ಕೊಹ್ಲಿಗೂ ಕಾಡಿತ್ತು ಇಂಜುರಿ ಭೂತ – ಭಾರತದ ಪರ ಎಷ್ಟು ಪಂದ್ಯಗಳು ಮಿಸ್?
RCBಯಲ್ಲಿ ತಪ್ಪಿಸಿದ ಮ್ಯಾಚ್ ಗಳೆಷ್ಟು?

ಕ್ರಿಕೆಟ್ ಜಗತ್ತಿನಲ್ಲಿ ಒನ್ ಆಫ್ ದಿ ಮೋಸ್ಟ್ ಫಿಟ್ನೆಸ್ ಪ್ಲೇಯರ್ ಅಂದ್ರೆ ಅದು ವಿರಾಟ್ ಕೊಹ್ಲಿ. ಭಾರತ ಮಾತ್ರ ಅಲ್ಲ ಇಡೀ ಕ್ರಿಕೆಟ್ ಲೋಕವೇ ಅದನ್ನ ಒಪ್ಕೊಂಡಿದೆ. ಕ್ರೀಸ್ ನಡುವೆ ರನ್ಗಾಗಿ ಓಡುವಾಗ ಅವ್ರಲ್ಲಿರೋ ಎನರ್ಜಿ, ಫೀಲ್ಡಿಂಗ್ನಲ್ಲಿ ಚಿರತೆಯಂತ ಸ್ಪೀಡ್, ಟೀಮ್ ಸ್ಪಿರಿಟ್ ಎಲ್ಲವೂ ಕೂಡ ಯಂಗ್ಸ್ಟರ್ಸ್ಗೆ ಇನ್ಸ್ಪಿರೇಷನ್. ಹೆಲ್ತ್ ಇಶ್ಯೂನಿಂದ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳದೇ ಇದ್ರೂ ಇಂಜುರಿ ಕಾರಣಕ್ಕೆ ಕೆಲ ಪಂದ್ಯಗಳಿಂದ ಹೊರಗುಳಿದಿದ್ದಾರೆ.
2017, ಆಸ್ಟ್ರೇಲಿಯಾ ವಿರುದ್ಧ 4 ನೇ ಟೆಸ್ಟ್ ಮ್ಯಾಚ್
2008ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ರು. ಅಲ್ಲಿಂದ ಇಲ್ಲೀವರೆಗೂ ಕ್ರಿಕೆಟ್ ಲೋಕದ ಕಿಂಗ್ ಆಗಿ ಮೆರೀತಿದ್ದಾರೆ. ಅದಕ್ಕೆ ಮೇನ್ ರೀಸನ್ ಅವ್ರ ಫಿಟ್ನೆಸ್ & ಆಟದ ಮೇಲಿನ ಡೆಡಿಕೇಶನ್. 2017ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೌಂಡರಿ ಹೊಡೆಯುವಾಗ ಕೊಹ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ಕಪ್ತಾನ ಆಗಿದ್ದ ಕೊಹ್ಲಿ ಚೇತರಿಕೆ ಕಾಣದ ಕಾರಣ ನಾಲ್ಕನೇ ಪಂದ್ಯಕ್ಕೆ ಗೈರಾಗಿದ್ರು. ಮಾರ್ಚ್ 25ರಿಂದ 29ರವರೆಗೆ ಧರ್ಮಶಾಲಾದಲ್ಲಿ ನಡೆದ ಆ ಪಂದ್ಯವನ್ನ ಅಜಿಂಕ್ಯ ರಹಾನೆ ಮುನ್ನಡೆಸಿದ್ರು. ಆ ಪಂದ್ಯವನ್ನ ಭಾರತ ಎಂಟು ವಿಕೆಟ್ಗಳಿಂದ ಗೆದ್ದಿತ್ತು. ಹಾಗೇ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಪಂದ್ಯ!
ದಕ್ಷಿಣ ಆಫ್ರಿಕಾ ವಿರುದ್ಧ 2018ರಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿ ನಡೆದಿತ್ತು. ಈ ವೇಳೆ ಭಾರತ ಹಾಗೇ ದಕ್ಷಿಣ ಆಫ್ರಿಕಾ ತಂಡಗಳು ಒಂದೊಂದು ಪಂದ್ಯವನ್ನ ಗೆದ್ದು ಸಮಬಲ ಸಾಧಿಸಿದ್ವು. ಫೆಬ್ರವರಿ 24ಕ್ಕೆ ಕೇಪ್ ಟೌನ್ನಲ್ಲಿ ಮೂರನೇ ಪಂದ್ಯ ನಡೆಯಬೇಕಿದೆ. ಈ ಪಂದ್ಯದ ವೇಳೆಗೆ ವಿರಾಟ್ ಕೊಹ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ರು. ಪರಿಣಾಮ ಮೂರನೇ ಟಿ20ಐ ಪಂದ್ಯದಿಂದ ಹೊರಗುಳಿಯಬೇಕಾಯಿತು. ಆಗಿನ ಉಪನಾಯಕ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತವು ಪಂದ್ಯವನ್ನು ಏಳು ರನ್ಗಳಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿತ್ತು.
2022ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯ!
ದಕ್ಷಿಣ ಆಫ್ರಿಕಾ ವಿರುದ್ಧ 2022ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲೂ ವಿರಾಟ್ ಇಂಜುರಿಗೆ ತುತ್ತಾಗಿದ್ರು. ಮೊದಲ ಟೆಸ್ಟ್ನಲ್ಲಿ ಭಾರತವನ್ನು 113 ರನ್ಗಳ ಬೃಹತ್ ಗೆಲುವಿನತ್ತ ಮುನ್ನಡೆಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲಿ ಬೆನ್ನು ನೋವಿನ ಕಾರಣಕ್ಕೆ ಬೆಂಚ್ ಕಾಯಬೇಕಾಯ್ತು. ಪರಿಣಾಮ ಉಪನಾಯಕನಾಗಿದ್ದ ಕೆಎಲ್ ರಾಹುಲ್ ಕ್ಯಾಪ್ಟನ್ಸಿಯಲ್ಲಿ ಚೊಚ್ಚಲ ಪಂದ್ಯವನ್ನು. ಜನವರಿ 3ರಿಂದ7ರವರೆಗೆ ಜೋಹಾನ್ಸ್ ಬರ್ಗ್ ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ಗಳ ಗೆಲುವು ಪಡೆದಿತ್ತು.
ಇಂಗ್ಲೆಂಡ್ ವಿರುದ್ಧ 2022ರಲ್ಲಿ ಏಕದಿನ ಪಂದ್ಯ ಮಿಸ್!
2022ರ ಜುಲೈ 12 ರಂದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನ ವಿರಾಟ್ ಕೊಹ್ಲಿ ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ರು. ತೊಡೆಸಂದು ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ರು. 7.2 ಓವರ್ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಬೇಟೆಯಾಡಿದ್ರು. ಪರಿಣಾಮವಾಗಿ ಇಂಗ್ಲೆಂಡ್ ತಂಡ 25.2 ಓವರ್ಗಳಲ್ಲಿ 110 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನ ಭಾರತ ಹತ್ತು ವಿಕೆಟ್ಗಳಿಂದ ಗೆದ್ದಿತು.
2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ!
ಇದೇ ವರ್ಷದ ಫೆಬ್ರವರಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಿತ್ತು. ಈ ವೇಳೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿರಲಿಲ್ಲ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಫೆಬ್ರವರಿ 6 ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊಣಕಾಲಿನ ಗಾಯದಿಂದಾಗಿ ಮ್ಯಾಚ್ ಮಿಸ್ ಮಾಡಿಕೊಂಡಿದ್ರು. ಶುಭಮನ್ ಗಿಲ್ ಅವರನ್ನು ಮೂರನೇ ಸ್ಲಾಟ್ನಲ್ಲಿ ಕಣಕ್ಕಿಳಿಸಲಾಗಿತ್ತು. ಆ ಪಂದ್ಯದಲ್ಲಿ 87 ರನ್ ಬಾರಿಸಿದ್ದ ಗಿಲ್ ಶೈನ್ ಆಗಿದ್ರು. ಅಂತಿಮವಾಗಿ ಭಾರತ ತಂಡ ಭಾರತ ನಾಲ್ಕು ವಿಕೆಟ್ಗಳಿಂದ ಪಂದ್ಯವನ್ನ ಗೆದ್ದಿತ್ತು. 18 ವರ್ಷಗಳ ಆರ್ಸಿಬಿ ಜೊತೆಗಿನ ಪಯಣದಲ್ಲಿ ವಿರಾಟ್ ಕೊಹ್ಲಿ ಕೇವಲ ನಾಲ್ಕು ಪಂದ್ಯಗಳನ್ನ ಮಾತ್ರ ಮಿಸ್ ಮಾಡಿಕೊಂಡಿದ್ದಾರೆ.

ನೋಡಿರಿ

