ್ತು. ಆದ್ರೀಗ ಅವರನ್ನ ಮತ್ತೆ ರಿಲೀಸ್ ಮಾಡಿದ್ದಾರೆ. ರಣಜಿ ಟೂರ್ನಿ ನಡೀತಾ ಇದ್ದು, ಹೀಗಾಗಿ ಉತ್ತರಪ್ರದೇಶದ ಪರ ಆಡೋಕೆ ವಾಪಸ್ ಆಗ್ತಿದ್ದಾರೆ. ಸೆಕೆಂಡ್​ ಟೆಸ್ಟ್​ನಲ್ಲಿ ಹೇಗೂ ಆವರನ್ನ ಆಡಿಸಿರಲಿಲ್ಲ. ಮುಂದಿನ ಮೂರೂ ಟೆಸ್ಟ್​ ಮ್ಯಾಚ್​​ಗಳನ್ನ ಸೌರಬ್​​ರನ್ನ ಆಡಿಸೋದು ಡೌಟೇ. ಹೀಗಾಗಿ ಮತ್ತೆ ರಣಜಿ ಆಡೋಕೆ ವಾಪಸ್ ಕಳುಹಿಸಲಾಗಿದೆ.

​ಇವೆಲ್ಲದರ ಮಧ್ಯೆ ರೋಹಿತ್ ಶರ್ಮಾ ತಮ್ಮ ಕ್ಯಾಪ್ಟನ್ಸಿ ಸೀಕ್ರೆಟ್​ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಲೀಡರ್​ ಆಗಿ ಟೀಮ್​ ಮೇಟ್​​ಗಳ ಮೇಲೆ, ಪ್ರತಿಯೊಬ್ಬ ಇಂಡಿವಿಜ್ಯುವಲ್ ಪ್ಲೇಯರ್ಸ್​ಗಳ ಮೇಲೆ ನಂಬಿಕೆ ಇಟ್ಟುಕೊಳ್ಳೋದು ತುಂಬಾ ಮುಖ್ಯ. ಯಾರದ್ದು ಏನೇ ರೋಲ್ ಇರಲಿ, ಅವರನ್ನ ಎನ್​ಕರೇಜ್ ಮಾಡಿ, ಕಾನ್ಫಿಡೆನ್ಸ್​ ನೀಡೋದು ಕ್ಯಾಪ್ಟನ್ ಕೆಲಸ. ತಂಡದ ಸಕ್ಸಸ್​ಗೆ ಪ್ರತಿಯೊಬ್ಬ ಆಟಗಾರನ ಕಾಂಟ್ರಿಬ್ಯೂಷನ್ ಕೂಡ ತುಂಬಾ ಕ್ರೂಶಿಯಲ್ ಆಗಿರುತ್ತೆ. ಹೀಗಾಗಿ ನಾನು ಎಲ್ಲರ ಜೊತೆಗೂ ಪರ್ಸನಲ್ ಆಗಿ ಎಂಗೇಜ್​​ಮೆಂಟ್​ ಇಟ್ಕೋತೀನಿ. ಸಪರೇಟ್ ಆಗಿ ಡಿಸ್ಕಸ್ ಮಾಡ್ತೀನಿ. ಟೀಮ್​​ನ ರಿಕ್ವೈರ್​ಮೆಂಟ್​ಗೆ ತಕ್ಕಂತೆ ಅವರ ರೋಲ್ ಏನು ಅನ್ನೋದನ್ನ ವಿವರಿಸ್ತೀನಿ. ಅದ್ರಲ್ಲೂ ಚಾಲೆಂಜಿಂಗ್​ ಪರಿಸ್ಥಿತಿ ಬಂದರೆ ಆಟಗಾರರ ಮೇಲೆ ಹೆಚ್ಚಿನ ರೀತಿಯಲ್ಲಿ ನಂಬಿಕೆ ಇಡುವುದು ಮುಖ್ಯ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಅಂತೂ ಇಂಗ್ಲೆಂಡ್​ ವಿರುದ್ಧದ ಸೀರಿಸ್​ನ್ನ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಅನ್ನೋ ಹಠದಲ್ಲಿ ಕ್ಯಾಪ್ಟನ್ ಇದ್ದಾರೆ.

Sulekha