ಕಿಂಗ್ ಕೊಹ್ಲಿಗೆ ಬರ್ತ್ಡೇ ಸಂಭ್ರಮ – 37ನೇ ವಸಂತಕ್ಕೆ ಕಾಲಿಟ್ಟ ವಿರಾಟ್ಗೆ ಶುಭಾಶಯಗಳ ಮಹಾಪೂರ

ವಿಶ್ವ ಕ್ರಿಕೆಟ್ನಲ್ಲಿ ಚೇಸ್ ಮಾಸ್ಟರ್ ಎಂದು ಕರೆಯಲ್ಪಡುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ಕಿಂಗ್ ಕೊಹ್ಲಿ 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಅಂಗವಾಗಿ ಹಿರಿಯ ಕ್ರಿಕೆಟಿಗರು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಐಪಿಎಲ್ ಫ್ರಾಂಚೈಸಿ ಆರ್ಸಿಬಿ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಕೋರಿದ್ದಾರೆ.
ಇದನ್ನೂ ಓದಿ:IPLಗೆ ಹೊಸ ರೂಲ್ಸ್ ತಂದ BCCI – ಹೆಚ್ಚುವರಿ 10 ಪಂದ್ಯ ಸೇರಿಸಿದ್ದೇಕೆ?
ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಅತ್ಯುತ್ತಮ ಬ್ಯಾಟರ್ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ವಿಶ್ವ ಕ್ರಿಕೆಟ್ನ ಅತ್ಯಂತ ನಿರ್ಭೀತ ಆಟಗಾರರಲ್ಲಿ ಒಬ್ಬರಾದ ‘ನಮ್ಮ ವಿರಾಟ ರಾಜ’ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಆರ್ಸಿಬಿ ಟ್ವೀಟ್ ಮಾಡಿದೆ.
ಇನ್ನು ಮಾಜಿ ಆಟಗಾರ ಸುರೇಶ್ ರೈನಾ ಕೂಡ ವಿರಾಟ್ ಕೊಹ್ಲಿಗೆ ವಿಶ್ ಮಾಡಿದ್ದಾರೆ. ಕಿಂಗ್ ಕೊಹ್ಲಿಗೆ 37 ವರ್ಷ! ಭಾರತೀಯ ಕ್ರಿಕೆಟ್ನ ನಿಜವಾದ ದಂತಕಥೆ ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರಯಾಣವನ್ನು ಆಚರಿಸಲಾಗುತ್ತಿದೆ! ಅವರಿಗೆ ಹೆಚ್ಚಿನ ದಾಖಲೆಗಳು, ವಿಜಯಗಳು ಮತ್ತು ಸಂತೋಷದಿಂದ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ! ಜನ್ಮದಿನದ ಶುಭಾಶಯಗಳು ವಿರಾಟ್ ಕೊಹ್ಲಿ ಎಂದು ಟ್ವೀಟ್ ಮಾಡಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳಾದ ಕೆಕೆಆರ್, ಪಂಜಾಬ್, ರಾಜಸ್ಥಾನ್ ಸೇರಿ ಎಲ್ಲ ತಂಡಗಳು ಕೊಹ್ಲಿಗೆ ಶುಭ ಕೋರಿದ್ದಾರೆ. ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಭಾರತ ಪರ ಆಡುತ್ತಿದ್ದಾರೆ.

ನೋಡಿರಿ

