ಕೊಹ್ಲಿಗೆ RCBಯೇ ಉಸಿರು! – ಆರ್‌ಸಿಬಿ ಸೋಲಿನ ನೋವಲ್ಲಿ ಏಕಾಂಗಿಯಾದ್ರಾ ವಿರಾಟ್ ಕೊಹ್ಲಿ?

ಕೊಹ್ಲಿಗೆ RCBಯೇ ಉಸಿರು! – ಆರ್‌ಸಿಬಿ ಸೋಲಿನ ನೋವಲ್ಲಿ ಏಕಾಂಗಿಯಾದ್ರಾ ವಿರಾಟ್ ಕೊಹ್ಲಿ?

ವಿರಾಟ್ ಕೊಹ್ಲಿ ಎಂತಹ ಅದ್ಭುತ ಆಟಗಾರ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ವಿದೇಶಗಳ ಮ್ಯಾಜಿಕಲ್ ಬೌಲರ್​ಗಳೂ ಕೂಡ ಕೊಹ್ಲಿ ಕ್ರೀಸ್​​ನಲ್ಲಿದ್ರೆ ಬೌಲ್ ಮಾಡೋಕೆ ಹೆದರುತ್ತಾರೆ. ಕೆಕೆಆರ್ ವಿರುದ್ಧ ಮಂಗಳವಾರ ರಾಜಸ್ಥಾನ ಪಂದ್ಯವನ್ನ ಗೆಲ್ಲಿಸಿದ ಜೋಸ್ ಬಟ್ಲರ್ ಕೂಡ ಕೊಹ್ಲಿ ಮತ್ತು ಧೋನಿಯೇ ಸ್ಪೂರ್ತಿ ಎಂದಿದ್ದಾರೆ.   ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರು ಪಂದ್ಯದಲ್ಲಿ ಯಾವ ರೀತಿ ಕೊನೆಯವರೆಗೂ ನಿಂತು ಆಡುತ್ತಾರೋ ಅದೇ ರೀತಿ ನಾನು ಕೂಡ ಪಂದ್ಯದ ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ನಿಲ್ಲಲು ಪ್ರಯತ್ನಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಕೊಹ್ಲಿ ನೂರಾರು ಆಟಗಾರರಿಗೆ ಸ್ಫೂರ್ತಿಯಾಗಿದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಫೇವರಿಟ್ ಆಗಿದ್ದಾರೆ. ಹೀಗಿದ್ರೂ ಆರ್​ಸಿಬಿ ತಂಡ ಮತ್ತು ಬೆಂಗಳೂರೇ ಕೊಹ್ಲಿಗೆ ಅಚ್ಚುಮೆಚ್ಚು. ಯಾಕಂದ್ರೆ ಆರ್​ಸಿಬಿ ಮತ್ತು ಕೊಹ್ಲಿ ನಡುವಿನ ಸಂಬಂಧವೇ ಹಾಗಿದೆ.

ಇದನ್ನೂ ಓದಿ: ಮದುವೆಗೆ ಮೊದಲು ದೇವಾಲಯಗಳಿಗೆ ಕೋಟಿ ಕೋಟಿ ದಾನ – 2 ದೇವಾಲಯಗಳಿಗೆ 5ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ

ಆರ್​ಸಿಬಿಯಲ್ಲೇ ಐಪಿಎಲ್ ಕರಿಯರ್ ಆರಂಭಿಸಿದ ಕೊಹ್ಲಿ ಅಷ್ಟೇ ನಿಯತ್ತಿನಿಂದ ಆಡುತ್ತಿದ್ದಾರೆ. 2008 ರ ಡ್ರಾಫ್ಟ್‌ನಲ್ಲಿ ಬೆಂಗಳೂರು ತಂಡಕ್ಕೆ ಸೇರಿದ ಕೊಹ್ಲಿ ಐಪಿಎಲ್ ಇತಿಹಾಸದ ಪ್ರತಿ ಋತುವಿನಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಆಟಗಾರನಾಗಿದ್ದಾರೆ. ಐಪಿಎಲ್ ಹಿಸ್ಟರಿಯಲ್ಲೇ ಇಲ್ಲಿಯವರೆಗೆ ಆಡಿದ ಎಲ್ಲಾ 17 ಸೀಸನ್‌ಗಳಲ್ಲಿ ಒಂದು ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ. ಒಂದು ಕಾಲದಲ್ಲಿ 17 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿದ್ದ ವಿರಾಟ್ ಅವರ ಮೊದಲ ಸಂಭಾವನೆ ಅತಿ ಬರೀ 12 ಲಕ್ಷ ರೂಪಾಯಿ. ಐಪಿಎಲ್ 2008 ರ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ 12 ಲಕ್ಷ ರೂಪಾಯಿಗೆ  ಆರ್‌ಸಿಬಿ ಸೇರಿಕೊಂಡರು. ಐಪಿಎಲ್ 2009 ಮತ್ತು 2010 ರಲ್ಲಿ ಅದೇ ಮೊತ್ತದಲ್ಲಿ ಆಡಿದರು. ಬಳಿಕ ಐಪಿಎಲ್ 2011 ರ ಮೆಗಾ-ಹರಾಜಿನ ಮೊದಲು ವಿರಾಟ್ ಅವರನ್ನು ಉಳಿಸಿಕೊಂಡ ಆರ್​ಸಿಬಿ 8.28 ಕೋಟಿ ರೂ. ಸಂಭಾವನೆ ಹೆಚ್ಚಿಸಿತು. ವಿರಾಟ್ 2012 ರಲ್ಲಿ ODI ತಂಡದ ಉಪನಾಯಕನಾಗಿ ನೇಮಕಗೊಂಡರು ಮತ್ತು ಅದೇ ವರ್ಷ RCB ನಾಯಕತ್ವದ ಗುಂಪಿಗೆ ಸೇರ್ತಾರೆ. IPL 2013 ಕ್ಕೆ  RCB ಕ್ಯಾಪ್ಟನ್ ಆದ ಕೊಹ್ಲಿಯವ್ರ ವೇತನ  12.5 ಕೋಟಿ ರೂಪಾಯಿಗೆ ಏರಿಕೆ ಆಗುತ್ತೆ. ಇನ್ನು ವಿರಾಟ್ 2017 ರಲ್ಲಿ ಭಾರತದ ಆಲ್-ಫಾರ್ಮ್ಯಾಟ್ ಕ್ಯಾಪ್ಟನ್ ಆದಾಗ ಐಪಿಎಲ್ 2018 ರ ಮೆಗಾ-ಹರಾಜಿಗೂ ಮೊದಲು, ಆರ್‌ಸಿಬಿ ಫ್ರಾಂಚೈಸಿ ಅವರನ್ನು 17 ಕೋಟಿಗೆ ಉಳಿಸಿಕೊಂಡಾಗ ವಿರಾಟ್ ದಾಖಲೆ ಸೃಷ್ಟಿಸಿದರು. ಆದ್ರೆ ಐಪಿಎಲ್ 2021 ರ ನಂತರ ವಿರಾಟ್ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿತಾರೆ. ಆಗ ಐಪಿಎಲ್ 2022 ರ ಮೆಗಾ-ಹರಾಜಿನ ಮೊದಲು ಅವರ ಮೊತ್ತವನ್ನು 15 ಕೋಟಿ ರೂಪಾಯಿಗೆ ಇಳಿಸಲಾಯ್ತು. ಈಗ ಅನೇಕ ಐಪಿಎಲ್ ಆಟಗಾರರು ವಿರಾಟ್‌ಗಿಂತ ಹೆಚ್ಚು ಗಳಿಸುತ್ತಿದ್ದಾರೆ. ಆದ್ರೂ ವಿರಾಟ್ ಹಣಕ್ಕಿಂತ ಹೆಚ್ಚಾಗಿ ಜೀವದಂತೆ ಪ್ರೀತಿಸಿ ಅಭಿಮಾನಿಗಳಿಗಾಗಿ ಆರ್​ಸಿಬಿಯಲ್ಲೇ ಉಳಿದುಕೊಂಡಿದ್ದಾರೆ. ಮುಂದಿನ ತಮ್ಮ ವೃತ್ತಿಜೀವನದ ಉಳಿದ ಸೀಸನ್​ಗಳಲ್ಲೂ ಆರ್​ಸಿಬಿ ಪರವೇ ಆಡಲಿದ್ದಾರೆ.

ಹಾಗೇನಾದ್ರೂ ವಿರಾಟ್ ಕೊಹ್ಲಿ ಒಂದು ವೇಳೆ ಆರ್​ಸಿಬಿ ಬಿಟ್ಟು ಬೇರೆ ಟೀಂ ಸೇರಲು ಹರಾಜಿಗೆ ಬಂದ್ರೆ ಬಹುಶಃ ಫ್ರಾಂಚೈಸಿಗಳ ಬಳಿ ಅವ್ರನ್ನ ಕೊಂಡುಕೊಳ್ಳುವಷ್ಟು ಹಣವೇ ಇರೋದಿಲ್ವೋ ಏನೋ. ಆದ್ರೂ ವಿರಾಟ್ ಆರ್​ಸಿಬಿಯೇ ತಮ್ಮ ಉಸಿರು ಎಂದುಕೊಂಡು ಆಡ್ತಿದ್ದಾರೆ. ಆದ್ರೆ ಒಂದು ಬೇಸರ ಏನಂದ್ರೆ ಇಷ್ಟೊಂದು ಲಾಯಲ್ ಫ್ಯಾನ್ಸ್ ಇರೋ ಟೀಮ್​ಗೆ ಒಂದು ಸಲವೂ ಕಪ್ ಗೆಲ್ಲಿಸಿಕೊಡೋಕೆ ಆಗ್ಲಿಲ್ಲ ಅನ್ನೋ ನೋವು ಅವ್ರಲ್ಲೂ ಕಾಡ್ತಿದೆ. ಸದ್ಯ ಸೀಸನ್ 17ನ ಆವೃತ್ತಿಯಲ್ಲಿ ಆರ್​ಸಿಬಿ ಟೀಂ ಇಲ್ಲಿಯವರೆಗೂ ಆಡಿದ 7 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದು, ಇನ್ನುಳಿದ 6ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪ್ಲೇ-ಆಫ್ ಹಾದಿಯನ್ನು ಕಠಿಣವಾಗಿಸಿಕೊಂಡಿದೆ. ಮುಂದಿನ ಪ್ರತಿಯೊಂದು ಪಂದ್ಯವನ್ನು ಗೆದ್ದರೆ ಮಾತ್ರ ಆರ್‌ಸಿಬಿಯ ನಾಕ್‌ಔಟ್‌ ಹಾದಿ ಜೀವಂತವಾಗಿರಲಿದೆ. ಅಂದ ಹಾಗೆ ಆರ್‌ಸಿಬಿ ತಂಡದ ಕಳಪೆ ಪ್ರದರ್ಶನದ ಬಗ್ಗೆ ಭಾರತೀಯ ಟೆನಿಸ್‌ ದಿಗ್ಗಜ ಮಹೇಶ್‌ ಭೂಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿಯನ್ನು ಹೊಸಬರಿಗೆ ಮಾರಾಟ ಮಾಡುವಂತೆ ಬಿಸಿಸಿಐಗೆ ಆಗ್ರಹಿಸಿದ್ದಾರೆ. ಒಟ್ನಲ್ಲಿ ಪ್ರತೀ ವರ್ಷ ಐಪಿಎಲ್ ಶುರುವಾದಾಗ ಆರ್​ಸಿಬಿ ಫ್ಯಾನ್ಸ್​ಗೆ ಇರೋ ಜೋಶ್ ನಾಲ್ಕೈದು ಪಂದ್ಯಗಳು ಆಗ್ತಿದ್ದಂತೆ ಮರೆಯಾಗ್ತಿದೆ. ಒಂದೇ ಒಂದು ಟ್ರೋಫಿಗಾಗಿ ಎದುರು ನೋಡುತ್ತಿದ್ದಾರೆ. ಆರ್​ಸಿಬಿ ಸೋಲಿನ ನೋವು ಕೊಹ್ಲಿಯವ್ರನ್ನೂ ಕಾಡ್ತಿದೆ.

Sulekha