ಕೊಹ್ಲಿಗೆ ತುಂಬಾ ಸ್ಪೆಷಲ್ ನಂ.18 – ಈ ನಂಬರ್ ಹಿಂದೆ ವಿರಾಟ್ ಕಾಡುವ ನೆನಪು ಯಾವುದು?
ವಿರಾಟ್ Jersey ನಂಬರ್ ರಹಸ್ಯ

ನೀವು ಯಾವುದೇ ಮ್ಯಾಚ್ಗೆ ಹೋಗಿ. ಅದು ಟೀಂ ಇಂಡಿಯಾ ಪಂದ್ಯವೇ ಆಗಿರ್ಲಿ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯೇ ಇರಲಿ. ಮೋಸ್ಟ್ ಆಫ್ ದಿ ಫ್ಯಾನ್ಸ್ ವಿರಾಟ್ ಹೆಸರಿನ ಜೆರ್ಸಿಯನ್ನೇ ಧರಿಸಿರ್ತಾರೆ. ಅವ್ರೆಲ್ಲರ ಜೆರ್ಸಿ ಮೇಲೆ ದೊಡ್ಡ ಸೈಜ್ನಲ್ಲಿ ಕಾಣೋ ನಂಬರ್ 18. ಅಂದ್ರೆ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18. ಹೀಗಾಗಿ ಫ್ಯಾನ್ಸ್ ಕೂಡ ಈ ಸಂಖ್ಯೆಯನ್ನ ಸಂಭ್ರಮಿಸ್ತಾರೆ. ಆದ್ರೆ ಈ ಹದಿನೆಂಟರ ಸಂಖ್ಯೆ ನಮಗೆ ನಿಮಗೆಲ್ಲಾ ಖುಷಿ ಕೊಡ್ಬೋದು. ಆದರೆ, ವಿರಾಟ್ಗೆ ಅಲ್ಲ. ಯಾಕಂದ್ರೆ ಈ ನಂಬರ್ ಹಿಂದೆ ವಿರಾಟ್ಗೆ ದೊಡ್ಡ ನೋವೇ ಇದೆ. ಮರೆಯಲಾಗದ ನೆನಪಿದೆ. ಕಣ್ಣೀರಿನ ದುರಂತ ಕಥೆ ಇದೆ.
ಇದನ್ನೂ ಓದಿ:‘ಟಾಕ್ಸಿಕ್’ಗೆ ಖಂಡ್ರೆ ಕಂಟಕ – ನಿಲ್ಲುತ್ತಾ ಯಶ್ ಸಿನಿಮಾ?
ಕ್ರಿಕೆಟ್ನಲ್ಲಿ ಟಾಪ್ ಆಟಗಾರರ ದಾಖಲೆಗಳ ಜೊತೆಗೆ ಅವರ ಜರ್ಸಿ ಸಂಖ್ಯೆಗಳು ಸಹ ತುಂಬಾನೇ ಸ್ಪೆಷಲ್ ಆಗಿರುತ್ತವೆ. ಸಚಿನ್ ತೆಂಡೂಲ್ಕರ್ 10 ನಂಬರ್, ಧೋನಿ ಜೆರ್ಸಿ ನಂಬರ್ 7. ಈ ಲೆಜೆಂಡ್ಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ಜರ್ಸಿ ಸಂಖ್ಯೆಗಳು ಇನ್ನೂ ಅಭಿಮಾನಿಗಳ ಮನಸ್ಸಲ್ಲಿ ಹಚ್ಚ ಹಸಿರಿನಂತಿವೆ. ಇದೇ ಲಿಸ್ಟ್ನಲ್ಲಿ ಇರೋ ಮತ್ತೊಬ್ಬ ಗ್ರೇಟೆಸ್ಟ್ ಪ್ಲೇಯರ್ ಅಂದ್ರೆ ಅದು ವಿರಾಟ್ ಕೊಹ್ಲಿ. ಕೊಹ್ಲಿ ಜೆರ್ಸಿ ನಂಬರ್ಗೂ ಕೂಡ ದೊಡ್ಡ ಕ್ರೇಜೇ ಇದೆ. ರನ್ ಮೆಷಿನ್, ಕಿಂಗ್ ಎಂದು ಕರೆಸಿಕೊಳ್ಳುವ ಕೊಹ್ಲಿ ಅವರ ಜರ್ಸಿ ಸಂಖ್ಯೆ 18 ಎಂಬುದನ್ನ ನಾವಿಲ್ಲಿ ಬಿಡಿಸಿ ಹೇಳ್ಬೇಕಾಗಿಲ್ಲ. ಕ್ರಿಕೆಟ್ ಜಗತ್ತಿನಲ್ಲಿ ಜೆರ್ಸಿ ನಂಬರ್ 18 ಎಂದಾಕ್ಷಣ ಥಟ್ ಅಂತಾ ನಮ್ಮ ಕಣ್ತುಂದೆ ಬರೋದೇ ಕಿಂಗ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ 18 ನಂಬರ್ ಇರುವ ಜರ್ಸಿ ಧರಿಸುತ್ತಾರೆ. 2008ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ 18ನೇ ನಂಬರ್ ಜರ್ಸಿ ಧರಿಸಿದ್ದರು. ಅವರ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರವೂ ವಿರಾಟ್ ಕೊಹ್ಲಿ 18 ನಂಬರ್ ಜೆರ್ಸಿಯನ್ನು ಮಾತ್ರ ಧರಿಸುತ್ತಿದ್ದಾರೆ. ಅಷ್ಟಕ್ಕೂ ಆ ನಂಬರ್ 18 ವಿಶೇಷತೆ ಏನು? ಆ ಸಂಖ್ಯೆಯ ಜೆರ್ಸಿ ಧರಿಸಿರುವುದರ ಹಿಂದಿನ ಭಾವನಾತ್ಮಕ ಕಾರಣವನ್ನೇ ಹೇಳ್ತೇನೆ ನೋಡಿ.
ಇದನ್ನೂ ಓದಿ: ದೇವರನ್ನೇ ನಂಬದ ವಿರಾಟ್ ಈಗ ಅಪ್ಪಟ ಭಕ್ತ – ಅದೆಷ್ಟು ನಂಬಿಕೆ?
ವಿರಾಟ್ ಕೊಹ್ಲಿ ತಂದೆ 18ನೇ ತಾರೀಖಿನಂದು ನಿಧನ!
ವಿರಾಟ್ ಕೊಹ್ಲಿಯವರ ತಂದೆ ಹೆಸರು ಪ್ರೇಮ್ ಕೊಹ್ಲಿ. 2008 ರ ಅಂಡರ್-19 ವಿಶ್ವಕಪ್ಗೂ ಮೊದಲೇ ನಿಧನರಾಗಿದ್ರು. 2006ರ ಡಿಸೆಂಬರ್ 18 ರಂದು ವಿಧಿವಶರಾಗಿದ್ರು. ಕೊಹ್ಲಿಯವರ ತಂದೆ ನಿಧನರಾದ ಸಮಯದಲ್ಲಿ ವಿರಾಟ್ ಕೊಹ್ಲಿಗೆ 17 ವರ್ಷ ವಯಸ್ಸು. ಈ ವೇಳೆ ಕೊಹ್ಲಿ, ಕರ್ನಾಟಕದ ವಿರುದ್ಧ ದೆಹಲಿ ಪರ ರಣಜಿ ಆಡುತ್ತಿದ್ದರು. ಅಪ್ಪನ ಸಾವಿನ ಸುದ್ಧಿ ತಿಳಿದಿದ್ದರೂ, ತಂಡ ಫಾಲೋ ಆನ್ ತಪ್ಪಿಸಲು ಬ್ಯಾಟಿಂಗ್ ಮುಂದುವರಿಸಲು ನಿರ್ಧರಿಸಿದ್ರು. 2ನೇ ದಿನ 40 ರನ್ಗಳಿಸಿದ್ದ ಕೊಹ್ಲಿ 3ನೇ ದಿನ 238 ಎಸೆತಗಳಲ್ಲಿ 90 ರನ್ಗಳಿಸಿ ತಮ್ಮ ತಂಡ ಫಾಲೋ ಆನ್ಗೆ ಒಳಗಾಗದಂತೆ ಕಾಪಾಡಿದ್ದರು. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ತಮ್ಮ ತಂದೆ ಡಿಸೆಂಬರ್ 18ರಂದು ನಿಧನರಾದ್ರು. ಹೀಗಾಗಿ ಅವ್ರ ಇಷ್ಟ ಪಟ್ಟಂತೆ ಕ್ರಿಕೆಟ್ನಲ್ಲಿ ಮುಂದುವರಿಯಲು ವಿರಾಟ್ 18ನೇ ಜರ್ಸಿ ನಂಬರ್ ಬಳಸೋಕೆ ತೀರ್ಮಾನಿಸಿದ್ರು. ಇನ್ನೊಂದು ಸ್ಪೆಷಾಲಿಟಿ ಅಂದ್ರೆ ವಿರಾಟ್ ಕೊಹ್ಲಿ 2008ರ ಆಗಸ್ಟ್ 18 ರಂದು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ವಿರಾಟ್ ಕೊಹ್ಲಿ ಅವರು 2008 ರಲ್ಲಿ ವಿಶ್ವಕಪ್ ವಿಜೇತ ಅಂಡರ್-19 ತಂಡದ ನಾಯಕರಾಗಿದ್ದಾಗ ಅವರ ಅಂಡರ್-19 ದಿನಗಳಿಂದಲೂ 18 ನೇ ನಂಬರ್ ಜರ್ಸಿಯನ್ನು ಧರಿಸುತ್ತಾ ಬಂದಿದ್ದಾರೆ. 2018 ರಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಹೆಸರಿಸಿದಾಗ, ಭಾರತದ ಅಂತಾರಾಷ್ಟ್ರೀಯ ತಂಡದಲ್ಲಿ ಯಾರೂ ನಂಬರ್ 18 ಜರ್ಸಿ ಬಳಸುತ್ತಿರಲಿಲ್ಲ. ವಿರಾಟ್ ಅಂಡರ್ 19ನ ಜರ್ಸಿ ಸಂಖ್ಯೆಯಲ್ಲೇ ಮುಂದುವರೆದರು. ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡುವಾಗ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು 18 ರಂದು, ದುರದೃಷ್ಟವಶಾತ್ ನನ್ನ ತಂದೆ 18 ರಂದು ನಿಧನರಾದರು. ನನ್ನ ಜರ್ಸಿ 18 ಆಗಿ ಮುಂದುವರೆಯಿತು ಎಂದು ಕೊಹ್ಲಿಯೇ ಹೇಳಿಕೊಂಡಿದ್ರು.
ಒಟ್ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ಲೋಕದಲ್ಲಿ ಬ್ರ್ಯಾಂಡ್ ಆಗಿ ಬೆಳೆದಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲದೇ ಯಂಗ್ಸ್ಟರ್ಸ್ಗೂ ಒಂಥರ ಇನ್ಸ್ಪಿರೇಷನ್. ಕ್ರಿಕೆಟ್ಗಾಗಿ ಈವರೆಗೂ ಫಿಟ್ನೆಸ್ ಕಾಯ್ದುಕೊಂಡಿದ್ದು, ಕ್ರೀಡಾ ಜಗತ್ತಿನಲ್ಲಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಭಾರತದ ಕ್ರಿಕೆಟ್ ದೇವರು ಸಚಿನ್ ನಂತರ ಫಾರ್ಮ್ ಇಲ್ಲ ಎಂಬ ಕಾರಣಕ್ಕೆ ತಂಡದಿಂದ ಹೊರಗುಳಿಯದ ಮತ್ತೊಬ್ಬ ಆಟಗಾರ ಇದ್ದರೆ ಅದು ವಿರಾಟ್ ಕೊಹ್ಲಿ ಮಾತ್ರ. ಹೀಗಾಗಿ ವಿರಾಟ್ ನಿವೃತ್ತಿ ಬಳಿಕ ಅವ್ರ ಜೆರ್ಸಿ ಸಂಖ್ಯೆಯನ್ನ ನಿವೃತ್ತಿಗೊಳಿಸುವಂತೆ ಸಾಕಷ್ಟು ಕ್ರಿಕೆಟರ್ಸ್ ಮನವಿ ಮಾಡಿದ್ದಾರೆ. ಸೋ ವಿರಾಟ್ ಬಳಿಕ ಟೀಂ ಇಂಡಿಯಾದಲ್ಲಿ 18ನೇ ನಂಬರ್ ಮಾಯವಾದ್ರೂ ಅಚ್ಚರಿ ಪಡ್ಬೇಕಿಲ್ಲ.