ಒಂದೇ ಬಾರಿಗೆ 16 ದೋಸೆ ಪ್ಲೇಟ್ ಹಿಡಿದು ಸರ್ವ್! – ಸಪ್ಲೈಯರ್ ಟ್ಯಾಲೆಂಟ್ ಗೆ ಆನಂದ್ ಮಹೀಂದ್ರಾ ಮೆಚ್ಚುಗೆ…

ಒಂದೇ ಬಾರಿಗೆ 16 ದೋಸೆ ಪ್ಲೇಟ್ ಹಿಡಿದು ಸರ್ವ್! – ಸಪ್ಲೈಯರ್ ಟ್ಯಾಲೆಂಟ್ ಗೆ ಆನಂದ್ ಮಹೀಂದ್ರಾ ಮೆಚ್ಚುಗೆ…

ಹೋಟೆಲ್ ಗೆ ತೆರಳಿದಾಗ ನಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡುತ್ತೇವೆ. ಸಪ್ಲೈಯರ್ ಕೆಲಹೊತ್ತಿನ ಬಳಿಕ ಒಂದೊಂದೇ ತಿನಿಸುಗಳನ್ನು ತಂದು ನಮ್ಮ ಮುಂದೆ ಇಡುತ್ತಾರೆ. ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ನಡೆಸಿಕೊಂಡು ಬರುತ್ತಿರುವ ಕ್ರಮ ಎಂದೇ ಹೇಳಬಹುದು. ಆದರೆ ಇಲ್ಲೊಬ್ಬ ಸಪ್ಲೈಯರ್ 16 ದೋಸೆ ಪ್ಲೇಟ್ ಗಳನ್ನು ಒಮ್ಮೆಲೆ ಹಿಡಿದು ಬ್ಯಾಲೆನ್ಸ್ ಮಾಡುತ್ತಾ ಎಲ್ಲಾ ಟೇಬಲ್ ಗಳಿಗೆ ಸರ್ವ್ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನಂದ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಕುತೂಹಲಕಾರಿ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸಪ್ಲೈಯರ್ ಒಬ್ಬನ ಕೌಶಲ್ಯಕ್ಕೆ ಮಾರುಹೋಗಿದ್ದಾರೆ.

ಇದನ್ನೂ ಓದಿ: ಕಂದನಿಗೆ ರಸ್ತೆ ದಾಟಲು ಅಮ್ಮನ ಪಾಠ – ಮರಿಯಾನೆಗೆ ತಾಯಿಯೇ  ಗುರು

ಆನಂದ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಹೋಟೆಲ್ ನಲ್ಲಿ ವ್ಯಕ್ತಿಯೊಬ್ಬ ಬಿಸಿ ಬಿಸಿ ದೋಸೆ ಮಾಡುತ್ತಿರುತ್ತಾನೆ. ಈ ವೇಳೆ ಸಪ್ಲೈಯರ್ ಬಂದು ತನ್ನ ಪಕ್ಕದಲ್ಲೇ ಇದ್ದ ಪ್ಲೇಟ್ ಗಳನ್ನು ಒಂದೊಂದಾಗಿ ಎತ್ತಿಕೊಂಡು ಅದಕ್ಕೆ ದೋಸೆಗಳನ್ನು ಹಾಕಿ ಕೈ ಮೇಲೆ ಒಂದೊಂದೆ ಇಟ್ಟುಕೊಂಡಿದ್ದಾನೆ. ಬರೋಬ್ಬರಿ 16 ದೋಸೆ ಪ್ಲೇಟ್ ಗಳನ್ನು ಏಕ ಕಾಲಕ್ಕೆ ಗ್ರಾಹಕರ ಟೇಬಲ್ ಬಳಿ ತೆಗೆದುಕೊಂಡು ಹೋಗಿ ಸರ್ವ್ ಮಾಡಿದ್ದಾನೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸರ್ವರ್​​ಗಳು ಹುಟ್ಟಿನಿಂದಲೇ ಎಂಜಿನಿಯರ್ಸ್ ​. ಅವರಿಗೆ ಅರಿವಿಲ್ಲದೆಯೇ ವಿಜ್ಞಾನ ಅವರೊಳಗೆ ಇಳಿದಿರುತ್ತದೆ. ಸುಡುವ ತಟ್ಟೆಗಳನ್ನು ನಿಭಾಯಿಸುವುದು ಅವರಿಗೆ ಗೊತ್ತಿದೆ ಎಂದು ಒಬ್ಬರು ಹೇಳಿದ್ದರೆ,  ಬಹುಶಃ ದೇವರು ಇವನಿಗೆಂದೇ ಉದ್ದನೆಯ ಕೈಗಳನ್ನು ರೂಪಿಸಿರಬಹುದು. ಆದರೆ ಒಂದರ ಮೇಲೊಂದು ಪ್ಲೇಟ್​ ಇಟ್ಟಾಗ ದೋಸೆ ಶುಚಿಯಾಗಿರುತ್ತದೆ ಎನ್ನಲು ಏನು ಗ್ಯಾರಂಟಿ ಎಂದು ಮತ್ತೊಬ್ಬರು ಕೇಳಿದ್ದಾರೆ. ಇನ್ನೂ ಕೆಲವರು ಓಹೋ ಇದು ಬೆಂಗಳೂರಿನ ಗಾಂಧಿಬಜಾರ್​ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ ಎಂದು ಕಮೆಂಟ್ ಮಾಡಿದ್ದಾರೆ.

suddiyaana