ಕೊಹ್ಲಿ ಕಿಚ್ಚಿಗೆ ಕೊಚ್ಚಿ ಹೋದ KKR – 49ರ ಟ್ರೋಲ್ ಗೆ RCB ರಿವೇಂಜ್
ಪ್ಲೇಯಿಂಗ್ 11 ಟ್ವಿಸ್ಟ್ ಪ್ಲಸ್ ಆಯ್ತಾ?

ವಿರಾಟ್ ಕೊಹ್ಲಿ ಫಿಫ್ಟಿ ಹೊಡೆದಾಗ್ಳೇ ಆರ್ಸಿಬಿ ಸೋಲಲ್ಲ. ಇನ್ನು ಸೆಂಚುರಿ ಹೊಡೆದ್ರೆ ಕೇಳ್ಬೇಕಾ. ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಆಗಿದ್ದೂ ಇದೆ. ಬ್ಯಾಕ್ ಟು ಬ್ಯಾಕ್ ಡಕ್ ಔಟ್ ಆಗಿದ್ದ ವಿರಾಟ್ ಕೊಹ್ಲಿ ಕೊಲ್ಕತ್ತಾ ವಿರುದ್ಧ ವಿಶ್ವರೂಪ ತಾಳಿದ್ರು. ಶತಕ ಬಾರಿಸಿ ಆರ್ಸಿಬಿಗೆ ಬಿಗ್ ವಿಕ್ಟರಿ ತಂದುಕೊಟ್ರು.
ಇದನ್ನೂ ಓದಿ : ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ! – ರಾಹುಲ್ ಗಾಂಧಿ ಆಪ್ತನಿಗೆ ಬಿಗ್‌ಶಾಕ್!
ರಾಯ್ಪುರದಲ್ಲಿ ಕೊಲ್ಕತ್ತಾ ವಿರುದ್ಧವೂ ಗೆಲ್ಲೋ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮತ್ತೆ ನಂಬರ್ 1 ಪಟ್ಟಕ್ಕೇರಿದೆ. ಕಿಂಗ್ ವಿರಾಟ್ ಕೊಹ್ಲಿಯವ್ರ ಆರ್ಭಟಕ್ಕೆ ಕೊಲ್ಕತ್ತಾ ಈಗ ಪ್ಲೇ ಆಫ್ ರೇಸ್ನಿಂದಲೇ ಹೊರಬಿದ್ದಿದೆ. ಮಳೆ ಕಾರಣದಿಂದಾಗಿ ಲೇಟ್ ಆಗಿ ಸ್ಟಾರ್ಟ್ ಆದ ಮ್ಯಾಚಲ್ಲಿ ಟಾಸ್ ಗೆದ್ದ ಬೆಂಗಳೂರು ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತು. ಬ್ಯಾಟಿಂಗ್ ಆರಂಭ ಮಾಡಿದ ಕೆಕೆಆರ್ಗೆ ಓಪನಿಂಗ್ ಚೆನ್ನಾಗಿ ಸಿಗ್ಲಿಲ್ಲ. ಫಿನ್ ಅಲೆನ್ 18 ರನ್ಸ್, ರಹಾನೆ 19 ರನ್ಗೆ ಔಟ್ ಆದ್ರು. ಆದ್ರೆ ರಘುವಂಶಿ 71 ರನ್ಗಳ ಇನ್ನಿಂಗ್ಸ್ ಆಡಿದ್ರು. ಗ್ರೀನ್ 32 ರನ್ ಬಾರಿಸಿದ್ರೆ ರಿಂಕು ಸಿಂಗ್ 49 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ರು. ಸೋ 20 ಓವರ್ಗಳಲ್ಲಿ 192 ರನ್ ಕಲೆ ಹಾಕಿದ್ರು. ಈ ಟಾರ್ಗೆಟ್ ಬೆನ್ನಟ್ಟಿದ್ದ ಆರ್ಸಿಬಿ ಪರ ಕೊಹ್ಲಿ ಸೆಂಚುರಿ ಸಿಡಿಸಿ ಅಜೇಯರಾಗಿ ತಂಡವನ್ನ ಗೆಲ್ಲಿಸಿಕೊಟ್ರು. ಆರ್ಸಿಬಿ ಪಂದ್ಯವನ್ನ ಅದೆಷ್ಟು ಕಂಟ್ರೋಲಿಂಗ್ ಆಗಿ ಗೆಲ್ತು.
ಬೆಂಗಳೂರು ಗೆದ್ದಿದ್ದೇಗೆ?
ಪ್ಲೇಯಿಂಗ್ 11 ನಲ್ಲಿ 2 ಬದಲಾವಣೆ.. ಡಫಿ ಮತ್ತು ವೆಂಕಿಗೆ ಸ್ಥಾನ
ಟಾಸ್ ಗೆದ್ದ ಬೆಂಗಳೂರು 200 ರ ಒಳಗೆ ರನ್ ಕಂಟ್ರೋಲ್ ಮಾಡಿದ್ದು
ಕೊಹ್ಲಿ ಮತ್ತು ಪಡಿಕ್ಕಲ್ ಗೆ ಜೀವಧಾನ ಸಿಕ್ಕಿ 92 ರನ್ಸ್ ಜೊತೆಯಾಟ
ಬ್ಯಾಟಿಂಗ್ ನಲ್ಲಿ ಕೊಹ್ಲಿ ಕ್ರೀಸ್ ಕಚ್ಚಿ ಕೊನೆವರೆಗೂ ಆಡಿದ್ದು ಪ್ಲಸ್
ಬ್ಯಾಟಿಂಗ್ ಹಾಗೇ ಬೌಲಿಂಗ್ ನಲ್ಲಿ ರನ್ ರೇಟ್ ಕಾಯ್ದುಕೊಂಡಿದ್ದು
ಗೆ ಎರಡೂ ಇನ್ನಿಂಗ್ಸ್ಗಳಲ್ಲಿ ಆರ್ಸಿಬಿ ಕ್ಯಾಲ್ಕುಲೇಟಿವ್ ಪರ್ಫಾಮೆನ್ಸ್ ನೀಡಿ ಪಂದ್ಯವನ್ನ ಗೆದ್ದುಕೊಳ್ತು. ಌಂಡ್ ಈ ಮ್ಯಾಚಲ್ಲಿ ತುಂಬಾನೇ ಸ್ಪೆಷಲ್ ಅನ್ಸಿದ್ದು ವಿರಾಟ್ ಕೊಹ್ಲಿಯವ್ರ ಸೆಲೆಬ್ರೇಷನ್. ಲಕ್ನೋ ಮತ್ತು ಮುಂಬೈ ವಿರುದ್ಧದ ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದ ಕೊಹ್ಲಿ ಕೊಲ್ಕತ್ತಾ ವಿರುದ್ಧ ಫಸ್ಟ್ ಸಿಂಗಲ್ ರನ್ ತಗೊಳ್ತಿದ್ದಂತೆ ಹ್ಯಾಟ್ರಿಕ್ ಡಕ್ ತಪ್ಪಿಸಿಕೊಂಡ ಖುಷಿಯಲ್ಲಿ ಸೆಲೆಬ್ರೇಷನ್ ಮಾಡಿದ್ರು. ಌಂಡ್ ನೆಕ್ಸ್ಟ್ 50 ರನ್ಸ್ ಆದಾಗ ಸಿಂಪಲ್ ಸೆಲೆಬ್ರೇಷನ್, ಶತಕ ಬಾರಿಸಿ ಸೆಲೆಬ್ರೇಷನ್.. ಇಡೀ ಪಂದ್ಯದುದ್ದಕ್ಕೂ ಕೊಹ್ಲಿ ಚಿಲ್ ಆಗಿ ಆಗಿದ್ರು. ಮಿಡ್ಲಲ್ಲಿ ಡ್ಯಾನ್ಸ್ ಮಾಡೋದು ಹೀಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ರು. ಹಾಗೇ ಸೀಸನ್ ಆರಂಭದಲ್ಲಿ ಬೆಂಗಳೂರು ತಂಡವನ್ನ 49ಕ್ಕೆ ಆಲೌಟ್ ಮಾಡಿದ್ವಿ ಅನ್ನೋ ಥರ ಟ್ರೋಲ್ ಮಾಡಿದ್ದ ಕೆಕೆಆರ್ಗೆ ಸರಿಯಾಗೇ ತಿರುಗೇಟು ಕೊಟ್ರು. ಫೈನಲಿ ಆರ್ಸಿಬಿ ಕೆಕೆಆರ್ ಸೋಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ಇನ್ನೆರಡು ಪಂದ್ಯಗಳು ಬಾಕಿ ಇವೆ. ಟಾಪ್2 ಟಾರ್ಗೆಟ್ ಇರೋದ್ರಿಂದಆ ಗೆಲುವುಗಳೂ ಮುಖ್ಯವಾಗುತ್ತೆ.

ನೋಡಿರಿ

