ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು – ಮುದ್ದು ಕಂದನಿಗೆ ಅಕಾಯ್ ಎಂದು ಹೆಸರಿಟ್ಟ ಕಿಂಗ್ ಕೊಹ್ಲಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು – ಮುದ್ದು ಕಂದನಿಗೆ ಅಕಾಯ್ ಎಂದು ಹೆಸರಿಟ್ಟ ಕಿಂಗ್ ಕೊಹ್ಲಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಗಂಡು ಮಗು ಜನಿಸಿರುವ ಸಿಹಿ ಸುದ್ದಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಮಗುವಿನ ಹೆಸರನ್ನು ಕೂಡಾ ಅಭಿಮಾನಿಗಳಿಗೆ  ತಿಳಿಸಿದ್ದಾರೆ.

ಇದನ್ನೂ ಓದಿ: 2 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ ವಿರಾಟ್ ಕೊಹ್ಲಿ – ಕಿಂಗ್ ಕೊಹ್ಲಿಯ ಬದಲಿಗೆ ಆಡುವ ಆಟಗಾರ ಯಾರು?

ಭಾರತದ ಟಾಪ್ ಸೆಲೆಬ್ರಿಟಿ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ ಸಂಭ್ರಮದಲ್ಲಿದ್ದಾರೆ. ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಖುಷಿಯ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಫೆಬ್ರವರಿ 15ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ‘ಅಕಾಯ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ‘ಅತ್ಯಂತ ಸಂತೋಷ ಮತ್ತು ಪ್ರೀತಿಯಿಂದ ನಮ್ಮ ಹೃದಯಗಳು ತುಂಬಿವೆ. ಫೆಬ್ರವರಿ 15 ರಂದು, ನಾವು ನಮ್ಮ ಗಂಡು ಮಗು ಅಕಾಯ್ ಅನ್ನು ನಮ್ಮ ಜೀವನಕ್ಕೆ ಸ್ವಾಗತಿಸಿದ್ದೇವೆ. ಅಕಾಯ್, ವಮಿಕಾಳ ಪುಟ್ಟ ಸಹೋದರ. ನಾವು ‘ಅಕಾಯ್’ ಅನ್ನು ಸ್ವಾಗತಿಸಿದ ಸುದ್ದಿ ತಿಳಿಸಲು ಬಹಳ ಖುಷಿ ಪಡುತ್ತಿದ್ದೇವೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಲು ವಿನಂತಿಸುತ್ತೇವೆ’ ಎಂದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ವಿವಾಹವಾದರು. 2021ರಲ್ಲಿ ಮೊದಲ ಮಗು ವಮಿಕಾಗೆ ಅನುಷ್ಕಾ ಶರ್ಮಾ ಜನ್ಮ ನೀಡಿದರು. ಈಗ 2024ರ ಫೆಬ್ರವರಿ 15ರಂದು ಅಕಾಯ್ ಜನ್ಮ ನೀಡಿದ್ದಾರೆ. ಅಕಾಯ್ ಎಂದರೆ ಟರ್ಕಿಶ್‌ನಲ್ಲಿ ಹೊಳೆಯುವ ಚಂದ್ರ ಎಂಬ ಅರ್ಥವಿದೆ. ಹಿಂದಿಯಲ್ಲಿ ಕಾಯ ಇಲ್ಲದವ ಅಥವಾ ಶಿವ ಎಂಬ ಅರ್ಥವೂ ಇದೆ ಎನ್ನಲಾಗುತ್ತದೆ. ಮಗಳಿಗೆ ‘ವಮಿಕಾ’ ಎಂದು ಹೆಸರು ಇಟ್ಟಿದ್ದಾರೆ ವಿರಾಟ್ ಹಾಗೂ ಅನುಷ್ಕಾ. ವಮಿಕಾ ಎಂದರೆ ಸಂಸ್ಕೃತದಲ್ಲಿ ದೇವಿ ದುರ್ಗಾ ಎಂದರ್ಥ.

Sulekha