ಕೊಹ್ಲಿ-ಗಂಭೀರ್ ಮಧ್ಯೆ RCB ಜ್ವಾಲೆ! – 8 ವರ್ಷ ನಾಯಕನಾಗಿ ಸೋತ್ರಾ KING?
ಗೌತಮ್ ಹೇಳಿದ್ದ ಮಾತೇ ಮುಳುವಾಗುತ್ತಾ?

ಕೊಹ್ಲಿ-ಗಂಭೀರ್ ಮಧ್ಯೆ RCB ಜ್ವಾಲೆ! – 8 ವರ್ಷ ನಾಯಕನಾಗಿ ಸೋತ್ರಾ KING?ಗೌತಮ್ ಹೇಳಿದ್ದ ಮಾತೇ ಮುಳುವಾಗುತ್ತಾ?

ಟೀಂ ಇಂಡಿಯಾದ ಹೆಡ್​ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದು, ಇದೇ ತಿಂಗಳ ಅಂತ್ಯದಲ್ಲಿ ಶುರುವಾಗಲಿರೋ ಶ್ರೀಲಂಕಾ ವಿರುದ್ಧದ ಪ್ರವಾಸದ ಮೂಲಕ ತಮ್ಮ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಸೋ ಮುಂಬರುವ ಪಂದ್ಯಗಳಲ್ಲಿ ಭಾರತವನ್ನ ಹೇಗೆ ಮುನ್ನಡೆಸ್ತಾರೆ, ಟೀಂ ಇಂಡಿಯಾ ಆಟಗಾರರ ಸೆಲೆಕ್ಷನ್​ನಲ್ಲಿ ಯಾರಿಗೆ ಇಂಪಾರ್ಟೆನ್ಸ್ ಕೊಡ್ತಾರೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್​ಗೆ ಇದೆ. ಅದ್ರಲ್ಲೂ ಗೌತಮ್ ಗಂಭೀರ್ ಯಂಗ್ ಪ್ಲೇಯರ್ಸ್​​ಗೆ ಜಾಸ್ತಿ ಆಪರ್ಚುನಿಟಿ ಕೊಡ್ಬೇಕು ಅಂದಿರೋದ್ರಿಂದ ಸೀನಿಯರ್ಸ್​ ಸೈಡ್​​ಲೈನ್ ಆಗ್ತಾರಾ ಅನ್ನೋ ಪ್ರಶ್ನೆಯೂ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಿಂಗ್ ವಿರಾಟ್ ಕೊಹ್ಲಿ ಜೊತೆ ಇದ್ದ ಹಳೇ ವೈಮನಸ್ಸನ್ನ ಮರೆತು ಹೇಗೆ ಟೀಂ ಇಂಡಿಯಾವನ್ನ ಲೀಡ್ ಮಾಡ್ತಾರೆ ಅನ್ನೋದೇ ಈಗ ಇರುವ ಮಿಲಿಯನ್ ಡಾಲರ್ ಪ್ರಶ್ನೆ. ಇತ್ತೀಚೆಗೆ ವಿರಾಟ್ ಜೊತೆಗಿನ ಮುನಿಸು ಮರೆತಂತೆ ಗಂಭೀರ್ ಕಂಡ್ರೂ ಕೂಡ ಒಳಗೊಳಗೆ ಅಸಮಾಧಾನ ಇರೋದಂತೂ ಸತ್ಯ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಗಂಭೀರ್ ಕೊಟ್ಟಿರೋ ಅದೊಂದು ಹೇಳಿಕೆ. ಅಷ್ಟಕ್ಕೂ ಗಂಭೀರ್ ವಿರಾಟ್ ಬಗ್ಗೆ ಹೇಳಿದ್ದೇನು? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಬಚ್ಚನ್ ಫ್ಯಾಮಿಲಿ ಬಿಟ್ರಾ ಐಶ್ವರ್ಯಾ ರೈ? – ಅಂಬಾನಿ ಮದ್ವೇಲಿ ಬಿಗ್​ ಸೀಕ್ರೆಟ್ ರಿವೀಲ್

ವಿರಾಟ್ ಕೊಹ್ಲಿ. ಒಂಥರಾ ಕ್ರಿಕೆಟ್ ಲೋಕದ ಬ್ರ್ಯಾಂಡ್ ಇದ್ದಂಗೆ. ಅದು ಆಟನೇ ಇರಲಿ, ಌಟಿಟ್ಯೂಡೇ ಇರಲಿ. ಕಿಂಗ್ ವಿರಾಟ್ ಗ್ರೌಂಡ್​ನಲ್ಲಿ ಇದ್ದೊಷ್ಟು ಹೊತ್ತೂ ಕೂಡ ಫ್ಯಾನ್ಸ್ ಎಂಜಾಯ್ ಮಾಡ್ತಾನೇ ಇರ್ತಾರೆ. ಅದ್ರಲ್ಲೂ ಐಪಿಎಲ್​ನಲ್ಲಿ ಆರ್​​ಸಿಬಿ ಪರ ಕಿಂಗ್ ಅಬ್ಬರ ನೋಡೋದೇ ಚೆಂದ. ಜಗತ್ತಿನ ಯಾವುದೇ ಪ್ರೀಮಿಯರ್ ಲೀಗ್​ನಲ್ಲಿ ಯಾವ ಫ್ರಾಂಚೈಸಿಗೂ ಇಲ್ಲದೇ ಇರೋವಷ್ಟು ಫ್ಯಾನ್ಸ್ ಈ ತಂಡಕ್ಕಿದೆ. ಅದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಇದೇ ವಿರಾಟ್ ಕೊಹ್ಲಿ. ಅದ್ರಲ್ಲೂ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ ದೀರ್ಘಕಾಲ ಆಡಿದ ಏಕೈಕ ಆಟಗಾರರಾಗಿದ್ದಾರೆ. ತಮ್ಮ ಐಪಿಎಲ್ ಕರಿಯರ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೊಂದಿಗೆ ಪ್ರಾರಂಭಿಸಿದ್ದು, ಇಂದಿಗೂ ಕೂಡ ಇದೇ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ 2011 ರ ಮೆಗಾ ಹರಾಜಿನ ಮೊದಲು RCB ಉಳಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅಲ್ಲಿಂದ ಸತತವಾಗಿ ಕೊಹ್ಲಿಯನ್ನ ಉಳಿಸಿಕೊಂಡೇ ಬರುತ್ತಿದೆ. ಸತತ 17 ಸೀಸನ್​​ಗಳಿಂದಲೂ ಕೊಹ್ಲಿ ಬೆಂಗಳೂರು ತಂಡಕ್ಕಾಗಿಯೇ ಆಡ್ತಿದ್ದಾರೆ. ಬಟ್ ವಿಪರ್ಯಾಸ ಅಂದ್ರೆ ಆರ್​ಸಿಬಿ ಟೀಂ ಒಂದೇ ಒಂದು ಸಲವೂ ಚಾಂಪಿಯನ್ ಆಗಿಲ್ಲ ಅನ್ನೋದು. ಬಟ್ ಕಪ್ ಗೆಲ್ಲದೇ ಇದ್ರೂ ಅಭಿಮಾನಿಗಳು ಬೆಂಗಳೂರು ತಂಡವನ್ನ ತಲೆ ಮೇಲೆ ಹೊತ್ತು ಮೆರೆಸ್ತಾರೆ, ಹೃದಯದಲ್ಲಿ ಇಟ್ಟು ಆರಾಧಿಸ್ತಾರೆ ಅನ್ನೋದು ಕೂಡ ಅಷ್ಟೇ ಸತ್ಯ,.

ಸದ್ಯ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಕೋಚ್​ ಅವಧಿ ಮುಂಬರುವ ಶ್ರೀಲಂಕಾ ಪ್ರವಾಸದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಆಡೋದಿಲ್ಲ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗೋ ಸಾಧ್ಯತೆ ಇದೆ. ಬಟ್ ಈಗ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ನೀಡಿರೋ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. 2013ರಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ 2021ರವರೆಗೆ ನಾಯಕರಾಗಿ ಮುಂದುವರಿದಿದ್ದರು. ಆದ್ರೆ ವಿರಾಟ್ ನಾಯಕತ್ವದಲ್ಲಿ ಆರ್‌ಸಿಬಿ ಒಂದು ಸಲ ಮಾತ್ರ ಫೈನಲ್ ತಲುಪಿತ್ತು. ಐಪಿಎಲ್ 2016 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 9 ರನ್​ಗಳಿಂದ ಸೋಲು ಕಂಡು ಪ್ರಶಸ್ತಿಯನ್ನು ಕಳೆದುಕೊಂಡಿತ್ತು. ಆದರೆ ಬ್ಯಾಟ್ಸ್ ಮನ್ ಆಗಿ ಆ ಆವೃತ್ತಿಯಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 973 ರನ್​ಗಳಿಸಿದ್ದರು. ಐಪಿಎಲ್ ಇತಿಹಾಸದಲ್ಲೇ ಈವರೆಗೂ ಅತೀ ಹೆಚ್ಚು ಸ್ಕೋರ್ ಇದೆ.

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಮಾತನಾಡಿದ್ದ ಗಂಭೀರ್, 8 ವರ್ಷದ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲ. ಬೇರೆ ಯಾವ ನಾಯಕನಿಗೆ ಇಷ್ಟು ಸಮಯ ಸಿಕ್ಕಿದೆ ಹೇಳಿ? ನಾಯಕತ್ವ ಬಿಡಿ, ಕನಿಷ್ಠ ಯಾವುದಾದರೂ ಒಬ್ಬ ಆಟಗಾರನಿಗೆ ಪ್ರಶಸ್ತಿ ಗೆಲ್ಲದಿದ್ದರೆ ಇಷ್ಟೊಂದು ಅವಕಾಶ ನೀಡಲಾಗುತ್ತಿತ್ತಾ? ಹಾಗಾಗಿ ಈ ವೈಫಲ್ಯಕ್ಕೆ ನಾಯಕನೇ ಹೊಣೆಯಾಗಬೇಕು. ನಾನು 8 ವರ್ಷಗಳ ಈ ಸುದೀರ್ಘ ಸಮಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದಿದ್ದರು. ಆ ಬಳಿಕ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ಬೆನ್ನಲ್ಲೇ, ಕೊಹ್ಲಿ ಬಗ್ಗೆ ಅವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕೋಚ್ ಗಂಭೀರ್ ಅಡಿಯಲ್ಲಿ ಕೊಹ್ಲಿ ಆಟದಲ್ಲಿ ಉಳಿಯುತ್ತಾರಾ? ಇಲ್ಲ ಮಧ್ಯದಲ್ಲೇ ವಿದಾಯ ಹೇಳುತ್ತಾರೆಯೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಅಸಲಿಗೆ ಗೌತಮ್ ಗಂಭೀರ್ ಕೂಡ ಉತ್ತಮ ಆಟಗಾರ. ಟೀಮ್‌ ಇಂಡಿಯಾ ಪರ ಆಡಿ ಸೈ ಎನಿಸಿಕೊಂಡ ಎಡಗೈ ಬ್ಯಾಟ್ಸ್​​​ಮನ್ ಗಂಭೀರ್ ಕ್ಲಾಸಿಕ್‌ ಆಟಗಾರ. ತಮ್ಮ ನೈಜ ಆಟದಿಂದಲೇ ಎಲ್ಲರ ಮನ ಗೆದ್ದ ಪ್ಲೇಯರ್‌. ನಿವೃತ್ತಿಯ ಬಳಿಕ ಗೌತಮ್‌ ಐಪಿಎಲ್‌ನ ನೂತನ ತಂಡವಾಡ ಲಕ್ನೋ ಸೂಪರ್‌ ಜೇಂಟ್ಸ್‌ ತಂಡಕ್ಕೆ ಕೋಚಿಂಗ್ ಮಾಡಿದ್ದರು. ಈ ವೇಳೆ ಎಲ್‌ಎಸ್‌ಜಿ ಪ್ಲೇ ಆಫ್‌ ಪ್ರವೇಶಿಸಿತ್ತು. ನಂತರ ಇವರನ್ನು ಕೆಕೆಆರ್‌ ಫ್ರಾಂಚೈಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. 2024ರ ಐಪಿಎಲ್‌ ಚಾಂಪಿಯನ್‌ ಆಗಿರುವ ಕೋಲ್ಕತ್ತಾ ತಂಡದ ಹಿಂದೆ ಗೌತಿ ಸ್ಟ್ರಾಟಜಿ ಇತ್ತು ಅನ್ನೋದು ಕೂಡ ಅಷ್ಟೇ ಸತ್ಯ. ಗೌತಮ್‌ ಗಂಭೀರ್‌ ಅವರ ಬಳಿಯೂ ಉತ್ತಮ ಕೋಚಿಂಗ್ ಸ್ಕಿಲ್ಸ್ ಇವೆ. ಬಟ್ ಗಂಭೀರ್ ಮತ್ತು ಕೊಹ್ಲಿ ನಡುವೆ ಹಿಂದಿನಿಂದಲೂ ಯಾವುದೂ ಸರಿ ಇಲ್ಲ ಅನ್ನೋದು ಅಷ್ಟೇ ಸತ್ಯ. ಐಪಿಎಲ್​ನಲ್ಲಿ ಎದುರು ಬದುರಾಗಿ ಮೈದಾನದಲ್ಲೇ ಏರುಧ್ವನಿಯಲ್ಲಿ ಬೈದಾಡಿಕೊಂಡಿದ್ದೂ ಇದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಹೇಗೆ ನಡೆದುಕೊಳ್ಳುತ್ತಾರೆ ಎಂದು ಅನುಮಾನ ಅಭಿಮಾನಿಗಳಲ್ಲಿದೆ. ಇಬ್ಬರೂ ಅಗ್ರೇಸಿವ್‌ ಪ್ಲೇಯರ್‌ಗಳೆ. ಇಬ್ಬರದ್ದೂ ತಮ್ಮದೇ ಹಾವ ಭಾವ.. ಈ ಸ್ಟಾರ್‌ಗಳ ಹೇಗೆ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.   ಸುಮಾರು 8 ವರ್ಷಗಳ ಹಿಂದೆ ಇಬ್ಬರೂ ಒಂದೇ ಡ್ರೆಸ್ಸಿಂಗ್‌ ರೂಮ್‌ ಹಂಚಿಕೊಂಡಿದ್ದರು. ಆಗ ಇಬ್ಬರೂ ಟೀಮ್ ಇಂಡಿಯಾದ ಆಟಗಾರರೇ ಆಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕೊಹ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ನೊಗವನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಮುನ್ನಡೆಸುತ್ತಿದ್ದರೆ, ಗಂಭೀರ್ ಗುರುವಿನ ಸ್ಥಾನವನ್ನು ತುಂಬಲಿದ್ದಾರೆ. ಹಾಗೆ ಈ ಸ್ಟಾರ್ ಆಟಗಾರರು ಇಬ್ಬರೂ ಒಟ್ಟಾಗಿ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವುದು ಸಹಜ. ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಶ್ರೀಲಂಕಾ ಪ್ರವಾಸ ಬೆಳೆಸಲಿದೆ. ಈ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್ ಕಾಣಿಸಿಕೊಳ್ಳುವುದಿಲ್ಲ. ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ಒಂದೇ ಸೂರಿನಲ್ಲಿ ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿ ಸೆಪ್ಟಂಬರ್‌ 19 ರಿಂದ ಆರಂಭವಾಗಿದೆ. ಆ ಕ್ಷಣವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ವಿರಾಟ್ ಹೇಳಿ ಕೇಳಿ ಡೋಂಟ್​ಕೇರ್ ಸ್ವಭಾವದ ಆಟಗಾರ. ಈ ಇಬ್ಬರು ಲೆಜೆಂಡ್ಸ್ ಮುಂದಿನ ದಿನಗಳಲ್ಲಿ ಹೇಗೆ ಒಟ್ಟಿಗೆ ಕೆಲ್ಸ ಮಾಡ್ತಾರೆ ಅನ್ನೋ ಪ್ರಶ್ನೆ ಇದ್ದೇ ಇದೆ. ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್‌ ಸ್ಟೇನ್ ಅವರು ಕೂಡ ತಮ್ಮದೇ ಆದ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಗಂಭೀರ್ ಅಡಿಯಲ್ಲಿ ವಿರಾಟ್‌ ಕೊಹ್ಲಿ ಹೆಚ್ಚಿನ ಅವಧಿ ಆಡುವುದಿಲ್ಲ ಎಂಬ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಇವ್ರ ಮಾತು ಸತ್ಯ ಆದ್ರೂ ಆಗಬಹುದು. ನೀವೇ ನೋಡಿ ಜಗತ್ತಿನ ಕುಬೇರರ ಪೈಕಿ ಒಬ್ಬರಾಗಿರೋ ಅಂಬಾನಿ ತಮ್ಮ ಪುತ್ರನ ಮದುವೆಗೆ ದೇವಲೋಕವನ್ನೇ ಧರೆಗಿಳಿಸಿದಂತೆ ಮದುವೆ ಮಾಡ್ತಿದ್ದಾರೆ. ಕೋಟಿಗಳಿಗಂತೂ ಲೆಕ್ಕವೇ ಇಲ್ಲ. ವಿಶ್ವಶ್ರೇಷ್ಠ ಗಣ್ಯರೆಲ್ಲಾ ಹಾಜರಿ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ಸ್ ಕೂಡ ವಿಸಿಟ್ ಹಾಕಿದ್ದಾರೆ. ಬಟ್ ವಿರಾಟ್ ಕೊಹ್ಲಿ ಒಬ್ರನ್ನ ಬಿಟ್ಟು. ವಿಶ್ವಕಪ್ ಮುಗಿದ ಬೆನ್ನಲ್ಲೇ ಲಂಡನ್​ಗೆ ಹಾರಿರುವ ವಿರಾಟ್ ಪತ್ನಿ ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ. ಸೋ ವಿರಾಟ್ ಯಾರಿಗೂ ಯಾವುದಕ್ಕೂ ಕೇರ್ ಮಾಡೋ ಸ್ವಭಾವದವ್ರಲ್ಲ. ಹೀಗಾಗಿ ಗಂಭೀರ್ ಅಡಿಯಲ್ಲಿ ಹೇಗೆ ಆಡ್ತಾರೆ ಅನ್ನೋ ಪ್ರಶ್ನೆಯಂತೂ ಇದ್ದೇ ಇದೆ.

Shwetha M

Leave a Reply

Your email address will not be published. Required fields are marked *