ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕಳಿಸಿಬಿಡಿ ಎಂದ ಫ್ಯಾನ್ಸ್ – ನೆಚ್ಚಿನ ಆಟಗಾರನ ನೋವು ನೋಡಿ ಅಭಿಮಾನಿಗಳು ಭಾವುಕ
ಐಪಿಎಲ್ ಸೀಸನ್ 17ನಲ್ಲಿ ಬೇರೆಲ್ಲಾ ಟೀಮ್ಗಳು ಅಬ್ಬರಿಸುತ್ತಾ ಸೋಲುವ ಪಂದ್ಯವನ್ನೂ ಪವಾಡದಂತೆ ಗೆದ್ದು ಮುನ್ನುಗ್ಗುತ್ತಿದ್ದಾರೆ. ಒಂದು ಮ್ಯಾಚ್ ಸೋತ್ರೂ ಮತ್ತೊಂದರಲ್ಲಿ ಥೂಫಾನ್ನಂತೆ ಮೇಲೇಳ್ತಿದ್ದಾರೆ. ಆದ್ರೆ ನಮ್ಮ ಆರ್‌ಸಿಬಿ ಮಾತ್ರ ಒಂದು, ಎರಡು, ಮೂರು, ನಾಲ್ಕು ಅಂತಾ ಸೋಲ್ತಾನೇ ಹೋಗ್ತಿದ್ದಾರೆ. ಮೊನ್ನೆ ಹೈದ್ರಾಬಾದ್ ವಿರುದ್ಧವಂತೂ ಅತ್ಯಂತ ಹೀನಾಯವಾಗಿ ಬೌಲಿಂಗ್ ಮಾಡಿ ಕೆಟ್ಟ ದಾಖಲೆ ಬರೆದಿದ್ದಾರೆ. ಈ ಸಲ ಕಪ್ ನಮ್ದೇ, ಈ ಸಲ ಕಪ್ ನಮ್ದೇ ಅಂತಾ ಟ್ರೆಂಡ್ ಮಾಡೋ ಆರ್ಸಿಬಿಯ ಅಭಿಮಾನಿಗಳು ಈ ಸಲ ಅಕ್ಷರಶಃ ಬೇಸತ್ತು ಹೋಗಿದ್ದಾರೆ. ಇವತ್ತಾದ್ರೂ ಗೆಲ್ತಾರೇನೋ ಅಂತಾ ಟಿವಿ, ಮೊಬೈಲ್ ಮುಂದೆ ಕುಳಿತು ನೋಡಿ ಕೊನೆಗೆ ಇವ್ರ ಹಣೆಬರಹನೇ ಇಷ್ಟು ಅಂತಾ ಸುಮ್ಮನಾಗ್ತಿದ್ದಾರೆ. ಆದ್ರೆ ಆರ್ಸಿಬಿಯಲ್ಲಿ ಡೇ ಒನ್ ನಿಂದ ನಿಯತ್ತಾಗಿ ಆಡ್ತಿರೋ ವಿರಾಟ್ ಕೊಹ್ಲಿ ಪರಿಸ್ಥಿತಿ ನೆನೆದು ಅಭಿಮಾನಿಗಳೇ ನೊಂದುಕೊಂಡಿದ್ದಾರೆ. ಕಿಂಗ್ ಕೊಹ್ಲಿಗಾಗಿಯೇ ಮ್ಯಾಚ್ ನೋಡ್ತಿದ್ದ ಕೋಟ್ಯಂತರ ಅಭಿಮಾನಿಗಳು ನೀವು ಆರ್‌ಸಿಬಿ ತಂಡವನ್ನೇ ಬಿಟ್ಟು ಹೋಗಿ ಅಂತಿದ್ದಾರೆ. ಅಷ್ಟಕ್ಕೂ ಕೊಹ್ಲಿ ಬಗ್ಗೆ ಫ್ಯಾನ್ಸ್ ನೊಂದುಕೊಂಡಿರೋದೇಕೆ..? ಜೀವಕ್ಕಿಂತ ಹೆಚ್ಚು ಪ್ರೀತಿಸೋ ಅವ್ರನ್ನೇ ಟೀಂ ಬಿಡಿ ಅಂತಿರೋದೇಕೆ..? ಕೊಹ್ಲಿಯವ್ರ ಪ್ರಸ್ಟ್ರೇಷನ್ ಎಂಥಾದ್ದು..? ಆರ್‌ಸಿಬಿ ಮೇಲೆ ಕಿಂಗ್ ಗೆ ಇರೋ ಪ್ರೀತಿ ಎಂಥಾದ್ದು..? ವಿರಾಟ್ ಕೊಹ್ಲಿ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹಾರ್ದಿಕ್ ನಗುವ ನಾಟಕ? – ಒಳಗೆ ನಡೀತಿರೋದೇನು ಗೊತ್ತಾ?-HITಮ್ಯಾನ್ ಗೆ ಬಿಗ್ ಡೇ!
ಸೋಮವಾರ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಬೌಲರ್ಗಳ ಮಾನ ಹರಾಜಾಗಿದೆ. ಎಸ್ಆರ್ಹೆಚ್ ತಂಡ ಐಪಿಎಲ್ ಇತಿಹಾಸದಲ್ಲೇ ಅತೀಹೆಚ್ಚು ಸ್ಕೋರ್ ಮಾಡಿದೆ. 16 ವರ್ಷಗಳಿಂದ ಅಭಿಮಾನಿಗಳು ಇಟ್ಟಿರೋ ನಿರೀಕ್ಷೆ ಹುಸಿಯಾಗ್ತಿದೆ. ಅದ್ರಲ್ಲೂ ಆರ್‌ಸಿಬಿ ತಂಡಕ್ಕೆ ಫ್ಯಾನ್ಸ್ ಇಷ್ಟು ಸಪೋರ್ಟ್ ಮಾಡೋದು ಕಿಂಗ್ ಕೊಹ್ಲಿಗಾಗಿ. ಆರ್‌ಸಿಬಿಯನ್ನು ತಲೆ ಮೇಲೆ ಎತ್ತುಕೊಂಡು ಮೆರೆಸೋದು ಕೂಡ ಅದೇ ಅದ್ಭುತ ಆಟಗಾರನಿಗಾಗಿ. ಆದ್ರೆ ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಚೆನ್ನಾಗಿ ಆಡಿದ್ರೂ ಉಳಿದವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. 7 ಪಂದ್ಯಗಳಲ್ಲಿ 1 ಶತಕ ಸೇರಿದಂತೆ 361 ರನ್ಗಳನ್ನ ಗಳಿಸಿ ವಿರಾಟ್ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಆದ್ರೂ ಕೂಡ ಪಂಜಾಬ್ ವಿರುದ್ಧ ಗೆದ್ದಿದ್ದು ಬಿಟ್ರೆ ಉಳಿದ 6 ಮ್ಯಾಚ್ಗಳನ್ನ ಸೋತಿದೆ. ಹೀಗಾಗಿ ಕೊಹ್ಲಿ ತುಂಬಾನೇ ಒತ್ತಡದಲ್ಲಿದ್ದಾರೆ. ಅವ್ರ ಫೋಟೋಗಳೇ ಇದನ್ನೆಲ್ಲಾ ಸಾರಿ ಸಾರಿ ಹೇಳ್ತಿವೆ.
ಆರ್‌ಸಿಬಿ ಅನ್ ಬಾಕ್ಸ್ ಇವೆಂಟ್ನಲ್ಲಿ ಹೊಸ ಅಧ್ಯಾಯ ಎಂಬ ಧ್ಯೇಯವಾಕ್ಯದೊಂದಿಗೆ ಬಂದಿದ್ದ ವಿರಾಟ್ ಕೊಹ್ಲಿ ತಮ್ಮ ಹಂಡ್ರೆಸ್ ಪರ್ಸೆಂಟ್ ಎಫರ್ಟ್ ಹಾಕಿ ಆಡ್ತಿದ್ದಾರೆ. ಆದ್ರೆ ತಂಡದ ಸಾಲು ಸಾಲು ಸೋಲು ಕಿಂಗ್ ಕೊಹ್ಲಿಯನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಟೀಂ ಸೋಲಿನ ಬಳಿಕ ಅವ್ರ ರಿಯಾಕ್ಷನ್, ಹತಾಶೆಯನ್ನ ನೋಡಿ ಅಭಿಮಾನಿಗಳೇ ಬೇಸರಗೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಸೋಲಿನ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ ವಿಡಿಯೋ ಹಾಗೂ ಅಲ್ಲಿನ ಫೋಟೋಗಳು ಭಾರೀ ವೈರಲ್ ಆಗಿದ್ವು. ಮೈದಾನದಲ್ಲಿ ರಾಜನಂತೆ ಅಬ್ಬರಿಸುವ ಕೊಹ್ಲಿ ಸಹ ಮೌನಕ್ಕೆ ಜಾರಿದ ಫೋಟೋ ನೋಡಿ ಫ್ಯಾನ್ಸ್ ಭಾವುಕರಾಗಿದ್ರು. ಬಳಿಕ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್ಗಳು ಹೊಡೆಸಿಕೊಳ್ತಿದ್ದ ರೀತಿಗೆ ಕೊಹ್ಲಿ ಫೀಲ್ಡ್ನಲ್ಲೇ ಪ್ರೆಸ್ಟ್ರೇಷನ್ಗೆ ಒಳಗಾಗಿದ್ರು. ಗ್ರೌಂಡ್‌ನಲ್ಲಿ ಗ್ರಾಸ್‌ಗೆ ಕಾಲಿನಿಂದ ಜಾಡಿಸಿ ಒದ್ದು ಜೋರಾಗಿ ಕಿರುಚುತ್ತಾ ಬೇಸರ ಹೊರಹಾಕಿದರು. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊಹ್ಲಿಯ ಈ ಅಸಹಾಯಕ ಪರಿಸ್ಥಿತಿ ನೋಡಿದ ಫ್ಯಾನ್ಸ್ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಕಳಿಸಿಬಿಡಿ. ಅವ್ರೊಬ್ಬರೇ ಪಂದ್ಯವನ್ನ ಗೆಲ್ಲಿಸೋಕೆ ಆಗಲ್ಲ. ನಾವೇ ಇಷ್ಟೊಂದು ನೋವಲ್ಲಿರುವಾಗ ಕಿಂಗ್ ಅಂತಾ ಕರೆಸಿಕೊಳ್ಳೋ ಕೊಹ್ಲಿಗೆ ಅದೆಷ್ಟು ನೋವಾಗಿರಬಹುದೆಂದು ಮನವಿ ಮಾಡಿದ್ದಾರೆ. ಪ್ರತೀ ಪಂದ್ಯ ಸೋತಾಗಲೂ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ನ ವಿಡಿಯೋಗಳು ಹೊರ ಬಿದ್ದಾಗ ಹ್ಯಾಪ್ ಮೋರೆ ಹಾಕಿಕೊಂಡು ಕೂರುವ ಕೊಹ್ಲಿಯವ್ರ ಮುಖವನ್ನ ನೋಡೋದೇ ಅಭಿಮಾನಿಗಳಿಗೆ ದೊಡ್ಡ ಹಿಂಸೆಯಾಗುತ್ತಿದೆ.