ರಸ್ತೆಯಲ್ಲಿ ಇ – ರಿಕ್ಷಾ ನಿಲ್ಲಿಸಿದ್ದರಿಂದ ಟ್ರಾಫಿಕ್‌.. – ಗಾಡಿ ತೆಗಿಯಮ್ಮಾ ಅಂದಿದ್ದಕ್ಕೆ ಪೊಲೀಸಪ್ಪನಿಗೇ ಚಪ್ಪಲಿ ಏಟು!

ರಸ್ತೆಯಲ್ಲಿ ಇ – ರಿಕ್ಷಾ ನಿಲ್ಲಿಸಿದ್ದರಿಂದ ಟ್ರಾಫಿಕ್‌.. – ಗಾಡಿ ತೆಗಿಯಮ್ಮಾ ಅಂದಿದ್ದಕ್ಕೆ ಪೊಲೀಸಪ್ಪನಿಗೇ ಚಪ್ಪಲಿ ಏಟು!

ಪೊಲೀಸರನ್ನು ಕಂಡರೆ ಜನ ಸಾಮಾನ್ಯರು ಕಂಡರೆ ಹೆದರುತ್ತಾರೆ. ರಸ್ತೆಯಲ್ಲಿ ಪೊಲೀಸರು ಅಡ್ಡಗಟ್ಟಿ ಫೈನ್‌ ಹಾಕುತ್ತಿದ್ದಾರೆ ಅಂತಾ ಗೊತ್ತಾಗುತ್ತಿದ್ದಂತೆ ವಾಹನ ಸವಾರರು ಬೇರೆ ದಾರಿಯಲ್ಲಿ ಹೋಗುತ್ತಾರೆ. ಇನ್ನು ಅಪ್ಪಿತಪ್ಪಿ ಎಲ್ಲಾದರೂ ಪೊಲೀಸರ ಕೈಗೆ ಸಿಕ್ಕಿ ಬಿದ್ರೆ ಅವರು ಬೈದಿದ್ದನ್ನೇಲ್ಲಾ ಕೇಳಿಸಿಕೊಂಡು, ದಂಡ ಕಟ್ಟಿ ಸುಮ್ಮನೆ ಬರುತ್ತಾರೆ. ಅಪ್ಪಿ ತಪ್ಪಿಯೂ ಎದುರುತ್ತರ ಮಾತಾಡುವುದಿಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಪೊಲೀಸರಿಗೇ ಚಪ್ಪಲಿ ಏಟು ನೀಡಿದ್ದಾಳೆ. ಈ ದೃಶ್ಯ ಈ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಏನಿದು ಘಟನೆ?

ಈ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬಳು ಇ – ರಿಕ್ಷಾವನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಟ್ರಾಫಿಕ್‌ ಜಾಮ್‌ ಮಾಡುತ್ತಿದ್ದಳು. ಈ ಹಿನ್ನೆಲೆ ಪೊಲೀಸರು ಆ ಮಹಿಳೆಗೆ ವಾರ್ನಿಂಗ್‌ ಮಾಡಿ ವಾಹನ ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಉಗ್ರರೂಪ ತಾಳಿದ ಆಕೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್‌ನ ಸಭೆಯಲ್ಲಿ ಕ್ಯಾಂಡಿಕ್ರಶ್‌ ಆಡುತ್ತಾ ಕುಳಿತ ಛತ್ತೀಸ್​ಗಢ ಸಿಎಂ ಭೂಪೇಶ್​ ಬಾಘೇಲ್​!

ವೈರಲ್‌ ಆದ ವಿಡಿಯೋದಲ್ಲಿ ಏನಿದೆ?

ಮಹಿಳೆ ರಸ್ತೆಯಲ್ಲಿ ಇ- ರಿಕ್ಷಾ ನಿಲ್ಲಿಸಿದ್ದಾಳೆ. ಇದರಿಂದಾಗಿ ಟ್ರಾಫಿಕ್‌ ಜಾಮ್‌ ಆಗಿದೆ. ಹೀಗಾಗಿ ಪೊಲೀಸ್‌ ಆಕೆಯನ್ನು ಇ – ರಿಕ್ಷಾವನ್ನು ಅಲ್ಲಿಂದ ತೆಗೆಯುವಂತೆ ಸೂಚಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಕೆ ಪೊಲೀಸಪ್ಪನ ಮುಂದೆ ದರ್ಪ ಮರೆದಿದ್ದಾಳೆ. ಪೊಲೀಸಪ್ಪ ಹತ್ತಿರ ಬರುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೇ ಆಕೆ ಕಾಲಲ್ಲಿದ್ದ ಚಪ್ಪಲಿಯನ್ನು ಕೈಗೆ ಎತ್ತಿಕೊಂಡು ಬುದ್ದಿವಾದ ಹೇಳಲು ಬಂದ ಪೊಲೀಸರಿಗೆ ಹೊಡೆದಿದ್ದಾಳೆ. ಮಹಿಳೆಯ ಉಗ್ರರೂಪಕ್ಕೆ ಬೆದರಿ ಪೊಲೀಸ್‌ ಅಲ್ಲಿಂದ ವಾಪಸ್‌ ಆಗಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿದ್ದಾರೆ.  ‘ನಗರಗಳಲ್ಲಿ ಇ-ರಿಕ್ಷಾಗಳ ಹಾವಳಿ ಹೆಚ್ಚಾಗಿದೆ. ತಮ್ಮ ಕರ್ತವ್ಯ ಮಾಡುತ್ತಿದ್ದ ಪೊಲೀಸ್​ ಸಿಬ್ಬಂದಿಯ ಮೇಲಿನ ಹಲ್ಲೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದಿದ್ದಾರೆ.

Shwetha M