ಇಂಡಿಯಾ VS ಇಂಗ್ಲೆಂಡ್.. ಕಿಂಗ್ ಕೊಹ್ಲಿ ಗರ್ವಭಂಗ? – ಈ ಬಾರಿ ರೊಚ್ಚಿಗೇಳೋದು ಪಕ್ಕಾ!

ಇಂಡಿಯಾ VS ಇಂಗ್ಲೆಂಡ್.. ಕಿಂಗ್ ಕೊಹ್ಲಿ ಗರ್ವಭಂಗ? – ಈ ಬಾರಿ ರೊಚ್ಚಿಗೇಳೋದು ಪಕ್ಕಾ!

ಇಂಡಿಯಾ VS ಇಂಗ್ಲೆಂಡ್.. ಇಂಡಿಯಾ VS ಪಾಕಿಸ್ತಾನ.. ಇಂಡಿಯಾ VS ಆಸ್ಟ್ರೇಲಿಯಾ.. ಭಾರತ ಈ ಮೂರು ದೇಶಗಳ ವಿರುದ್ಧ ಕ್ರಿಕೆಟ್ ಮ್ಯಾಚ್ ಆಡೋವಾಗ ಅದು ಕೇವಲ ಕ್ರಿಕೆಟ್​ಗಷ್ಟೇ ಸೀಮಿತವಾಗಿರೋದಿಲ್ಲ. ಅದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತೆ.. ಮರ್ಯಾದೆಯ ಮ್ಯಾಚ್​ಗಳಾಗಿರುತ್ತೆ.. ಸೋತ್ರೆ ಮುಖಭಂಗ ಮಾತ್ರವಲ್ಲ, ಗರ್ವಭಂಗವೇ ಆಗುತ್ತೆ. ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತ್ರೆ ಅರಗಿಸಿಕೊಳ್ಳೋದೆ ಕಷ್ಟವಾಗುತ್ತೆ. ಪಾಕಿಸ್ತಾನ ವಿಚಾರದಲ್ಲಂತೂ ಕೇಳೋದೇ ಬೇಡ ಬಿಡಿ. ಈ ಮೂರು ದೇಶಗಳ ವಿರುದ್ಧ ಗೆದ್ರೆ ಅದ್ರಲ್ಲಿರೋ ಮಜಾನಾ ಬೇರೆ. ಅವತ್ತು ಆಸ್ಟ್ರೇಲಿಯಾವನ್ನ ಅವರದ್ದೇ ನೆಲದಲ್ಲಿ ಸೋಲಿಸಿ ಟೆಸ್ಟ್​ ಸೀರಿಸ್ ಗೆದ್ದಿದ್ದನ್ನ ಆ ದಿನ ಬಂದಾಗ ಈಗಲೂ ಕೂಡ ಸಂಭ್ರಮಿಸ್ತಾ ಇದ್ದಾರೆ. ಸ್ಟಾರ್​​ಸ್ಪೋರ್ಟ್ಸ್​ನಲ್ಲಂತೂ ಪ್ರತೀವರ್ಷ ಅದೇ ಮ್ಯಾಚ್​​ನ್ನ ಹಾಕ್ತಾರೆ. ಈಗ ಅಂಥದ್ದೇ ಇನ್ನೊಂದು ಇಗೋ ಕ್ಲ್ಯಾಶ್ ಆಗೋ ಸೀರಿಸ್ ಬಂದಿದೆ. ಇಂಡಿಯಾ VS ಇಂಗ್ಲೆಂಡ್.. ಪ್ರತಿ ಬಾರಿಯೂ ಭಾರತ-ಇಂಗ್ಲೆಂಡ್ ನಡುವೆ ಸೀರಿಸ್ ಆರಂಭವಾಗೋ ಮುನ್ನ ಇಂಗ್ಲೆಂಡ್​ನ ಯಾರಾದ್ರೂ ಒಬ್ಬ ಆಟಗಾರ, ಇಲ್ಲಾ ಮಾಜಿ ಆಟಗಾರ ಟೀಂ ಇಂಡಿಯಾವನ್ನ ಕೆಣಕಿ ಏನಾದ್ರು ಒಂದು ಸ್ಟೇಟ್​ಮೆಂಟ್ ಕೊಡ್ತಾರೆ. ನಮ್ಮ ಆಟಗಾರರ ಬಗ್ಗೆಯೋ, ಇಲ್ಲಾ ಟೀಮ್​​ ಬಗ್ಗೆಯೋ ಏನಾದ್ರು ಒಂದು ಹೇಳಿಯೇ ಇರ್ತಾರೆ. ಮೈಕಲ್ ವಾನ್ ಅಂತೂ ಕೇಳೋದೆ ಬೇಡ. ಅವರಿಗೆ ಅದೇ ಕೆಲಸ. ಟೀಂ ಇಂಡಿಯಾಗೆ ವಿರುದ್ಧ ಏನಾದ್ರೂ ಟ್ವೀಟ್ ಮಾಡಿದ್ರಷ್ಟೇ ಅವರ ಬೇಳೆ ಬೇಯೋದು. ಆದ್ರೆ ಈಗ ಟೀಂ ಇಂಡಿಯಾವನ್ನ ಎದುರಿಸೋ ಇಂಗ್ಲೆಂಡ್​ನ ಆಟಗಾರನೇ ವಿರಾಟ್ ಕೊಹ್ಲಿ ಬಗ್ಗೆ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಪ್ಲೇಯರ್ ಯಾರು? ಕೊಹ್ಲಿ ಬಗ್ಗೆ ಹೇಳಿದ್ದೇನು? ಈ ಬಾರಿ ಟೆಸ್ಟ್​ ಸೀರಿಸ್ ಹೇಗಿರಬಹುದು ಅನ್ನೋ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದ್ರಾವಿಡ್ ಸೂಚನೆಗೂ ಅಹಂಕಾರಿ ಇಶಾನ್ ಕಿಶನ್ ಡೋಂಟ್‌ಕೇರ್‌- ಟೀಂ ಇಂಡಿಯಾ ಬಾಗಿಲು ಬಂದ್?

ಜನವರಿ 25ರಿಂದ ಭಾರತ-ಇಂಗ್ಲೆಂಡ್ ಮಧ್ಯೆ 5 ಮ್ಯಾಚ್​​ಗಳ ಟೆಸ್ಟ್​​ ಸೀರಿಸ್​​ನ ಫಸ್ಟ್ ಮ್ಯಾಚ್​ ಶುರುವಾಗ್ತಿದೆ. ಹೈವೋಲ್ಟೇಜ್ ಮ್ಯಾಚ್​​ಗಳು ನಡೆಯೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ಮ್ಯಾಚ್ ಸ್ವಲ್ಪ ಗರಂ ಆಗಿರಬೇಕು ಅಂದ್ರೆ ಸ್ವಲ್ಪ ಬಿಸಿ ಮಾಡ್ಬೇಕಲ್ಲ. ಒಂದು ಅಟ್ಮಾಸ್ಪಿಯರ್ ಕ್ರಿಯೇಟ್​​ ಮಾಡ್ಬೇಕಲ್ಲ. ಇಂಗ್ಲೆಂಡ್​ನ ಫಾಸ್ಟ್ ಬೌಲರ್ ಓಲಿ ರಾಬಿನ್ಸನ್ ಈಗ ಅದನ್ನೇ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ತುಂಬಾನೆ ಇಗೋ ಇದೆ. ವಿರಾಟ್ ಕೊಹ್ಲಿ ಈಸ್ ಎ ಬಿಗ್ ಇಗೋ ಪರ್ಸನ್ ಅನ್ನೋ ಸ್ಟೇಟ್​ಮೆಂಟ್​​ನ್ನ ಓಲಿ ರಾಬಿನ್ಸನ್ ಕೊಟ್ಟಿದ್ದಾರೆ. ಸದ್ಯ ವರ್ಲ್ಡ್​ ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿ ವನ್​ ಆಫ್ ದಿ ಬೆಸ್ಟ್ ಪ್ಲೇಯರ್ ಆಗಿದ್ದು, ಅಂಥವರನ್ನ ಔಟ್ ಮಾಡಬೇಕು ಅನ್ನೋದು ಎಲ್ಲಾ ಬೌಲರ್ಸ್​ಗಳ ಮೇನ್ ಟಾರ್ಗೆಟ್ ಆಗಿರುತ್ತೆ. ವಿರಾಟ್ ಕೊಹ್ಲಿಗೆ ತುಂಬಾ ಇಗೋ ಇದೆ. ಇಂಡಿಯನ್​ ಪಿಚ್​ಗಳಲ್ಲಿ ಅವರನ್ನ ಫೇಸ್ ಮಾಡೋದು ಅಷ್ಟು ಈಸಿ ಇಲ್ಲ. ಹೀಗಾಗಿ ಈ ಬಾರಿ ಭಾರಿ ಅಹಂಕಾರ ಇರೋ ಕೊಹ್ಲಿ ಜೊತೆಗೆ ಸೆಣೆಸಾಡೋಕೆ ಎದುರು ನೋಡ್ತಾ ಇರೋದಾಗಿ ಓಲಿ ರಾಬಿನ್ಸನ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೀರಿಸ್​ ಈ ಬಾರಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿರೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಯಾಕಂದ್ರೆ, ವಿರಾಟ್​​ ಕೊಹ್ಲಿ ಬಗ್ಗೆ ಎದುರಾಳಿ ಪ್ಲೇಯರ್ಸ್​ಗಳೇ ಈ ರೀತಿಯ ಸ್ಟೇಟ್​ಮೆಂಟ್ ಕೊಟ್ರೆ ಅಫ್​​​ಕೋಸ್ ಕೊಹ್ಲಿ ಎಕ್ಸ್​​ಟ್ರಾ ಚಾರ್ಜ್ ಆಗಿ ಬಿಡ್ತಾರೆ. ಮೊದಲೇ ವಿರಾಟ್ ಕೊಹ್ಲಿ ಸಿಕ್ಕಾಬಟ್ಟೆ ಅಗ್ರೆಸ್ಸಿವ್ ಇದ್ದಾರೆ. ಅದ್ರಲ್ಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಆಡೋವಾಗ ಕೊಹ್ಲಿಯನ್ನಂತೂ ಕೇಳೋದೇ ಬೇಡ. ಫುಲ್​​ ಫೋರ್ಸ್​​ನಲ್ಲಿರ್ತಾರೆ. ವಿಕೆಟ್ ಬಿದ್ದಾಗ ಅವರ ಸಲೆಬ್ರೇಷನ್​​ ನೋಡಿಯೇ ನಮ್ಮ ಬೌಲರ್ಸ್​ಗಳ ಜೊತೆಗೆ ಇಡೀ ಟೀಮ್​ನಲ್ಲಿ ಇಂಟೆನ್ಸಿಟಿ ಕ್ರಿಯೇಟ್ ಆಗುತ್ತೆ. ಟೆಸ್ಟ್​​ ಕ್ರಿಕೆಟ್​ನ ಪ್ರತಿ ಬಾಲ್​​ನ್ನ, ಎವ್ರೀ ಮೂಮೆಂಟ್​​ನ್ನೂ ಕೊಹ್ಲಿ ಎಂಜಾಯ್ ಮಾಡ್ತಾರೆ. ಹೀಗಾಗಿಯೇ ಈ ಹಿಂದೆ ಆಸ್ಟ್ರೇಲಿಯಾದ ಸ್ಪಿನ್ ಲೆಜೆಂಡ್ ಶೇನ್​ ವಾರ್ನ್ ಒಂದು ಮಾತು ಹೇಳಿದ್ರು. ವಿರಾಟ್ ಕೊಹ್ಲಿಯಿಂದಾಗಿ ಟೆಸ್ಟ್​​ ಕ್ರಿಕೆಟ್​ಗೆ ಜೀವ ಬಂದಂತಾಗಿದೆ. ಕೊಹ್ಲಿಯನ್ನ ನೋಡೋಕೆ ಅಂತಾನಾದ್ರೂ ಟೆಸ್ಟ್​ ಮ್ಯಾಚ್​​ ನೋಡ್ಬೇಕು ಅನ್ಸುತ್ತೆ. ಟೆಸ್ಟ್ ಕ್ರಿಕೆಟ್​​ಗೆ ವಿರಾಟ್ ಕೊಹ್ಲಿಯಂಥಾ ಆಟಗಾರರ ಅನಿವಾರ್ಯತೆ ಇದೆ ಅಂತಾ ಶೇನ್​ ವಾರ್ನ್ ಹೇಳಿದ್ರು. ಯಾಕಂದ್ರೆ ಕೊಹ್ಲಿಯ ಫೈಟಿಂಗ್ ಸ್ಪಿರಿಟ್ ಆ ರೇಂಜ್​ನಲ್ಲಿರುತ್ತೆ. ಒಪೊಸಿಟ್ ಟೀಮ್​​ ಸ್ಲೆಡ್ಜ್​ ಮಾಡಿದ್ರಂತೂ ವಿರಾಟ್ ಕೊಹ್ಲಿಯ ಅವತಾರವೇ ಬೇರೆ ಇರುತ್ತೆ. ಅದ್ರಲ್ಲೂ ಓಲಿ ರಾಬಿನ್ಸನ್​ ಸ್ವಲ್ಪ ಅಗ್ರೆಸ್ಸಿವ್ ನೇಚರ್​​ನ ಬೌಲರ್​. ಬಾಲ್ ಎಸೆದ ಮೇಲೆ ಸ್ಲೆಡ್ಜಿಂಗ್​ ಮೂಲಕ ಬ್ಯಾಟ್ಸ್​​ಮನ್​ಗಳನ್ನ ಕೆಣಕೋ ಕೆಲಸ ಮಾಡ್ತಾರೆ. ಈ ಬಾರಿ ವಿರಾಟ್​ ಕೊಹ್ಲಿಯನ್ನೂ ಕೆಣಕಿದ್ರೂ ಅಂದ್ರೆ ಅಷ್ಟೇ ಕಥೆ. ಕೋಲು ಕೊಟ್ಟು ಹೊಡೆಸಿಕೊಂಡಂತಾಗಿಬಿಡುತ್ತೆ. ಅದು ಬೇರೆ ಟೆಸ್ಟ್​ ಸೀರಿಸ್ ನಡೀತಾ ಇರೋದು ಭಾರತದಲ್ಲೇ. ಸೋ ಈ ಸೀರಿಸ್ ನಿಜಕ್ಕೂ ತುಂಬಾನೆ ಇಂಟ್ರೆಸ್ಟಿಂಗ್ ಆಗಿರಲಿದೆ.

ಇನ್ನು ಈ ಸೀರಿಸ್​​ನಲ್ಲಿ ವಿರಾಟ್ ಕೊಹ್ಲಿಗೆ ಒಂದಷ್ಟು ಮೈಲ್​ಸ್ಟೋನ್ ಕ್ರಿಯೇಟ್ ಮಾಡುವ ಅವಕಾಶ ಕೂಡ ಇದೆ.

ಈಗಾಗ್ಲೇ ಟೆಸ್ಟ್​​ ಕ್ರಿಕೆಟ್​​ನಲ್ಲಿ 29 ಸೆಂಚೂರಿಗಳನ್ನ ಹೊಡೆದಿರೋ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 30ನೇ ಸೆಂಚೂರಿ ಹೊಡೆಯಬಹುದು. ಹಾಗೆಯೇ ಟೆಸ್ಟ್​ ಕ್ರಿಕೆಟ್​​ನಲ್ಲಿ 9000 ರನ್​​ಗಳನ್ನ ಕಂಪ್ಲೀಟ್​​ ಮಾಡಬಹುದು. ಇನ್ನು ಕೊಹ್ಲಿಗೆ ಬೇಕಾಗಿರೋದು ಜಸ್ಟ್ 152 ರನ್ಸ್. ಸಚಿನ್ ತೆಂಡೂಲ್ಕರ್, ರಾಹುಲ್​ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಈ ಮೂವರನ್ನ ಬಿಟ್ರೆ ಇನ್ಯಾರು ಕೂಡ ಭಾರತದ ಪರ ಟೆಸ್ಟ್​ ಕ್ರಿಕೆಟ್​​ನಲ್ಲಿ 9000+ ಸ್ಕೋರ್ ಮಾಡಿಲ್ಲ. ಇದ್ರ ಜೊತೆಗೆ 9 ಬೌಂಡರಿ ಹೊಡೆದ್ರೆ ವಿರಾಟ್ ಕೊಹ್ಲಿ ಟೆಸ್ಟ್​ನಲ್ಲಿ 1000 ಬೌಂಡರಿ ಹೊಡೆದಂತಾಗುತ್ತೆ. ಅಂದ್ರೆ 4000 ರನ್ ಬರೀ ಬೌಂಡರಿಯಲ್ಲೇ ಬಂದಂತೆ. ಹಾಗೆಯೇ ಇನ್ನು 9 ರನ್​ಗಳನ್ನ ಹೊಡೆದ್ರೆ ಇಂಗ್ಲೆಂಡ್ ವಿರುದ್ಧವೇ ವಿರಾಟ್​ ಕೊಹ್ಲಿ 2000 ರನ್ ಕಂಪ್ಲೀಟ್ ಮಾಡ್ತಾರೆ. ಇಲ್ಲೂ ಅಷ್ಟೇ ಕೊಹ್ಲಿ ಬಳಿಕ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಇವರಿಬ್ಬರೇ ಇಂಗ್ಲೆಂಡ್ ವಿರುದ್ಧ ಹೈಯೆಸ್ಟ್ ಸ್ಕೋರ್ ಮಾಡಿರೋದು. ಹಾಗೆಯೇ ಇಂಗ್ಲೆಂಡ್ ವಿರಾಟ್ ಕೊಹ್ಲಿಯ ಫೇವರೇಟ್ ಓಪನೆಂಟ್ ಟೀಮ್ ಆಗುವ ಸಾಧ್ಯತೆ ಇದೆ. ಸದ್ಯ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಹೈಯೆಸ್ಟ್ ಅಂದ್ರೆ 2042 ರನ್ ಮಾಡಿದ್ದಾರೆ.  ಬಟ್ ಇನ್ನು ಇಂಗ್ಲೆಂಡ್ ವಿರುದ್ಧ 52 ರನ್ ಹೊಡೆದ್ರೆ ಆಸ್ಟ್ರೇಲಿಯಾ ವಿರುದ್ಧದ ತಮ್ಮ ರೆಕಾರ್ಡ್​ನ್ನ ತಾವೇ ಬೀಟ್ ಮಾಡ್ತಾರೆ. ಇಲ್ಲಿಗೇ ಮುಗಿದಿಲ್ಲ, ವಿರಾಟ್ ಕೊಹ್ಲಿ ಈ 5 ಮ್ಯಾಚ್​ಗಳ ಸೀರಿಸ್​ನಲ್ಲಿ 3 ಸೆಂಚೂರಿ ಹೊಡೆದ್ರೆ ಇಂಗ್ಲೆಂಡ್ ವಿರುದ್ಧ ಹೈಯೆಸ್ಟ್ ಸೆಂಚೂರಿ ಹೊಡೆದ ಬ್ಯಾಟ್ಸ್​ಮನ್ ಎನ್ನಿಸಿಕೊಳ್ತಾರೆ. ಒನ್ಸ್ ಅಗೈನ್ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಇಬ್ಬರೂ ಇಂಗ್ಲೆಂಡ್ ವಿರುದ್ಧ ತಲಾ 7 ಸೆಂಚೂರಿಗಳನ್ನ ಹೊಡೆದಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ 5 ಸೆಂಚೂರಿ ಹೊಡೆದಿದ್ದಾರೆ.

ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸೀರಿಸ್​​ ವಿರಾಟ್​​ ಕೊಹ್ಲಿ ಪಾಲಿಗೆ ಮೋಸ್ಟ್​ ಮೆಮೋರೆಬಲ್ ಸೀರಿಸ್ ಆಗೋ ಸಾಧ್ಯತೆ ಇದೆ. ಸಾಲು ಸಾಲು ರೆಕಾರ್ಡ್ ಮಾಡೋ ಗೋಲ್ಡನ್​ ಅಪಾರ್ಚ್ಯುನಿಟಿ. ಹೀಗಾಗಿ ವಿರಾಟ್ ಕೊಹ್ಲಿ ಜೊತೆಗೆ ಫ್ಯಾನ್ಸ್ ಕೂಡ ಲುಕಿಂಗ್ ಫಾರ್ವರ್ಡ್​ ಟು ಇಂಡಿಯಾ VS ಇಂಗ್ಲೆಂಡ್ ಸೀರಿಸ್.

Sulekha