ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಂಡರೆ ಹೀಗೇ ಆಗುವುದು – ಆನೆಗಳ ಜೊತೆ ಇದೆಲ್ಲಾ ಬೇಕಿತ್ತಾ?

ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಂಡರೆ ಹೀಗೇ ಆಗುವುದು – ಆನೆಗಳ ಜೊತೆ ಇದೆಲ್ಲಾ ಬೇಕಿತ್ತಾ?

ಉತ್ತರ ಪ್ರದೇಶ: ಪ್ರಾಣಿಗಳ ಜೊತೆ ಯಾವಾಗಲೂ ಎಚ್ಚರದಿಂದ ಇರಬೇಕು. ಅವುಗಳು ಯಾವಾಗ ಹೇಗಿರುತ್ತವೆ.. ಏನು ಮಾಡುತ್ತವೆ ಎಂದು ಹೇಳಲು ಸಾಧ್ಯವಾಗೋದಿಲ್ಲ. ಕೆಲವೊಂದು ಬಾರಿ ಸುಮ್ಮನೆ ಇದ್ದರೆ, ಮತ್ತೆ ಕೆಲವೊಮ್ಮೆ ಉಗ್ರ ರೂಪ ತಾಳುತ್ತವೆ. ಹೀಗಾಗಿಯೇ ಜನರು ಕಾಡು ಪ್ರಾಣಿಗಳಿಂದ ಆದಷ್ಟು ದೂರವಿರುವುದು ಉತ್ತಮ. ಇಲ್ಲದಿದ್ದರೆ ಅವುಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳ ಹಿಂಡು ರಸ್ತೆ ದಾಟುತ್ತಿದ್ದಾಗ ಮೂವರು ವ್ಯಕ್ತಿಗಳು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆನೆಗಳ ಹಿಂಡು ಈ ಮೂವರ ಮೇಲೆ ದಾಳಿಗೆ ಮುಂದಾದ ಘಟನೆ ನಡೆದಿದೆ.

ಇದನ್ನೂ ಓದಿ: 6 ರ ಪೋರನ ಕೈಯಲ್ಲಿ ʼಕಾಳಿಂಗʼ – ಹಗ್ಗದಂತೆ ಹಾವುಗಳನ್ನು ಹಿಡಿದುಕೊಳ್ಳುತ್ತಾನೆ ಬಾಲಕ!  

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದ ಬಳಿ ಮೂವರು ಯುವಕರು ವಾಹನದಲ್ಲಿ ಬರುತ್ತಿದ್ದ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿತ್ತು. ಈ ವೇಳೆ ಯುವಕರು ಆನೆಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಆನೆಗಳ ಹಿಂಡು ಯುವಕರನ್ನು ಅಟ್ಟಿಸಿಕೊಂಡು ಬಂದಿವೆ. ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಉದ್ಯಾನವನದ ಬಳಿ ಆನೆಗಳ ಹಿಂಡನ್ನು ಕಂಡ ಯುವಕರು ಆನೆಗಳ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಮೂವರು ಆನೆಗಳು ಇದ್ದ ಕಡೆ ತೆರಳಿದ್ದಾರೆ. ಇದನ್ನು ದೂರದಲ್ಲಿ ಇದ್ದ ಇತರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೇನು ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಒಂದು ಆನೆ ಈ ಮೂವರನ್ನು ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಮೂವರು ಜೀವ ಭಯದಲ್ಲಿ ಓಡಿ ಬಂದಿದ್ದಾರೆ. ಎದ್ನೋ ಬಿದ್ನೋ ಎಂದು ಓಡುವ ಭರದಲ್ಲಿ ಓರ್ವ ರಸ್ತೆಯಲ್ಲೇ ಬಿದ್ದಿದ್ದಾನೆ. ಈ ವೇಳೆ ಆತನ ಮೊಬೈಲ್ ರಸ್ತೆಗೆ ಬಿದ್ದಿದೆ ಜೀವ ಭಯದಲ್ಲಿದ್ದ ಯುವಕ ಮೊಬೈಲ್ ಅಲ್ಲೇ ಬಿಟ್ಟು ಎದ್ದು ಓಡಿ ಬಂದು ಜೀವ ಉಳಿಸಿಕೊಂಡಿದ್ದಾನೆ.

ಈ ಎಲ್ಲ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ವೈರಲ್ ಆಗಿದೆ. ಆನೆಗಳನ್ನು ದೂರದಲ್ಲೇ ನೋಡಿ ಹೋಗುತ್ತಿದ್ದರೆ, ಏನೂ ಆಗುತ್ತಿರಲಿಲ್ಲ. ಆದರೆ ಅದರ ಹತ್ತಿರ ಹೋಗಿ ಅವುಗಳಿಗೆ ತೊಂದರೆ ಕೊಟ್ಟದ್ದಕ್ಕೆ ಕಾಡು ಪ್ರಾಣಿಗಳು ದಾಳಿಗೆ ಮುಂದಾಗಿವೆ.

suddiyaana