ಟಿ-20 & ODI ಸೀರಿಸ್ ಆಡಲ್ಲ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಮುಂದಿನ ಟಿ-20 ವರ್ಲ್ಡ್‌ಕಪ್ ಆಡೋದು ಡೌಟ್.. !

ಟಿ-20 & ODI ಸೀರಿಸ್ ಆಡಲ್ಲ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಮುಂದಿನ ಟಿ-20 ವರ್ಲ್ಡ್‌ಕಪ್ ಆಡೋದು ಡೌಟ್.. !

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಸೀರಿಸ್​​ನತ್ತ ಚಿತ್ತ ನೆಟ್ಟಿದೆ. ಹೆಡ್​​ ಕೋಚ್​ ಆಗಿ ರಾಹುಲ್​ ದ್ರಾವಿಡ್ ಅವರೇ ಮುಂದುವರೆಯಲಿದ್ದಾರೆ. ಆದರೆ, ತಂಡದ ಇಬ್ಬರು ಸೀನಿಯರ್​ ಆಟಗಾರರ ನಿರ್ಧಾರ ಟೀಂ ಇಂಡಿಯಾಗೆ ತುಂಬಾನೆ ಎಫೆಕ್ಟ್ ಆಗ್ತಾ ಇದೆ. ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿಲುವು ಟೀಮ್ ಇಂಡಿಯಾ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಐಷಾರಾಮಿ ಆಫ್ ರೋಡ್ ಕಾರು ಖರೀದಿಸಿದ ಧೋನಿ – ಹೊಸ ಕಾರಿಗೆ ಸಿಕ್ತು ಧೋನಿಯ ಫೆವರೇಟ್ ನಂಬರ್

ಡಿಸೆಂಬರ್​ 10ರಿಂದ ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಮೂರು ಟಿ-20, ಮೂರು ಏಕದಿನ ಮತ್ತು ಎರಡು ಟೆಸ್ಟ್​ ಮ್ಯಾಚ್​ಗಳ ಸರಣಿಯನ್ನ ಆಡಲಿದೆ. ಆದ್ರೆ ಟಿ-20 ಮತ್ತು ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡುವುದಿಲ್ಲ. ಕೇವಲ ಟೆಸ್ಟ್​ ಸೀರಿಸ್​​ ಮಾತ್ರ ಆಡಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ವಂಡೇ ಮತ್ತು ಟಿ-20ಯಿಂದ ದೂರವುಳಿಯೋಕೆ ತೀರ್ಮಾನಿಸಿದ್ದಾರೆ. ಈ ಬಗ್ಗೆ ಕೊಹ್ಲಿ ಈಗಾಗ್ಲೇ ಬಿಸಿಸಿಐಗೆ ಕೂಡ ಮಾಹಿತಿ ನೀಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಏನು ಕೇವಲ ದಕ್ಷಿಣ ಆಫ್ರಿಕಾ ಸೀರಿಸ್ ಮಾತ್ರವಲ್ಲ ಇನ್ನೂ ಒಂದಷ್ಟು ಟಿ-20 ಮತ್ತು ವಂಡೇ ಮ್ಯಾಚ್​ಗಳನ್ನ ಆಡದೆ ಇರೋಕೆ ನಿರ್ಧರಿಸಿದ್ದಾರೆ. ಸದ್ಯ ಕೊಹ್ಲಿ ತಾನು ದಕ್ಷಿಣ ಆಫ್ರಿಕಾ ವಿರುದ್ಧ ವಂಡೇ, ಟಿ-20 ಆಡಲ್ಲ ಅಂತಷ್ಟೇ ಹೇಳಿದ್ದಾರೆ. ಆದ್ರೆ ಕೊಹ್ಲಿ ಟಿ-20 ಮತ್ತು ಏಕದಿನ ಸರಣಿಯಿಂದ ದೀರ್ಘಕಾಲ ಬ್ರೇಕ್​ ತೆಗೆದುಕೊಳ್ಳುವ ಬಗ್ಗೆಯೂ ಮುನ್ಸೂಚನೆ ನೀಡಿದ್ದಾರೆ. ಸದ್ಯಕ್ಕೆ ನಾನು ಯಾವುದೇ ಏಕದಿನ, ಟಿ-20 ಸೀರಿಸ್​ಗೆ ಲಭ್ಯವಿಲ್ಲ ಅನ್ನೋದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ಹೀಗಾಗಿ ಕೇವಲ ದಕ್ಷಿಣ ಆಫ್ರಿಕಾ ಸೀರಿಸ್​ನಲ್ಲಿ ಮಾತ್ರವಲ್ಲ ಜನವರಿಯಲ್ಲಿ ಭಾರತದಲ್ಲೇ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್​​ನಲ್ಲೂ ಕೂಡ ಆಡೋದು ಅನುಮಾನವೇ.

ಹಾಗಿದ್ರೆ ವಿರಾಟ್ ಕೊಹ್ಲಿಯ ಈ ತೀರ್ಮಾನಕ್ಕೆ ಕಾರಣ ಏನು ಅನ್ನೋದು ಇಲ್ಲಿರುವ ಪ್ರಶ್ನೆ. ವಿರಾಟ್ ಕೊಹ್ಲಿ ಈಗ ಕಂಪ್ಲೀಟ್ ಆಗಿ ಟೆಸ್ಟ್​ ಕ್ರಿಕೆಟ್​​ನತ್ತ ಫೋಕಸ್ ಮಾಡ್ತಿದ್ದಾರೆ. ಟಿ-20 ಮತ್ತು ವಂಡೇಗಿಂತೂ ಕೊಹ್ಲಿ ಹೆಚ್ಚು ಇಷ್ಟ ಪಡುವ ಫಾರ್ಮೆಟ್ ಅಂದ್ರೆ ಅದು ಟೆಸ್ಟ್ ಕ್ರಿಕೆಟ್. ಟೆಸ್ಟ್​ನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ ಒಟ್ಟು 29 ಶತಕಗಳನ್ನ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ 51 ಸೆಂಚೂರಿ ಹೊಡೆದಿದ್ದಾರೆ. ಈಗಾಗ್ಲೇ ವಂಡೇ ಕ್ರಿಕೆಟ್​​ನಲ್ಲಿ ಸಚಿನ್ ಸೆಂಚೂರಿ ರೆಕಾರ್ಡ್​​ನ್ನ ಕೊಹ್ಲಿ ಬ್ರೇಕ್ ಮಾಡಿಯಾಗಿದೆ. ಇನ್ನು ನಿರಂತರವಾಗಿ ವಂಡೆ ಮತ್ತು ಟಿ-20ಯನ್ನ ಆಡ್ತಾನೆ ಇದ್ದಿದ್ರಿಂದ, ಹೆಚ್ಚು ಪ್ರೆಷರ್​ನಲ್ಲೇ ಇದ್ದಿದ್ರಿಂದಾಗಿ ಕೊಹ್ಲಿ ಟಿ-20 ಮತ್ತು ವಂಡೇ ಫಾರ್ಮೆಂಟ್​​ನಿಂದ ಸದ್ಯಕ್ಕೆ ದೂರ ಉಳಿಯೋಕೆ ನಿರ್ಧರಿಸಿದ್ದಾರೆ. ಇನ್ನು 2024ರಲ್ಲಿ ನಡೆಯೋ ಟಿ-20 ವರ್ಲ್ಡ್​ಕಪ್​ ಕೊಹ್ಲಿ ಆಡ್ತಾರಾ ಅನ್ನೋದು ಕೂಡ ಗ್ಯಾರಂಟಿ ಇಲ್ಲ. ಈ ಬಗ್ಗೆ ಸಾಕಷ್ಟು ಕನ್​ಫ್ಯೂಷನ್​​ಗಳಿವೆ. ಟಿ-20 ವರ್ಲ್ಡ್​​ಕಪ್​ನಲ್ಲಿ ಆಡ್ಬೇಕಾ, ಬೇಡ್ವಾ ಅನ್ನೋದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು ಅಂತಾ ಬಿಸಿಸಿಐ ಕೂಡ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾಗೆ ಮೆಸೇಜ್ ಪಾಸ್ ಮಾಡಿದೆ.

ಯಾವಾಗ ವಿರಾಟ್ ಕೊಹ್ಲಿ ಟಿ-20 ಮತ್ತು ವಂಡೇ ಸೀರಿಸ್​​ಗಳನ್ನ ಆಡದೆ ಇರೋಕೆ ತೀರ್ಮಾನಿಸಿದ್ರೋ, ಎಸ್ಪೆಷಲಿ ಟಿ-20ಗೆ ಕೊಹ್ಲಿ ಗುಡ್​​ಬೈ ಹೇಳ್ತಾರಾ ಅನ್ನೋ ರೂಮರ್ಸ್ ಕೂಡ ಸ್ಪ್ರೆಡ್ ಆಗ್ತಿದೆ. ಈ ಬಗ್ಗೆ ಸಚಿನ್ ತೆಂಡೂಲ್ಕರ್ ಕೂಡ ಮಾತನಾಡಿದ್ದು, ವಿರಾಟ್​ ಕೊಹ್ಲಿಗೆ ಇನ್ನಷ್ಟು ಟಿ-20 ಮತ್ತು ವಂಡೇ ಕ್ರಿಕೆಟ್ ಅಡೋ ಸಾಮರ್ಥ್ಯ ಇದೆ. ನಿವೃತ್ತಿ ಘೋಷಿಸುವ ಟೈಮ್ ಇನ್ನೂ ಬಂದಿಲ್ಲ ಅಂತಾ ಸಚಿನ್ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಕೊಹ್ಲಿ ವಂಡೇ ಫಾರ್ಮೆಟ್​ನಿಂದಾಗಲಿ, ಟಿ-20ಯಿಂದಾಗಲಿ ರಿಟೈರ್​ ಆಗೋ ಸಾಧ್ಯತೆಯೇ ಇಲ್ಲ ಅಂತಾನೆ ಹೇಳಬಹುದು.

ಇನ್ನು ಕ್ಯಾಫ್ಟನ್ ರೋಹಿತ್ ಶರ್ಮಾ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ರೋಹಿತ್​ ಶರ್ಮಾ ಕೂಡ ಮುಂದಿನ ಟಿ-20 ವರ್ಲ್ಡ್​​ಕಪ್​​ನಲ್ಲಿ ಆಡ್ತಾರೆ ಅನ್ನೋದು ಇನ್ನೂ ಗ್ಯಾರಂಟಿ ಇಲ್ಲ. 2022ರಲ್ಲಿ ಟಿ-20 ವರ್ಲ್ಡ್​​ಕಪ್​​ ಸೆಮಿಫೈನಲ್​ನಲ್ಲಿ ಸೋತ ಬಳಿಕ ಇದುವರೆಗೂ ಟೀಂ ಇಂಡಿಯಾ ಪರವಾಗಿ ರೋಹಿತ್​​ ಶರ್ಮಾ ಒಂದೇ ಒಂದು ಟಿ-20 ಮ್ಯಾಚ್​ ಆಡಿಲ್ಲ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್​​ನಲ್ಲಿ ಕೂಡ ಆಡೋದು ಡೌಟೇ. ಆದ್ರೂ ಕೂಡ ಸೌತ್​ ಆಫ್ರಿಕಾ ಸೀರಿಸ್​​ನಲ್ಲಿ ಟೀಂನ್ನ ಲೀಡ್ ಮಾಡುವಂತೆ ಬಿಸಿಸಿಐ ಮನವಿ ಮಾಡುವ ಸಾಧ್ಯತೆ ಇದೆ. ಯಾಕಂದ್ರೆ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯಾ ಇನ್ನೂ ಕಂಪ್ಲೀಟ್ ಫಿಟ್ ಆಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸೀರಿಸ್​​ನಲ್ಲಿ ಪಾಂಡ್ಯಾ ಆಡೋದಿಲ್ಲ. ಹೀಗಾಗಿ ರೋಹಿತ್ ಶರ್ಮಾರನ್ನೇ ಅಪ್ರೋಚ್ ಆಗುವ ಸಾಧ್ಯತೆ ಇದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸೀರಿಸ್​ಗೆ ರೋಹಿತ್ ಕ್ಯಾಪ್ಟನ್ ಆಗಿರಲ್ಲ ಅಂದ್ರೆ ಕೆಎಲ್​ ರಾಹುಲ್​​ ಅಥವಾ ಸೂರ್ಯಕುಮಾರ್ ಯಾದವ್​ಗೆ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ಇದೆ.

Sulekha