ಮಾಸ್ಟರ್ ಬ್ಲಾಸ್ಟರ್ ಸಚಿನ್ ಜೊತೆ ವಿರಾಟ್ ಕೊಹ್ಲಿ ಸಂತಸದ ಕ್ಷಣ – ಕ್ರಿಕೆಟ್ ದಿಗ್ಗಜರ ಸಮಾಗಮ ಕಂಡು ಫ್ಯಾನ್ಸ್ ಫಿದಾ

ಮಾಸ್ಟರ್ ಬ್ಲಾಸ್ಟರ್ ಸಚಿನ್ ಜೊತೆ ವಿರಾಟ್ ಕೊಹ್ಲಿ ಸಂತಸದ ಕ್ಷಣ – ಕ್ರಿಕೆಟ್ ದಿಗ್ಗಜರ ಸಮಾಗಮ ಕಂಡು ಫ್ಯಾನ್ಸ್ ಫಿದಾ

ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮೇ 8 ಸ್ಪೆಷಲ್ ಡೇ. ಯಾಕೆಂದರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ , ಕ್ರಿಕೆಟ್ ರನ್ ಮೆಷಿನ್ ವಿರಾಟ್ ಕೊಹ್ಲಿ ಜೊತೆಯಲ್ಲಿ ಕೆಲ ಸಮಯ ಕಳೆದಿದ್ದಾರೆ. ಕ್ರಿಕೆಟ್ ದಿಗ್ಗಜರ ಮಹಾಸಂಗಮ ನೋಡಿ ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ನಡುವೆ ಮಂಗಳವಾರ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಕೆ.ಎಲ್ ರಾಹುಲ್ – ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗೂ ಡೌಟ್..!

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಅಭ್ಯಾಸದ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಕಿಂಗ್ ಕೊಹ್ಲಿ ಭೇಟಿಯಾಗಿದ್ದಾರೆ. ಈ ಅಪೂರ್ವ ಸಮಾಗಮದ ಫೋಟೋಗಳನ್ನು ಆರ್‌ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ವಿಶೇಷ ಎಂದರೆ ಈ ಇಬ್ಬರು ಭಾರತೀಯ ದಂತಕಥೆಗಳು ಒಟ್ಟು 59,679 ಅಂತರಾಷ್ಟ್ರೀಯ ರನ್ ಮತ್ತು 175 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ಸಚಿನ್ ತೆಂಡೂಲ್ಕರ್ ಬಳಿಕ ಅತ್ಯಧಿಕ ಅಂತಾರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಅವರ ಹಲವು ದಾಖಲೆಯನ್ನು ಮುರಿಯುವ ಮೂಲಕ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ವಿಶೇಷ ಎಂದರೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಬಲ್ಲರು ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಿಂಗ್ ಕೊಹ್ಲಿ ಕೂಡ ಅದೇ ಹಾದಿಯಲ್ಲಿ ಸಾಗಿರುವುದು ವಿಶೇಷ.

suddiyaana