1 ಬ್ಯಾಟ್.. 100 ಕೋಟಿ ಗಳಿಕೆ! – ಕ್ರಿಕೆಟ್ ದೇವರನ್ನೇ ಹಿಂದಿಕ್ಕಿದ ಕೊಹ್ಲಿ
ರೋಹಿತ್ ಜೇಬಿಗೆ ಎಷ್ಟು ಕೋಟಿ?

ನಮ್ಮಲ್ಲಿ ಕ್ರಿಕೆಟ್ ಕ್ರೇಜ್ ಯಾರಿಗಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕ್ರಿಕೆಟ್ ಅಂದ್ರೆ ಮುಗೀತು.. ಮೈದಾನದಲ್ಲಿ ಕ್ರಿಕೆಟರ್ಸ್ ಬ್ಯಾಟ್ ಹಿಡಿದ್ರೆ ಸಾಕು.. ಸಿಕ್ಸ್.. ಫೋರ್.. ಸುರಿಮಳೆಯೇ ಇರುತ್ತೆ.. ಒಂದರ್ಥದಲ್ಲಿ ನೋಡಿದ್ರೆ ಇವರ ಬ್ಯಾಟೇ ಇವ್ರ ಭವಿಷ್ಯ ನಿರ್ಧಾರ ಮಾಡುತ್ತೆ.. ಹೌದು ಯಾವಾಗ ಕ್ರಿಕೆಟರ್ಸ್ ಸೆಂಚುರಿ ಬಾರಿಸೋದಿಕ್ಕೆ ಶುರುಮಾಡ್ತಾರೋ ಅದಾದ್ಮೇಲೆ ಮುಟ್ಟಿದೆಲ್ಲಾ ಚಿನ್ನ ಆಗುತ್ತೆ.. ನಮ್ಮ ಹೆಮ್ಮೆಯ ಬ್ಯಾಟ್ಸ್ ಮನ್ ಗಳು ಬ್ಯಾಟ್ ನಿಂದ್ಲೇ ಕೋಟಿ ಕೋಟಿ ಸಂಪಾದನೆ ಮಾಡ್ತಾ ಇದ್ದಾರೆ.. ಕ್ರಿಕೆಟರ್ಸ್ ಬ್ಯಾಟ್ ನಿಂದ ಹೇಗೆ ದುಡ್ಡು ಮಾಡ್ತಾರೆ.. ಯಾವ್ಯಾವ ಕ್ರಿಕೆಟರ್ಸ್ ಎಷ್ಟು ಆದಾಯ ಗಳಿಸ್ತಾ ಇದ್ದಾರೆ.. ಕೋಟ್ಯಾಂತರ ರೂಪಾಯಿ ದುಡ್ಡು ಕೊಡ್ತಿರೋದು ಯಾರು? ಇವೆಲ್ಲದ್ರ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸ್ಟಾರ್ ಪ್ಲೇಯರ್ಸ್ ಗೆ RCB ದುಡ್ಡು – ಬೆಂಗಳೂರಿನಲ್ಲಿದ್ದ ದುಬಾರಿ ಆಟಗಾರರೆಷ್ಟು?
ಟೀಮ್ ಇಂಡಿಯಾದ ಕ್ರಿಕೆಟರ್ಸ್ ಆದಾಯದ ಬಗ್ಗೆ ನಿಮಗೆ ಗೊತ್ತೇ ಇದೆ.. ಮೈದಾನದಲ್ಲಿ ಒಮ್ಮೆ ಕ್ಲಿಕ್ ಆದ್ರೆ ಸಾಕು.. ಅದೃಷ್ಟ ಅವರನ್ನ ತಾನಾಗೇ ಹುಡುಕಿಕೊಂಡು ಬರುತ್ತೆ.. ಐಪಿಎಲ್ ಟೀಮ್ ಫ್ರಾಂಚೈಸಿಗಳು ಕೋಟಿ ಕೋಟಿಗೆ ಆಫರ್ ಮಾಡ್ತಾ ಇದ್ರೆ, ಇತ್ತ ವಿವಿಧ ಕಂಪನಿಗಳ ಜೊತೆಗೆ ಜಾಹಿರಾತುಗಳ ಒಪ್ಪಂದ ಮಾಡಿಕೊಂಡು ದುಡ್ಡು ಗಳಿಸ್ತಾರೆ.. ಆದ್ರೆ ಈ ಸ್ಟಾರ್ ಕ್ರಿಕೆಟರ್ಸ್ ಆಟ, ಉದ್ಯಮ, ಜಾಹೀರಾತು ಮಾತ್ರವಲ್ಲದೇ ಬ್ಯಾಟ್ ನಿಂದಲೂ ಕೋಟಿ ಕೋಟಿ ಗಳಿಸ್ತಾರೆ.. ಅರೇ.. ಬ್ಯಾಟ್ ಅನ್ನ ದುಡ್ಡು ಕೊಟ್ಟು ಪರ್ಚೇಸ್ ಮಾಡ್ಬೋದು.. ಅದು ಹೇಗೆ ಬ್ಯಾಟ್ ನಿಂದ ದುಡ್ಡು ಬರುತ್ತೆ ಯೋಚ್ನೆ ಮಾಡ್ತಿದ್ದೀರಾ? ಕ್ರಿಕೆಟರ್ಸ್ ಬ್ಯಾಟ್ ನ ಸೇಲ್ ಮಾಡಲ್ಲ.. ಬದಲಿಗೆ ಬ್ಯಾಟ್ ಗೆ ಒಂದು ಸ್ಟಿಕ್ಕರ್ ಅಂಟಿಸ್ಕೊಂಡು ಕೋಟ್ಯಂತರ ರೂಪಾಯಿ ಗಳಿಸ್ತಿದ್ದಾರೆ..
ಹೌದು.. ಟೀಮ್ ಇಂಡಿಯಾದ ಆಟಗಾರರಿಗೆ ಎಷ್ಟು ಡಿಮ್ಯಾಂಡ್ ಇದ್ಯೋ.. ಅವ್ರು ಕೈಯ್ಯಲ್ಲಿರೋ ಬ್ಯಾಟ್ ಗೂ ಅಷ್ಟೇ ಡಿಮ್ಯಾಂಡ್ ಇದೆ.. ಹೆಸರಾಂತ ಕಂಪನಿಗಳು ಕ್ರಿಕೆಟರ್ಸ್ ಜೊತೆ ಒಪ್ಪಂದ ಮಾಡ್ಕೊಂಡಿದ್ದಾರೆ.. ಕಿಂಗ್ ಕೊಹ್ಲಿಯ ಬ್ಯಾಟ್ ಮುಂದೆ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಇನ್ಯಾರ ಬ್ಯಾಟ್‌ಗೂ ಅಷ್ಟು ಬೆಲೆಯೇ ಇಲ್ಲ.. ಕೊಹ್ಲಿ ರನ್ ಮಷೀನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದ್ರೆ ಕೊಹ್ಲಿ ತಿಂಗಳಲ್ಲಿ ಎಷ್ಟು ಮ್ಯಾಚ್ ಆಡ್ತಾರೋ ಇಲ್ಲವೋ ಗೊತ್ತಿಲ್ಲ.. ಆದ್ರೆ ಅವರ ಬ್ಯಾಟ್ ಮಾತ್ರ ದುಡ್ಡು ಮಾಡ್ತಾನೇ ಇರುತ್ತೆ.. ಕ್ರಿಕೆಟ್ ಜಗತ್ತಿನ ಸಚಿನ್ ತೆಂಡೂಲ್ಕರ್ ಅವರನ್ನು ದೇವರು ಅಂತಾರೆ.. ಆದ್ರೆ ದೇವರನ್ನೇ ಮೀರಿಸಿದ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ..
ಕ್ರಿಕೆಟಿಗರು ಮತ್ತು ಜಾಹೀರಾತುಗಳ ನಡುವಿನ ನಂಟು ಒಂದೆರಡು ರೀತಿಯಲ್ಲಿ ಇರುವುದಿಲ್ಲ.. ಹಲವು ಕಂಪನಿಗಳು, ಜಾಹೀರಾತಿಗಾಗಿ ಒಬ್ಬಲ್ಲ ಒಬ್ಬ ಕ್ರಿಕೆಟ್ ಆಟಗಾರನನ್ನು ಹುಡುಕುತ್ತಿರುತ್ತವೆ.. ಕ್ರಿಕೆಟಿಗರು ಭಾರತದಲ್ಲಿ ಅಭಿಮಾನಿಗಳ ಪಾಲಿಗೆ ಆರಾಧ್ಯ ದೇವರಾಗಿಬಿಟ್ಟಿದ್ದಾರೆ.. ಇದ್ರಿಂದಾಗಿಯೇ ಕ್ರಿಕೆಟರ್‌ಗಳಿಗೆ ಅದರಲ್ಲೂ ಬ್ಯಾಟ್ಸ್‌ಮನ್‌ಗಳಿಗೆ ಜಾಹೀರಾತು ವಿಚಾರದಲ್ಲಿ ಎಲ್ಲಿಲ್ಲದ ಡಿಮ್ಯಾಂಡ್.. ಈ ಡಿಮ್ಯಾಂಡ್ ಎಲ್ಲೀವರೆಗೆ ಹೋಗುತ್ತೆ ಅಂದ್ರೆ ಬ್ಯಾಟ್ಸ್‌ಮನ್‌ಗಳು ಹಿಡಿಯೋ ಬ್ಯಾಟ್‌ವರೆಗೂ ಹೋಗಿಬಿಡುತ್ತದೆ.. ಅದರಲ್ಲೂ ಮೈದಾನದಲ್ಲಿ ಬ್ಯಾಟ್ ಮೂಲಕ ಅಬ್ಬರಿಸುವ ಆಟಗಾರರು ಕೇವಲ ಬೌಂಡರಿ ಸಿಕ್ಸರ್‌ಗಳನ್ನು ಮಾತ್ರ ಹೊಡೀತಿರೋದಿಲ್ಲ.. ಅದರ ಜೊತೆಗೆ ಅವರ ಅದೇ ಬ್ಯಾಟ್‌ನಿಂದಾಗಿ ಅವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಏರುತ್ತಲೇ ಇರುತ್ತದೆ.. ಅದರಲ್ಲೂ ವಿರಾಟ್ ಕೊಹ್ಲಿ ಬ್ಯಾಟ್‌ನಲ್ಲಿ ಅಂಟಿಸಿರುವ ಎಂಆರ್‌ಎಫ್ ಸ್ಟಿಕರ್ ಒಂದರಿಂದಲೇ 100 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.. 2025ರವರೆಗೆ ಎಂಆರ್‌ಎಫ್ ಜೊತೆಗೆ ಕಾಂಟ್ರಾಕ್ಟ್‌ಗೆ ಕೊಹ್ಲಿ ಸಹಿ ಹಾಕಿದ್ದು, ವರ್ಷಕ್ಕೆ ಹನ್ನೆರಡೂವರೆ ಕೋಟಿ ರೂಪಾಯಿ ಕೊಹ್ಲಿ ಅಕೌಂಟ್‌ಗೆ ಬಂದು ಬೀಳುತ್ತೆ.. ಅಂದರೆ ಕೊಹ್ಲಿ ಒಂದು ತಿಂಗಳಿಗೆ ಒಂದು ಕೋಟಿ ರೂಪಾಯಿಯನ್ನು ಸಂಬಳದ ರೀತಿಯಲ್ಲಿ ಕೇವಲ ಬ್ಯಾಟ್ ಒಂದರಿಂದಲೇ ಪಡೀತಾರೆ.. ಕೊಹ್ಲಿ ಆಡುವ ಪ್ರತಿ ಮ್ಯಾಚ್‌ನಲ್ಲೂ ಎಂಆರ್‌ಎಫ್ ಬ್ಯಾಟನ್ನೇ ಬಳಸುತ್ತಾರೆ.. ಹಾಗಂತ.. ಒಂದಿಡೀ ತಿಂಗಳು ಯಾವುದೇ ಮ್ಯಾಚ್ ಆಡದಿದ್ದರೂ ಕೊಹ್ಲಿಯ ಗಳಿಕೆಯಲ್ಲೇನೂ ವ್ಯತ್ಯಾಸ ಆಗೋದಿಲ್ಲ.. ಇದು ಭಾರತದ ಅಷ್ಟೇ ಅಲ್ಲ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟ್‌ನ ಸ್ಪಾನ್ಸರ್‌ಶಿಪ್ ಮೂಲಕ ಪಡೆಯುವ ಅತಿಹೆಚ್ಚಿನ ಹಣವಾಗಿದೆ..
ಕೊಹ್ಲಿಗಿಂತ ಮುಂಚೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಇದೇ ಎಂಆರ್‌ಎಫ್ ಟೈರ್‌ಗಳ ಸ್ಟಿಕರ್ ಅನ್ನು ತಮ್ಮ ಬ್ಯಾಟ್‌ಗೆ ಅಂಟಿಸಿಕೊಂಡಿದ್ದರು.. ಆಗ ಸಚಿನ್ ಪಡೀತಾ ಇದ್ದಿದ್ದು ವಾರ್ಷಿಕ 8 ಕೋಟಿ ರೂಪಾಯಿಗಳು.. ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟ್ಸ್‌ಮನ್‌ಗಳು ಅತಿಹೆಚ್ಚು ಹಣವನ್ನು ಜಾಹೀರಾತುಗಳ ಮೂಲಕ ಪಡೆಯುವ ಅವಕಾಶ ಸೃಷ್ಟಿಯಾಗಿದ್ದು ಸಚಿನ್ ತೆಂಡೂಲ್ಕರ್ ಅವರಿಂದ.. ಸಚಿನ್ ಆಟದಿಂದಾಗಿ ಕೇವಲ ಅವರು ಮಾತ್ರವಲ್ಲ.. ಬಿಸಿಸಿಐ ಕೂಡ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು ಇತಿಹಾಸ..
ಇನ್ನು ಮಹೇಂದ್ರ ಸಿಂಗ್ ಧೋನಿ ಹೆಸರು ಕೂಡ ಕ್ರಿಕೆಟ್ ಲೋಕದಲ್ಲಿ ರಾರಾಜಿಸ್ತಿದೆ.. ಮಾಹಿ ಸಾವಿರಾರು ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ಜೊತೆಗೆ ಉದ್ಯಮ, ಜಾಹಿರಾತುಗಳಿಂದಲೂ ಸಾಕಷ್ಟು ಹಣ ಗಳಿಸ್ತಾ ಇದ್ದಾರೆ.. ಇದ್ರ ಜೊತೆಗೆ ಬ್ಯಾಟ್ ಮೂಲಕವೇ 25 ಕೋಟಿ ರೂಪಾಯಿಗಳವರೆಗೆ ಸಂಪಾದಿಸಿದ್ದಾರೆ.. ಆಸ್ಟ್ರೇಲಿಯಾದ ಸ್ಪಾರ್ಟನ್ ಸ್ಪೋರ್ಟ್ಸ್ ಮತ್ತು ಅಮಿಟಿ ಯೂನಿವರ್ಸಿಟಿಯೊಂದಿಗೆ ಒಪ್ಪಂದ ಮಾಡ್ಕೊಂಡಿದ್ದಾರೆ. ಈ ಎರಡು ಪ್ರತ್ಯೇಕ ಒಪ್ಪಂದ ಮಾಡಿಕೊಂಡು ಬ್ಯಾಟ್ ನಿಂದ ದುಡ್ಡು ಗಳಿಸ್ತಿದ್ದಾರೆ.
ಇನ್ನು ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಸದ್ಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ನಲ್ಲಿ 19,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಿಟ್ ಮ್ಯಾನ್ ಕೂಡ ಬ್ಯಾಟ್ ನಿಂದ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ. ರೋಹಿತ್ ಸಿಯೆಟ್ ಟೈರ್ ಕಂಪನಿಯ ಜಾಹೀರಾತನ್ನು ತಮ್ಮ ಬ್ಯಾಟ್ ಮೇಲೆ ಅಂಟಿಸಿದ್ದಾರೆ.. 2015 ರಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಈ ಕಂಪನಿ ಮೊದಲ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದ ಈ ಕಂಪನಿಯ ಲೋಗೋ ರೋಹಿತ್ ಅವರ ಬ್ಯಾಟ್‌ನಲ್ಲಿ ಮಿಂಚುತ್ತಿದೆ. ಇದಕ್ಕೆ ಹಿಟ್ ಮ್ಯಾನ್ ವರ್ಷಕ್ಕೆ 4 ಕೋಟಿ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ..
ಹೀಗೆ ಹಲವು ಕ್ರಿಕೆಟರ್‌ಗಳು ತಮ್ಮ ಬ್ಯಾಟ್‌ಗಳ ಮೂಲಕವೇ ಕೋಟಿ ಕೋಟಿ ಹಣ ಸಂಪಾದಿಸ್ತಾರೆ.ಅಂದಹಾಗೆ, ಬ್ಯಾಟ್‌ನ ಸ್ಟಿಕ್ಕರ್ ಮೂಲಕವೇ ತಿಂಗಳಿಗೆ ಒಂದು ಕೋಟಿ ರೂಪಾಯಿ ಗಳಿಸುವ ವಿರಾಟ್ ಕೊಹ್ಲಿಯವರು ಬಳಸುವ ಬ್ಯಾಟ್‌ಗಳ ಬೆಲೆ ಎಷ್ಟು ಗೊತ್ತಾ? ಅಂದಾಜು 27 ಸಾವಿರ ರೂಪಾಯಿ ಮಾತ್ರ.. ಅಂದ್ರೆ 27 ಸಾವಿರ ರೂಪಾಯಿ ಬೆಲೆಯ ಬ್ಯಾಟಿಂದಲೇ ಕೊಹ್ಲಿ ನೂರು ಕೋಟಿ ರುಪಾಯಿ ಗಳಿಸ್ತಾರೆ.. ಆದ್ರೆ ಇದಕ್ಕೆಲ್ಲಾ ಕಿಂಗ್ ಕೊಹ್ಲಿಯವರ ಅದ್ಭುತ ಪ್ರತಿಭೆಯ ಕಾರಣ. ಕ್ರಿಕೆಟ್ ಗಾಗಿ ನಿರಂತರ ಪರಿಶ್ರಮ ಹಾಕಿರೋದ್ರಿಂದಲೇ ಕೊಹ್ಲಿ ಮಿಂಚಲು ಸಾಧ್ಯವಾಗಿದ್ದು.. ಇಲ್ದಿದ್ರೆ ಇಷ್ಟೊಂದು ನೇಮ್ ಫೇಮ್, ದುಡ್ಡು ಕೊಹ್ಲಿ ಹಿಂದೆ ಬರ್ತಾ ಇರ್ಲಿಲ್ಲ.