ಟಿ-20 ವಿಶ್ವಕಪ್ ನಿಂದ ವಿರಾಟ್ ಕೊಹ್ಲಿ ಡ್ರಾಪ್ – ಕೊಹ್ಲಿಯ ಟಿ-20 ಭವಿಷ್ಯ ಏನು?
ವಿರಾಟ್ ಕೊಹ್ಲಿ.. 2023ರ ವಂಡೇ ವರ್ಲ್ಡ್ಕಪ್ನಲ್ಲಿ ಹೈಯೆಸ್ಟ್ ಸ್ಕೋರರ್ ಆಗಿ, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನ ಕೂಡ ಗೆದ್ದಿದ್ದ ರನ್ ಮಷೀನ್ ಮುಂದಿನ ಟಿ-20 ವರ್ಲ್ಡ್ಕಪ್ನಲ್ಲಿ ಆಡೋದೆ ಅನುಮಾನವಾಗಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು ತಂದುಕೊಟ್ಟಿದ್ದ ವಿರಾಟ್ ಕೊಹ್ಲಿಯನ್ನ ಟಿ-20 ವರ್ಲ್ಡ್‌ಕಪ್ ಟೀಂನಿಂದಲೇ ಡ್ರಾಪ್ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಾ ಇರುವಂತೆ ಕಾಣ್ತಿದೆ. ಕೊಹ್ಲಿಯನ್ನ ಕೈಯನ್ನ ಕೈಬಿಟ್ಟು, ಇನ್ನೊಬ್ಬ ಯಂಗ್ ಪ್ಲೇಯರ್ನ್ನ ರಿಪ್ಲೇಸ್ ಮಾಡೋಕೆ ಎಲ್ಲಾ ತಯಾರಿ ಕೂಡ ನಡೀತಿದೆ. ವಿರಾಟ್ ಕೊಹ್ಲಿ ಟಿ-20 ಕೆರಿಯರ್ನ್ನ ಎಂಡ್ ಮಾಡೋಕೆ ಬಿಸಿಸಿಐ ಸ್ಕೆಚ್ ಹಾಕಿದ್ಯಾ ಅನ್ನೋ ಡೌಟ್ ಕೂಡ ಕಾಡ್ತಿದೆ. ಅಷ್ಟಕ್ಕೂ ಕಿಂಗ್ ವಿಚಾರದಲ್ಲಿ ಏನೆಲ್ಲಾ ನಡೀತಿದೆ? ಕೊಹ್ಲಿಯ ಟಿ-20 ಭವಿಷ್ಯ ಏನು? ಟಿ-20 ವರ್ಲ್ಡ್‌ಕಪ್ ಸ್ಕ್ವಾಡ್ಗೆ ಸಂಬಂಧಿಸಿ ಬಿಸಿಸಿಐನ ಲೆಕ್ಕಾಚಾರವೇನು? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಟಿ-20 & ODI ಸೀರಿಸ್ ಆಡಲ್ಲ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಮುಂದಿನ ಟಿ-20 ವರ್ಲ್ಡ್‌ಕಪ್ ಆಡೋದು ಡೌಟ್.. !
ಅಮೆರಿಕ ಮತ್ತು ವೆಸ್ಟ್ಇಂಡೀಸ್ನಲ್ಲಿ ನಡೆಯಲಿರೋ ಟಿ-20 ವರ್ಲ್ಡ್ಕಪ್ಗೆ ಇನ್ನು ಆರು ತಿಂಗಳುಗಳಷ್ಟೇ ಬಾಕಿ ಇರೋದು. ಹೀಗಾಗಿ ವಿಶ್ವಕಪ್ಗೆ ತಂಡವನ್ನ ಕಟ್ಟೋಕೆ ಈಗಿನಿಂದಲೇ ತಯಾರಿ ನಡೀತಿದೆ. ಅದ್ರಲ್ಲೂ ಟಿ-20 ಎಕ್ಸ್ಪರ್ಟ್ಗಳಾಗಿರೋ ಯುವಕರ ಪಡೆಯನ್ನ ರೆಡಿ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡಿರೋದು ಸ್ಪಷ್ಟ. ಹೀಗಾಗಿ ಸೀನಿಯರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಬಗ್ಗೆ ಭಾರಿ ಚರ್ಚೆ ನಡೀತಾ ಇದೆ. ಕಳೆದ ಒಂದು ವರ್ಷಗಳಿಂದ ಇಬ್ಬರೂ ಟಿ-20 ಮ್ಯಾಚ್ಗಳನ್ನ ಆಡಿಲ್ಲ. ಹೀಗಾಗಿ ವಿಶ್ವಕಪ್ ಟೀಂಗೆ ಸೆಲೆಕ್ಟ್ ಮಾಡೋದಾ, ಬೇಡ್ವಾ ಅನ್ನೋ ಕ್ವಶ್ಚನ್ ಬಿಸಿಸಿಐ ಮ್ಯಾನೇಜ್ಮೆಂಟ್ನದ್ದು. ಅದ್ರಲ್ಲೂ ವಿರಾಟ್ ಕೊಹ್ಲಿ ವಿಚಾರದಲ್ಲಂತೂ ಬಿಸಿಸಿಐ ಒಂದು ಸ್ಟೆಪ್ ಮುಂದೆ ಹೋಗಿರುವಂತೆ ಕಾಣ್ತಿದೆ. ಮುಂದಿನ ಟಿ-20 ವರ್ಲ್ಡ್ಕಪ್ಗೆ ವಿರಾಟ್ ಕೊಹ್ಲಿ ಬದಲಾಗಿ ಇಶಾನ್ ಕಿಶನ್ರನ್ನ ಚೂಸ್ ಮಾಡೋಕೆ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿದೆ. ಅಂದ್ರೆ ಬ್ಯಾಟಿಂಗ್ ಲೈನ್ಅಪ್ನಲ್ಲಿ ನಂಬರ್-3 ಸ್ಪಾಟ್ಗೆ ಕೊಹ್ಲಿ ಬದಲು ಇಶಾನ್ ಕಿಶನ್ಗೆ ಪ್ರಿಫರೆನ್ಸ್ ನೀಡೋಕೆ ಮುಂದಾಗಿದೆ.
ನಿಮಗೆ ಗೊತ್ತಿರಲಿ.. ಕೆಲ ದಿನಗಳ ಹಿಂದೆಯಷ್ಟೇ ವರ್ಲ್ಡ್ಕಪ್ಗೆ ಟೀಂ ಇಂಡಿಯಾದ ಟಿ-20 ಸ್ಕ್ವಾಡ್ ಸೆಲೆಕ್ಷನ್ ಕುರಿತು ಬಿಸಿಸಿಐ ಸುಮಾರು ಐದು ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದೆ. ಈ ಮೀಟಿಂಗ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಸೆಲೆಕ್ಷನ್ ಕಮಿಟಿ ಅಧ್ಯಕ್ಷ ಅಜಿತ್ ಅಗರ್ಕರ್, ಜೈಶಾ, ರೋಜರ್ ಬಿನ್ನಿ ಇವರೆಲ್ಲರೂ ಭಾಗಿಯಾಗಿದ್ರು. ಈ ವೇಳೆ ಸೌತ್ ಆಫ್ರಿಕಾ ಸೀರಿಸ್, ಅಫ್ಘಾನಿಸ್ತಾನ ವಿರುದ್ಧ ಟಿ-20 ಸೀರಿಸ್ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಟಿ-20 ವರ್ಲ್ಡ್‌ಕಪ್ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಮುಂದಿನ ಟಿ-20 ವರ್ಲ್ಡ್ಕಪ್ನಲ್ಲಿ ಇಂಡಿಯಾ ಸ್ಕ್ವಾಡ್ನಲ್ಲಿ ರೋಹಿತ್ ಶರ್ಮಾ ಮತ್ತು ಜಸ್ಪ್ರಿತ್ ಬುಮ್ರಾ ಟೀಂಗೆ ಸೆಲೆಕ್ಟ್ ಆಗೋದು ಆಲ್ಮೋಸ್ಟ್ ಗ್ಯಾರಂಟಿ. ಇಬ್ಬರೂ ಕೂಡ ಬಿಸಿಸಿಐನ ಅಟೋಮೆಟಿಕ್ ಚಾಯ್ಸ್. ಟಿ-20 ವರ್ಲ್ಡ್ಕಪ್ನಲ್ಲೂ ರೋಹಿತ್ ಶರ್ಮಾರೇ ತಂಡವನ್ನ ಲೀಡ್ ಮಾಡಬಹುದು. ಕಳೆದ ಒಂದು ವರ್ಷದಿಂದ ರೋಹಿತ್ ಕೂಡ ಯಾವುದೇ ಟಿ-20 ಮ್ಯಾಚ್ ಆಡಿಲ್ಲವಾದ್ರೂ, ಟಿ-20 ವಿಶ್ವಕಪ್ನಲ್ಲಿ ತಂಡಕ್ಕೆ ರೋಹಿತ್ ಶರ್ಮಾರ ಅನಿವಾರ್ಯತೆ ಇದೆ ಅನ್ನೋ ಮಾತನ್ನೇ ಬಿಸಿಸಿಐ ಹೇಳಿದೆ. ಆದ್ರೆ, ಟಿ-20 ವರ್ಲ್ಡ್‌ಕಪ್ ಸ್ಕ್ವಾಡ್ನಲ್ಲಿ ವಿರಾಟ್ ಕೊಹ್ಲಿಯ ಸ್ಪಾಟ್ ಇನ್ನೂ ಕೂಡ ಗ್ಯಾರಂಟಿ ಆಗಿಲ್ವಂತೆ. ಅಂದ್ರೆ ಇಲ್ಲಿ ಬಿಸಿಸಿಐನ ಅಟೋಮೆಟಿಕ್ ಚಾಯ್ಸ್ ಆಗಿಲ್ಲ. ವಿರಾಟ್ ಕೊಹ್ಲಿ ಟಿ-20 ವರ್ಲ್ಡ್ಕಪ್ನಲ್ಲಿ ಆಡೋದು ಇನ್ನೂ ಕೂಡ ಅನುಮಾನವೇ. ವಂಡೇ ವಿಶ್ವಕಪ್ನಲ್ಲಿ 700ಕ್ಕೂ ಹೆಚ್ಚೂ ರನ್ ಹೊಡೆದ್ರೂ ಕೊಹ್ಲಿ ಈಗ ಪ್ರಿಫರ್ಡ್ ಚಾಯ್ಸ್ ಆಗಿಲ್ಲ. ಕೊಹ್ಲಿ ಬದಲು ನಂಬರ್-3 ಸ್ಪಾಟ್ನಲ್ಲಿ ಅಟ್ಯಾಕಿಂಗ್ ಬ್ಯಾಟಿಂಗ್ ಮಾಡಬಲ್ಲ ಆಟಗಾರನನ್ನ ಪಿಕ್ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡಿದೆ. ಈ ವೇಳೆ ಇಶಾನ್ ಕಿಶನ್ ಹೆಸರು ಮುನ್ನೆಲೆಗೆ ಬಂದಿದೆ. ಕೊಹ್ಲಿ ಸ್ಪಾಟ್ಗೆ ಇಶಾನ್ ಕಿಶನ್ರನ್ನ ಫಿಕ್ಸ್ ಮಾಡೋಕೆ ಚಿಂತನೆ ನಡೆದಿದೆ. ಈ ಎಲ್ಲಾ ಡೆವಲಪ್ಮೆಂಟ್ಗಳನ್ನ ನೋಡಿದ್ರೆ, ಟಿ-20 ವರ್ಲ್ಡ್ಕಪ್ನಲ್ಲಿ ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಅಥವಾ ಯಶಸ್ವಿ ಜೈಸ್ವಾಲ್ ಓಪನಿಂಗ್ ಮಾಡೋ ಸಾಧ್ಯತೆ ಇದೆ. ಇಶಾನ್ ಕಿಶನ್ 3ನೇ ಆರ್ಡರ್ನಲ್ಲಿ ಕ್ರೀಸ್ಗೆ ಇಳೀತಾರೆ. ನಂತರ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ಗೆ ಇಳಿಯಬಹುದು. ಆದ್ರೆ ಕಳೆದ ಎರಡು ದಶಕಗಳಿಂದ ಗ್ರೇಟೆಸ್ಟ್ ವೈಟ್ ಬಾಲ್ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಟೀಂನಲ್ಲಿ ಸ್ಥಾನವೇ ಇಲ್ಲ. ವಿರಾಟ್ ಕೊಹ್ಲಿ ಇಲ್ಲದ ಟೀಂನ್ನ ಅದು ಕೂಡ ವರ್ಲ್ಡ್ಕಪ್ನಲ್ಲಿ ಊಹಿಸಿಕೊಳ್ಳೋದು ಕೂಡ ಕಷ್ಟವಾಗುತ್ತೆ.
ಓಕೆ.. ಈಗ ವಿರಾಟ್ ಕೊಹ್ಲಿಯನ್ನ ನಿಜಕ್ಕೂ ಇಶಾನ್ ಕಿಶನ್ಗೆ ರಿಪ್ಲೇಸ್ ಮಾಡೋಕೆ ಸಾಧ್ಯಾನಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಆನ್ಸರ್ ಈಸ್ ವೆರಿ ಸಿಂಪಲ್..ನೋ ಚಾನ್ಸ್. ಬೇಕಿದ್ರೆ ಇಬ್ಬರ ಟಿ-20 ಕೆರಿಯರ್ ಕುರಿತ ಡೇಟಾವನ್ನೇ ತೆಗೆದು ನೋಡೋಣ.
- ಕೊಹ್ಲಿ ಒಟ್ಟು 115 ಟಿ-20 ಮ್ಯಾಚ್ ಗಳನ್ನ ಆಡಿದ್ದಾರೆ
- ವಿರಾಟ್ ಕೊಹ್ಲಿ ಒಟ್ಟು 4008 ರನ್ ಗಳನ್ನ ಹೊಡೆದಿದ್ದಾರೆ
- ವಿರಾಟ್ ಕೊಹ್ಲಿ ಬ್ಯಾಟಿಂಗ್ ಎವರೇಜ್ 52.74
- 1 ಶತಕ, 37 ಅರ್ಧಶತಕಗಳನ್ನ ಕೊಹ್ಲಿ ಹೊಡೆದಿದ್ದಾರೆ
- ಐಪಿಎಲ್ ನಲ್ಲಿ ಕೊಹ್ಲಿ 237 ಮ್ಯಾಚ್ ಗಳನ್ನ ಆಡಿದ್ದಾರೆ
- 130.02 ಎವರೇಜ್ ನೊಂದಿಗೆ 7263 ರನ್ ಹೊಡೆದಿದ್ದಾರೆ
- ಐಪಿಎಲ್ ನಲ್ಲಿ ಕೊಹ್ಲಿ 7 ಶತಕ, 50 ಅರ್ಧಶತಕ ಹೊಡೆದಿದ್ದಾರೆ
ಇನ್ನು ಇಶಾನ್ ಕಿಶಾನ್ರ ಟಿ-20 ಟ್ರ್ಯಾಕ್ ರೆಕಾರ್ಡ್ ಹೇಗಿದೆ ಅನ್ನೋದನ್ನ ನೋಡೋಣ.
- ಇಶಾನ್ ಕಿಶನ್ ಟಿ-20 ರೆಕಾರ್ಡ್
- 32 ಅಂತಾರಾಷ್ಟ್ರೀಯ ಟಿ-20 ಮ್ಯಾಚ್ ಗಳನ್ನ ಆಡಿದ್ದಾರೆ
- 32 ಮ್ಯಾಚ್ ಗಳಲ್ಲಿ ಇಶಾನ್ 796 ರನ್ ಹೊಡೆದಿದ್ದಾರೆ
- 6 ಅರ್ಧಶತಕ, ಬ್ಯಾಟಿಂಗ್ ಎವರೇಜ್ 25.68
- ಐಪಿಎಲ್ ನಲ್ಲಿ ಇಶಾನ್ ಕಿಶನ್ 91 ಮ್ಯಾಚ್ ಗಳನ್ನಾಡಿದ್ದಾರೆ
- 15 ಅರ್ಧಶತಕ, ಬ್ಯಾಟಿಂಗ್ ಎವರೇಜ್ 29.42
ಸೆಂಚೂರಿ, ಹಾಫ್ಸೆಂಚೂರಿ, ಟೋಟಲ್ ಸ್ಕೋರ್ ಇವೆಲ್ಲಾ ಬಿಡಿ.. ಇಲ್ಲಿ ಎವರೇಜ್ ನೋಡಿ.. ಟಿ-20ಯಲ್ಲಿ ಇಂಪಾರ್ಟೆಂಟ್ ಆಗೋದೆ ಎವರೇಜ್ ಅಲ್ವಾ. ವಿರಾಟ್ ಕೊಹ್ಲಿಯದ್ದು 52.74ರಷ್ಟು ಬ್ಯಾಟಿಂಗ್ ಎವರೇಜ್ ಇದೆ. ಅದೇ ಇಶಾನ್ ಕಿಶನ್ರದ್ದು 25.68 ಎವರೇಜ್. ಎಲ್ಲಿಯ ವಿರಾಟ್ ಕೊಹ್ಲಿ, ಎಲ್ಲಿಯ ಇಶಾನ್ ಕಿಶನ್.
ಇನ್ನು ವಿರಾಟ್ ಕೊಹ್ಲಿಯಂತೆ ಚೇಸ್ ಮಾಡಿ ಪಂದ್ಯವನ್ನ ಗೆಲ್ಲಿಸಿಕೊಡೋಕೆ ಇಶಾನ್ ಕಿಶನ್ಗೆ ಸಾಧ್ಯಾನಾ? 3ನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಬಂದ್ರೂ ಕೊನೆತನಕವೂ ಕ್ರೀಸ್ನಲ್ಲಿರೋಕೆ ಸಾಧ್ಯಾನಾ? ಇಲ್ಲಿ ಇಶಾನ್ ಕಿಶನ್ರನ್ನ ಡೌನ್ ಪ್ಲೇ ಮಾಡ್ತಿಲ್ಲ. ಬಟ್.. ವಿರಾಟ್ ಕೊಹ್ಲಿ ಇವೆಲ್ಲವನ್ನೂ ಕನ್ಸಿಸ್ಟೆನ್ಸ್ ಆಗಿ ಮಾಡಿ ತೋರಿಸಿದ್ದಾರೆ. ಎಲ್ಲಾ ಬಿಡಿ.. ಒಂದ್ಸಲಾ 2022ರ ಟಿ-20 ವರ್ಲ್ಡ್ಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಮ್ಯಾಚ್ನಲ್ಲಿ ಏಕಾಂಗಿಯಾಗಿ ಹೋರಾಡಿ ಯಾವ ರೀತಿ ಪಂದ್ಯ ಗೆಲ್ಲಿಸಿದ್ರು ಅನ್ನೋದನ್ನ ನೆನೆಪಿಸ್ಕೊಳ್ಳಿ. ಕೊಹ್ಲಿ ಹೊಡದ ಆ ಎರಡು ಸಿಕ್ಸರ್ಗಳು.. ಆ ಪ್ಲೇಸ್ನಲ್ಲಿ ಇನ್ಯಾವುದೇ ಬ್ಯಾಟ್ಸ್ಮನ್ ಇರ್ತಿದ್ರೂ ಆ ರೀತಿಯ ಸಿಕ್ಸರ್ ಹೊಡೆಯೋಕೆ ಸಾಧ್ಯವಾಗ್ತಿರಲಿಲ್ಲ. ಅಂಥಾ ಪ್ಲೇಯರ್ನ್ನ ಮುಂದಿನ ಟಿ-20 ವರ್ಲ್ಡ್‌ಕಪ್ ಸ್ಕ್ವಾಡ್ನಿಂದಲೇ ಡ್ರಾಪ್ ಮಾಡೋದು ಅಂದ್ರೆ ಅದನ್ನ ಮೂರ್ಖತನ ಅಂತಾನೆ ಹೇಳ್ಬೇಕಷ್ಟೆ. ಆದ್ರೆ, ಈ ಬಗ್ಗೆ ಬಿಸಿಸಿಐ ಇನ್ನೂ ಕೂಡ ಫೈನಲ್ ಡಿಸೀಶನ್ ತೆಗೆದುಕೊಂಡಿಲ್ಲ. ಶೀಘ್ರವೇ ವಿರಾಟ್ ಕೊಹ್ಲಿ ಜೊತೆಗೆ ಚರ್ಚೆ ನಡೆಸಿ, ಟಿ-20 ವರ್ಲ್ಡ್ಕಪ್ನಲ್ಲಿ ಆಡೋಕೆ ಬಯಸ್ತೀರಾ ಅನ್ನೋ ಬಗ್ಗೆ ಮಾತುಕತೆ ನಡೆಸೋಕೆ ಬಿಸಿಸಿಐ ನಿರ್ಧರಿಸಿದೆ. ಒಂದು ವೇಳೆ ಇನ್ಮುಂದೆ ಕೊಹ್ಲಿ ಟಿ-20 ಆಡಲ್ಲ ಅಂದ್ರೆ ವರ್ಲ್ಡ್ಕಪ್ನಲ್ಲಿ ಅವರನ್ನ ಸೆಲೆಕ್ಟ್ ಮಾಡೋದಿಲ್ಲ. ಈಗ ನಡೆದಿರೋ ಡೆವಲಪ್ಮೆಂಟ್ ನೋಡಿದ್ರೆ, ಎಲ್ಲೋ ಒಂದು ಕಡೆ ಟಿ-20 ಫಾರ್ಮೆಟ್ನಿಂದ ನಿವೃತ್ತರಾಗುವಂತೆ ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಪ್ರೆಷರ್ ಹಾಕ್ತಾ ಇರುವಂತೆ ಕಾಣ್ತಿದೆ.