ರೋಹಿತ್-ಕೊಹ್ಲಿಗೆ IPL ಫೈನಲ್! – 30 ಪ್ಲೇಯರ್ಸ್ ಲಿಸ್ಟ್ ಮಾಡಿದ್ದೇಕೆ?

ರೋಹಿತ್-ಕೊಹ್ಲಿಗೆ IPL ಫೈನಲ್! – 30 ಪ್ಲೇಯರ್ಸ್ ಲಿಸ್ಟ್ ಮಾಡಿದ್ದೇಕೆ?

ಟೀಂ ಇಂಡಿಯಾ ಸದ್ಯ ಸೌತ್​​ ಆಫ್ರಿಕಾ ಟೂರ್​​ನಲ್ಲಿದ್ರೂ ಕೂಡ ಇತ್ತ ಬಿಸಿಸಿಐನ ಫೋಕಸ್ ಮಾತ್ರ ಕಂಪ್ಲೀಟ್ ಆಗಿ ಐಪಿಎಲ್​ ಮತ್ತು ಟಿ-20 ವರ್ಲ್ಡ್​ಕಪ್​ನತ್ತ ಶಿಫ್ಟ್ ಆಗಿದೆ. ಟಿ-20 ವಿಶ್ವಕಪ್​​ನ ಟೀಂ ಸೆಲೆಕ್ಷನ್​ ಮಾಡೋದೆ ಬಿಸಿಸಿಐಗೆ ದೊಡ್ಡ ಚಿಂತೆಯಾಗಿದೆ. ಟಿ-20 ವರ್ಲ್ಡ್​​ಕಪ್​ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಏಕೈಕ ಟಿ-20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ. ಹೀಗಾಗಿ ಆಫ್ಘಾನಿ ವಿರುದ್ಧದ ಸೀರಿಸ್​ಗೆ ಟೀಂ ಇಂಡಿಯಾ ಸ್ಕ್ವಾಡ್​​ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ಕೂಡ ತುಂಬಾನೆ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್​ಕರ್ ಮುಂಬರುವ ಟಿ-20 ವರ್ಲ್ಡ್​​ಕಪ್​​ನ್ನ ಗಮನದಲ್ಲಿಟ್ಟುಕೊಂಡೇ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​​ಗೆ ಪ್ಲೇಯರ್ಸ್​​ಗಳನ್ನ ಸೆಲೆಕ್ಟ್ ಮಾಡೋಕೆ ಪ್ಲ್ಯಾನ್ ಮಾಡ್ತಾ ಇದ್ದಾರಂತೆ. ಅದ್ರಲ್ಲೂ ಟೀಂ ಇಂಡಿಯಾದ ಇಬ್ಬರು ಸೀನಿಯರ್ ಪ್ಲೇಯರ್ಸ್​​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಬಿಸಿಸಿಐ ಸಭೆ ಬೇರೆ ನಡೆಸಲಿದೆ. ಹಾಗಿದ್ರೆ ಇಲ್ಲಿ ಬಿಸಿಸಿಐನ ಪ್ಲ್ಯಾನ್ ಏನು? ರೋಹಿತ್ ಮತ್ತು ಕೊಹ್ಲಿ ಟಿ-20 ವರ್ಲ್ಡ್​​ಕಪ್ ಆಡ್ತಾರಾ? ಇಲ್ವಾ? ಆಫ್ಘನ್ ಸೀರಿಸ್​​ಗೆ ಇಬ್ಬರನ್ನೂ ಸೆಲೆಕ್ಟ್ ಮಾಡಲಾಗುತ್ತಾ? ಇಲ್ಲಾ ಡ್ರಾಪ್ ಆಗ್ತಾರಾ? ಇವೆಲ್ಲದರ ಕುರಿತ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಮಾರಕವಾಗುತ್ತಾ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ – ಹಸಿರು ಪಿಚ್‌ನಲ್ಲಿ ಮ್ಯಾಜಿಕ್ ಮಾಡುತ್ತಾ ಭಾರತ

ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 2ನೇ ಟೆಸ್ಟ್​ ಮ್ಯಾಚ್ ಆಡೋ ಹೊತ್ತಲ್ಲೇ ಅಜಿತ್ ಅಗರ್​​ಕರ್​ ಮತ್ತು ಸೆಲೆಕ್ಷನ್ ಕಮಿಟಿ ಟೀಂ ದಕ್ಷಿಣ ಆಫ್ರಿಕಾದಲ್ಲಿ ಬೀಡುಬಿಟ್ಟಿದೆ. ಯಾವುದೇ ಕ್ಷಣದಲ್ಲಿದಲ್ಲಿ ಬೇಕಾದ್ರೂ ಬಿಸಿಸಿಐ ಸೆಲೆಕ್ಷನ್ ಕಮಿಟಿ ಕ್ರೂಶಿಯಲ್ ಮೀಟಿಂಗ್ ನಡೆಸಲಿದೆ. ಈ ಮೀಟಿಂಗ್​ನಲ್ಲಿ ಕೋಚ್ ರಾಹುಲ್​ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ. ಮೂವರ ಜೊತೆಗೂ ಚರ್ಚೆ ನಡೆಸಿ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್​​ಗೆ ಟೀಂ ಇಂಡಿಯಾ ಸ್ಕ್ವಾಡ್​ನ್ನ ಫೈನಲ್ ಮಾಡಲಿದ್ದಾರೆ. ಇಲ್ಲಿ ರೋಹಿತ್​ ಮತ್ತು ವಿರಾಟ್ ಜೊತೆಗೆ ಸೆಲೆಕ್ಷನ್ ಕಮಿಟಿ ಚರ್ಚೆ ನಡೆಸೋದಕ್ಕೂ ಒಂದು ಮಹತ್ವದ ಕಾರಣ ಇದೆ. ಇಬ್ಬರೂ ಸೀನಿಯರ್ ಕ್ರಿಕೆಟರ್ಸ್​ ಕಳೆದ ಒಂದೂವರೆ ವರ್ಷದಿಂದ ಟೀಂ ಇಂಡಿಯಾ ಪರ ಯಾವುದೇ ಟಿ20 ಮ್ಯಾಚ್​ಗಳನ್ನ ಆಡಿಲ್ಲ. ಹೀಗಾಗಿ ಈ ವರ್ಷ ನಡೆಯೋ ಟಿ-20 ವರ್ಲ್ಡ್​​ಕಪ್​ನಲ್ಲಿ ಆಡೋಕೆ ಬಯಸ್ತೀರಾ, ಇಲ್ವಾ ಅನ್ನೋ ಬಗ್ಗೆ ರೋಹಿತ್ ಮತ್ತು ಕೊಹ್ಲಿಯಿಂದ ಕ್ಲ್ಯಾರಿಟಿ ಪಡೆದುಕೊಳ್ಳೋ ಸಾಧ್ಯತೆ ಇದೆ. ಒಂದು ವರ್ಲ್ಡ್​​ಕಪ್​​ನಲ್ಲಿ ಆಡೋಕೆ ಬಯಸಿದ್ರೆ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​ಗೆ ಇಬ್ಬರನ್ನೂ ಸೆಲೆಕ್ಟ್ ಮಾಡೋ ವಿಚಾರವಾಗಿಯೂ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬಹುದು. ಟಿ-20 ವರ್ಲ್ಡ್​​ಕಪ್​ಗೆ ಟೀಂ ಇಂಡಿಯಾ ಕ್ಯಾಪ್ಟನ್ಸಿ ವಿಚಾರವಾಗಿ ಬಿಸಿಸಿಐನ ಫಸ್ಟ್​ ಪ್ರಯಾರಿಟಿ ಆಗಿರೋದೆ ರೋಹಿತ್​ ಶರ್ಮಾ.

ಇನ್ನು ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​​ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ಇಬ್ಬರೂ ಆಡೋದಿಲ್ಲ. ಹೀಗಾಗಿ ಅಫ್ಘನ್ ಸೀರಿಸ್​ಗೆ ಟೀಂ ಇಂಡಿಯಾವನ್ನ ಯಾರು ಲೀಡ್ ಮಾಡ್ತಾರೆ ಅನ್ನೋದು ಈಗಿರುವ ಪ್ರಶ್ನೆ. ಮೋಸ್ಟ್ಲಿ ಅಫ್ಘನ್ ವಿರುದ್ಧ ರೋಹಿತ್​ ಶರ್ಮಾಗೆ ತಂಡವನ್ನ ಲೀಡ್ ಮಾಡುವಂತೆ ಬಿಸಿಸಿಐ ಸೂಚಿಸಿದ್ರೂ ಆಶ್ಚರ್ಯ ಇಲ್ಲ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಅಫ್ಘಾನಿಸ್ತಾನ 3 ಟಿ20 ಮ್ಯಾಚ್​​ಗಳನ್ನ ಆಡಿದ್ರೂ ಆಡಬಹುದು. ಈ ಮೂಲಕ ಟಿ-20 ಫಾರ್ಮೆಟ್​ನಲ್ಲಿ ಇಬ್ಬರ ಪರ್ಫಾಮೆನ್ಸ್​ ಮತ್ತು ಫಿಟ್ನೆಸ್​​ನ್ನ ಚೆಕ್​ ಮಾಡುವ ಸಾಧ್ಯತೆ ಇದೆ.

IPL ಬಳಿಕವೇ ವರ್ಲ್ಡ್ಕಪ್ ಟೀಂ ಫೈನಲ್!

ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಚಾರ ಕೂಡ ಇದೆ. ಟಿ-20 ವರ್ಲ್ಡ್​​ಕಪ್​ಗೂ ಮುನ್ನ ಐಪಿಎಲ್​ ಟೂರ್ನಿ ನಡೆಯುತ್ತೆ. ಮಾರ್ಚ್​ ಮತ್ತು ಮೇನಲ್ಲಿ ಐಪಿಎಲ್​ ನಡೆಯಲಿದೆ. ಈ ವೇಳೆ ಭಾರತೀಯ ಕ್ರಿಕೆಟಿಗರು ನೀಡುವ ಪರ್ಫಾಮೆನ್ಸ್​​ ತುಂಬಾನೆ ಕ್ರೂಶಿಯಲ್​ ಆಗಿರಲಿದೆ. ಸುಮಾರು 30 ಟಿ-20 ಸ್ಪೆಷಲಿಸ್ಟ್ ಪ್ಲೇಯರ್​​ಗಳ ಮೇಲೆ ಬಿಸಿಸಿಐ ನಿಗಾ ವಹಿಸುತ್ತೆ. 30 ಆಟಗಾರರ ಪರ್ಫಾಮೆನ್ಸ್​​ನ್ನ ಬಿಸಿಸಿಐ ಮಾನಿಟರ್ ಮಾಡುತ್ತೆ. ಮಾನಿಟರ್ ಮಾಡೋದಕ್ಕಾಗಿಯೇ ಬಿಸಿಸಿಐ ಸ್ಪೆಷಲ್ ಟೀಂನ್ನ ಕೂಡ ರೆಡಿ ಮಾಡಲಿದೆ. ಈ ಟೀಂ ಮೆಂಬರ್​ಗಳು ಐಪಿಎಲ್​ ವೇಳೆ ಎಲ್ಲಾ ಮ್ಯಾಚ್​​ಗಳನ್ನ ನೋಡೋಕೂ ಸ್ಟೇಡಿಯಂ ತೆರಳಲಿದ್ದಾರೆ. ತಾವು ಲಿಸ್ಟ್ ಮಾಡಿದ ಪ್ಲೇಯರ್ಸ್​​ಗಳ ಪರ್ಫಾಮೆನ್ಸ್, ಫಿಟ್ನೆಸ್ ಎಲ್ಲವನ್ನ ಕೂಡ ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಈ ಲಿಸ್ಟ್​ನಲ್ಲಿ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿಯ ಟಿ-20 ವರ್ಲ್ಡ್​​ಕಪ್ ಭವಿಷ್ಯ ಕೂಡ ನಿರ್ಧಾರವಾಗೋದು ಐಪಿಎಲ್​​ ಪರ್ಫಾಮೆನ್ಸ್​​ ಆಧಾರದ ಮೇಲೆಯೇ. ಒಂದು ವೇಳೆ ಫೇಲ್ ಆದ್ರು ಅಂದ್ರೆ ವರ್ಲ್ಡ್​​ಕಪ್​​ ಟೀಮ್​​ನಿಂದ ಡ್ರಾಪ್​ ಆದ್ರೂ ಆಶ್ಚರ್ಯ ಇಲ್ಲ. ಐಪಿಎಲ್​​ನಲ್ಲಿ 30 ಆಟಗಾರರ ಪರ್ಫಾಮೆನ್ಸ್​ನ್ನ ನೋಟ್​ ಮಾಡಿಕೊಂಡ ಮೇಲೆ ಟಿ-20 ವರ್ಲ್ಡ್​​ಕಪ್​​ಗೆ ಅಂತಿಮ 15 ಮಂದಿ ಆಟಗಾರರ ಲಿಸ್ಟ್​​ನ್ನ ಬಿಸಿಸಿಐ ಸೆಲೆಕ್ಷನ್ ಕಮಿಟಿ ಫೈನ್ ಮಾಡಲಿದೆ. ಹೀಗಾಗಿ ಟಿ-20 ವರ್ಲ್ಡ್​​ಕಪ್​​ನಲ್ಲಿ ಆಡಬೇಕು ಅಂದುಕೊಂಡಿರೋ ಭಾರತೀಯ ಕ್ರಿಕೆಟಿಗರಿಗೆ ಐಪಿಎಲ್​​ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಓವರ್​ಆಲ್ ಆಗಿ ಐಪಿಎಲ್​ ಪರ್ಫಾಮೆನ್ಸ್ ಆಧಾರದ ಮೇಲೆಯೇ ವರ್ಲ್ಡ್​ಕಪ್ ಟೀಂ ಸೆಲೆಕ್ಟ್ ಮಾಡೋಕೆ ಬಿಸಿಸಿಐ ನಿರ್ಧರಿಸಿದೆ.

ಇವೆಲ್ಲದ್ರ ಮಧ್ಯೆ ಇಂಜ್ಯೂರಿಗೆ ಒಳಗಾಗಿದ್ದ ಆಲ್ರೌಂಡರ್​ ಹಾರ್ದಿಕ್ ಪಾಂಡ್ಯಾ ಕಮ್​ಬ್ಯಾಕ್​ ಮಾಡೋಕೆ ಫುಲ್​ ಪ್ರಿಪೇರ್ ಆಗ್ತಾ ಇದ್ದಾರೆ. ಫಿಟ್ನೆಸ್ ಮೇಲೆ ಸಿಕ್ಕಾಪಟ್ಟೆ ವರ್ಕೌಟ್​ ಮಾಡ್ತಾ ಇದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಜಿಮ್​ನಲ್ಲಿ ವರ್ಕೌಟ್ ಮಾಡೋ ಫೋಟೋ, ವಿಡಿಯೋವನ್ನ ಪೋಸ್ಟ್ ಮಾಡಿದ್ರು. ಪ್ರೋಗ್ರೆಸ್ ಎವ್ರಿಡೇ ಅಂತಾ ಪಾಂಡ್ಯಾ ಬರೆದುಕೊಂಡಿದ್ದಾರೆ. ಬಟ್ ಅಫ್ಘಾನಿಸ್ತಾನ ಟಿ-20 ಸೀರಿಸ್​ನಲ್ಲಿ ಪಾಂಡ್ಯಾ ಆಡೋದು ಅನುಮಾನವೇ. ಆದ್ರೆ ಐಪಿಎಲ್​​ ವೇಳೆಗೆ ಕಮ್​​ಬ್ಯಾಕ್ ಮಾಡೋದು ಗ್ಯಾರಂಟಿ. ಅದು ಬೇರೆ ಮುಂಬೈ ಇಂಡಿಯನ್ಸ್​​ ಕ್ಯಾಪ್ಟನ್​ ಆಗಿ ಸೆಲೆಕ್ಟ್ ಆಗಿದ್ದಾರೆ. ಹೇಗಾದ್ರೂ ಮಾಡಿ ಐಪಿಎಲ್​​ ಟೈಮ್​​ಗೆ ಫುಲ್​ ಫಿಟ್ ಆಗಬೇಕು ಅನ್ನೋ ಟಾರ್ಗೆಟ್​​ನ್ನ ಪಾಂಡ್ಯಾ ಇಟ್ಟುಕೊಂಡಿರೋದು ಮಾತ್ರ ಕ್ಲೀಯರ್. ಟೋಟಲಿ, ಈ ಬಾರಿಯ ಐಪಿಎಲ್​​ ಟೂರ್ನಿ ಹಲವು ಆ್ಯಂಗಲ್​​ಗಳಲ್ಲಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಮೇನ್ ಆಗಿ ಟೀಂ ಇಂಡಿಯಾದ ಟಿ20 ವರ್ಲ್ಡ್​​ಕಪ್​​ ಟೀಮ್ ಫೈನಲ್​ ಆಗೋದು ಪ್ಲೇಯರ್ಸ್​ಗಳ ಐಪಿಎಲ್​ ಪರ್ಫಾಮೆನ್ಸ್ ಮೇಲೆ. ಈವನ್ ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಐಪಿಎಲ್​​ ತುಂಬಾ ಕ್ರೂಶಿಯಲ್ ಆಗಿರಲಿದೆ. ಹೀಗಾಗಿ ಎಲ್ಲರ ಫೋಕಸ್ ಈ ಇಬ್ಬರು ಸ್ಟಾರ್​ಗಳ ಮೇಲೆಯೇ ಇರುತ್ತೆ. ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಹಾರ್ದಿಕ್​ ಪಾಂಡ್ಯಾ ಯಾವ ರೀತಿ ಕಮ್​​ಬ್ಯಾಕ್ ಮಾಡ್ತಾರೆ? ಪಾಂಡ್ಯಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಕಥೆಯೇನಾಗಬಹುದು ಅನ್ನೋದು. ಜೊತೆಗೆ ಪಾಂಡ್ಯಾ ಕ್ಯಾಪ್ಟನ್ಸಿ ಅಂಡರ್​​ನಲ್ಲಿ ರೋಹಿತ್​ ಶರ್ಮಾ ಹೇಗೆ ಆಡ್ತಾರೆ. ರೋಹಿತ್​ ಬಾಡಿ ಲಾಂಗ್ವೇಜ್ ಹೇಗಿರಬಹುದು ಇದೇ ತುಂಬಾ ಇಂಟ್ರೆಸ್ಟಿಂಗ್ ಆಗಿರೋದು. ಸೋ 2024 ಐಪಿಎಲ್​​ ಹಲವು ಆಯಾಮಗಳಲ್ಲಿ ಅತ್ಯಂತ ಹೈವೋಲ್ಟೇಜ್ ಐಪಿಎಲ್​ ಟೂರ್ನಿಯಾಗೋದ್ರಲ್ಲಿ ಡೌಟೇ ಇಲ್ಲ.

Shwetha M