ದೇಶಿ ಅಂಗಳಕ್ಕೆ ಕೊಹ್ಲಿ Re Entry – ವಿಜಯ ಹಝಾರೆ ಟೂರ್ನಿಯಲ್ಲಿ ಆಡೋಕೆ ರೆಡಿಯಾದ ವಿರಾಟ್

ದೇಶಿ ಅಂಗಳಕ್ಕೆ ಕೊಹ್ಲಿ Re Entry  –  ವಿಜಯ ಹಝಾರೆ ಟೂರ್ನಿಯಲ್ಲಿ ಆಡೋಕೆ ರೆಡಿಯಾದ ವಿರಾಟ್

 

ವಿರಾಟ್ ಕೊಹ್ಲಿ ಫ್ಯಾನ್ಸ್‌ ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕರ್ನಾಟಕದ ದತ್ತುಪುತ್ರ, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ದೇಶಿ ಅಂಗಳದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ಮುಂಬರುವ ವಿಜಯ ಹಝಾರೆ ಟೂರ್ನಿಗೆ ತಾನು ಆಯ್ಕೆಗೆ ಲಭ್ಯರಿರುವುದಾಗಿ ವಿರಾಟ್ ಕೊಹ್ಲಿ ದೆಹಲಿ ರಾಜ್ಯ ತಂಡದ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ.  ಇದರೊಂದಿಗೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಕಿಂಗ್ ಕೊಹ್ಲಿ ದೇಶೀಯ ಟೂರ್ನಿಯಲ್ಲಿ ಬ್ಯಾಟ್ ಬೀಸುವುದು ಖಚಿತವಾಗಿದೆ. ಈ ಮೂಲಕ ಬರೋಬ್ಬರಿ 15 ವರ್ಷಗಳ ಬಳಿಕ ದೇಶಿ ಅಂಗಳದಲ್ಲಿ ಕೊಹ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: ಹಿಂದೂ ದೇವರುಗಳಿಗೆ ಅವಮಾನಿಸಿದ ತೆಲಂಗಾಣ ಸಿಎಂ – ರೇವಂತ್ ರೆಡ್ಡಿ ವಿರುದ್ಧ ಸಿಡಿದೆದ್ದ ವಿರೋಧ ಪಕ್ಷದ ನಾಯಕರು

ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಕೇಂದ್ರ ಒಪ್ಪಂದದ ಅಡಿಯಲ್ಲಿ ಆಟಗಾರರು ತಮ್ಮ ದೇಶಿ ತಂಡಗಳಿಗೆ ಆಡಬೇಕೆಂದು ಒತ್ತಾಯಿಸಿದ್ದರು. ರೋಹಿತ್ ಮತ್ತು ವಿರಾಟ್ ಇದಕ್ಕೆ ಸಿದ್ಧರಿರಲಿಲ್ಲ. ಇದರ ನಂತರ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಲು ಇಬ್ಬರೂ ಆಟಗಾರರಿಗೆ ಸೂಚನೆ ನೀಡಿತು. ಇದರ ನಂತರ, ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು, ಆದರೆ ವಿರಾಟ್ ಕೊಹ್ಲಿ ನಿರಾಕರಿಸಿದ್ರು. ಇದೀಗ, ವಿರಾಟ್ ಕೊಹ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ ಎಂಬ ಹೊಸ ಹೇಳಿಕೆಗಳು ಹರಿದಾಡುತ್ತಿವೆ. ಇದು ನಡೆದ್ರೆ  ಸುಮಾರು 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ದೆಹಲಿ ಪರ ಆಡುತ್ತಿರುವುದು ಇದೇ ಮೊದಲು. ಫ್ಯಾನ್ಸ್ ಕೂಡ  ಕೊಹ್ಲಿಯನ್ನ ದೇಶಿ ಅಂಗಳದಲ್ಲಿ ನೋಡುವುದ್ದಕ್ಕೆ ಕಾಯುತ್ತಿದ್ದಾರೆ.

 

Kishor KV