ದುಬಾರಿ ವಿಲ್ಲಾ ಖರೀದಿಸಿ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ – ಅಬ್ಬಬ್ಬಾ ಅದರ ಬೆಲೆ ಕೇಳಿದ್ರೆ ಶಾಕ್ ಪಕ್ಕಾ!

ದುಬಾರಿ ವಿಲ್ಲಾ ಖರೀದಿಸಿ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ – ಅಬ್ಬಬ್ಬಾ ಅದರ ಬೆಲೆ ಕೇಳಿದ್ರೆ ಶಾಕ್ ಪಕ್ಕಾ!

ವಿರಾಟ್ ಕೊಯ್ಲಿ. ಕ್ರಿಕೆಟ್ ಜಗತ್ತಿನ ದೈತ್ಯ ಆಟಗಾರ. ಎದುರಾಳಿ ಪಡೆಯ ಎದೆ ಝಲ್ ಎನ್ನಿಸೋ ಇದೇ ಕ್ರಿಕೆಟರ್ ನಿಜ ಜೀವನದಲ್ಲೂ ಅಷ್ಟೇ ಸದ್ದು ಮಾಡ್ತಾರೆ. ಸದ್ಯ ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಪತ್ನಿ ಅನುಷ್ಕಾ ಶರ್ಮಾ (Anushka Sharma) ಐಷಾರಾಮಿ ವಿಲ್ಲಾ (Luxury Villa) ಖರೀದಿಸಿದ್ದಾರೆ. ಈ ವಿಲ್ಲಾದ ಐಷಾರಾಮಿ ನೋಟವನ್ನು ವೀಡಿಯೋ ಸಮೇತ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಕಮಾಲ್ – ಹೇಗಿದೆ ಗೊತ್ತಾ ‘ಕೆಸಿಸಿ’ ಕದನ..?

ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕೊಹ್ಲಿ ಈಗಾಗಲೇ ಮುಂಬೈನಲ್ಲಿ (Mumbai) ಐಷಾರಾಮಿ ಮನೆ ಹೊಂದಿದ್ದಾರೆ. ಅಲ್ಲದೇ ಹಲವು ಉದ್ಯಮಗಳಲ್ಲಿಯೂ ಹಣ ಹೂಡಿಕೆ ಮಾಡಿದ್ದಾರೆ. ಆದರೂ ಇದೀಗ ಕೊಹ್ಲಿ, ಅನುಷ್ಕಾ ಜೋಡಿ ಹೊಸ ವಿಲ್ಲಾವೊಂದನ್ನ ಖರೀದಿ ಮಾಡಿದೆ. ವಿರಾಟ್ ಕೊಹ್ಲಿ ತಮ್ಮ ಬಿಡುವಿನ ವೇಳೆ ಮಯ ಕಳೆಯಲು ಮುಂಬೈನಿಂದ ದೂರವಿರುವ ಆಲಿಭಾಗ್‌ನಲ್ಲಿ ಹೊಸ ವಿಲ್ಲಾ ಖರೀದಿ ಮಾಡಿದ್ದಾರೆ. ಈ ವಿಲ್ಲಾದ ಒಳಾಂಗಣವನ್ನು ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಮಾಜಿ ಪತ್ನಿ ಸುಸಾನ್ನೆ ಖಾನ್ ವಿನ್ಯಾಸ ಮಾಡಿದ್ದಾರೆ ಅನ್ನೋದೇ ಇದರ ವಿಶೇಷ.

ಸದ್ಯ ವಿರಾಟ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗಾವಾಸ್ಕರ್ ಟ್ರೋಫಿ ಟೆಸ್ಸ್ ಸರಣಿಯಲ್ಲಿದ್ದಾರೆ. ಹಾಗಾಗಿ ಕೊಹ್ಲಿ ಅನುಪಸ್ಥಿತಿಯಲ್ಲಿ ಸಹೋದರ ವಿಕಾಸ್ ಕೊಹ್ಲಿ ಬಂಗಲೆ ಖರೀದಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ವಿಲ್ಲಾದ ವೀಡಿಯೋವನ್ನು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಲ್ಲಾ ನೋಡಿದ ಅಭಿಮಾನಿಗಳೂ ಖುಷಿ ಪಟ್ಟಿದ್ದಾರೆ.

 

View this post on Instagram

 

A post shared by Virat Kohli (@virat.kohli)

ಅಷ್ಟಕ್ಕೂ ಆಲಿಬಾಗ್‌ನಲ್ಲಿರುವ ಆವಾಸ್ ಗ್ರಾಮದಲ್ಲಿರುವ 6 ಕೋಟಿ ರೂ. ಮೌಲ್ಯದ ವಿಲ್ಲಾ 2,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಆಸ್ತಿಯ ಮುದ್ರಾಂಕ ಶುಲ್ಕವೇ 36 ಲಕ್ಷ ರೂ. ಇದ್ದು, 400 ಚದರಡಿಯ ಸುಸಜ್ಜಿತ ಸ್ವಿಮ್ಮಿಂಗ್ ಪೂಲ್ ಹೊಂದಿದೆ. ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿರಾಟ್ 19.24 ಕೋಟಿ ರೂ.ಗೆ ಫಾರ್ಮ್‌ಹೌಸ್‌ ಸಹ ಖರೀದಿಸಿದ್ದರು. ಅದಕ್ಕಾಗಿ 1.15 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದರು. ಅವಾಸ್ ಲಿವಿಂಗ್ ಅಲಿಬಾಗ್ ಎಲ್‌ಎಲ್‌ಪಿಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಮಹೇಶ್ ಮ್ಹಾತ್ರೆ ಪ್ರಕಾರ, ಆವಾಸ್ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಸ್ಪೀಡ್ ಬೋಟ್‌ನಲ್ಲಿ ಮುಂಬೈನಿಂದ ಅಲಿಬಾಗ್‌ಗೆ 15 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ವಿರಾಟ್ ಕೊಹ್ಲಿ ಮಾತ್ರವಲ್ಲದೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಲಿಬಾಗ್‌ನಲ್ಲಿ ಭೂಮಿ ಖರೀದಿ ಮಾಡಿದ್ದಾರೆ. ರೋಹಿತ್ ಶರ್ಮಾ 2021 ರಲ್ಲಿ ಮಹತ್ರೋಲಿ ಗ್ರಾಮದಲ್ಲಿ 4 ಎಕರೆ ಭೂಮಿ ಖರೀದಿಸಿದ್ದರು.

 

View this post on Instagram

 

A post shared by Virat Kohli (@virat.kohli)

suddiyaana