IND Vs NZ.. ಕೊಹ್ಲಿಯೇ ಟಾರ್ಗೆಟ್ – ವಿರಾಟ್ ಮೇಲೆ 3 ಬೌಲರ್ಸ್ ಕಣ್ಣು

IND Vs NZ.. ಕೊಹ್ಲಿಯೇ ಟಾರ್ಗೆಟ್ – ವಿರಾಟ್ ಮೇಲೆ 3 ಬೌಲರ್ಸ್ ಕಣ್ಣು

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ವರ್ಸಸ್ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದು ಕಿವೀಸ್ ವಿರುದ್ಧವೂ ಅದೇ ಫಾರ್ಮ್​ ಕಂಟಿನ್ಯೂ ಮಾಡೋ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ವರ್ಷಗಳಲ್ಲಿ  ವಿರಾಟ್ ಕೊಹ್ಲಿ ಬ್ಲ್ಯಾಕ್‌ಕ್ಯಾಪ್ಸ್ ವಿರುದ್ಧದ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಬಟ್ ಕಿವೀಸ್​ನ  ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ಸೇರಿದಂತೆ ನ್ಯೂಜಿಲೆಂಡ್ ಬೌಲರ್‌ಗಳು ಕೂಡ ಕೊಹ್ಲಿ ಮೇಲೆ ಸವಾರಿ ಮಾಡಿದ್ದು ಇಂದಿನ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : 1,800 ಕೋಟಿ ವೆಚ್ಚ.. ಸಿಕ್ಕಿದ್ದು ಬಿಡಿಗಾಸು – ಪಾಕ್ ತಂಡದಲ್ಲಿ ಸೋತ ಪ್ಲೇಯರ್ಸ್ ಗೆ ಗೇಟ್ ಪಾಸ್?

ವಿರಾಟ್ ಕೊಹ್ಲಿ 2010 ರಿಂದ ನ್ಯೂಜಿಲೆಂಡ್ ವಿರುದ್ಧ 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಭಾರತದ ಅನುಭವಿ ಆಟಗಾರನಾಗಿರುವ ಕೊಹ್ಲಿ ಸುಮಾರು 59 ರ ಆವರೇಜ್​ನಲ್ಲಿ ರನ್ ಸಿಡಿಸಿದ್ದಾರೆ. 95.69 ರ ಸ್ಟ್ರೈಕ್ ರೇಟ್‌ನಲ್ಲಿ  1719 ಬಾಲ್ ಗಳನ್ನ ಫೇಸ್ ಮಾಡಿದ್ದು 1645 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ, ವಿರಾಟ್ ಕೊಹ್ಲಿ 154 ರನ್ ಗಳಿಸಿದ್ದೇ ಅತ್ಯಧಿಕ ಏಕದಿನ ಸ್ಕೋರ್ ಆಗಿದೆ. 2016ರಲ್ಲಿ ನಾಟೌಟ್​ ಆಗಿ ಉಳಿದು ಈ ಸಾಧನೆ ಮಾಡಿದ್ರು. ಇನ್ನು ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಆರು ಶತಕ, 9 ಹಾಫ್ ಸೆಂಚುರಿ ಬಾರಿಸಿದ್ದಾರೆ. ಕೊನೆಯ ಬಾರಿಗೆ  2023ರ ಏಕದಿನ ವಿಶ್ವಕಪ್​ನಲ್ಲಿ ಮುಂಬೈನಲ್ಲಿ ಸೆಂಚುರಿ ಬಾರಿಸಿದ್ರು. 2023ರ ಬಳಿಕ ಈವರೆಗೂ ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧ ಯಾವುದೇ ಏಕದಿನ ಪಂದ್ಯವನ್ನ ಆಡಿಲ್ಲ.

ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿ 10 ಟಿ-20 ಪಂದ್ಯಗಳನ್ನಷ್ಟೇ ಆಡಿದ್ದಾರೆ. 224 ಎಸೆತಗಳನ್ನು ಎದುರಿಸಿದ್ದು, 29 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳ ಸಹಿತ 311 ರನ್‌ಗಳನ್ನು ಗಳಿಸಿದ್ದಾರೆ. 34.55ರ ಸರಾಸರಿ ಮತ್ತು 138.83ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಒಂದು ಸಲ ನಾಟೌಟ್ ಆಗಿ ಉಳಿದಿದ್ದಾರೆ. ಅತ್ಯಧಿಕ ಸ್ಕೋರ್ 70 ರನ್ ಆಗಿದೆ. ಇನ್ನೂ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 1,000 ರನ್‌ಗಳ ಗಡಿ ದಾಟಿಲ್ಲ. 2012ರಿಂದ 2024ರವರೆಗೆ 14 ಪಂದ್ಯಗಳಲ್ಲಿ ಆಡಿದ್ದಾರೆ 27 ಇನ್ನಿಂಗ್ಸ್​ಗಳಲ್ಲಿ ಕಣಕ್ಕಿಳಿದು 959 ರನ್ ಗಳಿಸಿದ್ದಾರೆ. 1779 ಎಸೆತಗಳನ್ನ ಎದುರಿಸಿದ್ದು 38.36ರ ಸರಾಸರಿಯಲ್ಲಿ 53.90 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಅಲ್ದೇ 2 ಸಲ ಡಕ್ ಔಟ್ ಆಗಿದ್ದಾರೆ. ಕಿವೀಸ್ ವಿರುದ್ಧ ರೆಡ್-ಬಾಲ್ ಸ್ವರೂಪದಲ್ಲಿ 3 ಶತಕಗಳು ಮತ್ತು 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಇನ್ನು ವಿರಾಟ್ ಕೊಹ್ಲಿಗೆ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದಲ್ಲಿರುವ ಮೂವರು ಬೌಲರ್‌ಗಳು ಕಾಡಬಹುದು. ಅದ್ರಲ್ಲಿ ನಂಬರ್ 1 ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ODIಗಳಲ್ಲಿ ಕೊಹ್ಲಿಯನ್ನು ಮೂರು ಬಾರಿ ಔಟ್ ಮಾಡಿದ್ದಾರೆ. ಹಾಗೇ ಕೈಲ್ ಜೇಮಿಸನ್. ಇವ್ರು ಟೀಮ್​ನಲ್ಲಿ ಫಸ್ಟ್ ಇರಲಿಲ್ಲ. ಬಟ್ ಲಾಕಿ ಫರ್ಗುಸನ್ ಬದಲಿಗೆ ಅವರನ್ನು ಕರೆತರಲಾಗಿದೆ. ಬಟ್ ಜೇಮಿಸನ್ ಏಕದಿನ ಪಂದ್ಯಗಳಲ್ಲಿ ಕೊಹ್ಲಿಗೆ ಕೇವಲ 16 ಎಸೆತಗಳನ್ನು ಮಾತ್ರ ಎಸೆದಿದ್ದಾರೆ. ಎಂಟು ರನ್‌ಗಳನ್ನು ನೀಡಿದ್ದಾರೆ. ಆದ್ರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನ ಮೂರು ಸಲ ಔಟ್ ಮಾಡಿದ್ದಾರೆ. ಹಾಗೇ ಕೊಹ್ಲಿಗೆ ಕಾಡುವ ಮತ್ತೊಬ್ಬ ಬೌಲರ್ ವಿಲ್ ಒ’ರೂರ್ಕ್. ವಿಲ್ ಒ’ರೂರ್ಕ್ ಈವರೆಗೂ ಕೊಹ್ಲಿ ವಿರುದ್ಧ ವೈಟ್-ಬಾಲ್ ಗೇಮ್ ಆಡಿಲ್ಲ. ಬಟ್ ಲಾಸ್ಟ್ ಇಯರ್ ನ್ಯೂಜಿಲೆಂಡ್ ಭಾರತ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಒ’ರೂರ್ಕ್ ಒಟ್ಟಾರೆ 11 ಏಕದಿನ ಪಂದ್ಯಗಳನ್ನ ಆಡಿದ್ದು 19 ವಿಕೆಟ್‌ಗಳನ್ನು ಹೊಂದಿದ್ದಾರೆ. ಅದರಲ್ಲಿ ಐದು ವಿಕೆಟ್‌ಗಳು ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯ ಮೊದಲ ಎರಡು ಪಂದ್ಯಗಳಲ್ಲಿ ಬಂದಿವೆ. ಸೋ ಭಾರತದ ವಿರುದ್ಧದ ಪಂದ್ಯದಲ್ಲೇ ಅದೇ ಫಾರ್ಮ್ ಮುಂದುವರಿಸಬಹುದು.

Shantha Kumari

Leave a Reply

Your email address will not be published. Required fields are marked *