RCB VS SRH ಪಂದ್ಯದಲ್ಲಿ ಹೆಡ್ ಜೊತೆ ವಿರಾಟ್ ಕಿರಿಕ್ – ತಪ್ಪು ಮಾಡಿದ್ರಾ ಕಿಂಗ್?

RCB VS SRH ಪಂದ್ಯದಲ್ಲಿ ಹೆಡ್ ಜೊತೆ ವಿರಾಟ್ ಕಿರಿಕ್ – ತಪ್ಪು ಮಾಡಿದ್ರಾ ಕಿಂಗ್?

ವಿರಾಟ್ ಕೊಹ್ಲಿ ಅಂದ್ರೆ ಅಗ್ರೆಸಿವ್. ಕಿಂಗ್ ಮೈದಾನದಲ್ಲಿದ್ರೆ ಫಾನ್ಸ್‌ಗೆ ಒಂದು ರೀತಿಯ ಹಬ್ಬ. ಮೈದಾನದಲ್ಲೇ ವಿರಾಟ್ ಸಹ ಆಟಗಾರರ ಕಾಲೆಳೆಯುವ ಕೆಲಸವನ್ನ ಮಾಡ್ತಾನೆ ಇರ್ತಾರೆ. ನಿನ್ನೆ ನಡೆದ ಎಸ್‌ಆರ್‌ಹೆಚ್‌ ಆರ್‌ಸಿಬಿ ಪಂದ್ಯದಲ್ಲೂ ವಿರಾಟ್ ಟ್ರಾವಿಸ್ ಹೆಡ್‌ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ತಮಾಷೆಯಲ್ಲಿ ಶುರುವಾದ ಈ ಕಿರಿಕ್ ಕೊನೆಯಲ್ಲಿ ಸೀರಿಯಸ್ ಆಗಿದೆ.

ಹೆಡ್ VS ವಿರಾಟ್ ಕೊಹ್ಲಿ  

ಟ್ರಾವಿಸ್ ಹೆಡ್‌ ಹಾಗೂ ವಿರಾಟ್ ಕೊಹ್ಲಿ ನಡುವೆ ಕಿರಿಕ್ ಆಗಿದ್ದು ಹೇಗೆ ಅಂತ ನೋಡೋದಾದ್ರೆ..  SRH ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್  ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿದ್ರು. ನಂತ್ರ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕೊಹ್ಲಿ, ಮಿಡ್-ವಿಕೆಟ್‌ನಲ್ಲಿದ್ದ ಟ್ರಾವಿಸ್ ಹೆಡ್‌ರನ್ನು ಕೆಣಕಿದರು.  ಬಾ ಇಲ್ಲಿ, ಬಂದು ಸ್ವಲ್ಪ ಆಫ್-ಸ್ಪಿನ್ ಬೌಲಿಂಗ್ ಮಾಡು ಎಂದು ಹೆಡ್‌ಗೆ ಸವಾಲು ಹಾಕಿದ್ರು. ಹೀಗೆ ಹೇಳಿದ ತಕ್ಷಣ ಸಾಕಿಬ್ ಹುಸೇನ್ ಎಸೆತದಲ್ಲಿ ಕೇವಲ 15 ರನ್ ಗಳಿಸಿ ಕೊಹ್ಲಿ ಔಟಾದರು. ಗೆಳೆಯಾ, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟಾಗಿ ಹೋದೆ  ಹೆಡ್ ಕೊಹ್ಲಿಗೆ ತಿರುಗೇಟು ನೀಡಿದರು. ಇದರಿಂದ ಕೊಹ್ಲಿ ತೀವ್ರ ಅಸಮಾಧಾನಗೊಂಡರು.

ತಪ್ಪು ಮಾಡಿದ ವಿರಾಟ್ ಕೊಹ್ಲಿ

ವಿರಾಟ್‌ಗೆ ಟ್ರಾವಿಸ್ ಹೆಡ್‌ ಕೆಣಕ್ಕಿದ್ದು ಸಹಿಸಿಕೊಳ್ಳುವುದ್ದಕ್ಕೆ ಆಗಿಲ್ಲ.  ಮೈದಾನದಲ್ಲಿ ಎಷ್ಟೇ ಕಿರಿಕ್ ಆದ್ರೂ ಪಂದ್ಯ ಮುಗಿದ ತಕ್ಷಣ ಆಟಗಾರರು ಕೈಕುಲುಕುವ ಮೂಲಕ ಆ ಎಲ್ಲ ಕಹಿ ಘಟನೆಗಳನ್ನು ಮೈದಾನದಲ್ಲೇ ಬಿಟ್ಟು ಬರಬೇಕು.. ಆದ್ರೆ ಈ ಪಂದ್ಯ ಮುಗಿದ ನಂತ್ರ ಟ್ರಾವಿಸ್ ಹೆಡ್ ಹಳೆಯದ್ದನ್ನು ಮರೆತು ಕೈ ಚಾಚಿದಾಗ, ಕೊಹ್ಲಿ ಅದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದಾರೆ. ಇಲ್ಲಿ ವಿರಾಟ್ ಕೊಹ್ಲಿ ಹ್ಯಾಂಡ್ ಶೇಕ್ ನೀಡಬಹುದಿತ್ತು. ಆದ್ರೆ ಒಬ್ಬ ಸ್ಟಾರ್ ಪ್ಲೇಯರ್ ಈ ರೀತಿ ಮಾಡಿದ್ದು ಸರಿಯಲ್ಲ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.

Kishor KV

Leave a Reply

Your email address will not be published. Required fields are marked *