ಕೊಹ್ಲಿಗೆ ಆಸ್ಟ್ರೇಲಿಯಾ ಅಂದ್ರೆ ಕ್ರೇಜ್ -ಬೆಂಗಳೂರ್ ಮೇಲೆ ಸಖತ್ ಲವ್
ಕಿಂಗ್ ಫಸ್ಟ್ ಟೆಸ್ಟ್ ಸೆಂಚುರಿ ಎಲ್ಲಿ?

ಕೊಹ್ಲಿಗೆ ಆಸ್ಟ್ರೇಲಿಯಾ ಅಂದ್ರೆ ಕ್ರೇಜ್ -ಬೆಂಗಳೂರ್ ಮೇಲೆ ಸಖತ್ ಲವ್ಕಿಂಗ್ ಫಸ್ಟ್ ಟೆಸ್ಟ್ ಸೆಂಚುರಿ ಎಲ್ಲಿ?

ವಿರಾಟ್‌ ಕೊಹ್ಲಿ ಅವರಿಗೆ ಭಾರತದಲ್ಲಿ ಎಷ್ಟು ಅಭಿಮಾನಿಗಳ ಬಳಗವಿದೆಯೋ ಅಷ್ಟೇ, ವಿದೇಶದಲ್ಲೂ ಇದೆ. ವಿರಾಟ್‌ ಕೊಹ್ಲಿ ಆಟಕ್ಕೆ ಅದೆಷ್ಟೋ ಮಾಜಿ ಆಟಗಾರರು ಫಿದಾ ಆಗಿದ್ದಾರೆ. ವಿರಾಟ್ ಮೈದಾನದಲ್ಲಿ ಇದ್ದಾರೆ ಅಂದ್ರೆ ಕೇಳುವುದು ಒಂದೇ ಹೆಸರು ಕೊಹ್ಲಿ ಕೊಹ್ಲಿ ಅಂತ. ಬನ್ನಿ ಇವರ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಷ್ಯವನ್ನ ನಿಮ್ಗೆ ತಿಳಿಸಿಕೊಡುತ್ತೇನೆ.. ವಿರಾಟ್‌ ಕೊಹ್ಲಿ ಅವರಿಗೆ ಆಸ್ಟ್ರೇಲಿಯಾ ಎಂದರೆ ಅಚ್ಚು ಮೆಚ್ಚಿನ ಎದುರಾಳಿ. ಈ ತಂಡದ ವಿರುದ್ಧ ಇವರು ಆಡುವುದು ಎಂದರೇ ವಿರಾಟ್‌ಗೆ ದೊಡ್ಡ ಹೆಮ್ಮೆ. ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದೇ ಕಾಂಗರೂ ನಾಡಿನಲ್ಲೇ..

ವಿರಾಟ್‌ ಮೊದಲ ಟೆಸ್ಟ್‌ ಶತಕ ಬಾರಿಸಿದ್ದು ಎಲ್ಲಿ?

ವಿರಾಟ್‌ ಕೊಹ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು 7 ಟೆಸ್ಟ್ ಪಂದ್ಯಗಳನ್ನು ಆಡಿದ ಮೇಲೆ ಬಾರಿಸಿದ್ದಾರೆ. ಅದು ಸಹ 2012ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್‌ ತಮ್ಮ ವಿಶ್ವರೂಪವನ್ನು ಪ್ರದರ್ಶಿಸಿದರು. ಆಡಿಲೇಡ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಚೊಚ್ಚಲ ಶತಕ ಬಾರಿಸಿ ಅಬ್ಬರಿಸಿದ್ದರು.

ಭಾರತದಲ್ಲಿ ಮೊದಲ ಟೆಸ್ಟ್‌ ಬಾರಿಸಿದ್ದು ಎಲ್ಲಿ?

ವಿರಾಟ್ ಕೊಹ್ಲಿ ಆಡಿಲೇಡ್‌ನಲ್ಲಿ ತಮ್ಮ ಮೊದಲ ಟೆಸ್ಟ್‌ ಶತಕವನ್ನು ಬಾರಿಸಿದ ಬಳಿಕವೇ ಭಾರತದಲ್ಲೂ ಮೊದಲ ಬಾರಿಗೆ ಮೂರಂಕಿ ಸಾಧನೆ ಮಾಡಿದರು. ಅದು ಅವರ ಎರಡನೇ ತವರಿನಲ್ಲಿ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಮ್ಮ ವೃತ್ತಿ ಜೀವನದ ಎರಡನೇ ಹಾಗೂ ಭಾರತದಲ್ಲಿ ಮೊದಲ ಶತಕ ಬಾರಿಸಿದರು.

ರಾಟ್‌ ಕೊಹ್ಲಿ ಭಾರತದಲ್ಲಿ 2023, ಮಾರ್ಚ್ 12 ರಂದು ತಮ್ಮ ಕೊನೆಯ ಟೆಸ್ಟ್‌ ಶತಕವನ್ನು ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ್ದರು.  ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದ ಕೊನೆಯ ಶತಕವನ್ನು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಬಾರಿಸಿದ್ದಾರೆ. ವಿರಾಟ್‌ ಭಾರತದಲ್ಲಿ ಹಾಗೂ ವಿದೇಶದಲ್ಲಿ ಎಷ್ಟು ಶತಕ ಬಾರಿಸಿದ್ದಾರೆ? ವಿರಾಟ್‌ ಕೊಹ್ಲಿ ಭಾರತದಲ್ಲಿ ಆಡಿದ 55 ಪಂದ್ಯಗಳಲ್ಲಿ 14 ಶತಕ ಬಾರಿಸಿದರೆ, ವಿದೇಶದಲ್ಲಿ 66 ಪಂದ್ಯಗಳನ್ನು ಆಡಿ 16 ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾವನ್ನ ಸಖತ್ ಇಷ್ಟ ಪಡ್ತಾರೆ. ಅವರನ್ನಬೇಟೆ ಯಾಡೋಕೆ ಕೊಹ್ಲಿಗೆ ಏನೋ ಒಂದು ರೀತಿಯ ಖುಷಿ. ಮೊದಲ ಟೆಸ್ಟ್ ಶತಕ ಹೊಡೆದ ಆಸ್ಪ್ರೇಲಿಯಾದ ಕೊಹ್ಲಿಗೆ ಇಷ್ಟ ಆದ್ರೆ ಭಾರತದ ಮೊದಲ ಟೆಸ್ಟ್ ಶತಕ ಹೊಡೆತ ಬೆಂಗಳೂರಿನ ಮೇಲೆ ಲವ್‌. ವಿ

Kishor KV

Leave a Reply

Your email address will not be published. Required fields are marked *